ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಊರಿಗೆ ಬಂದರೆ ದಾಸಯ್ಯ | ಪುರಂದರ ವಿಠಲ | Oorige Bandare Dasayya | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala)


ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| ಕೇರಿಗೆ ಬಂದರೆ ದಾಸಯ್ಯ ಗೊಲ್ಲ, ಕೇರಿಗೆ ಬಾ ಕಂಡ್ಯ ದಾಸಯ್ಯ ||ಅಪ|| ಕೊರಳೊಳು ವನಮಾಲೆ ಧರಿಸಿದನೆ ಕಿರು ಬೆರಳಲಿ ಬೆಟ್ಟವನೆತ್ತಿದನೆ || ಇರುಳು ಹಗಲು ನಿನ್ನ ಕಾಣದೆ ಇರಲಾರೆ, ಮರುಳು ಮಾಡಿದಂಥ ದಾಸಯ್ಯ ||೧|| ಕಪ್ಪು ವರ್ಣದ ದಾಸಯ್ಯ ಕಂದರ್ಪನ ಪಿತನೆಂಬೋ ದಾಸಯ್ಯ || ಅಪ್ಪಿಕೊಂಡು ನಿನ್ನ ಮನಸಿಗೆ ಬಂದರೆ, ಅಪ್ಪವ ಕೊಡುವೆನು ದಾಸಯ್ಯ ||೨|| ಮುಂದೇನು ದಾರಿ ದಾಸಯ್ಯ, ಚೆಲ್ವ ಪೊಂಗೊಳಲೂದುತ ದಾಸಯ್ಯ || ಹಾಂಗೆ ಪೋಗದಿರು ದಾಸಯ್ಯ, ಹೊನ್ನುಂಗುರ ಕೊಡುವೆನು ದಾಸಯ್ಯ ||೩|| ಸಣ್ಣ ನಾಮದ ದಾಸಯ್ಯ ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ || ಸದನಕೆ ಬಂದರೆ ದಾಸಯ್ಯ, ಮಣಿಸರವನು ಕೊಡುವೆನು ದಾಸಯ್ಯ ||೪|| ಸಿಟ್ಟು ಮಾಡದಿರು ದಾಸಯ್ಯ, ಸಿರಿ ಪುರಂದರ ವಿಠಲ ದಾಸಯ್ಯ || ರಟ್ಟು ಮಾಡದಿರು ದಾಸಯ್ಯ ತಂಬಿಟ್ಟು ಕೊಡುವೆನು ದಾಸಯ್ಯ ||೫|| Urige baMdare dAsayya namma kErige bA kaMDya dAsayya ||pa|| kErige baMdare dAsayya golla, kErige bA kaMDya dAsayya ||apa|| koraLoLu vanamAle dharisidane kiru beraLali beTTavanettidane || iruLu hagalu ninna kANade iralAre, maruLu mADidaMtha dAsayya ||1|| kappu varNada dAsayya kaMdarpana pitaneMbO dAsayya || appikoMDu ninna manasige baMdare, appava koDuvenu dAsayya ||2|| muMdEnu dAri dAsayya, celva poMgoLalUduta dAsayya || hAMge pOgadiru dAsayya, honnuMgura koDuvenu dAsayya ||3|| saNNa nAmada dAsayya namma sadanake bA kaMDya dAsayya || sadanake baMdare dAsayya, maNisaravanu koDuvenu dAsayya ||4|| siTTu mADadiru dAsayya, siri puraMdara viThala dAsayya || raTTu mADadiru dAsayya taMbiTTu koDuvenu dAsayya ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru