ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪ್ರಾಣದೇವ ನೀನಲ್ಲದೆ | ಜಗನ್ನಾಥ ವಿಠಲ | Pranadeva Neenallade | Jagannatha Vithala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ ||ಪ||
ಪ್ರಾಣೋಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ ||ಅಪ||

ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ||೧||

ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಪುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೆ ||೨||

ಹಾವಿನ ಪಾಶದಿ ರಾವಣಿ ನೀಲ ಸುಗ್ರೀವ ಪ್ರಮುಖರ ಬಿಗಿಯೇ ||
ಸಾವಿರದೈವತ್ತು ಗಾವುದದಲ್ಲಿಹ ಸಂಜೀವನವ ನೀ ಜವದಿ ತಂದಿತ್ತೆ ||೩||

ಪರಿಸರ ನೀನಿರೆ ಹರಿ ತಾನಿರುವ ಇರದಿರೆ ತಾನಿರನು
ಕರಣ ನಿಯಾಮಕ ಸುರರ ಗುರುವೆ ನೀ ಕರುಣಿಸೆ ಕರುಣಿಸುವ ||೪||

ಭೂತೇಂದ್ರಿಯಕಧಿನಾಥ ನಿಯಾಮಕ ಆ ತೈಜಸ ಹರನ
ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ದೂತನಾದ ||೫||

prANadEva nInallade kAyvara kANenO jagadoLage ||pa||
prANOpAna vyAnOdaana samAnanenipa muKya ||apa||
 
vAsava kuliSadi GAsise jIvara SvAsa nirOdhiside |
A samayadi kamalAsana pELalu nI salahide jagava ||1||
 
aMgada pramuKa plavaMgaru rAmana aMganeyaLa puDuke |
tiMgaLu mIralu kaMgeDe kapivara puMgava pAliside ||2||
 
hAvina pASadi rAvaNi nIla sugrIva pramuKara bigiyE ||
sAviradaivattu gAvudadalliha saMjIvanava nI javadi taMditte ||3||
 
parisara nInire hari tAniruva iradire tAniranu
karaNa niyAmaka surara guruve nI karuNise karuNisuva ||4||

BUtEMdriyakadhinAtha niyAmaka A taijasa harana
tAtanenipa jagannAtha viThThalana prIti dUtanAda ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru