ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏ ರಂಗಧಾಮ ರಂಗ | ಹಯವದನ | E Rangadhama Ranga | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಏ ರಂಗಧಾಮ ರಂಗ ಏ ರಂಗಧಾಮ ||ಪ||

ನಾರುವ ಮೈಯವನತ್ತಸಾರು ಮುಟ್ಟದಿರೊ ಎನ್ನ
ದೂರನಿಲ್ಲು ತರವಲ್ಲ ಏ ರಂಗಧಾಮ 
ಸಾರ ಶ್ರುತಿಗಳ ತಂದು ವಾರಿಜಸಂಭವಗಿತ್ತೆ
ಧೀರ ಮತ್ಸ್ಯರೂಪ ಕಾಣೆ ಎಲೆ ಸತ್ಯಭಾಮೆ ||೧||

ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು
ಡೊಂಕಿದೇನೊ ಪೇಳೊ ಏ ರಂಗಧಾಮ
ಸಿಂಧುಮಥನವ ಮಾಡಲಂದು ಮಂದರ ಮುಳುಗೆ
ಬಂದು ನೆಗಹಿದ ಕೂರ್ಮ ಎಲೆ ಸತ್ಯಭಾಮೆ ||೨||

ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು
ಗಾಡಿಕಾರ ನೀನಾರಯ್ಯ ಏ ರಂಗಧಾಮ
ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ
ಕಾಡವರಾಹನು ಕಾಣೆ ಎಲೆ ಸತ್ಯಭಾಮೆ ||೩||

ಮನುಷ್ಯನಾಗಿದ್ದ ಮೇಲಣಕಾನನದ ಮೃಗರಾಜ
ಆನನವಿದೇನೊ ಪೇಳೊ ಏ ರಂಗಧಾಮ
ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ 
ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ ||೪||

ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ
ತಿರುಕನೆಂಬೋದರಿಯದಾದೆನೊ ಏ ರಂಗಧಾಮ
ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ 
ಗರುವ ವಾಮನ ಕಾಣೆ ಎಲೆ ಸತ್ಯಭಾಮೆ ||೫||

ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ 
ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ 
ಮಡುಹಿ ಕ್ಷತ್ರೇರನೆಲ್ಲ ಮುದದಿ ಸೇರ್ದ ಮಾತೆಗಾಗಿ
ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ ||೬||

ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ
ಕಾರಣವಿದೇನೊ ಪೇಳೊ ಏ ರಂಗಧಾಮ
ಕ್ರೂರ ರಾವಣನ ಗೆಲಿದು ನಾರಿ ಸೀತೆಯನು ತಂದ
ಧೀರ ರಾಘವನು ಕಾಣೆ ಎಲೆ ಸತ್ಯಭಾಮೆ ||೭||

ವಲ್ಲಭೆ ಜನರಿಗೆಲ್ಲ ನೀ ವಲ್ಲಭನಾಗಿ
ಗೊಲ್ಲನಂತೆ ಗೋವಕಾಯುವ ಕಾರಣವೇನೊ ಏ ರಂಗಧಾಮ
ಬಿಲ್ಲಹಬ್ಬಕ್ಕೆ ಹೋಗಿ ಮಲ್ಲ ಕಂಸನ ಕೊಂದ
ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ ||೮||

ನಗೆಗೇಡು ಮಾಡಿಕೊಂಡು ದಿಗ್ವಸನನಾಗಿ ನಿಂತ 
ಹಗರಣವಿದೇನೊ ಪೇಳೊ ಏ ರಂಗಧಾಮ
ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ
ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ ||೯||

ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ
ತಿರುಗುವುದಿದೇನು ಪೇಳೊ ಏ ರಂಗಧಾಮ
ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ
ಹರಿಲೋಚನೆ ಎಲೆ ಸತ್ಯಭಾಮೆ ||೧೦||  

E raMgadhaama raMga E raMgadhaama ||pa||

naaruva maiyavanattasaaru muTTadiro enna
dUranillu taravalla E raMgadhaama 
saara shrutigaLa taMdu vaarijasaMbhavagitte
dhIra matsyarUpa kaaNe ele satyabhaame ||1||

ceMdavaMtaneMdu naa baMde tarkisi ninna bennu
DoMkidEno pELo E raMgadhaama
siMdhumathanava maaDalaMdu maMdara muLuge
baMdu negahida kUrma ele satyabhaame ||2||

nODidare maiyoLage mUDiruva rOmagaLu
gaaDikaara nInaarayya E raMgadhaama
krODarUpadiMdiLeya daaDeya mEliTTu taMda
kaaDavaraahanu kaaNe ele satyabhaame ||3||

manuShyanaagidda mElaNakaananada mRugaraaja
AnanavidEno pELo E raMgadhaama
maanini kELe prahlaadanna maanaBaMgakkodagida 
SrI narasiMha kaaNe ele satyabhaame ||4||

doretanavuLLavaneMdu maruLugoMDe naa ninage
tirukaneMbOdariyadaadeno E raMgadhaama
taraLe surarigaagi baliya tuLidu paataaLakottida 
garuva vaamana kaaNe ele satyabhaame ||5||

aDaviyoLu kaTTigeya kaDivavanaMte koDaliya 
piDivudEno puNyavaasa E raMgadhaama 
maDuhi kShatrEranella mudadi sErda maategaagi
oDeyanaada paraSuraama ele satyabhaame ||6||

UrabiTTaraNyavanu sEri munigaLaMtippa
kaaraNavidEno pELo E raMgadhaama
krUra raavaNana gelidu naari sIteyanu taMda
dhIra raaGavanu kaaNe ele satyabhaame ||7||

vallabhe janarigella nI vallabhanaagi
gollanaMte gOvakaayuva kaaraNavEno E raMgadhaama
billahabbakke hOgi malla kaMsana koMda
ballida shrIkRuShNa kaaNe ele satyabhaame ||8||

nagegEDu maaDikoMDu digvasananaagi niMta 
hagaraNavidEno pELo E raMgadhaama
mige mUrupurada satiyara vratava keDisi
jagava mOhisuva bauddha ele satyabhaame ||9||

karadi KaDgavane piDidu taraLa aSvavanEri
tiruguvudidREnu pELo E raMgadhaama
vara hayavadana haruShadiMdalADi paaDi kalkiyaade
harilOcane ele satyabhaame ||10|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru