Posts

Showing posts from December, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕನಸು ಕಂಡೆನೆ ಮನದಲಿ | ಪುರಂದರವಿಠಲ | Kanasu Kandene Manadali Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕನಸು ಕಂಡೆನೆ ಮನದಲಿ ಕಳವಳಗೊಂಡೆನೆ ||ಪ|| ಏನ ಪೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅಪ|| ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಕೆನ್ನುತ ಎನ್ನ ಮುಂದೆ ಬಂದು ನಿಂತಿದ್ದನಲ್ಲೇ ||೧|| ಮಕರ ಕುಂಡಲನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕನಿಟ್ಟು || ಗೆಜ್ಜೆ ಘಲುಕೆನ್ನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||೨|| ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿದ್ದರಲ್ಲೇ || ಛತ್ರ ಚಾಮರದಿಂದ ರಂಗಯ್ಯನ ಉತ್ಸವ ಮೂರುತಿಯ ||೩|| ತಾವರೆ ಕಮಲದಲ್ಲಿ ಕೃಷ್ಣಯ್ಯ ತಾ ಬಂದು ನಿಂತಿದ್ದನಲ್ಲೇ ವಾಯು ಬೊಮ್ಮಾದಿಗಳು ರಂಗಯ್ಯನ ಸೇವೆಯ ಮಾಡುವರೆ ||೪|| ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯ ಮಂಟಪದಲ್ಲಿ || ಸರ್ವಾಭರಣದಿಂದ ಪುರಂದರ ವಿಠಲನ ಕೂಡಿದನೆ ||೫|| kanasu kaMDene manadali kaLavaLagoMDene ||pa||   Ena pELali taMgi timmayyana pAdavanu kaMDe ||apa||   ponnada kaDaganiTTu timmayya tA pOlva nAmava iTTu aMduge Galukennuta enna muMde baMdu niMtiddanallE ||1||   makara kuMDalaniTTu timmayya tA kastUri tilakaniTTu || gejje Galukennuta svAmi tA baMdu niMtiddanallE ||2||   muttina pallakki yati...

ಲಕ್ಷ್ಮೀಕಾಂತ ಬಾರೋ | ಪುರಂದರ ವಿಠಲ | Lakshmikantha Baaro | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಲಕ್ಷ್ಮೀಕಾಂತ ಬಾರೋ, ಶುಭಲಕ್ಷಣವಂತ ಬಾರೋ ಪಕ್ಷಿವಾಹನ ಏರಿದವನೆ ವಾಮನಮೂರುತಿ ಬಾರೋ ||ಪ|| ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೋ || ಸಾಧುಸಜ್ಜನ ಸತ್ಯಯೋಗಿ ದಾನಿ ನೀನೆ ಬಾರೋ ||೧|| ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ ರೂಡ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ||೨|| ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೋ || ಪನ್ನಗ ಶಯನ ಪುರಂದರ ವಿಠಲ ನೀನೇ ಬಾರೋ ||೩|| lakShmIkAMta bArO, SuBalakShaNavaMta bArO pakShivAhana Eridavane vAmanamUruti bArO ||pa||   AdimUla vigraha vinOdi nIne bArO || sAdhusajjana satyayOgi dAni nIne bArO ||1||   gADikAra kRuShNa ninna bEDikoMbe bArO rUDa mAtanADi sarva rUDhigoDeya bArO ||2|| ninna pAdaMgaLa nAnu baNNisi kareve bArO || pannaga Sayana puraMdara viThala nInE bArO ||3||

ರಥವಾನೇರಿದ ರಾಘವೇಂದ್ರ | ಶ್ರೀ ಗೋಪಾಲ ವಿಠಲ | Rathavanerida Raghavendra | Sri Gopala Dasaru

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ರಥವಾನೇರಿದ ರಾಘವೇಂದ್ರ ಸದ್ಗುಣಗಳ ಸಾಂದ್ರ ||ಪ|| ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋರಥವ ಕೊಡುವೆನೆಂದು ||ಅಪ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ  ಮಿತಿ ಇಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಪರಿಗೆ  ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಳ ಮಹಿಮನ ದಿನದಲ್ಲಿ ದಿತಿಜ ವಂಶದಲಿ  ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲಿ  ಅತಿಶಯವಿರುತಿರೆ ಪಿತನ ಬಾಧೆಗಳು ಮನ್ಮಥ  ಪಿತನೊಲಿಸಿದ ಜಿತ ಕರುಣದಲಿ ||೨|| ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ, ಯತಿರಾಘವೇಂದ್ರ,  ಪತಿತೋದ್ಧಾರಿಯೇ ಪಾವನಕಾರಿಯೇ ಕರ ಮುಗಿವೆನು ದೊರೆಯೇ  ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ ಪ್ರತಿ- ಮಂತ್ರಾಲಯದೊಳು ಅತಿ ಮೆರೆವ ||೩|| rathavAnErida rAGavEMdra sadguNagaLa sAMdra ||pa|| satata mArgadi saMtata sEviparige ati hitadali manOrathava koDuveneMdu ||apa||   chatura dikku vidikkugaLalli caripa janaralli  miti illade baMdOlaisutali varava bEDutali nutisuta paripari natarAgiparige  gati pELade sarvathA nA biDeneMdu ||1||   atuLa mahimana dinadalli dit...

ಯಾದವ ನೀ ಬಾ | ಶ್ರೀ ಪುರಂದರ ವಿಠಲ | Yadava Nee Baa | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಯಾದವ ನೀ ಬಾ ಯದುಕುಲ ನಂದನ | ಮಾಧವ ಮಧುಸೂದನ ಬಾರೋ ||ಪ|| ಸೋದರ ಮಾವನ ಮಧುರೆಲಿ ಮಡುಹಿದ ಯಶೋದೆ ನಂದನ ನೀ ಬಾರೋ ||ಅ.ಪ.|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೊ | ಅಕಳಂಕ ಮಹಿಮನೆ ಆದಿನಾರಾಯಣ ಬೇಕೆಂಬ ಭಕ್ತರಿಗೊಲಿ ಬಾರೊ ||೧||   ಕಣಕಾಲಂದುಗೆ ಘಲುಘಲುರೆನುತಲಿ ಝಣಝಣ ವೇಣುನಾದದಲಿ | ಚಿಣಿಕೋಲು ಚೆಂಡು ಬುಗುರಿಯನಾಡುತ ಸಣ್ಣ ಸಣ್ಣ ಗೋವಳರೊಡಗೂಡಿ ||೨|| ಖಗವಾಹನನೆ ಬಗೆ ಬಗೆ ರೂಪನೆ ನಗೆಮೊಗದರಸನೆ ನೀ ಬಾರೋ |   ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರ ವಿಠಲ ನೀ ಬಾರೋ ||೩|| yAdava nI bA yadukula naMdana | mAdhava madhusUdana bArO ||pa||   sOdara mAvana madhureli maDuhida yaSOde naMdana nI bArO ||a.pa.|| shaMKa chakravu kaiyali hoLeyuta biMkada gOvaLa nI baaro | akaLaMka mahimane AdinaaraayaNa bEkeMba bhaktarigoli baaro ||1|| kaNakaalaMduge GaluGalurenutali JaNaJaNa vENunaadadali | chiNikOlu cheMDu buguriyanaaDuta saNNa saNNa gOvaLaroDagUDi ||2||   KagavAhanane bage bage roopane nagemogadarasane nI bArO | jagadoLu ninnaya mahimeya pogaLuve puraMdara ...

ರಾಮ ದೂತನ ಪಾದ | ಶ್ರೀ ಗೋಪಾಲ ವಿಠಲ | Rama Dutana Paada | Sri Gopala Vithala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ರಾಮ ದೂತನ ಪಾದ ತಾಮರಸವ ಕಂಡ | ಆ ಮನುಜನೆ ಧನ್ಯನು ||ಪ|| ಶ್ರೀ ಮನೋಹರನಂಘ್ರಿ ಭಜಕ ಸ್ತೋಮ ಕುಮುದಕೆ ಸೋಮನೆನಿಸುವ ಭೂಮಿಯೊಳು ಯದುಗಿರಿಯ ಸೀಮೆಯ ಕಾಮವರದನ ಪ್ರೇಮದಿಂದಿಹ ||ಅಪ|| ಕೋತಿ ರೂಪದಿ ರಘುನಾಥನಾಜ್ಞೆಯ ತಾಳಿ ಪಾಥೋಧಿಯ ಲಂಘಿಸಿ  ಖ್ಯಾತ ಲಂಕೆಯ ಪೊಕ್ಕು ಶೋಧಿಸಿ ಮಾತೆಯನು ಕಂಡೆರಗಿ ದಶಮುಖ  ಪೋತ ಖಳಕುಲವ್ರಾತ ಘಾತಿಸಿ ಸೀತೆ ವಾರ್ತೆಯನಾಥಗರುಹಿದ ||೧|| ಪಾಂಡುಸುತನೆ ಪ್ರಚಂಡ ಗದೆಯನ್ನು ದೋರ್ದಂಡದಿ ಧರಿಸುತಲಿ ಮಂಡಲದೊಳು ಭಂಡಕೌರವ ಚಂಡರಿಪುಗಳ ಖಂಡಿಸಿ ಶಿರ- ಚೆಂಡನಾಡಿ ಸತಿಗೆ ಕರುಳಿನ ದಂಡೆ ಮುಡಿಸಿದ ಉದ್ಧಂಡ ವಿಕ್ರಮ ||೨|| ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು ಮೂರೊಂದಾಶ್ರಮ ಧರಿಸಿ ಧೀರ ನೀನೇಳಧಿಕ ತ್ರಿದಶ ಸಾರಗ್ರಂಥಗಳ ವಿರಚಿಸುತ ಮಹಾ- ಶೂರ ಶ್ರೀ ಗೋಪಾಲ ವಿಠಲನ ಚಾರುಚರಣಕೆ ಅರ್ಪಿಸಿದ ಗುರು ||೩|| rAma dUtana pAda tAmarasava kaMDa | A manujane dhanyanu ||pa||   SrI manOharanaMGri Bajaka stOma kumudake sOmanenisuva BUmiyoLu yadugiriya sImeya kAmavaradana prEmadiMdiha ||apa|| kOti rUpadi raGunAthanAj~jeya tALi pAthOdhiya laMGisi  KyAta laMkeya pokku SOdhisi mAteyanu kaMDeragi daSamuKa  pOta KaLakulavrAta GAtisi ...

ದಾಸನ್ನ ಮಾಡಿಕೋ ಎನ್ನ | ಪುರಂದರ ವಿಠಲ | Dasanna Madiko Enna | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ದಾಸನ್ನ ಮಾಡಿಕೋ ಎನ್ನ ಸ್ವಾಮಿ ಸಾಸಿರ ನಾಮದ ವೇಂಕಟರಮಣ ||ಪ|| ದುರುಬುದ್ಧಿಗಳನೆಲ್ಲ ಬಿಡಿಸೋ |ನಿನ್ನ| ಕರುಣ ಕವಚ ಎನ್ನ ಹರಣಕ್ಕೆ ತೊಡಿಸೋ || ಚರಣ ಸೇವೆ ಎನಗೆ ಕೊಡಿಸೋ  ಅಭಯಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೋ ||೧|| ದೃಢಭಕ್ತಿ ನಿನ್ನಲ್ಲಿ ಬೇಡಿ |ನಾನು| ಅಡಿಗೆರಗುವೆನಯ್ಯಾ ಅನುದಿನ ಪಾಡಿ || ಕಡೆಗಣ್ಣಲ್ಲೇಕೆನ್ನ ನೋಡಿ ಬಿಡುವೆ  ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ||೨|| ಮೊರೆ ಹೊಕ್ಕವರ ಕಾಯ್ವ ಬಿರುದು |ಎನ್ನ| ಮರೆಯದೆ ರಕ್ಷಣೆ ಮಾಡಯ್ಯ ಪೊರೆದು || ದುರಿತಗಳೆಲ್ಲವ ತರಿದು  ಸಿರಿ ಪುರಂದರ ವಿಠಲ ಎನ್ನನು ಪೊರೆದು ||೩|| dAsanna mADikO enna svAmi sAsira nAmada vEMkaTaramaNa ||pa||   durubuddhigaLanella biDisO |ninna| karuNa kavaca enna haraNakke toDisO || caraNa sEve enage koDisO  aBayakara puShpava enna Siradalli muDisO ||1||   dRuDhaBakti ninnalli bEDi |nAnu| aDigeraguvenayyA anudina pADi || kaDegaNNallEkenna nODi biDuve  koDu ninna dhyAnava mana Suci mADi ||2||   more hokkavara kAyva birudu |enna| mareyade rakShaNe mADayya poredu || duritagaLellava tar...

ಏನು ಬಂದ್ಯೋ ಜೀವವೇ | ಹಯವದನ | Enu Bandyo Jeevave | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ|| ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲ ಜ್ಞಾನವರಿತು ಹರಿಪೂಜೆ ಮಾಡಲಿಲ್ಲ  ಜ್ಞಾನ ಸುಜ್ಞಾನಿಗಳ ಸನ್ನಿಧಿಯಲ್ಲಿ ಇರಲಿಲ್ಲ, ನಿರ್ಮಲ ಮನದಲ್ಲಿ ಒಂದು ದಿನವೂ ಇರಲಿಲ್ಲ ||೧|| ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲ, ಯತಿಯಾಗಿ ತೀರ್ಥ ಯಾತ್ರೆ ಮಾಡಲಿಲ್ಲ ಶೃತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲ, ಮೃತವಾಗೋ ಕಾಲ ಬಂತು ಬರಿದೆ ಮುಪ್ಪಾದೆನಲ್ಲ ||೨|| ಉಂಡು ಸುಖಿಯಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ, ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲ ದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆ ಮೊಂಡು ಜೋಗಿ ಗುಣಂಗಳ ಬಿಡಿಸೋ ಹಯವದನ ||೩|| Enu baMdyO jIvavE sharIradoLu vyarthavAgi ||pa|| daana dharma maaDalilla dayabuddhi puTTalilla j~jaanavaritu haripUje maaDalilla  j~jaana suj~jaanigaLa sannidhiyalli iralilla, nirmala manadalli oMdu dinavU iralilla ||1|| sati puruSharu naavu saMtOShadiMdiralilla, yatiyaagi tIrtha yaatre maaDalilla shRutishaastra puraaNagaLa kivigoTTu kELalilla, mRutavAgO kaala baMtu baride muppaadenalla ||2|| uMDu suKiyalla uTTu toTTu pariNaama illa, koMD...

ಬಿಡೆನೋ ನಿನ್ನಂಘ್ರಿ | ಶ್ರೀ ಪ್ರಸನ್ನ ವೇಂಕಟ ದಾಸರು | Bideno Ninnanghri | Prasanna Venkata Dasaru

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ| ನಿನ್ನ ನುಡಿಯೇ ಜಿತಲ್ಲೋ ಶ್ರೀನಿವಾಸ ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ |ಪ| ಬಡಿಯೋ ಬೆನ್ನಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೋ ಶ್ರೀನಿವಾಸ| ನಾ ಬಡವ ಕಾಣೆಲೋ ಶ್ರೀನಿವಾಸ | ನಿನ್ನೊಡಲ ಹೊಕ್ಕೆನೋ ಶ್ರೀನಿವಾಸ |೧| ಪಂಜು ಪಿಡಿವೆನೋ ಶ್ರೀನಿವಾಸ ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ | ನಾ ಸಂಜೆ ಉದಯಕೆ ಶ್ರೀನಿವಾಸ| ಕಾಳಂಜೆಯ ಪಿಡಿವೆ ಶ್ರೀನಿವಾಸ |೨| ಸತ್ತಿಗೆ ಚಾಮರ ಶ್ರೀನಿವಾಸ ನಾನೆತ್ತಿ ಕುಣಿವೆನೋ ಶ್ರೀನಿವಾಸ | ನಿನ್ನ ರತ್ನದ ಹಾವಿಗೆ ಶ್ರೀನಿವಾಸ ನಾ ಹೊತ್ತು ನಲಿವೆನೋ ಶ್ರೀನಿವಾಸ |೩| ಹೇಳಿದಂತಾಲಿಪೆ ಶ್ರೀನಿವಾಸ ನಿನ್ನಾಳಿಗಳಾಗಿಹೆ ಶ್ರೀನಿವಾಸ | ಅವರೂಳಿಗ ಮಾಳ್ಪೆ ಶ್ರೀನಿವಾಸ| ನನ್ನ ಪಾಲಿಸೋ ಬಿಡದೆ ಶ್ರೀನಿವಾಸ |೪| ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ| ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸ ನನಗಿನ್ನು ಲಜ್ಜೇತಕೆ ಶ್ರೀನಿವಾಸ |೫| ಬೀಸಿಕೊಲ್ಲಲವರೆ ಶ್ರೀನಿವಾಸ ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ | ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸ| ಎಂಜಲಾಸೆಯ ಬಂಟ ನಾ ಶ್ರೀನಿವಾಸ |೬| ಹೇಸಿ ನಾನಾದರೆ ಶ್ರೀನಿವಾಸ ಹರಿದಾಸರೊಳು ಪೊಕ್ಕೆ ಶ್ರೀನಿವಾಸ | ಅವರ ಭಾಷೆಯ ಕೇಳಿಹೇ ಶ್ರೀನಿವಾಸ ಆವಾಸಿಯ ಸೈರಿಸೋ ಶ್ರೀನಿವಾಸ |೭| ತಿಂಗಳವನಲ್ಲ ...

ಮದ್ದು ಮಾಡಲಾರೆಯ | ಶ್ರೀ ಪುರಂದರ ವಿಠಲ | Maddu Madalareya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮದ್ದು ಮಾಡಲಾರೆಯ ಎನ್ನಮ್ಮ ನೀ ಮುದ್ದು ರಮಾದೇವಿ ||ಪ|| ಮುದ್ದು ಬಾಲಕೃಷ್ಣನಲ್ಲಿ ಎನ್ನ ಮನಸು ನಿಲ್ಲೋ ಹಾಂಗೆ ||ಅಪ|| ವಚನಂಗಳಲ್ಲಿ ವಾಸುದೇವನ ಚರಿತೆಯು  ರಚನೆ ಮಾಡುವರಲ್ಲಿ ಭಕುತಿ ನಿಲ್ಲಿಸೋ ಹಾಂಗೆ ||೧|| ಸಂತೆನೆರಹಿದ ಸತಿಸುತರು ತನ್ನವರೆಂಬ  ಭ್ರಾಂತಿಯ ಬಿಟ್ಟು ನಿಶ್ಚಿಂತನಾಗುವ ಹಾಂಗೆ ||೨|| ಎನ್ನೊಡೆಯ ಶ್ರೀ ಪುರಂದರ ವಿಠಲನ  ಸನ್ಮತಿಯಿಂದ ನಾ ಪಾಡುವ ಹಾಂಗೆ ||೩|| maddu mADalAreya ennamma nI muddu ramAdEvi ||pa|| muddu bAlakRuShNanalli enna manasu nillO hAMge ||apa|| vacanaMgaLalli vAsudEvana cariteyu  racane mADuvaralli Bakuti nillisO hAMge ||1|| saMtenerahida satisutaru tannavareMba  BrAMtiya biTTu niSciMtanAguva hAMge ||2|| ennoDeya SrI puraMdara viThalana  sanmatiyiMda nA pADuva hAMge ||3||

ರಾಯರ ಸ್ತೋತ್ರ ಸುಳಾದಿ | ಗೋಪಾಲ ವಿಠಲ | Rayara Stotra Suladi | Sri Gopala Dasaru

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಧ್ರುವತಾಳ ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು | ಇರುತಿಪ್ಪ ವಿವರ ಅರಿತಷ್ಟು ವರ್ಣಿಸುವೆ | ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ | ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ | ಸುರರಿಗಮೃತ ಉಣಿಸಿ ಪರಿಪರಿ ಕ್ರಿಯೆ ಮಾಡಿ | ಪರಿಶುದ್ಧನಾದನೆಂದು ಅರಿದು ಈ ಸ್ಥಳದಲ್ಲಿ | ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ | ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು | ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ | ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತಾ | ಹರಿ ನೋಡಿದನು ಇವರ ಪರಮ ದಯಾಳುತನವ | ಗುರುವಂತರ್ಯಾಮಿಯಾಗಿ ವರವಾನೀಡಲು ಜಗಕೆ | ನರಹರಿ ತಾನೆ ನಿಂದು ನಿರುತಪೂಜೆಯಗೊಂಡು | ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ | ನಾರಾಯಣ ತಾನಿವರ ಸನ್ನಿಧನಾಗಿ | ಇವರಿಗೆ ಫಲತಂದೀವ ಇಹಪರದಲ್ಲಿನ್ನು | ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ ಶರಣರ | ಪೊರೆವಂಥ ಚರಿಯಾ ಪರಿಪರಿ ಉಂಟು || ೧ || ಮಟ್ಟತಾಳ ನರಹರಿ ರಾಮ ಕೃಷ್ಣ  ಸಿರಿವೇದವ್ಯಾಸ | ಎರಡೆರಡು ನಾಲ್ಕು ಹರಿಯ ಮೂರುತಿಗಳು | ಪರಿವಾರ ಸಹಿತವಾಗಿ ಸಿರಿ ಸಹಿತದಿ ನಿಂದು | ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ | ತರುವಾಯದಲಿನ್ನು ತಾರತಮ್ಯನುಸಾರ | ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳಿನ್ನು | ಪರಿಪರಿ ಪುರಾಣಭಾರತಾಗಮದಲ್ಲಿ...

ರಂಗ ಮನೆಗೆ ಬಾರೊ | ರಂಗವಿಠಲ | Ranga Manege Baaro | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ರಂಗ ಮನೆಗೆ ಬಾರೊ ಕೃಪಾಂಗ ಶ್ರೀರಂಗ ||ಪ|| ರಂಗ ಕಲುಷವಿಭಂಗ ಗರುಡ ತು- ರಂಗ ನವಮೋಹನಾಂಗ ಶ್ರೀರಂಗ ||ಅಪ|| ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು ಮೆಚ್ಚಿ ಮುದ್ದಾಡುವೆನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತ ತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದ ಎಚ್ಚರಿಕೆಯಲಿ ಲಂಕೆಯನು ಪೊಕ್ಕು ಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳ ಕೊಚ್ಚಿದ ಅಚ್ಯುತಾನಂತ ||೧|| ಮುತ್ತಿನ ಹಾರವನು ಕಂಠದೊಳಿಟ್ಟು ಎತ್ತಿ ಮುದ್ದಾಡುವೆನು ಹತ್ತಿದ ರಥವನು ಮುಂದೊತ್ತಿದ ಕೌರವರ ಸೇನೆಗೆ ಮುತ್ತಿದ ಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲ ಒತ್ತರಿಸಿ ಮುಂದೊತ್ತಿ ನಡೆಯುತ ಇತ್ತರದಿ ನಿಂತ ವರರಥಿಕರ ಕತ್ತರಿಸಿ ಕಾಳಗವ ಮಾಡಿದ ||೨|| ಉಂಗುರಗಳನು ನಿನ್ನ ಅಂಗುಳಿಗಿಟ್ಟು ಕಂಗಳಿಂದಲಿ ನೋಡುವೆ ಹೆಂಗಳ ಉತ್ತುಂಗದ ಕುಚಂಗಳ ಆಲಿಂಗಿಸಿದ ಭುಜಂಗಳ ಕಮಲ ಸಮ ಪಾದಂಗಳ ಹಿಂಗದೆ ಸ್ಮರಿಸಿದ ಮಾತಂಗನ ಭಂಗವ ಪರಿಹರಿಸಿ ಬ್ಯಾಗದಿ ಮಂಗಳ ಸ್ವರ್ಗವನಿತ್ತ ಉ ತ್ತುಂಗ ವಿಕ್ರಮ ರಂಗವಿಠಲನೆ ||೩|| raMga manege baaro kRupaaMga SrIraMga ||pa|| raMga kaluShavibhaMga garuDa tu- raMga navamOhanaaMga SrIraMga ||apa|| pacce baavuligaLanu ninna kiviyoLagiTTu mecci muddaaDuvenu heccida vaaliyanu baaNadi cucc...

ವಂದಿಪೆ ನಿನಗೆ ಗಣನಾಥ | ಶ್ರೀ ಶ್ರೀಪಾದರಾಜರು | Vandipe Ninage Gananatha | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ವಂದಿಪೆ ನಿನಗೆ ಗಣನಾಥ | ಮೊದಲೊಂದಿಪೆ ನಿನಗೆ ಗಣನಾಥ |  ಬಂದ ವಿಘ್ನ ಕಳೆ ಗಣನಾಥ ||ಪ||  ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ | ಸಾಧಿಸಿದ ರಾಜ್ಯ ಗಣನಾಥ ||೧||  ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ | ಸಂದ ರಣದಲ್ಲಿ ಗಣನಾಥ ||೨||  ಮಂಗಳ ಮೂರುತಿ ಗುರು ರಂಗವಿಠಲನ್ನ ಪಾದ | ಹಿಂಗದೆ ಭಜಿಪೆ ಗಣನಾಥ ||೩||  vaMdipe ninage gaNanaatha | modaloMdipe ninage gaNanAtha |  baMda viGna kaLe gaNanAtha ||pa||     Adiyalli ninna pAda pUjisida dharmarAya | sAdhisida rAjya gaNanAtha ||1||     hiMde rAvaNanu madadiMda ninna pUjisade | saMda raNadalli gaNanAtha ||2||     maMgaLa mUruti guru raMgaviThalanna pAda | hiMgade Bajipe gaNanAtha ||3|| 

ಶರಣು ನಿನ್ನ ಚರಣ ಕಮಲ | ಪ್ರಾಣೇಶ ವಿಠಲ | Sharanu ninna charana | Sri Pranesha Vithala

Image
ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು Kruti:Sri Pranesha Vittala Dasaru ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವ ||ಪ|| ಕರವ ಪಿಡಿದು ಸುಮತಿ ಇತ್ತು ಪೊರೆಯೋ ಶಿವ ಶಿವ ||ಅಪ|| ದಂತಿ ಚರ್ಮ ಹೊದ್ದ ಭಸ್ಮ ಭೂಷ ಶಿವ ಶಿವ|  ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವ| ಸಂತರಿಂದ ಸತತ ಪೂಜೆಗೊಂಬ ಶಿವ ಶಿವ|  ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವ ||೧|| ಮಂದಮತಿಯ ತಪ್ಪನೆಣಿಸಬೇಡ ಶಿವ ಶಿವ|  ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವ| ಮಂದಗಮನೆ ನಿನ್ನ ಮನದೊಳೆಲ್ಲ ಶಿವ ಶಿವ|  ತಂದು ಕೊಂಡ ದಕ್ಷವ್ರತ ಕುವಾರ್ತಿ ಶಿವ ಶಿವ ||೨||   ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವ|  ಮಾಣು ಯಜ್ಞ ಸಹಾಯನಾಗು ದಯದಿ ಶಿವ ಶಿವ| ಏನುಪಾಯ ಇದಕೆ ಚಿಂತಿಸುವುದು ಶಿವ ಶಿವ|  ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವ ಶಿವ ||೩|| SaraNu ninna caraNa kamalagaLige Siva Siva ||pa|| karava piDidu sumati ittu poreyO Siva Siva ||apa||   daMti carma hodda Basma BUSha Siva Siva|  ciMte rahita layake kartanAda Siva Siva| saMtariMda satata pUjegoMba Siva Siva|  kaMtu pitana pUrNa prIti pAtra Siva Siva ||1||   maMdamatiya tappaneNisabEDa Siva Siva|  kuMdu ninage eMdigeMdigilla Siva Siva| maMd...

ನೋಡು ನೋಡೆಂಥಾ ರಘುವೀರ | ಶ್ರೀದವಿಠಲ | Nodu Nodentha Raghuveera | Sri Sridavithala Dasaru

Image
ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು Kruti: Sri Srida Vittala Dasaru ನೋಡು ನೋಡೆಂಥಾ ರಘುವೀರ ದೀನೋದ್ಧಾರ ||ಪ|| ತನುಮನಧನಗಳ ತನಗೊಪ್ಪಿಸದೆ ನೆನೆವ ಮನುಜರಿಗೆ ದೂರಾ ದೂರಾ ||೧|| ಸೇರಿದ ಸುಜನರ ದೂರುವ ದುರುಳರ ಬೇರಿಗೆರೆವ ಬಿಸಿ ನೀರಾ ನೀರಾ ||೨|| ಶ್ರೀದವಿಠಲನ ನಿಜಪಾದಾಶ್ರಿತರಪರಾಧವ ಮನಸಿಗೆ ತಾರಾ ತಾರಾ ||೩|| nODu nODeMthaa raghuvIra dInOddhaara ||pa|| tanumanadhanagaLa tanagoppisade neneva manujarige dUrA dUrA ||1|| sErida sujanara dUruva duruLara bErigereva bisi nIraa nIraa ||2|| shrIdaviThalana nijapaadaashritaraparaadhava manasige taaraa taaraa ||3||

ಹರುಷದಿಂದಲಿ ಕಾಯೋ ಹನುಮ | ನರಹರಿ ವಿಠಲ | Harushadindali Kayo | Narahari Vithala

Image
ಸಾಹಿತ್ಯ : ಶ್ರೀ ನರಹರಿ ವಿಠಲ ದಾಸರು  Kruti:Sri Narahari Vithala Dasaru ಹರುಷದಿಂದಲಿ ಕಾಯೋ ಹನುಮ ಹಾಲಬಾವಿಯೊಳಿರುವಂಥ ಭೀಮ ||ಪ|| ಗುರುಮಧ್ವರಾಯರ ಚರಣಕ್ಕೆ ನಮಿಸುವೆ | ಹರಿ ಸರ್ವೋತ್ತಮ ಎಂಬ ಸ್ಥಿರವಾದ ಮತಿ ಕೊಡು ಹನುಮ ||ಅಪ|| ಅಂಜನಾದೇವಿ ಸಂಭೂತ | ಧನಂಜಯನಣ್ಣ ಯತಿ ಪ್ರಖ್ಯಾತ | ಕಂಜಲೋಚನ ರಾಮದೂತ | ಭವಭಂಜನ ಆನಂದತೀರ್ಥ ಅಂಜಿಕಿನ್ಯಾತಕೆ ಸಂಜೀವರಾಯ | ಸೌಗಂಧಿಕ ಪುಷ್ಪವ ತಂದ ಸುಂದರ ಮಧ್ವ ಹನುಮ ||೧|| ಸಾಗರ ದಾಟಿದ್ಯೋ ಧೀರಾ | ಧರ್ಮರಾಯನ ಅನುಜ ವೃಕೋದರ | ಆ ಮಧ್ಯಗೇಹರ ಕುವರ ಹನುಮ | ಭೀಮನೆ ಮಧ್ವಾವತಾರ | ಆ ಮನೋಹರ ದಿವ್ಯ ನಾಮಾಮೃತವನ್ನು ಪ್ರೇಮದಿ ಸವಿದಂಥ ಸ್ವಾಮಿ ದಯಾನಿಧೇ ಹನುಮ ||೨|| ದೂರ ನೋಡದಿರೋ ಹನುಮ | ಕರ ಜೋಡಿಸಿ ಪ್ರಾರ್ಥಿಪೆ ಭೀಮ | ಆನಂದ ತೀರ್ಥರೆ ಪ್ರೇಮ | ದಿಂದ ವ್ಯಾಳ್ಯವ್ಯಾಳ್ಯಕೆ ಹರಿ ನಾಮ | ಪ್ರೇರಣೆ ಮಾಡಿಸೋ ಭಾರತೀರಮಣನೆ ಸಿರಿದೊರೆ ನರಹರಿ ವಿಠಲನ ದೂತ ಹನುಮ ||೩|| haruShadiMdali kAyO hanuma hAlabaaviyoLiruvaMtha BIma ||pa|| gurumadhvarAyara caraNakke namisuve | hari sarvOttama eMba sthiravAda mati koDu hanuma ||apa||   aMjanAdEvi saMBUta | dhanaMjayanaNNa yati praKyAta | kaMjalOcana rAmadUta | BavaBaMjana AnaMdatIrtha aMjikinyAtake saMjIvarAya | saugaMdhika puShpava taMda suMdara madhva hanuma ||1|...

ಕಂಡೆ ನಾ ಗೋವಿಂದನ | ಪುರಂದರ ವಿಠಲ | Kande Na Govindana | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಂಡೆ ನಾ ಗೋವಿಂದನ |  ಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ ||ಪ|| ಕೇಶವ ನಾರಾಯಣ ಶ್ರೀ ಕೃಷ್ಣನ | ವಾಸುದೇವ ಅಚ್ಯುತ ಅನಂತನ || ಸಾಸಿರ ನಾಮದ ಶ್ರೀ ಹೃಷಿಕೇಶನ | ಶೇಷಶಯನ | ನಮ್ಮ ವಸುದೇವ ಸುತನ ||೧|| ಮಾಧವ ಮಧುಸೂದನ ತ್ರಿವಿಕ್ರಮನ | ಯಾದವ ಮುನಿಕುಲವಂದ್ಯನ || ವೇದಾಂತ ವೇದ್ಯನ ಇಂದಿರಾರಮಣನ | ಆದಿ ಮೂರುತಿ ಪ್ರಹ್ಲಾದ ವರದನ ||೨|| ಪುರುಷೋತ್ತಮ ನರಹರಿ ಶ್ರೀ ಕೃಷ್ಣನ | ಶರಣಾಗತ ಜನ ರಕ್ಷಕನ || ಕರುಣಾಕರ ನಮ್ಮ ಪುರಂದರ ವಿಠಲನ | ನೆರೆ ನಂಬಿದೆನು ಬೇಲೂರ ಚೆನ್ನಿಗನ ||೩|| kaMDe nA gOviMdana |  puMDarIkAkSha pAMDava pakSha kRuShNana ||pa||   kESava nArAyaNa SrI kRuShNana | vAsudEva acyuta anaMtana || sAsira nAmada SrI hRuShikESana | SEShaSayana | namma vasudEva sutana ||1||   mAdhava madhusUdana trivikramana | yAdava munikulavaMdyana || vEdAMta vEdyana iMdirAramaNana | Adi mUruti prahlAda varadana ||2||   puruShOttama narahari SrI kRuShNana | SaraNAgata jana rakShakana || karuNAkara namma puraMdara viThalana | nere naMbidenu bElUra cennigana ||3||

ರೋಗಹರನೇ ಕೃಪಾಸಾಗರ | ಶ್ರೀ ಜಗನ್ನಾಥವಿಠಲ | Roga Harane Krupa| Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ರೋಗಹರನೇ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೋ ||ಪ|| ಸಂತತ ದುರ್ವಾದಿಧ್ವಾಂತ ದಿವಾಕರ ಸಂತ ವಿನುತ ಮಾತ ಲಾಲಿಸೋ ||೧|| ಪಾವನಗಾತ್ರ ಸುದೇವ ವರನೇ ತವ ಸೇವಕ ಜನರೊಳಗಾಡಿಸೋ ||೨|| ಘನ್ನ ಮಹಿಮ ಜಗನ್ನಾಥ ವಿಠಲ ಪ್ರಿಯ ನಿನ್ನಾರಾಧನೆ ಮಾಡಿಸೋ ||೩|| rOgaharanE kRupAsAgara SrIguru rAGavEMdra paripAlisO ||pa|| saMtata durvadi dhvAMta divAkara saMta vinuta mAta lAlisO ||1||   pAvanagAtra sudEva varanE tava sEvaka janaroLagADisO ||2||   Ganna mahima jagannAtha viThala priya ninnArAdhane mADisO ||3||

ನಂಬಿದೆ ನಿನ್ನ ಪಾದ ನರಸಿಂಹ | ಪುರಂದರವಿಠಲ | Nambide Ninna Paada Narasimha | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಂಬಿದೆ ನಿನ್ನ ಪಾದ ನರಸಿಂಹ | ಎನ್ನ | ಬೆಂಬಿಡದೆ ಸಲಹಯ್ಯ ನರಸಿಂಹ ||ಪ|| ಹಂಬಲಿಸುವೆನು ಬಲು ನರಸಿಂಹ ಪಾದ ನಂಬಿದವರನು ಕಾಯೋ ನರಸಿಂಹ ||ಅಪ|| ತುಂಬುರು ನಾರದಪ್ರಿಯ ನರಸಿಂಹ | ಚೆಲ್ವ | ಶಂಬರಾರಿಯ ಪಿತನೆ ನರಸಿಂಹ || ಅಂಬರೀಷನ ಕಾಯ್ದೆ ನರಸಿಂಹ | ಜಗದಂಬರಮಣನೆ ಸಿರಿ ನರಸಿಂಹ ||೧|| ಬಾಲ ಕರೆದಲ್ಲಿ ಬಂದೆ ನರಸಿಂಹ | ಭಕ್ತ |  ಪಾಲಿಪ ದಯಾಳು ಸಿರಿ ನರಸಿಂಹ || ಲೀಲೆಯಿಂದ ಹಿರಣ್ಯಕನ ನರಸಿಂಹ | ಕೊಂದ | ಲೋಲ ಸಿರಿಯರಸನೆ ನರಸಿಂಹ ||೨|| ಅಚ್ಯುತಾನಂತ ಗೋವಿಂದ ನರಸಿಂಹ | ಸಿರಿ | ಸಚ್ಚಿದಾನಂದ ಮುಕುಂದ ನರಸಿಂಹ || ಕಿಚ್ಚಿನಂದದಿ ಬೆಂದೆ ನರಸಿಂಹ | ಭವವಿಚ್ಛೆಯಿಂದ ಬಿಡಿಸಯ್ಯ ನರಸಿಂಹ ||೩|| ಕರಿ ಮೊರೆಯನು ಕೇಳಿ ನರಸಿಂಹ | ಬಲು | ಬರದಿಂದೊದಗಿ ಬಂದೆ ನರಸಿಂಹ | ಗರುಡವಾಹನನಾಗಿ ನರಸಿಂಹ | ಉದ್ಧರಿಸಿ ಕಾಯ್ದೆಯಲ್ಲೋ ನರಸಿಂಹ ||೪|| ದೇವರ ದೇವನು ನೀನೇ ನರಸಿಂಹ | ಬೇರೆ | ಕಾವರನು ಕಾಣೆನಯ್ಯ ನರಸಿಂಹ | ಭಾವಜನಯ್ಯನೆ ಸಿರಿ ನರಸಿಂಹ | ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ||೫|| ತಂದೆ ತಾಯಿ ಗುರುದೈವ ನರಸಿಂಹ | ಎನ್ನ | ಬಂಧು ಬಳಗವು ನೀನೇ ನರಸಿಂಹ | ಕುಂದು ಹೆಚ್ಚು ನೋಡಬೇಡ ನರಸಿಂಹ | ಪುರಂದರ ವಿಠಲ ಕಾಯೋ ನರಸಿಂಹ ||೬|| naMbide ninna pAda narasiMha |enna | beMbiDade salahayya narasiMha ||pa|| ...

ರಾಮ ರಾಮ ಎಂಬೆರಡಕ್ಷರ | ಶ್ರೀ ವಿಜಯ ವಿಠಲ | Rama Rama Emberedakshara | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪ|| ಹಾಲಾಹಲವನ್ನು ಪಾನವ ಮಾಡಿದ ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆಯಿಲ್ಲದೆ ಗಿರಿ ಸಾರಿದ ಕಪಿ ಕುಂಜರ ರವಿಸುತ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ ಕಂಜಲೋಚನೆಯ ಕೇಳೇನು ||೨|| ಕಾಲವನರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನು ಬಲ್ಲವನು || ವ್ಯಾಳ ಶಯನ ಶ್ರೀವಿಜಯವಿಠಲನ ಲೀಲೆ ಶರಧಿಯನು ಕೇಳೇನು ||೩|| rAma rAma eMberaDakShara prEmadi salahitu sujanaranu ||pa||   hAlAhalavannu pAnava mADida phAlalOcanane ballavanu || AlApisuta SileyAgidda bAle ahalyeya kELEnu ||1||   aMjikeyillade giri sArida kapikuMjara ravisuta ballavanu || eMjala PalagaLa harigarpisida kaMjalOcaneya kELEnu ||2||   kAlavanaritu sEveya mADida lOla lakShmaNanu ballavanu || vyALa Sayana SrIvijayaviThalana lIle Saradhiyanu kELEnu ||3||

ಪಿಳ್ಳಂಗೋವಿಯ ಚೆಲ್ವ ಕೃಷ್ಣನ | ಪುರಂದರ ವಿಠಲ | Pillangoviya Chelva | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti:   Sri Purandara Dasaru (Purandara vittala) ಪಿಳ್ಳಂಗೋವಿಯ ಚೆಲ್ವ ಕೃಷ್ಣನ |  ಎಲ್ಲಿ ನೋಡಿದಿರಿ | ರಂಗನ ಎಲ್ಲಿ ನೋಡಿದಿರಿ ||ಪ|| ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ ||ಅಪ|| ನಂದಗೋಪನ ಮಂದಿರಂಗಳ ಸಂದುಗೊಂದಿನಲಿ  ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ |  ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ || ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ||೧|| ಶ್ರೀ ಗುರೂಕ್ತ ಸದಾ ಮಂಗಳ ಯೋಗ ಯೋಗದಲಿ  ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ | ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ |  ಭಾಗವತರು ಬಾಗಿ ಪಾಡುವ ರಾಗ ರಾಗದಲಿ ||೨|| ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ | ಖೇಚರೇಂದ್ರನ ಸುತನ ರಥದ ಅಚ್ಚ ಪೀಠದಲಿ | ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ | ವೀಚು ಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ ||೩|| piLLaMgOviya celva kRuShNana |  elli nODidiri | raMgana elli nODidiri ||pa||   elli nODidaralli tAnilladillaveMdu balla jANare ||apa||   naMdagOpana maMdiraMgaLa saMdugoMdinali  caMda caMdada gOpa bAlara vRuMda vRuMdadali |  suMdarAMgada suMdarIyara hiMdu muMdinali || aMdadAkaLa kaMda karugaLa maMde maMd...

ಊರಿಗೆ ಬಂದರೆ ದಾಸಯ್ಯ | ಪುರಂದರ ವಿಠಲ | Oorige Bandare Dasayya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| ಕೇರಿಗೆ ಬಂದರೆ ದಾಸಯ್ಯ ಗೊಲ್ಲ, ಕೇರಿಗೆ ಬಾ ಕಂಡ್ಯ ದಾಸಯ್ಯ ||ಅಪ|| ಕೊರಳೊಳು ವನಮಾಲೆ ಧರಿಸಿದನೆ ಕಿರು ಬೆರಳಲಿ ಬೆಟ್ಟವನೆತ್ತಿದನೆ || ಇರುಳು ಹಗಲು ನಿನ್ನ ಕಾಣದೆ ಇರಲಾರೆ, ಮರುಳು ಮಾಡಿದಂಥ ದಾಸಯ್ಯ ||೧|| ಕಪ್ಪು ವರ್ಣದ ದಾಸಯ್ಯ ಕಂದರ್ಪನ ಪಿತನೆಂಬೋ ದಾಸಯ್ಯ || ಅಪ್ಪಿಕೊಂಡು ನಿನ್ನ ಮನಸಿಗೆ ಬಂದರೆ, ಅಪ್ಪವ ಕೊಡುವೆನು ದಾಸಯ್ಯ ||೨|| ಮುಂದೇನು ದಾರಿ ದಾಸಯ್ಯ, ಚೆಲ್ವ ಪೊಂಗೊಳಲೂದುತ ದಾಸಯ್ಯ || ಹಾಂಗೆ ಪೋಗದಿರು ದಾಸಯ್ಯ, ಹೊನ್ನುಂಗುರ ಕೊಡುವೆನು ದಾಸಯ್ಯ ||೩|| ಸಣ್ಣ ನಾಮದ ದಾಸಯ್ಯ ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ || ಸದನಕೆ ಬಂದರೆ ದಾಸಯ್ಯ, ಮಣಿಸರವನು ಕೊಡುವೆನು ದಾಸಯ್ಯ ||೪|| ಸಿಟ್ಟು ಮಾಡದಿರು ದಾಸಯ್ಯ, ಸಿರಿ ಪುರಂದರ ವಿಠಲ ದಾಸಯ್ಯ || ರಟ್ಟು ಮಾಡದಿರು ದಾಸಯ್ಯ ತಂಬಿಟ್ಟು ಕೊಡುವೆನು ದಾಸಯ್ಯ ||೫|| Urige baMdare dAsayya namma kErige bA kaMDya dAsayya ||pa|| kErige baMdare dAsayya golla, kErige bA kaMDya dAsayya ||apa|| koraLoLu vanamAle dharisidane kiru beraLali beTTavanettidane || iruLu hagalu ninna kANade iralAre, maruLu mADidaMtha dAsayya ||1|| kappu var...

ಘಟಿಕಾಚಲದಿ ನಿಂತ | ಶ್ರೀ ಪುರಂದರ ವಿಠಲ | Ghatikachaladi Ninta | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಘಟಿಕಾಚಲದಿ ನಿಂತ ಶ್ರೀ ಹನುಮಂತ ||ಪ|| ಘಟಿಕಾಚಲದಿ ನಿಂತ ಪಟು ಹನುಮಂತನ  ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಅಪ|| ಚತುರಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳನು ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ  ಚತುರ್ವಿಧ ಫಲವ ಕೊಡುತ ||೧|| ಸರಸಿಜ ಭವಗೋಸ್ಕರ ಕಲ್ಮಶ ದೂರ ವರಚಕ್ರ ತೀರ್ಥಸರ ಮೆರೆವಾಚಲದಿ ನಿಂತು  ನರಹರಿಗೆದುರಾಗಿ ಸ್ಥಿರ ಯೋಗಾಸನದಿ  ಕರೆದು ವರಗಳ ಕೊಡುತಾ ||೨|| ಶಂಖ ಚಕ್ರವ ಧರಿಸಿ ಭಕ್ತರ ಮನದ ಪಂಕವ ಪರಿಹರಿಸಿ  ಪಂಕಜನಾಭ ಶ್ರೀ ಪುರಂದರ ವಿಠಲನ್ನ  ಬಿಂಕದ ಸೇವಕ ಸಂಕಟ ಕಳೆಯುತ || ೩ || GaTikAcaladi niMta SrI hanumaMta ||pa|| GaTikAcaladi niMta paTu hanumaMtana  paThaneya mADalutkaTadi poreveneMdu ||apa||   caturayugadi tAnu muKyaprANanu caturmuKanayyana catura mUrutigaLanu caturatanadi Bajisi caturmuKanAgi jagake  caturvidha Palava koDuta ||1||   sarasija BavagOskara kalmaSa dUra varacakra tIrthasara merevaacaladi niMtu  naraharigedurAgi sthira yOgAsanadi  karedu varagaLa koDutA ||2||   SaMKa cak...

ಇಷ್ಟು ದಿನ ಈ ವೈಕುಂಠ | ಕಾಗಿನೆಲೆಯಾದಿ ಕೇಶವ | Ishtu dina | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ||ಪ|| ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಅಪ|| ಎಂಟು ಏಳನು ಕಳೆದುದರಿಂದ | ತುಂಟರೈವರ ತುಳಿದುದರಿಂದ || ಕಂಟಕನೊಬ್ಬನ ಅಳಿದುದರಿಂದ | ಭಂಟನಾಗಿ ಬಂದೆ ಶ್ರೀರಂಗಶಾಯಿ ||೧|| ವನ ಉಪವನಗಳಿಂದ ಘನಸರೋವರಗಳಿಂದ || ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ || ೨ || ವಜ್ರ ವೈಢೂರ್ಯದ ತೊಲೆಗಳ ಕಂಡೆ | ಪ್ರಜ್ವಲಿಪ ಮಹಾದ್ವಾರವ ಕಂಡೆ || ನಿರ್ಜರಾದಿ ಮುನಿಗಳ ನಾ ಕಂಡೆ | ದುರ್ಜನಾಂತಕನೇ ಶ್ರೀರಂಗಶಾಯಿ ||೩|| ರಂಭೆ ಊರ್ವಶಿ ಮೇಳವ ಕಂಡೆ | ತುಂಬುರು ಮುನಿ ನಾರದರನು ಕಂಡೆ || ಅಂಬುಜೋದ್ಭವ ರುದ್ರರ ಕಂಡೆ | ಶಂಬರಾರಿ ಪಿತನೆ ಶ್ರೀರಂಗಶಾಯಿ ||೪|| ನಾಗಶಯನನ ಮೂರುತಿ ಕಂಡೆ | ಭೋಗಿ ಭೂಷಣ ಶಿವನನು ಕಂಡೆ || ಭಾಗವತರ ಸಮ್ಮೇಳವ ಕಂಡೆ | ಕಾಗಿನೆಲೆಯಾದಿ ಕೇಶವನ ನಾ ಕಂಡೆ ||೫|| iShTu dina I vaikuMTha eShTu dUravO ennutalidde ||pa|| dRuShTiyiMdali nAnu kaMDe sRuShTigISane SrIraMgaSAyi ||apa||   eMTu ELanu kaLedudariMda | tuMTaraivara tuLidudariMda || kaMTakanobbana aLidudariMda | BaMTanAgi baMde shrIraMgaSAyi ||1|| vana upavanagaLiMda GanasarOvaragaLiMda || kanaka gOpuragaLiMda GanashObhitane shrIraMgashaayi || 2 ...

ಬಂದ ನೋಡಿ ಗೋವಿಂದ ಕೃಷ್ಣ | ಪುರಂದರ ವಿಠಲ | Banda nodi govinda | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಂದ ನೋಡಿ ಗೋವಿಂದ ಕೃಷ್ಣ ಬಂದ ನೋಡಿ ||ಪ|| ಬಂದ ಬಂದ ಆನಂದತೀರ್ಥ ಮುನೀಂದ್ರ  ವಂದ್ಯ ಹರಿ ನಂದ ಮುಕುಂದನು ||ಅಪ|| ಸರಸಿಜಾಕ್ಷ ಹರಿಯೇ ಸರ್ವರ ಪೊರೆವ ದಯಾನಿಧಿಯೇ ||  ಕರಿಯವರದ ಚಕ್ರದಿ ಉದ್ಧರಿಸಿದ  ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯ ||೧|| ಇಂದ್ರದೇವ ವಂದ್ಯ ಇಷ್ಟರ ಇಂದು ಕಾಯುವ ನಿತ್ಯಾ- ನಂದ ಚಂದ್ರಕೋಟಿ ಲಾವಣ್ಯ ಮುಖದಲಿ  ಸುಂದರ ಅರಳೆಲೆ ಹಾರಗಳಿಂದಲಿ ||೨|| ಚರಣ ಕಮಲವಂತೆ ಸರ್ವದಾ ಮಾಳ್ಪುದು ದಯವಂತೆ ||  ತರತರ ಜನರಿಗೆ ಕರೆದು ವರವೀವ  ಸರಸಿಜಾಕ್ಷ ನಮ್ಮ ಪುರಂದರ ವಿಠಲನು ||೩|| baMda nODi gOviMda kRuShNa baMda nODi ||pa|| baMda baMda AnaMdatIrtha munIMdra  vaMdya hari naMda mukuMdanu ||apa|| sarasijaakSha hariyE sarvara poreva dayaanidhiyE ||  kariyavarada cakradi uddharisida  hari namma paalipa paalgaDaloDeya ||1|| iMdradEva vaMdya iShTara iMdu kaayuva nityaa- naMda caMdrakOTi laavaNya muKadali  suMdara araLele haaragaLiMdali ||2|| caraNa kamalavaMte sarvadaa maaLpudu dayavaMte ||  taratara janarige karedu varavIva  sarasijaa...

ಏನು ಭ್ರಮೆ ಮನುಜರಿಗೆ | ರಂಗವಿಠಲ | Enu Bhrame Manujarige | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ ಮೀನು ಗಾಳವ ನುಂಗಿ ಮೋಸಹೋದ ತೆರನಂತೆ  ||ಪ|| ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ ಪೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿ ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು ಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ ||೧|| ಬಲುವೇದಿಕೆಯಲ್ಲಿ ಬಲ್ಲವರೆನಿಸಬೇಕೆನುತ ಹಲವು ಬುದ್ಧಿಯಲ್ಲಿ ಹಿರ‍್ರನೆ ಹಿಗ್ಗುತ  ಮಲಿನ ಮನಸಿನಜ್ಞಾನದಲಿ ತಾನರಿಯದೆ ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨|| ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ ಪೋಗದಲ್ಲಿ ಹೋಗುವರು ಹೊಲ ಬಿಟ್ಟು ತಿಳಿಯರು ಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲು ವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ ||೩|| Enu bhrame manujarige eShTu mamate prakRutiyali mInu gaaLava nuMgi mOsahOda teranaMte  ||pa|| nanna mane nanna sati nanna sutareMdenisi ponnugaLa gaLisi heccaagi hOryaaDi saNNavara maduve saMbhramadi maaDuveneMdu anna modalu kaaNade aMtara piSaaciyaMte ||1|| baluvEdikeyalli ballavarenisabEkenuta halavu buddhiyalli hirrane higguta  malina manasinaj~jaanadali taanariyade baleyalli silukida pakShi...

ಕಂದನಾ ಕಂಡಿರೇನೆ | ಪುರಂದರ ವಿಠಲ | Kandana Kandirene | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಂದನಾ ಕಂಡಿರೇನೆ ಗೋಪಿಯ ಕಂದಾ ||ಪ|| ಕಂದನಲ್ಲವೆ ಎನ್ನ ಕುಂದಣದರಗಿಣಿಯು ||ಅಪ|| ಉಂಗುರವನಿಟ್ಟಿದ್ದೆ | ಉಡಿದಾರ ಕಟ್ಟಿದ್ದೆ | ಬಂಗಾರದ ಟೊಪ್ಪಿಗೆಯ ತಲೆಯ ಮೇಲಿಟ್ಟಿದ್ದೆ ||೧|| ರೊಟ್ಟಿಯ ಸುಟ್ಟಿದ್ದೆ | ತುಪ್ಪವ ಕಾಸಿದ್ದೆ | ಇಷ್ಟು ಹೊತ್ತು ಹೋಯಿತು ಉಣಲಿಲ್ಲ ||೨|| ಕಾಶಿಗೆ ಹೋಗಿ ನಾ ಪಡೆದೆ | ಪುರಂದರ ವಿಠಲನ  |  ದಾಸರಿಗೆ ತಕ್ಕ ಮಗುವೇ ನಮ್ಮಮ್ಮ ||೩|| kaMdanA kaMDirEne gOpiya kaMdA ||pa|| kaMdanallave enna kuMdaNadaragiNiyu ||apa||   uMguravaniTTidde | uDidAra kaTTidde | baMgArada Toppigeya taleya mEliTTidde ||1||   roTTiya suTTidde | tuppava kAsidde | iShTu hottu hOyitu uNalilla ||2||   kASige hOgi nA paDede | puraMdara viThalana  |  dAsarige takka maguvE nammamma ||3||

ಕಂಡೆ ಕರುಣಾನಿಧಿಯ | ಪುರಂದರ ವಿಠಲ | Kande Karunanidhiya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ||ಪ|| ರುಂಡ ಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅಪ|| ಗಜ ಚರ್ಮಾಂಬರನ ಗೌರೀವರ ಜಗದೀಶ್ವರನ | ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ ||೧|| ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನ || ಪಶುಪತಿಯೆನಿಸುವನ ವಸುಧೇಲಿ ಶಶಿಶೇಖರ ಶಿವನ ಹರನ ||೨|| ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ || ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೩|| ಕಾಮಿತ ಫಲವೀವನ ಭಕುತರ ಪ್ರೇಮದಿ ಸಲಹುವನ || ರಾಮನಾಮ ಸ್ಮರನಾ ರತಿಪತಿ ಕಾಮನ ಸಂಹರನ ಶಿವನ ||೪|| ಧರೆಗೆ ದಕ್ಷಿಣಕಾಶಿ ಎನಿಸುವ ಪಂಪಾಪುರ ವಾಸಿ || ತಾರಕ ಉಪದೇಶಿ ಪುರಂದರ ವಿಠಲ ಭಕ್ತರ ಪೋಷಿ ಹರನ ||೫|| kaMDe karuNAnidhiya gaMgeya maMDeyoLiTTa doreya ||pa|| ruMDa mAle siriya nosaloLu keMDagaNNina bageya harana ||apa||   gaja carmAMbarana gaurIvara jagadISvarana | trijaganmOhanana trilOcana tripurAMtaka Sivana harana ||1||   Basita BUShita harana Baktara vaSadoLagirutihana || paSupatiyenisuvana vasudhEli SaSiSEKara Sivana harana ||2||   kappugoraLa harana kaMdarpa pitana saKana || mup...

ಪರಮ ಪುರುಷ ಹರಿ | ಶ್ರೀ ಕನಕದಾಸರು | Parama Purusha Hari | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಪರಮ ಪುರುಷ ಹರಿ ಗೋವಿಂದ  ಕರಿವರದ ನಾರಾಯಣ ಗೋವಿಂದ |ಪ| ನಿಶಿಪೆಸರಸುರನ ಉಸುರ ತೊಲಗಿಸಿದ  ಕುಸುಮಶರನ ಪಿತ ಗೋವಿಂದ| ರಸಪೂರಿತ ಶ್ರುತಿ ಮಸುಳಿಸದಲೆ ತಂದು  ಬಿಸಜಸಂಭವಗಿತ್ತೆ ಗೋವಿಂದ |೧| ಜತನ ತಪ್ಪದೆ ಅಮೃತ ಮಥನದಿ ಪ- ರ್ವತವನುದ್ಧರಿಸಿದೆ ಗೋವಿಂದ| ಶತಕ್ರತುವಿನ ಸಿರಿ ಹತವಾಗೆ ಕಡಲನು  ಮಥಿಸಿ ನಿಲ್ಲಿಸಿಗೊಟ್ಟೆ ಗೋವಿಂದ |೨| ಭೂತಳವೆರಸಿ ರಸಾತಳಕಿಳಿದನ ಪಾ- ತಾಳದಿ ಕಂಡೆ ಗೋವಿಂದ| ಆತನೊಡನೆ ಕಾದಿ ಖ್ಯಾತಿಲಿ ಮಡುಹಿ ಮ- ಹೀತಳವನು ತಂದೆ ಗೋವಿಂದ |೩| ದುರುಳ ದೈತ್ಯನ ಸೀಳಿ ಕರುಳ ಮಾಲೆಯ ಮುಂ- ಗುರುಳೊಳು ಧರಿಸಿದೆ ಗೋವಿಂದ| ಗರಳ ಕಂಧರ ವಿಧಿ ಕರವೆತ್ತಿ ಪೊಗಳಲು  ತರಳಗಭಯವಿತ್ತೆ ಗೋವಿಂದ |೪| ವಾಮನನಾಗಿ ನಿಸ್ಸೀಮ ಬಲಿಯ ಕೈಯ  ಭೂಮಿಯಳೆದುಕೊಂಡೆ ಗೋವಿಂದ| ತಾಮರಸೋದ್ಭವಾಂಡ ಒಡೆದು ನಿಂದು  ವ್ಯೋಮ ಗಂಗೆಯ ಪೆತ್ತೆ ಗೋವಿಂದ |೫| ವರಪರಶುಧರನಾಗಿ ಭೂಪರ ಧಿ- ಕ್ಕರಿಸಿ ಸಂಹರಿಸಿದೆ ಗೋವಿಂದ| ತರಹರಿಸದೆ ವಸುಂಧರೆಯನೆಲ್ಲವ ಭೂ- ಸುರರಿಗೊಪ್ಪಿಸಿಕೊಟ್ಟೆ ಗೋವಿಂದ |೬| ತ್ರಿನಯನನೊಲಿಸಿದ ರಾವಣನನು  ರಣಾಂಗಣದೊಳಗೊರಸಿದೆ ಗೋವಿಂದ| ಕ್ಷಣವೆನಿಸದೆ ಮಣಿಪುರದಲಿ ವಿಭೀ- ಷಣಗೆ ಶಾಶ್ವತವಿತ್ತೆ ಗೋವಿಂದ |೭| ವಾರಣದಂತವಿದಾರಣ ಕಂಸ ಸಂ- ಹರಣ ಭುಜಬಲ ಗೋವಿಂದ| ವಾರಣ ಪುರಪತಿ ದಾರಣಪ್ರಿಯ ಭೂ  ಭಾರೋತ್ತಾರಣ ಗೋವಿಂದ |೮| ಕಥೆಯ ನಿರ್ಮಿಸಿ ಪತಿವ್ರತ...

ಹರೇ ವೇಂಕಟ ಶೈಲವಲ್ಲಭ | ರಂಗವಿಠಲ | Hare Venkata Shaila Vallabha | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಹರೇ ವೇಂಕಟ ಶೈಲ ವಲ್ಲಭ ಪೊರೆಯಬೇಕು ಎನ್ನ ||ಪ|| ದುರಿತ ದೂರ ನೀನಲ್ಲದೆ ಧರೆಯೊಳು  ಪೊರೆವರ ನಾ ಕಾಣೆ ನಿನ್ನಾಣೆ ||ಅಪ|| ಆರು ನಿನ್ನ ಹೊರತೆನ್ನ ಪೊರೆವರು  ನೀರಜಾಕ್ಷ ಹರಿಯೇ | ಅ- ಪಾರ ಮಹಿಮ ಪುರಾಣ ಪುರುಷ  ಘೋರ ದುರಿತಗಳ ದೂರ ಮಾಡಿಸೋ ||೧|| ಇಂದಿರೇಶ ಅರವಿಂದನಯನ ಎನ್ನ ತಂದೆತಾಯಿ ನೀನೆ | ಹೊಂದಿದವರ ಅಘವೃಂದ ಕಳೆವ ಮಂದರಾದ್ರಿಧರನೇ ಶ್ರೀಧರನೇ ||೨|| ಮಂಗಳಾಂಗ ಮಹನೀಯ ಗುಣಾರ್ಣವ  ಗಂಗೋದಿತ ಪಾದ | ಅಂಗಜ ಪಿತ ಅಹಿರಾಜಶಯ್ಯ ಶ್ರೀ- ರಂಗವಿಠಲ ದೊರೆಯೆ ಶ್ರೀ ಹರಿಯೇ ||೩|| harE vEMkaTa Saila vallaBa poreyabEku enna ||pa||   durita dUra nInallade dhareyoLu  porevara naa kANe ninnANe ||apa||   Aru ninna horatenna porevaru  nIrajAkSha hariyE | a- pAra mahima purANa puruSha  GOra duritagaLa dUra mADisO ||1|| iMdirEsha araviMdanayana enna taMdetaayi nIne | hoMdidavara aGavRuMda kaLeva maMdaraadridharanE shrIdharanE ||2|| maMgaLAMga mahanIya guNArNava  gaMgOdita pAda | aMgaja pita ahirAjaSayya shrI- raMgaviThala doreye SrI hariyE ||3||  

ಆಡುತ ಬಾರಮ್ಮ | ಶ್ರೀ ಹೆಳವನಕಟ್ಟೆ ಗಿರಿಯಮ್ಮ | Aaduta Baramma | Sri Helavanakatte Giriyamma

Image
ಸಾಹಿತ್ಯ :ಶ್ರೀ ಹೆಳವನಕಟ್ಟೆ ಗಿರಿಯಮ್ಮ   Kruti: Sri Helavanakatte Giriyamma ಆಡುತ ಬಾರಮ್ಮ | ನಲಿ ನಲಿದಾಡುತ ಬಾರಮ್ಮ ||ಪ|| ಆಡುತ ವರಗಳ ನೀಡುತ ಕರುಣದಿ |  ನೋಡುತ್ತಾ ದಯದಿಂದಾ ಲಕ್ಷ್ಮೀ ||ಅಪ|| ಬೇಸರವು ಬೇಡಮ್ಮಾ ದಾಸರ ದಾಸಿಯು ನಾ ನಿಮ್ಮ ವಾಸನ ಪೂರಿತೆ ವನರುಹನೇತ್ರೆ | ಸಾಸಿರ ನಾಮದ ವಾಸುದೇವನ ಸತಿ ||೧|| ಕರೆದರೆ ಓ ಎಂದು ತಾಯೆ ಎನ್ನ ಮೊರೆಯ ಲಾಲಿಸೆ ನೀ ಬಂದು | ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ ಕರುಣಾಮೃತವನು ಸ್ಮರಿಸುವೆ ಅನುದಿನ ||೨|| ಧರೆಯೊಳುನ್ನತವಾದ ಹೆಳವನ ಕಟ್ಟೆ ಗಿರಿಯೊಳು ನೆಲೆಸಿದ | ಪರಮ ಪವಿತ್ರಳೆ ಕರುಣಾ ಸಿಂಧುವೆ | ವರವನು ಕೊಡುತ್ತಾ ಬೇಗದಿಂದಲಿ ||೩|| ADuta bAramma | nali nalidADuta bAramma ||pa|| ADuta varagaLa nIDuta karuNadi |  nODuttA dayadiMdA lakShmI ||apa||   bEsaravu bEDammA dAsara dAsiyu nA nimma vAsana pUrite vanaruhanEtre | sAsira nAmada vAsudEvana sati ||1||   karedare O eMdu tAye enna moreya lAlise nI baMdu | duritagaLanellA pariharisuva nimma karuNAmRutavanu smarisuve anudina ||2||   dhareyoLunnatavAda heLavana kaTTe giriyoLu nelesida | parama pavitraLe karuNA siMdhuve | varavanu koDuttA bEgadiMdali ||3||

ಬಂದಾನು ರಾಘವೇಂದ್ರ | ಶ್ರೀ ಮಧ್ವೇಶ ವಿಠ್ಠಲ | Bandanu Raghavendra | Sri Madhwesha Vithala

Image
ರಚನೆ :ಶ್ರೀ ಮಧ್ವೇಶ ವಿಠಲ ದಾಸರು  Kriti :Sri Madhwesha Vittala Dasaru   ಬಂದಾನು ರಾಘವೇಂದ್ರ ಇಂದಿಲ್ಲಿಗೆ ||ಪ|| ಕಂದನ ಮೊರೆ ಕೇಳಿ ಜನನಿಯು ಬರುವಂತೆ ||ಅಪ|| ಗಜವೇರಿ ಬಂದ ಜಗದಿ ತಾ ನಿಂದ | ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ ||೧|| ಹರಿಯ ಕುಣಿಸುತ ಬಂದ ನರಹರಿ ಪ್ರಿಯ ಬಂದ | ಶರಣಾಗತರನು ಕರವ ಪಿಡಿವೆನೆಂದು ||೨|| ಪ್ರಹ್ಲಾದ ವ್ಯಾಸ ಮುನೀಂದ್ರ ರಾಘವೇಂದ್ರ | ನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ ||೩|| baMdaanu raaGavEMdra iMdillige ||pa|| kaMdana more kELi jananiyu baruvaMte ||apa|| gajavEri baMda jagadi taa niMda | ajapita raamana padaabja smarisutali ||1|| hariya kuNisuta baMda narahari priya baMda | sharaNaagataranu karava piDiveneMdu ||2|| prahlaada vyaasa munIMdra raaGavEMdra | nilisuta manava madhvEsha viThThalanalli ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru