ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂಡೆ ಪಂಢರಿರಾಯನ | ಜಗನ್ನಾಥವಿಠಲ | Kande Pandhari Rayana | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಕಂಡೆ ಪಂಢರಿರಾಯನ| ತನ್ನನು 
ಕೊಂಡಾಡುವವರ ಪ್ರಿಯನ ವಿಠಲನ||

ಸಮಚರಣಭುಜನ ನಿಗಮಗಮತತಿ ಗೋಚರನ ಅಮಿತ ಪರಾಕ್ರಮನ 
ರುಕ್ಮಿಣೀ ರಮಣ ರವಿಕ್ಷಣನ ವಿಠಲನ ||ಕಂಡೆ||

ಕಾಮಿತಾರ್ಥ ಪ್ರದನ ಶ್ರೀತುಲಸೀಧಾಮ ವಿಭೂಷಿತನ| 
ಸಾಮಜಪತಿಪಾಲನ ತ್ರಿಭುವನಸ್ವಾಮಿ ಚಿತ್‍ಸುಖಾಮಯನವಿಠಲನ ||೧||

ಗೋಕುಲಪೋಷಕನ ಮುನಿ| ಪುಂಡರೀಕಗೊಲಿದು ಬಂದನ| 
ಲೋಕವಿಲಕ್ಷಣ ಪ್ರಣತರ ಶೋಕವಿನಾಶಕನ ವಿಠಲನ ||೨||

ಚಂದ್ರಭಾಗವಾಸನ ವಿಧಿವಿಹಗೇಂದ್ರ ಮುಖಾರ್ಚಿತನ 
ಇಂದ್ರೋತ್ಪಲ ನಿಭನ ಗುಣಗಣಸಾಂದ್ರ ಸರ್ವೋತ್ತಮನ ವಿಠಲನ ||೩||

ಶ್ವೇತವಾಹನಸಖನ ಸತಿಗೆ ಪಾರಿಜಾತನ ತಂದವನ 
ವೀತಶೋಕಭಯನ ಶ್ರೀಜಗನ್ನಾಥವಿಠಲರೇಯನ ||೪||

kaMDe paMDhari rAyana| tannanu 
koMDADuvavara priyana viThalana||

samacaraNaBujana nigamagamatati gOcarana amita parAkramana 
rukmiNI ramaNa ravikShaNana viThalana ||kaMDe||
 
kAmitArtha pradana SrItulasIdhAma viBUShitana| 
sAmajapatipAlana triBuvanasvAmi cit^suKAmayanaviThalana ||1||

gOkulapOShakana muni| puMDarIkagolidu baMdana| 
lOkavilakShaNa praNatara SOkavinASakana viThalana ||2||

caMdraBAgavAsana vidhivihagEMdra muKArcitana 
iMdrOtpala niBana guNagaNasAMdra sarvOttamana viThalana ||3||

SvEtavAhanasaKana satige pArijAtana taMdavana 
vItaSOkaBayana SrIjagannAthaviThalarEyana ||4||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru