ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂದ ತನಯ ಗೋವಿಂದನ | ಪುರಂದರ ವಿಠಲ | Nanda tanaya Govinda | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ   ||ಪ||

ಬಂಧಗಳನು ಭವ ರೋಗಗಳೆಲ್ಲವ ನಿಂದಿಪುದು ಈ ಮಿಠಾಯಿ      ||ಅ.ಪ||

ದಧಿ ಘೃತ ಕ್ಷೀರಂಗಳಿಗಿಂತಲೂ ಬಲು ಅಧಿಕವಾದ ಮಿಠಾಯಿ     |
ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ    ||೧||

ಪಂಚ ಭಕ್ಷ್ಯಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ          |
ಕಂಚೀಶನೆ ರಕ್ಷಿಸು ಎಂದುಸುರುವರ ಅಂಜಿಕೆ ಬಿಡಿಪ ಮಿಠಾಯಿ       ||೨||

ಜಪ ತಪ ಸಾಧನಗಳಿಗಿಂತಲೂ ಬಲು ಅಪರೂಪದ ಮಿಠಾಯಿ   |
ಜಿಪುಣ ಮತಿಗಳಿಗೆ ಸಾಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ      ||೩||

namda thanaya govimdana bhajipudu aanamdavaada miThaayi ||p|| 

bamdhagaLanu bhava rogagaLellava nimdipudu ee miThaayi ||a.p|| 

dadhi ghrritha kshhiramgaLigimthalu balu adhikavaada miThaayi |
kadaLi draakshhi kharjura rasagaLanu miruvudu ee miThaayi ||1|| 

pamcha bhakshhyagaLa shhaDrasaannagaLa mimchidamthha miThaayi |
kamchishane rakshhisu eamdusuruvara aamjike biDipa miThaayi ||2|| 

japa thapa saadhanagaLigimthalu balu aparupada miThaayi |
jipuNa mathigaLige sAdhyavalladiha puramdara viThala miThaayi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru