ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವ್ಯಾಸ ಬದರೀನಿವಾಸ | ವಿಜಯವಿಠ್ಠಲ | Vyasa Badari Nivasa | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ವ್ಯಾಸ ಬದರೀನಿವಾಸ ಎನ್ನಯ
ಕ್ಲೇಶ ನಾಶನಗೈಸು ಮೌನೀಶ | ಸಾಸಿರ ಮಹಿಮನೆ
ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ || ಪ ||

ಸತ್ಯವತಿ ವರಸೂನು ಭವತಿಮಿರ ಭಾನು |
ಭೃತ್ಯವರ್ಗದ ಸುರಧೇನು |
ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||
ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ
ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು
ಅತ್ಯಂತ ಸುಖಕರ ಸುತ್ತುವ ಸುಳಿಯೆಂದೆತ್ತಿ ಕಡೆಗೆಯಿಡು
ಎತ್ತ ನೋಡಲು ವ್ಯಾಪುತ ಸದಾಗಮ || ೧ ||

ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ |
ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ |
ಬೇಕೆಂದು ಭಜಿಪೆ ನಿಲಿಸಿ |
ಜೋಕೆ ಮಾಡುವುದು | ಅನೇಕ ಪರಿಯಿಂದ |
ಆ ಕುರುವಂಶದ ನಿಕರ ತರಿಸಿದೆ | ಭೂಕಾಂತರು ನೋಡೆ |
ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ || ೨ ||

ಸ್ಮರಿಸಿದವರ ಮನೋಭೀಷ್ಟ | ವಾಶಿಷ್ಟ ಕೃಷ್ಣ
ನಿರುತ ಎನ್ನಯ ಅರಿಷ್ಟ |
ಪರಿಹರಿಸುವುದು ಕಷ್ಟದೊಳಗೆ ಉತ್ಕೃಷ್ಟ |
ಮೆರೆವ ಉನ್ನಂತ ವಿಶಿಷ್ಟ |
ಸುರ ನರ ಉರಗ ಕಿನ್ನರ ಗಂಧರ್ವರ |
ಕರಕಮಲಗಳಿಂದ ವರಪೂಜೆಗೊಂಬ |
ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ |
ಶರಸುತ ಬಲು ವಿಸ್ತಾರ ಜ್ಞಾನಾಂಬುಧೆ || ೩ ||

vyaasa badarInivaasa ennaya
klESa naashanagaisu mounIsha | saasira mahimane
dOSharahita sura bhUsura paripaala shaashvata vEda || pa ||

satyavati varasUnu bhavatimira bhaanu |
bhRutyavargada suradhEnu |
satyamUrutiye nInu | stutipe naanu ||
nitya ninnaMghriyarENu | uttamaaMgadali
hottu hottige sUsuttiralenagadu
atyaMta suKakara suttuva suLiyeMdetti kaDegeyiDu
etta nODalu vyaaputa sadaagama || 1 ||

lOka vilakShaNa RuShi | guNavaari raasi |
vaikuMTha nagaranivaasi | naakaarigaLa kuladvEShi citra sanyaasi |
bEkeMdu bhajipe nilisi |
jOke maaDuvudu | anEka pariyiMda |
A kuruvaMshada nikara tariside | bhUkaaMtaru nODe |
saakaara dEva kRupaakara muni divaakara bhaasaa || 2 ||

smarisidavara manObhIShTa | vaashiShTa kRuShNa
niruta ennaya ariShTa |
pariharisuvudu kaShTadoLage utkRuShTa |
mereva unnaMta vishiShTa |
sura nara uraga kinnara gaMdharvara |
karakamalagaLiMda varapUjegoMba |
siri arasane namma vijayaviThThala paraa |
sharasuta balu vistaara j~jaanaaMbudhe || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru