ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶಿವನ ನೋಡಿರೊ | ವಿಜಯವಿಠ್ಠಲ | Shivana Nodiro | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಶಿವನ ನೋಡಿರೊ ಇಂದು ಸ್ತವನ ಮಾಡಿರೊ
ತವಕದಿಂದ ತಿಳಿದು ವೇಗ 
ಅವಗುಣಂಗಳ ತೊರೆದು ನಿತ್ಯ ||ಪ||

ಅಂತಕಾಂತಪುರ ವೈರಿ ದಿ-
ನಾಂತ ವೃಷಭನೇರಿ
ಕಾಂತಿ ಸಹಿತ ಜನರಂಗಣದಿ 
ನಿಂತು ಮಾತು ಲಾಲಿಪ ಮಹಿಮ ||೧|| 

ಅಸುರಜನಕೆ ಪ್ರೀತ ಸರ್ವದ
ಅಸುರ ವೈರಿಯ ನೇಮದಿಂದ 
ವಸುಧಿಯೊಳಗೆ ಬಲಿದಾನೇಕಾ-
ದಶರುದ್ರರೊಳು ಬಲು ಗುಣವಂತ ||೨||

ದಕ್ಷ ಪ್ರಜೇಶ್ವರನಧ್ವರ 
ಶಿಕ್ಷಣೆ ಮಾಡಿದ ದಕ್ಷಿಣಮೂರುತಿ
ಮೋಕ್ಷಕೆ ಮನಸು ಕೊಡುವ ನಿಟಿ-
ಲಾಕ್ಷಣವಂತ ಶಾಂತ ||೩||

ಕರಿಚರ್ಮಾಂಬರಧಾರಿ ವಾರಿ-
ಧರ ತ್ರಿಶೂಲ ಡಮರುಗ ಪಾಣಿ
ಶರಗದ್ದುಗೆ ಸುಮೇರು ವೇದ 
ತುರಗವಾಗಿರಲಂದು ಅಂದದಿ ||೪||

ನಮಿಸಿ ಒರಲಿ ಬೇಡಿ ಭವದ
ಮಮತೆ ಓಡಿಸಿ ಭಕುತಿಯಿಂದಲಿ
ರಮೆಯರಸ ಶ್ರೀವಿಜಯವಿಠ್ಠಲನ್ನ
ಶಮೆ ದಮೆಯಿಂದ ಪೂಜಿಪ ಧೀರ ||೫||

shivana nODiro iMdu stavana maaDiro
tavakadiMda tiLidu vEga 
avaguNaMgaLa toredu nitya ||pa||

aMtakaaMtapura vairi di-
naaMta vRuShabhanEri
kaaMti sahita janaraMgaNadi 
niMtu maatu laalipa mahima ||1|| 

asurajanake prIta sarvada
asura vairiya nEmadiMda 
vasudhiyoLage balidaanEkaa-
daSarudraroLu balu guNavaMta ||2||

dakSha prajESvaranadhvara 
shikShaNe mADida dakShiNamUruti
mOkShake manasu koDuva niTi-
lAkShaNavaMta SaaMta ||3||

karicarmaaMbaradhaari vaari-
dhara triSUla Damaruga paaNi
Saragadduge sumEru vEda 
turagavaagiralaMdu aMdadi ||4||

namisi orali bEDi bhavada
mamate ODisi bhakutiyiMdali
rameyarasa shrIvijayaviThThalanna
Same dameyiMda pUjipa dhIra ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru