ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇಷ್ಟು ದಿನ ಈ ವೈಕುಂಠ | ಕಾಗಿನೆಲೆಯಾದಿ ಕೇಶವ | Ishtu dina | Sri Kanaka Dasaru


ಸಾಹಿತ್ಯ : ಶ್ರೀ ಕನಕದಾಸರು
Kruti: Sri Kanaka Dasaru


ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ||ಪ||
ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಅಪ||

ಎಂಟು ಏಳನು ಕಳೆದುದರಿಂದ | ತುಂಟರೈವರ ತುಳಿದುದರಿಂದ ||
ಕಂಟಕನೊಬ್ಬನ ಅಳಿದುದರಿಂದ | ಭಂಟನಾಗಿ ಬಂದೆ ಶ್ರೀರಂಗಶಾಯಿ ||೧||

ವನ ಉಪವನಗಳಿಂದ ಘನಸರೋವರಗಳಿಂದ ||
ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ || ೨ ||

ವಜ್ರ ವೈಢೂರ್ಯದ ತೊಲೆಗಳ ಕಂಡೆ | ಪ್ರಜ್ವಲಿಪ ಮಹಾದ್ವಾರವ ಕಂಡೆ ||
ನಿರ್ಜರಾದಿ ಮುನಿಗಳ ನಾ ಕಂಡೆ | ದುರ್ಜನಾಂತಕನೇ ಶ್ರೀರಂಗಶಾಯಿ ||೩||

ರಂಭೆ ಊರ್ವಶಿ ಮೇಳವ ಕಂಡೆ | ತುಂಬುರು ಮುನಿ ನಾರದರನು ಕಂಡೆ ||
ಅಂಬುಜೋದ್ಭವ ರುದ್ರರ ಕಂಡೆ | ಶಂಬರಾರಿ ಪಿತನೆ ಶ್ರೀರಂಗಶಾಯಿ ||೪||

ನಾಗಶಯನನ ಮೂರುತಿ ಕಂಡೆ | ಭೋಗಿ ಭೂಷಣ ಶಿವನನು ಕಂಡೆ ||
ಭಾಗವತರ ಸಮ್ಮೇಳವ ಕಂಡೆ | ಕಾಗಿನೆಲೆಯಾದಿ ಕೇಶವನ ನಾ ಕಂಡೆ ||೫||

iShTu dina I vaikuMTha eShTu dUravO ennutalidde ||pa||
dRuShTiyiMdali nAnu kaMDe sRuShTigISane SrIraMgaSAyi ||apa||
 
eMTu ELanu kaLedudariMda | tuMTaraivara tuLidudariMda ||
kaMTakanobbana aLidudariMda | BaMTanAgi baMde shrIraMgaSAyi ||1||

vana upavanagaLiMda GanasarOvaragaLiMda ||
kanaka gOpuragaLiMda GanashObhitane shrIraMgashaayi || 2 ||
 
vajra vaiDhUryada tolegaLa kaMDe | prajvalipa mahAdvArava kaMDe ||
nirjarAdi munigaLa nA kaMDe | durjanAMtakanE SrIraMgaSAyi ||3||
 
raMbhe UrvaSi mELava kaMDe | tuMburu muni nAradaranu kaMDe ||
aMbujOdBava rudrara kaMDe | SaMbarAri pitane SrIraMgaSAyi ||4||
 
nAgaSayanana mUruti kaMDe | BOgi BUShaNa Sivananu kaMDe ||
BAgavatara sammELava kaMDe | kAgineleyAdi kESavana naa kaMDe ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru