ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆರಿಗೆ ವಧುವಾದೆ | ಪುರಂದರ ವಿಠಲ | Aarige Vadhuvade | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಆರಿಗೆ ವಧುವಾದೆ ಅಂಬುಜಾಕ್ಷಿ |ಪ|
ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿಯೇ ||ಅಪ||

ಶರಧಿ ಬಂಧನ ರಾಮಚಂದ್ರ ಮೂರುತಿಗೋ |
ಪರಮಾತ್ಮ ಸಿರಿ ಅನಂತ ಪದ್ಮನಾಭನಿಗೋ ||
ಸರಸಿಜನಾಭ ಜನಾರ್ದನ ಮೂರುತಿಗೋ |
ಎರಡು ಹೊಳೆಯ ರಂಗಪಟ್ಟಣವಾಸಿಗೋ ||೧||

ಚೆಲುವ ಬೇಲೂರು ಚೆನ್ನಿಗರಾಯನಿಗೋ |
ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೋ ||
ಇಳೆಯೊಳು ಪಂಢರಾಪುರ ವಿಠಲರೇಯಗೋ |
ನಳಿನಾಕ್ಷಿ ಹೇಳು ಬದರೀನಾರಾಯಣಗೋ ||೨||

ಮಲಯಜ ಗಂಧಿ ಬಿಂದು ಮಾಧವರಾಯನಿಗೋ |
ಸುಲಭದೇವ ಪುರುಷೋತ್ತಮಗೋ ||
ಫಲದಾಯಕ ನಿತ್ಯ ಮಂಗಳನಾಯಕಗೋ ||
ಚೆಲುವೆನಾಚದೆ ಹೇಳು ಶ್ರೀ ವೆಂಕಟೇಶನಿಗೋ ||೩||

ವಾಸವಾರ್ಚಿತ ಕಂಚಿ ವರದರಾಜ ಮೂರುತಿಗೋ |
ಅಸುರಾರಿ ಶ್ರೀ ಮುಷ್ಣು ಆದಿ ವರಹನಿಗೋ ||
ಶೇಷಶಾಯಿಯಾದ ರಂಗನಾಯಕಗೋ |
ಸಾಸಿರ ನಾಮದೊಡೆಯ ಅಳಗಿರೀಶನಿಗೋ ||೪||

ಶರಣಾಗತರ ಪೊರೆವ ಶಾರ್ಙ್ಞಪಾಣಿಗೋ ||
ವರಗಳನೀವ ಶ್ರೀನಿವಾಸ ಮೂರುತಿಗೋ ||
ಕುರುಕುಲಾಂತಕ ರಾಜಗೋಪಾಲ ಮೂರುತಿಗೋ |
ಸ್ಥಿರವಾದ ಪುರಂದರ ವಿಠಲ ರಾಯನಿಗೋ ||೫||

Arige vadhuvAde aMbujAkShi |pa|
kShIrAbdhi kannike SrI mahAlakumiyE ||apa||
 
Saradhi baMdhana rAmacaMdra mUrutigO |
paramAtma siri anaMta padmanABanigO ||
sarasijanABa janaardana mUrutigO |
eraDu hoLeya raMgapaTTaNavAsigO ||1||
 
celuva bElUru cennigarAyanigO |
keLadi hELuDupiya kRuShNarAyanigO ||
iLeyoLu paMDharApura viThalarEyagO |
naLinAkShi hELu badarInArAyaNagO ||2||
 
malayaja gaMdhi biMdu mAdhavarAyanigO |
sulaBadEva puruShOttamagO ||
PaladAyaka nitya maMgaLanAyakagO ||
celuvenAcade hELu SrI veMkaTESanigO ||3||
 
vAsavArcita kaMci varadarAja mUrutigO |
asurAri SrI muShNu Adi varahanigO ||
SEShaSAyiyAda raMganAyakagO |
sAsira nAmadoDeya aLagirISanigO ||4||
 
SaraNAgatara poreva SAr~g~japANigO ||
varagaLanIva SrInivAsa mUrutigO ||
kurukulAMtaka rAjagOpAla mUrutigO |
sthiravAda puraMdara viThala rAyanigO ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru