ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮ ದೂತನ ಪಾದ | ಶ್ರೀ ಗೋಪಾಲ ವಿಠಲ | Rama Dutana Paada | Sri Gopala Vithala


ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ರಾಮ ದೂತನ ಪಾದ ತಾಮರಸವ ಕಂಡ | ಆ ಮನುಜನೆ ಧನ್ಯನು ||ಪ||

ಶ್ರೀ ಮನೋಹರನಂಘ್ರಿ ಭಜಕ ಸ್ತೋಮ ಕುಮುದಕೆ ಸೋಮನೆನಿಸುವ
ಭೂಮಿಯೊಳು ಯದುಗಿರಿಯ ಸೀಮೆಯ ಕಾಮವರದನ ಪ್ರೇಮದಿಂದಿಹ ||ಅಪ||

ಕೋತಿ ರೂಪದಿ ರಘುನಾಥನಾಜ್ಞೆಯ ತಾಳಿ ಪಾಥೋಧಿಯ ಲಂಘಿಸಿ 
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ ಮಾತೆಯನು ಕಂಡೆರಗಿ ದಶಮುಖ 
ಪೋತ ಖಳಕುಲವ್ರಾತ ಘಾತಿಸಿ ಸೀತೆ ವಾರ್ತೆಯನಾಥಗರುಹಿದ ||೧||

ಪಾಂಡುಸುತನೆ ಪ್ರಚಂಡ ಗದೆಯನ್ನು ದೋರ್ದಂಡದಿ ಧರಿಸುತಲಿ
ಮಂಡಲದೊಳು ಭಂಡಕೌರವ ಚಂಡರಿಪುಗಳ ಖಂಡಿಸಿ ಶಿರ-
ಚೆಂಡನಾಡಿ ಸತಿಗೆ ಕರುಳಿನ ದಂಡೆ ಮುಡಿಸಿದ ಉದ್ಧಂಡ ವಿಕ್ರಮ ||೨||

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು ಮೂರೊಂದಾಶ್ರಮ ಧರಿಸಿ
ಧೀರ ನೀನೇಳಧಿಕ ತ್ರಿದಶ ಸಾರಗ್ರಂಥಗಳ ವಿರಚಿಸುತ ಮಹಾ-
ಶೂರ ಶ್ರೀ ಗೋಪಾಲ ವಿಠಲನ ಚಾರುಚರಣಕೆ ಅರ್ಪಿಸಿದ ಗುರು ||೩||

rAma dUtana pAda tAmarasava kaMDa | A manujane dhanyanu ||pa||
 
SrI manOharanaMGri Bajaka stOma kumudake sOmanenisuva
BUmiyoLu yadugiriya sImeya kAmavaradana prEmadiMdiha ||apa||

kOti rUpadi raGunAthanAj~jeya tALi pAthOdhiya laMGisi 
KyAta laMkeya pokku SOdhisi mAteyanu kaMDeragi daSamuKa 
pOta KaLakulavrAta GAtisi sIte vArteyanAthagaruhida ||1||
 
pAMDusutane pracaMDa gadeyannu dOrdaMDadi dharisutali
maMDaladoLu BaMDakaurava caMDaripugaLa KaMDisi shira-
ceMDanADi satige karuLina daMDe muDisida uddhaMDa vikrama ||2||
 
dhAruNiyoLu dvijanAri garBadi baMdu mUroMdASrama dharisi
dhIra nInELadhika tridaSa sAragraMthagaLa viracisuta mahA-
SUra SrI gOpAla viThalana cArucaraNake arpisida guru ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru