ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಂಕಣಾಕಾರವನ್ನು ಬರೆದು ಅದರ ಮಧ್ಯ | ಓಂಕಾರ ಎರಡು ಎಡ-ಬಲದಿ ರಚಿಸಿ | ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ | ನಾಂಕನಯ್ಯನ ಪೀಠಸ್ಥಳವಿದೆಂದು | ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ | ಲಂಕಾರವನೆ ಮಾಡಿ ಅದರ ಬಳಿಯ | ಕಂಕಣಾಕಾರವನ್ನು ಒಳಗೆ ಮಾಡಿಟ್ಟುಕೊಂಡು | ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ | ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ | ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ | ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು | ಪಂಕಜಾಕ್ಷನ ರೂಪ ಮೂರು ಉಂಟು | ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು | ಸಂಕೋಚವಾಗಿ ಇದೆ ದ್ವಿತೀಯ ವಲಯ | ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ | ಕಿಂಕರ ಜನಪಾಲ ವಿಜಯ ವಿಠ್ಠಲ ಅಕ | ಳಂಕನ ಭಜಿಸುವುದು ಹೃದಯದಲಿ ತಿಳಿದು ||೧|| ಮಟ್ಟ ತಾಳ ಕರಿ ಅಜ ರಥ ವೀಥಿ ಎಂದೆಂಬುವ ಮೂರು | ಬರೆದು ಇದಕೆ ಹನ್ನೆರಡು ರಾಶಿಗಳು ವಿ- | ಸ್ತರವಾಗಿ ಉಂಟು ಎರಡೆರಡೊಂದು ಕಡೆ | ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ | ಎರಡು ನಾಲಕು ಕೋಣೆ ವಿರಚಿಸಿ ಅದರ ಮೇಲೆ | ಮರಳೆ ಮಧು - ಮಾಧವಾ ಕರೆಸುವ ಋತು ಒಂದು | ಬರೆದು ಪ್ರಣವ ವಿವರ ಹೃದಯದಲ್ಲಿ ನಮ | ಸ್ಕರಿಸು ಜ್ಞಾನಾತ್ಮನೆಂದು | ಧರಿಸು ಈ ಪರಿ ಮೂರು ಎರಡು ಕೋಣಿಯ ಮಧ್ಯ | ತರುವಾಯ ಮಾಸ - ಋತು ವರುಷ ತಾರಕ ಸಂ | ಸ್ಮರಿಸಿ ಕ್ರಮ ವರ್...