ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಾಯೋ ಕಾಯೋ ರಂಗಾ | ಜಗನ್ನಾಥ ವಿಠಲ | Kayo Kayo Ranga | Jagannatha Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಕಾಯೋ ಕಾಯೋ ರಂಗಾ ಕಮಲಾಯತಾಕ್ಷಾ || ಪ ||

ಕಾಯೋ ಕಾಯೋ ಕಮಲಾಯತಾಕ್ಷಾ ಭವ
ತೋಯದಲಿ ಬಿದ್ದು ಬಾಯ ಬಿಡುವೆನು || ಅಪ ||

ಅದ್ವೈತತ್ರಯದಧ್ವಪ್ರವರ್ತಕ 
ಸದ್ವೈಷ್ಣವರ ಪದದ್ವಯ ತೋರಿ || ೧ ||

ಸಂಜೆಯ ತೋರಿ ಧನಂಜಯನುಳುಹಿದ
ಕುಂಜರವರದ ನಿರಂಜನಮೂರ್ತೇ || ೨ ||

ಕುಕ್ಷಿಯೊಳಂದು ಪರೀಕ್ಷಿದ್ರಾಜನ
ರಕ್ಷಿಸಿದಂದದಿ ಪ್ರತ್ಯಕ್ಷದಲಿ || ೩ ||

ನೀ ದಯಮಾಡದಿರೀ ದಿವಿಜರು ವೊಲಿ
ದಾದರಿಸುವರೆ ವೃಕೋದರ ವಂದ್ಯಾ || ೪ ||

ಅಧಮನು ನಾನಹುದಧಿಮಥನ ಸ-
ನ್ಮುದಮುನಿಮತ ಪೊಂದಿದವರಣುಗನಾ || ೫ ||

ಕ್ಷುದ್ರಭೂಮಿಪರುಪದ್ರವ ಕಳೆದು ಸು-
ಭದ್ರವೀಯೊ ಕಲ್ಪದ್ರುಮದಂತೆ || ೬ ||

ಸತ್ಯಕಾಮ ತವ ಭೃತ್ಯಗೆ ಬಂದಪ-
ಮೃತ್ಯು ಕಳೆದು ಸಂಪತ್ತು ಪಾಲಿಸಿದಿ || ೭ ||

ಎಲ್ಲರೊಳಿಹ ಕೈವಲ್ಯದರಸು ನೀ
ಬಲ್ಲಿದನೆಂಬುದು ಬಲ್ಲೆ ಬಹುಬಗೆ || ೮ ||

ವೀತಭಯ ಜಗನ್ನಾಥವಿಠಲ ಸು-
ಖೇತರ ಕಳೆದು ಮಹಾತಿಶಯದಲಿ || ೯ ||

kaayO kaayO raMgaa kamalaayataakShaa || pa ||

kaayO kaayO kamalaayataakShaa bhava
tOyadali biddu baaya biDuvenu || apa ||

advaitatrayadadhvapravartaka 
sadvaiShNavara padadvaya tOri || 1 ||

saMjeya tOri dhanaMjayanuLuhida
kuMjaravarada niraMjanamUrtE || 2 ||

kukShiyoLaMdu parIkShidraajana
rakShisidaMdadi pratyakShadali || 3 ||

nI dayamaaDadirI divijaru voli
daadarisuvare vRukOdara vaMdyaa || 4 ||

adhamanu naanahudadhimathana sa-
nmudamunimata poMdidavaraNuganaa || 5 ||

kShudrabhUmiparupadrava kaLedu su-
bhadravIyo kalpadrumadaMte || 6 ||

satyakaama tava bhRutyage baMdapa-
mRutyu kaLedu saMpattu paalisidi || 7 ||

ellaroLiha kaivalyadarasu nI
ballidaneMbudu balle bahubage || 8 ||

vItabhaya jagannaathaviThala su-
KEtara kaLedu mahaatishayadali || 9 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru