ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನು ಬಂದ್ಯೋ ಜೀವವೇ | ಹಯವದನ | Enu Bandyo Jeevave | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ||

ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲ ಜ್ಞಾನವರಿತು ಹರಿಪೂಜೆ ಮಾಡಲಿಲ್ಲ 
ಜ್ಞಾನ ಸುಜ್ಞಾನಿಗಳ ಸನ್ನಿಧಿಯಲ್ಲಿ ಇರಲಿಲ್ಲ, ನಿರ್ಮಲ ಮನದಲ್ಲಿ ಒಂದು ದಿನವೂ ಇರಲಿಲ್ಲ ||೧||

ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲ, ಯತಿಯಾಗಿ ತೀರ್ಥ ಯಾತ್ರೆ ಮಾಡಲಿಲ್ಲ
ಶೃತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲ, ಮೃತವಾಗೋ ಕಾಲ ಬಂತು ಬರಿದೆ ಮುಪ್ಪಾದೆನಲ್ಲ ||೨||

ಉಂಡು ಸುಖಿಯಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ, ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲ
ದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆ ಮೊಂಡು ಜೋಗಿ ಗುಣಂಗಳ ಬಿಡಿಸೋ ಹಯವದನ ||೩||


Enu baMdyO jIvavE sharIradoLu vyarthavAgi ||pa||

daana dharma maaDalilla dayabuddhi puTTalilla j~jaanavaritu haripUje maaDalilla 
j~jaana suj~jaanigaLa sannidhiyalli iralilla, nirmala manadalli oMdu dinavU iralilla ||1||

sati puruSharu naavu saMtOShadiMdiralilla, yatiyaagi tIrtha yaatre maaDalilla
shRutishaastra puraaNagaLa kivigoTTu kELalilla, mRutavAgO kaala baMtu baride muppaadenalla ||2||

uMDu suKiyalla uTTu toTTu pariNaama illa, koMDu koTTu harisEve maaDalilla
duMDu naayiyaMte manemanegaLa tirugi keTTe moMDu jOgi guNaMgaLa biDisO hayavadana ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru