ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಥವಾನೇರಿದ ರಾಘವೇಂದ್ರ | ಶ್ರೀ ಗೋಪಾಲ ವಿಠಲ | Rathavanerida Raghavendra | Sri Gopala Dasaru


ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ರಥವಾನೇರಿದ ರಾಘವೇಂದ್ರ ಸದ್ಗುಣಗಳ ಸಾಂದ್ರ ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ
ಹಿತದಲಿ ಮನೋರಥವ ಕೊಡುವೆನೆಂದು ||ಅಪ||

ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ 
ಮಿತಿ ಇಲ್ಲದೆ ಬಂದೋಲೈಸುತಲಿ ವರವ ಬೇಡುತಲಿ
ನುತಿಸುತ ಪರಿಪರಿ ನತರಾಗಿಪರಿಗೆ 
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಳ ಮಹಿಮನ ದಿನದಲ್ಲಿ ದಿತಿಜ ವಂಶದಲಿ 
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲಿ 
ಅತಿಶಯವಿರುತಿರೆ ಪಿತನ ಬಾಧೆಗಳು ಮನ್ಮಥ 
ಪಿತನೊಲಿಸಿದ ಜಿತ ಕರುಣದಲಿ ||೨||

ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ, ಯತಿರಾಘವೇಂದ್ರ, 
ಪತಿತೋದ್ಧಾರಿಯೇ ಪಾವನಕಾರಿಯೇ ಕರ ಮುಗಿವೆನು ದೊರೆಯೇ 
ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ ಪ್ರತಿ-
ಮಂತ್ರಾಲಯದೊಳು ಅತಿ ಮೆರೆವ ||೩||

rathavAnErida rAGavEMdra sadguNagaLa sAMdra ||pa||

satata mArgadi saMtata sEviparige ati
hitadali manOrathava koDuveneMdu ||apa||
 
chatura dikku vidikkugaLalli caripa janaralli 
miti illade baMdOlaisutali varava bEDutali
nutisuta paripari natarAgiparige 
gati pELade sarvathA nA biDeneMdu ||1||
 
atuLa mahimana dinadalli ditija vaMSadali 
utpattiyAgi ucitadalli uttama rItiyali 
atiSayavirutire pitana bAdhegaLu manmatha 
pitanolisida jita karuNadali ||2||
 
prathama prahlAda vyAsa muniyE, yatirAGavEMdra, 
patitOddhaariyE pAvanakAriyE kara mugivenu doreyE 
kShitiyoLu gOpAla viThalana smarisuta prati-
maMtrAlayadoLu ati mereva ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru