ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಾರಮಣನ ತೋರೋ ಮಾರುತಿ | ವೇಣುಗೋಪಾಲ ವಿಠಲ| Maramanana Toro | Venugopala Vithala Dasaru


ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು 
Kruti:Sri Venugopala vittala Dasaru


ಮಾರಮಣನ ತೋರೋ ಮಾರುತಿ ||ಪ|| 
ಮನದಲಿ ಹೊಳೆಯುತ ಮನದಲಿ ಪೊಳೆಯುತ ||ಅಪ||

ಹನುಮನಾಗಿ ಹರಿವೇಷವ ಧರಿಸಿದೆ ನೀ ಚಿನುಮಯನಾಗಿ ನೀ ಬಂದೆ| 
ಘನಮಹಿಮನೆ ನೀ ಗಗನದಿ ಓಡುತ ರಾಣಿಯ ಕ್ಷೇಮವ ನೀ ತಂದೆ| 
ಕನಕನಗಿರಿಯನು ಕಡಲೊಳು ತಡೆಯುತ ಬಲದಿ ಕಟ್ಟಿದ ಬಲವಂತನೆನಿಸಿದ್ಯೋ||೧||

ದ್ವಾಪರದಲಿ ತಾ ದ್ವಾರಕೆಗೆಪೋಗಿ| ಭೂಪಕೃಷ್ಣನ ಕರೆತಂದೆ|| 
ಕೋಪದಿ ಕೌರವಸೇನೆಯನೆಲ್ಲ ತಾಪಗೊಳಿಸುತ ನೀನಿಂದೆ| 
ದ್ರೌಪದಿ ದುಃಖವ ದೂರ ಓಡಿಸಿ ಬಹುಬಾಪು ಬಲಭೀಮನೆಂದೆನಿಸಿದ್ಯೋ||೨||

ಕಾಣುತ ಮಾಯ್ಗಳ ಮತವನೆ ಖಂಡಿಸಿ ನೀ ಜಾಣ ಯತಿಯು ನೀನಾದೆ| 
ತಾಣದಿ ಶಿಷ್ಯರ ಒಡಗೂಡುತಲಿ ಬದರಿಕಾಶ್ರಮಕೆ ನೀ ಬಂದೆ|| 
ವಾನರ ಮುನಿ ನೀ ವ್ಯಾಸಗೊಂದಿಸಿ ವೇಣುಗೋಪಾಲವಿಠಲನ ಸ್ಮರಿಸಿ||೩||

mAramaNana tOrO mAruti ||pa|| 
manadali hoLeyuta manadali poLeyuta ||apa||

hanumanAgi harivEShava dhariside nI cinumayanAgi nI baMde| 
Ganamahimane nI gaganadi ODuta rANiya kShEmava nI taMde| 
kanakanagiriyanu kaDaloLu taDeyuta baladi kaTTida balavaMtanenisidyO||1||

dvAparadali tA dvArakegepOgi| BUpakRuShNana kare taMde|| 
kOpadi kauravasEneyanella tApagoLisuta nIniMde| 
draupadi duHKava dUra ODisi bahubApu balaBImaneMdenisidyO||2||

kANuta mAygaLa matavane KaMDisi nI jANa yatiyu nInAde| 
tANadi SiShyara oDagUDutali badarikASramake nI baMde|| 
vAnara muni nI vyAsagoMdisi vENugOpAlaviThalana smarisi||3||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru