ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಈ ತನುವಿನೊಳಗೆ | ಹಯವದನ | Ee Tanuvinolage | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಈ ತನುವಿನೊಳಗೆ ಅನುದಿನವಿದ್ದು ಎನಗೊಂದು
ಮಾತ ಹೇಳದೆ ಹೋದಿ ಹಂಸ || ಪ ||

ಜಾಳಾಂಧರಯೆಂಬೊ ಮಾಳಿಗೆಮನೆಯಲ್ಲಿ
ನೋಳ್ಪರೆ ಒಂಬತ್ತು ಬಾಗಿಲು
ಗಾಳಿ ಪುಟ್ಟುತ್ತ ಎಲೆ ಹಾರಿ ಹೋಗುವಾಗ
ಹೇಳಿಹೋಯಿತೇ ಈ ಬೇರಿಗೆ ಒಂದು ಮಾತ || ೧ ||

ಏರಿಯು ನೀರನು ತಡೆದುಕೊಂಡಿದ್ದೇನೆಲೊ
ಭೋರೆಂಬೋ ಮಳೆ ಹೊಯ್ದು
ಭೋರೆಂಬೋ ಬಣವೆದ್ದು ಹೋಗುವಾಗ ಈ
ಏರಿಗೆ ಹೇಳಿ ಹೋಯಿತೇ ಒಂದು ಮಾತ || ೨ ||

ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ
ಇಟ್ಟಿತ್ತು ಜೇನು ತನ್ನ ಸುಖಕಾಗಿ
ಇಟ್ಟ ತುಪ್ಪವನುಂಡು ನೊಣ ಹಾರಿಹೋಗುವಾಗ ಈ
ಬೆಟ್ಟಿಗೆ ಹೇಳಿ ಹೋಯಿತೇ ಒಂದು ಮಾತ || ೩ ||

ಶತಬಾರಿ ಶತಕೂಟ ಹಂಸಕರೊಡಗೂಡಿ
ಹೆಸರು ಹೇಳುವೆ ನಾನು ಅನುದಿನವು
ರಸಭೋಜನವುಂಡು ಜ್ಯೋತಿ ತಾ ಹೋಗುವಾಗ
ಪ್ರಣತಿಗೆ ಹೇಳಿ ಹೋಯಿತೇ ಒಂದು ಮಾತ || ೪ ||

ಸರ್ಪಶಯನ ಹಯವದನನಾಡಿದ ಮಾತು
ಪಣೆ ಲಕ್ಷವ ತೊಡೆದು ಮ್ಯಾಲಿರಲಾಗಿ
ಸುಪ್ಪಾಣಿ ಮುತ್ತು ಬಾಯ್ಬಿಟ್ಟು ಹೋಗುವಾಗ ಈ
ಚಿಪ್ಪಿಗೆ ಹೇಳಿ ಹೋಯಿತೇ ಒಂದು ಮಾತ || ೫ ||

I tanuvinoLage anudinaviddu enagoMdu
maata hELade hOdi haMsa || pa ||

jaaLaaMdharayeMbo maaLigemaneyalli
nOLpare oMbattu baagilu
gaaLi puTTutta ele haari hOguvaaga
hELihOyitE I bErige oMdu maata || 1 ||

Eriyu nIranu taDedukoMDiddEnelo
bhOreMbO maLe hoydu
bhOreMbO baNaveddu hOguvaaga I
Erige hELi hOyitE oMdu maata || 2 ||

gaTTi beTTagaLalli aTTaDaviyalli
iTTittu jEnu tanna suKakaagi
iTTa tuppavanuMDu noNa haarihOguvaaga I
beTTige hELi hOyitE oMdu maata || 3 ||

shatabaari shatakUTa haMsakaroDagUDi
hesaru hELuve naanu anudinavu
rasabhOjanavuMDu jyOti taa hOguvaaga
praNatige hELi hOyitE oMdu maata || 4 ||

sarpashayana hayavadananaaDida maatu
paNe lakShava toDedu myaaliralaagi
suppaaNi muttu baaybiTTu hOguvaaga I
cippige hELi hOyitE oMdu maata || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru