ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜಯ ನಾರಸಿಂಹ ಕಾಯೋ | ಗೋಪಾಲ ವಿಠಲ | Jaya Narasimha Kayo | Gopala Vithala


ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ಜಯ ನಾರಸಿಂಹ ಕಾಯೋ ಶ್ರೀ ನಾರಸಿಂಹ ||ಪ||

ಜಯ ನಾರಸಿಂಹ ಕಾಯೋ ತ್ರಯಂಬಕಾದ್ಯಮರೇಶ 
ಭಯಾಂಧತಿಮಿರ ಮಾರ್ತಾಂಡ ಶ್ರೀ ನಾರಸಿಂಹ ||ಅಪ||

ಘೋರ ಅಕಾಲ ಮೃತ್ಯು ಮೀರಿ ಬರಲು ಕಂಡು |
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ||೧||

ಭೀಷಣನೆ ಸುಭದ್ರ ಮೇಷ ಮೃತ್ಯುಗೆ ಮೃತ್ಯು |
ಸುಷುಮ್ನ ನಾಡಿ ಸ್ಥಿತ ವಿಭುವೆ ಶ್ರೀ ನಾರಸಿಂಹ ||೨||

ಜ್ಞಾನ ರಹಿತನಾಗಿ ನಾ ನಿನ್ನ ಮರೆತರೆ 
ನೀನು ಮರೆತದ್ದೇಕೆ ಪೇಳೋ ಶ್ರೀ ನಾರಸಿಂಹ ||೩||

ಪ್ರಭಲೋತ್ತಮ ನೆನಿಸಿ ಅಬಲರ ಕಾಯದಿರೆ |
ಸಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ||೪||

ಪಾಲ ಮುನ್ನಿರಾಗರ ಪದುಮೆ ಮನೋಹರ 
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ||೫||

jaya nArasiMha kAyO SrI nArasiMha ||pa||
 
jaya nArasiMha kAyO trayaMbakAdyamarESa 
BayAMdhatimira mArtAMDa SrI nArasiMha ||apa||
 
GOra akAla mRutyu mIri baralu kaMDu |
dhIra nI biDisadinyArO SrI nArasiMha ||1||
 
BIShaNane suBadra mESha mRutyuge mRutyu |
suShumna nADi sthita viBuve SrI nArasiMha ||2||
 
j~jAna rahitanAgi nA ninna maretare 
nInu maretaddEke pELO SrI nArasiMha ||3||
 
praBalOttama nenisi abalara kAyadire |
sabalaru kaMDu meccuvare SrI nArasiMha ||4||
 
pAla munnirAgara padume manOhara 
gOpAla viThala jagatpAla SrI nArasiMha ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru