Posts

Showing posts from May, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅನುಭವದಡುಗೆಯ ಮಾಡಿ | ಪುರಂದರ ವಿಠಲ | Anubhavadadugeya Madi | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅನುಭವದಡುಗೆಯ ಮಾಡಿ | ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ|| ತನುವೆಂಬ ಭಾಂಡವ ತೊಳೆದು | ಕೆಟ್ಟ ಮನದ ಚಂಚಲವೆಂಬ ಮುಸುರೆಯ ತೊಳೆದು || ಘನವಾಗಿ ಮನೆಯನ್ನು ಬಳಿದು | ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡ ನಡೆದು ||೧|| ವಿರಕ್ತಿಯೆಂಬುವ ಮಡಿಯುಟ್ಟು | ಪೂರ್ಣ ಹರಿಭಕ್ತಿಯೆಂಬ ನೀರನ್ನೆಸರಿಟ್ಟು || ಅರಿವೆಂಬ ಬೆಂಕಿಯ ಕೊಟ್ಟು | ಮಾಯಾ ಮಧವೆಂಬ ಕಾಷ್ಟವ ಮುದದಿಂದ ಸುಟ್ಟು ||೨|| ಶರಣೆಂಬ ಸಾಮಗ್ರಿ ಹೂಡಿ | ಮೋಕ್ಷ ಪರಿಕಾರವಾದಂಥ ಪಾಕವ ಮಾಡಿ || ಗುರು ಶರಣರು ಸವಿದಾಡಿ | ನಮ್ಮ ಪುರಂದರ ವಿಠಲನ ಬಿಡದೆ ಕೊಂಡಾಡಿ ||೩|| anuBavadaDugeya mADi | adakkanuBavigaLu baMdu nIvella kUDi ||pa|| tanuveMba BAMDava toLedu | keTTa manada caMcalaveMba musureya toLedu || GanavAgi maneyannu baLidu | alli minuguva triguNada oleguMDa naDedu ||1|| viraktiyeMbuva maDiyuTTu | pUrNa hariBaktiyeMba nIrannesariTTu || ariveMba beMkiya koTTu | mAyA madhaveMba kAShTava mudadiMda suTTu ||2|| SaraNeMba sAmagri hUDi | mOkSha parikAravAdaMtha pAkava mADi || guru SaraNaru savidADi | namma puraMdara viThalana biDade koMD...

ನಂದ ತನಯ ಗೋವಿಂದನ | ಪುರಂದರ ವಿಠಲ | Nanda tanaya Govinda | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ   ||ಪ|| ಬಂಧಗಳನು ಭವ ರೋಗಗಳೆಲ್ಲವ ನಿಂದಿಪುದು ಈ ಮಿಠಾಯಿ      ||ಅ.ಪ|| ದಧಿ ಘೃತ ಕ್ಷೀರಂಗಳಿಗಿಂತಲೂ ಬಲು ಅಧಿಕವಾದ ಮಿಠಾಯಿ     | ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ    ||೧|| ಪಂಚ ಭಕ್ಷ್ಯಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ          | ಕಂಚೀಶನೆ ರಕ್ಷಿಸು ಎಂದುಸುರುವರ ಅಂಜಿಕೆ ಬಿಡಿಪ ಮಿಠಾಯಿ       ||೨|| ಜಪ ತಪ ಸಾಧನಗಳಿಗಿಂತಲೂ ಬಲು ಅಪರೂಪದ ಮಿಠಾಯಿ   | ಜಿಪುಣ ಮತಿಗಳಿಗೆ ಸಾಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ      ||೩|| namda thanaya govimdana bhajipudu aanamdavaada miThaayi ||p||  bamdhagaLanu bhava rogagaLellava nimdipudu ee miThaayi ||a.p||  dadhi ghrritha kshhiramgaLigimthalu balu adhikavaada miThaayi | kadaLi draakshhi kharjura rasagaLanu miruvudu ee miThaayi ||1||  pamcha bhakshhyagaLa shhaDrasaannagaLa mimchidamthha miThaayi | kamchishane rakshhisu eamdusuruvara aamj...

ಜತೆಗಾಣೆ ಜಗದಂಬೆ | ಶ್ರೀಪತಿ ವಿಠಲ | Jategane Jagadambe | Sripathi Vithala

Image
ಸಾಹಿತ್ಯ : ಶ್ರೀ ಶ್ರೀಪತಿ ವಿಠಲ ದಾಸರು  Kruti:Sri Sripathi Vittala Dasaru ಜತೆಗಾಣೆ ಜಗದಂಬೆ ಆರ್ತಪಾಲನ ಜಾಣೆ ||ಪ|| ಕ್ಷಿತಿಯೊಳಗೆ ಮದನಪಿತನ ಪಟ್ಟದ ರಾಣಿಗೆ ||ಅಪ|| ಪಂಕಜಚರಣೆ ಕಳಂಕರಹಿತ ಮೃಗಾಂಕನ ವದನ ಮೀನಾಂಕನ ಜನನಿಗೆ ||೧|| ಚಂದಿರವದನಾರವಿಂದ ನಯನ ಶುಭ| ಕುಂದಧರನೆ ಇಭ ಮಂದಗಮನೆಗೆ ||೨|| ಸುಂದರ ವಿಗ್ರಹ ಶ್ರೀಪತಿವಿಠಲನ ಅಂದದಿ ಒಲಿಸಿದ ಇಂದಿರದೇವಿಗೆ ||೩|| jategANe jagadaMbe ArtapAlana jANe ||pa|| kShitiyoLage madanapitana paTTada rANige ||apa|| paMkajacaraNe kaLaMkarahita mRugAMkana vadana mInAMkana jananige ||1|| caMdiravadanAraviMda nayana SuBa| kuMdadharane iBa maMdagamanege ||2|| suMdara vigraha SrIpativiThalana aMdadi olisida iMdiradEvige ||3||

ಗಜಾನನ ಗಜಾನನ | ಶ್ರೀ ಮಹಿಪತಿ ದಾಸರು | Gajanana Gajanana | Sri Mahipati Dasaru

Image
ಸಾಹಿತ್ಯ : ಶ್ರೀ ಮಹಿಪತಿ ದಾಸರು   Kruti:   Sri Mahipati Dasaru ಗಜಾನನ ಗಜಾನನ | ಗಜಾನನ ಸ್ವಾಮಿ ನಿನ್ನವನಾ ||ಪ|| ಪಾರ್ವತಿನಂದನ ಪೂರ್ವಚರಿತ ಘನ ನಿರ್ವಿಘ್ನದಾಯಕ ಗಜಾನನ ||೧|| ಮೂಷಕವಾಹನ ದೋಷಕರಿಪು ಕುಲ ನಾಶಕ ವಿಘ್ನಹ ಗಜಾನನ ||೨|| ಮದನಾರಿ ಮನೋಭವ ಹೃದನಾಮ ಲೇಕದಂತ ದಯಾಸದನ ಶ್ರೀ ಲಂಬೋದರ ||೩|| ಕರುಣಾಪೂರಿತ ಸರ್ವಾಭರಣ ಭೂಷಿತ ಭಯ ಹರಣ ತ್ರಿಜಗನುತ ಗಜಾನನ ||೪|| ವಂದಿಪ ಶರಣರಿಗೆಂದೆಂದು ವಿದ್ಯೆಗಳ ತಂದಿದಿರಿಡುತಿಹೆ ಗಜಾನನ ||೫|| ತಂದೆ ಮಹಿಪತಿ ನಂದನ ಸಾರಥಿ ಇಂದೆಮ್ಮ ಉದ್ಧರಿಸೋ ಗಜಾನನ ||೬|| gajAnana gajAnana | gajAnana svAmi ninnavanA ||pa||   pArvatinaMdana pUrvacarita Gana nirviGnadAyaka gajAnana ||1||   mUShakavAhana dOShakaripu kula nASaka viGnaha gajAnana ||2||   madanAri manOBava hRudanAma lEkadaMta dayAsadana SrI laMbOdara ||3||   karuNApUrita sarvABaraNa BUShita Baya haraNa trijaganuta gajAnana ||4||   vaMdipa SaraNarigeMdeMdu vidyegaLa taMdidiriDutihe gajAnana ||5||   taMde mahipati naMdana sArathi iMdemma uddharisO gajAnana ||6||

ನರಸಿಂಹ ವಜ್ರಸಿಂಹ | ವಿಜಯವಿಠ್ಠಲ | Narasimha Vajrasimha | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ನರಸಿಂಹ ವಜ್ರಸಿಂಹ |  ಸರಸಿಜನಾಭ ದಕ್ಷಿಣ ಶರಧಿ ನಿವಾಸ ||ಪ|| ಹಿರಣ್ಯಕಶ್ಯಪು ಪ್ರಹ್ಲಾದನಾ ಬಾಧಿಸಲು|  ಪರಿಯದೈವವೆ | ಮೊರೆ ಹೋಗಲು  ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು|  ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲು ||೧|| ಭುಗಿಲೆನೆ ಧಿಗಿಲನೆ ದಿಕ್ಕಿನಲಿ ಶಬ್ಧ ಪುಟ್ಟುತಿರೆ  ಪಗಲಿರುಳು ಒಂದೆಂದರು ಸಕಲರು  ಝಗಝಗಿಪ ಬೆಳಕು ಕವಿದುದು ಮೂರುಲೋಕಕ್ಕೆ  ಉಗುರುಕೊನೆ ಪೊಗಳಿ ವೇದಗಳು ಬೆರಗಾಗಿ ||೨|| ರಕ್ಕಸನೊಡಲು ಬಗೆದು ಕರುಳು ಕೊರಳಿಗೆ ಮಾಲೆ|  ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತ  ಕಕ್ಕಸದ ದೈವ ಅನಂತಪದುಮನಾಭ  ಮುಕ್ತಿದಾಯಕ ವಿಜಯವಿಠ್ಠಲ ಮಹದಾ ||೩|| narasiMha vajrasiMha |  sarasijanABa dakShiNa Saradhi nivAsa ||pa|| hiraNyakashyapu prahlAdanA bAdhisalu|  pariyadaivave | more hOgalu  hiridAgi kELi hitadali baMdu bobbiDalu|  hiraNyagarBAdigaLu hiridu ciMtisalu ||1||   Bugilene dhigilane dikkinali Sabdha puTTutire  pagaliruLu oMdeMdaru sakalaru  JagaJagipa beLaku kavidudu mUrulOkakke  ugurukone pogaLi vEdagaLu beragAgi ||2|| rakkasanoDalu bagedu karuLu ...

ಕಂಡೆ ನಾ ನರಸಿಂಹನಾ | ಕನಕದಾಸರು | Kande na Narasimhana | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಕಂಡೆ ನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನಾ ||ಪ|| ಗುಡು ಗುಡುಸಿ ಕಂಭದಲಿ ದಡದಡ ಸಿಡಿಲು ಸಿಡಿಯೆ ಹಿಡಿಹಿಡಿಸೆ ನುಡಿಯಡಗಲೊಡನೆ ಮುಡಿಹಿಡಿದು | ಗಡಗಡನೆ ನಡುನಡುಗೆ ಗುಡುಗುಡಿಸಿ ಸಭೆ ಬೆದರೆ ಹಿಡಿ ಹಿಡಿದು ಹಿರಣ್ಯಕನ ತೊಡೆಯಲ್ಲಿ ಕೆಡಹಿದನಾ ||೧|| ಉರದೊಳಪ್ಪಳಿಸಿ ಅರಿ ಶಿರವ ಸರಸರ ಸೀಳಿ ಪರಿಪರಿಯಲೀ ಚರ್ಮ ಎಳೆದೆಳೆದು ಎಲುಬು ನರ ನರವನ್ನು ತೆಗೆದು ನಿರ್ಗಧಿಕ ಶೋಣಿತ ಸುರಿಯೆ ಹರಿಹರಿದು ಕರುಳ ಕೊರಳೊಳಗೆ ಇಟ್ಟವನ ||೨|| ಪುರಜನರು ಹಾ ಎನಲು ಸುರರು ಹೂ ಮಳೆಗೆರೆಯೇ ತರತರದ ವಾದ್ಯ ಸಂಭ್ರಮಗಳಿಂದ | ಹರಿಹರಿಯೇ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ ಕರುಣಾಳು ಕಾಗಿನೆಲೆಯಾದಿ ಕೇಶವನ ||೩|| kaMDe nA taMDa taMDada hiMDu daiva pracaMDa ripugaMDa uddaMDa narasiMhanA ||pa||   guDu guDusi kaMBadali daDadaDa siDilu siDiye hiDihiDise nuDiyaDagaloDane muDihiDidu | gaDagaDane naDunaDuge guDuguDisi saBe bedare hiDi hiDidu hiraNyakana toDeyalli keDahidanA ||1||   uradoLappaLisi ari Sirava sarasara sILi paripariyalI carma eLedeLedu elubu nara naravannu tegedu nirgadhika SONita suriye hariharidu karuLa koraLoLage iTTavana ||2||   purajan...

ವ್ಯಾಸ ಬದರೀನಿವಾಸ | ವಿಜಯವಿಠ್ಠಲ | Vyasa Badari Nivasa | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ವ್ಯಾಸ ಬದರೀನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಶ | ಸಾಸಿರ ಮಹಿಮನೆ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ || ಪ || ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು ಅತ್ಯಂತ ಸುಖಕರ ಸುತ್ತುವ ಸುಳಿಯೆಂದೆತ್ತಿ ಕಡೆಗೆಯಿಡು ಎತ್ತ ನೋಡಲು ವ್ಯಾಪುತ ಸದಾಗಮ || ೧ || ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ | ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಿಸಿ | ಜೋಕೆ ಮಾಡುವುದು | ಅನೇಕ ಪರಿಯಿಂದ | ಆ ಕುರುವಂಶದ ನಿಕರ ತರಿಸಿದೆ | ಭೂಕಾಂತರು ನೋಡೆ | ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ || ೨ || ಸ್ಮರಿಸಿದವರ ಮನೋಭೀಷ್ಟ | ವಾಶಿಷ್ಟ ಕೃಷ್ಣ ನಿರುತ ಎನ್ನಯ ಅರಿಷ್ಟ | ಪರಿಹರಿಸುವುದು ಕಷ್ಟದೊಳಗೆ ಉತ್ಕೃಷ್ಟ | ಮೆರೆವ ಉನ್ನಂತ ವಿಶಿಷ್ಟ | ಸುರ ನರ ಉರಗ ಕಿನ್ನರ ಗಂಧರ್ವರ | ಕರಕಮಲಗಳಿಂದ ವರಪೂಜೆಗೊಂಬ | ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ | ಶರಸುತ ಬಲು ವಿಸ್ತಾರ ಜ್ಞಾನಾಂಬುಧೆ || ೩ || vyaasa badarInivaasa ennaya klESa naashanagaisu mounIsha | saasira mahimane dOSharahita sura bhUsura paripaala shaashvata vEda || pa || satyavati varas...

ಕಾಯೋ ಕಾಯೋ ರಂಗಾ | ಜಗನ್ನಾಥ ವಿಠಲ | Kayo Kayo Ranga | Jagannatha Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಾಯೋ ಕಾಯೋ ರಂಗಾ ಕಮಲಾಯತಾಕ್ಷಾ || ಪ || ಕಾಯೋ ಕಾಯೋ ಕಮಲಾಯತಾಕ್ಷಾ ಭವ ತೋಯದಲಿ ಬಿದ್ದು ಬಾಯ ಬಿಡುವೆನು || ಅಪ || ಅದ್ವೈತತ್ರಯದಧ್ವಪ್ರವರ್ತಕ  ಸದ್ವೈಷ್ಣವರ ಪದದ್ವಯ ತೋರಿ || ೧ || ಸಂಜೆಯ ತೋರಿ ಧನಂಜಯನುಳುಹಿದ ಕುಂಜರವರದ ನಿರಂಜನಮೂರ್ತೇ || ೨ || ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂದದಿ ಪ್ರತ್ಯಕ್ಷದಲಿ || ೩ || ನೀ ದಯಮಾಡದಿರೀ ದಿವಿಜರು ವೊಲಿ ದಾದರಿಸುವರೆ ವೃಕೋದರ ವಂದ್ಯಾ || ೪ || ಅಧಮನು ನಾನಹುದಧಿಮಥನ ಸ- ನ್ಮುದಮುನಿಮತ ಪೊಂದಿದವರಣುಗನಾ || ೫ || ಕ್ಷುದ್ರಭೂಮಿಪರುಪದ್ರವ ಕಳೆದು ಸು- ಭದ್ರವೀಯೊ ಕಲ್ಪದ್ರುಮದಂತೆ || ೬ || ಸತ್ಯಕಾಮ ತವ ಭೃತ್ಯಗೆ ಬಂದಪ- ಮೃತ್ಯು ಕಳೆದು ಸಂಪತ್ತು ಪಾಲಿಸಿದಿ || ೭ || ಎಲ್ಲರೊಳಿಹ ಕೈವಲ್ಯದರಸು ನೀ ಬಲ್ಲಿದನೆಂಬುದು ಬಲ್ಲೆ ಬಹುಬಗೆ || ೮ || ವೀತಭಯ ಜಗನ್ನಾಥವಿಠಲ ಸು- ಖೇತರ ಕಳೆದು ಮಹಾತಿಶಯದಲಿ || ೯ || kaayO kaayO raMgaa kamalaayataakShaa || pa || kaayO kaayO kamalaayataakShaa bhava tOyadali biddu baaya biDuvenu || apa || advaitatrayadadhvapravartaka  sadvaiShNavara padadvaya tOri || 1 || saMjeya tOri dhanaMjayanuLuhida kuMjaravarada niraMjanamUrtE || 2 || kukShiyoLaMdu parIkShidraajana rakShisidaMdadi pratyakShadali || 3...

ಏ ರಂಗಧಾಮ ರಂಗ | ಹಯವದನ | E Rangadhama Ranga | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಏ ರಂಗಧಾಮ ರಂಗ ಏ ರಂಗಧಾಮ ||ಪ|| ನಾರುವ ಮೈಯವನತ್ತಸಾರು ಮುಟ್ಟದಿರೊ ಎನ್ನ ದೂರನಿಲ್ಲು ತರವಲ್ಲ ಏ ರಂಗಧಾಮ  ಸಾರ ಶ್ರುತಿಗಳ ತಂದು ವಾರಿಜಸಂಭವಗಿತ್ತೆ ಧೀರ ಮತ್ಸ್ಯರೂಪ ಕಾಣೆ ಎಲೆ ಸತ್ಯಭಾಮೆ ||೧|| ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು ಡೊಂಕಿದೇನೊ ಪೇಳೊ ಏ ರಂಗಧಾಮ ಸಿಂಧುಮಥನವ ಮಾಡಲಂದು ಮಂದರ ಮುಳುಗೆ ಬಂದು ನೆಗಹಿದ ಕೂರ್ಮ ಎಲೆ ಸತ್ಯಭಾಮೆ ||೨|| ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು ಗಾಡಿಕಾರ ನೀನಾರಯ್ಯ ಏ ರಂಗಧಾಮ ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ ಕಾಡವರಾಹನು ಕಾಣೆ ಎಲೆ ಸತ್ಯಭಾಮೆ ||೩|| ಮನುಷ್ಯನಾಗಿದ್ದ ಮೇಲಣಕಾನನದ ಮೃಗರಾಜ ಆನನವಿದೇನೊ ಪೇಳೊ ಏ ರಂಗಧಾಮ ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ  ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ ||೪|| ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ ತಿರುಕನೆಂಬೋದರಿಯದಾದೆನೊ ಏ ರಂಗಧಾಮ ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ  ಗರುವ ವಾಮನ ಕಾಣೆ ಎಲೆ ಸತ್ಯಭಾಮೆ ||೫|| ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ  ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ  ಮಡುಹಿ ಕ್ಷತ್ರೇರನೆಲ್ಲ ಮುದದಿ ಸೇರ್ದ ಮಾತೆಗಾಗಿ ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ ||೬|| ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ ಕಾರಣವಿದೇನೊ ಪೇಳೊ ಏ ರಂಗಧಾಮ ಕ್ರೂರ ರಾವಣನ ಗೆ...

ಶರಣು ಶೇಷಾಚಲ ನಿವಾಸಗೆ | ವಿಜಯವಿಠ್ಠಲ | Sharanu Sheshachala | Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ಅಲಮೇಲುಮಂಗ ರಮಣಗೆ ಶರಣು ತಿರುವೆಂಗಳೇಶಗೆ || ಪ || ಧರಣಿಧರ ಗೋವಿಂದ ಮಾಧವ | ನರಹರಿ ಮಧುಸೂದನಾ | ಮುರಹರ ಮುಕುಂದ ಅಚ್ಯುತ ಗಿರಿಜನುತ ನಾರಾಯಣಾ || ೧ || ಕ್ಷೀರ ವಾರಿಧಿಶಯನ ವಾಮನ | ಮಾರ ಜನಕ ಗೋಪಿ ಜನ | ಜಾರ ನವನೀತ | ಚೋರ ರಿಪು ಸಂಹಾರ ಹರಿದಾಮೋದರ || ೨ || ಗರುಡಗಮನನೆ ಗರಳ ತಲ್ಪನೆ | ಕರುಣಾಳುಗಳ ಒಡೆಯನು | ಉರಗ ಗಿರಿ ಸಿರಿ ವಿಜಯವಿಠ್ಠಲನ | ಚರಣ ಕಮಲಕೆ ನಮೋ ನಮೋ || ೩ || sharaNu shEShaacala nivaasage | sharaNu varaha timmappage | sharaNu alamElumaMga ramaNage sharaNu tiruveMgaLEshage || pa || dharaNidhara gOviMda maadhava | narahari madhusUdanaa | murahara mukuMda achyuta girijanuta naaraayaNaa || 1 || kShIra vaaridhishayana vaamana | maara janaka gOpi jana | jaara navanIta | chOra ripu saMhaara haridaamOdara || 2 || garuDagamanane garaLa talpane | karuNaaLugaLa oDeyanu | uraga giri siri vijayaviThThalana | charaNa kamalake namO namO || 3 ||

ಆರಿಗೆ ವಧುವಾದೆ | ಪುರಂದರ ವಿಠಲ | Aarige Vadhuvade | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಆರಿಗೆ ವಧುವಾದೆ ಅಂಬುಜಾಕ್ಷಿ |ಪ| ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿಯೇ ||ಅಪ|| ಶರಧಿ ಬಂಧನ ರಾಮಚಂದ್ರ ಮೂರುತಿಗೋ | ಪರಮಾತ್ಮ ಸಿರಿ ಅನಂತ ಪದ್ಮನಾಭನಿಗೋ || ಸರಸಿಜನಾಭ ಜನಾರ್ದನ ಮೂರುತಿಗೋ | ಎರಡು ಹೊಳೆಯ ರಂಗಪಟ್ಟಣವಾಸಿಗೋ ||೧|| ಚೆಲುವ ಬೇಲೂರು ಚೆನ್ನಿಗರಾಯನಿಗೋ | ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೋ || ಇಳೆಯೊಳು ಪಂಢರಾಪುರ ವಿಠಲರೇಯಗೋ | ನಳಿನಾಕ್ಷಿ ಹೇಳು ಬದರೀನಾರಾಯಣಗೋ ||೨|| ಮಲಯಜ ಗಂಧಿ ಬಿಂದು ಮಾಧವರಾಯನಿಗೋ | ಸುಲಭದೇವ ಪುರುಷೋತ್ತಮಗೋ || ಫಲದಾಯಕ ನಿತ್ಯ ಮಂಗಳನಾಯಕಗೋ || ಚೆಲುವೆನಾಚದೆ ಹೇಳು ಶ್ರೀ ವೆಂಕಟೇಶನಿಗೋ ||೩|| ವಾಸವಾರ್ಚಿತ ಕಂಚಿ ವರದರಾಜ ಮೂರುತಿಗೋ | ಅಸುರಾರಿ ಶ್ರೀ ಮುಷ್ಣು ಆದಿ ವರಹನಿಗೋ || ಶೇಷಶಾಯಿಯಾದ ರಂಗನಾಯಕಗೋ | ಸಾಸಿರ ನಾಮದೊಡೆಯ ಅಳಗಿರೀಶನಿಗೋ ||೪|| ಶರಣಾಗತರ ಪೊರೆವ ಶಾರ್ಙ್ಞಪಾಣಿಗೋ || ವರಗಳನೀವ ಶ್ರೀನಿವಾಸ ಮೂರುತಿಗೋ || ಕುರುಕುಲಾಂತಕ ರಾಜಗೋಪಾಲ ಮೂರುತಿಗೋ | ಸ್ಥಿರವಾದ ಪುರಂದರ ವಿಠಲ ರಾಯನಿಗೋ ||೫|| Arige vadhuvAde aMbujAkShi |pa| kShIrAbdhi kannike SrI mahAlakumiyE ||apa||   Saradhi baMdhana rAmacaMdra mUrutigO | paramAtma siri anaMta padmanABanigO || sarasijanABa janaardana mUrutigO | eraDu hoLeya raMgapaTT...

ಉಡುಪಿನ ರಂಗ | ಹಯವದನ | Udupina Ranga | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಉಡುಪಿನ ರಂಗ ಕಲ್ಲಕಂಬದಿಂದೊಡೆದ ನರಸಿಂಹ ಬಿಡದೆಮ್ಮ ಸಲಹೊ ಕೈವಿಡಿ ಇನ್ನೇಕೆ ತಡವೊ ||ಪ|| ಕರೆಯದ ಮುನ್ನ ಬಂದೆ ಖಳನಿದಿರಲಿ ನಿಂದೆ ಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ ||೧|| ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧು ಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ ||೨|| ಹಯವದನನಾಗಿ ಹರಿ ನೀ ದೈತ್ಯರ ನೀಗಿ ನಯದಿ ವೇದವ ತಂದೆ ನಳಿನನಾಭನೇನೆಂಬೆ ||೩|| uDupina raMga kallakaMbadiMdoDeda narasiMha biDademma salaho kaiviDi innEke taDavo ||pa|| kareyada munna baMde KaLanidirali niMde ariyudarava sILde asamanenisi baaLde ||1|| enage nIne baMdhu elele karuNaasiMdhu dhanadaaseya biDiso dharmamaargadi naDeso ||2|| hayavadananaagi hari nI daityara nIgi nayadi vEdava taMde naLinanaabhanEneMbe ||3||

ನಂಬು ನಂಬು ನಾರಾಯಣನ | ಹಯವದನ | Nambu Nambu Narayanana | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಂಬು ನಂಬು ನಾರಾಯಣನ ಈ ಮಿಕ್ಕ ದೈವಗಳು ಕಾಯಬಲ್ಲವೆ || ಪ || ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿ- ಯೆಂಬೊ ಪ್ರಹ್ಲಾದನ್ನ ನೋಡು ಕುಂಭಿಣಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟ ತುಂಬಿದ ಭಾಗ್ಯವ ನೋಡಯ್ಯ || ೧ || ಹಿರಣ್ಯಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲ ಕರಗಿಹೋದದ್ದು ನೋಡಯ್ಯ ದುರುಳರಾವಣ ಏನಾದ ಆ ದುಃಖವನ್ನು ಪಾರಂಪರ್ಯದಿಂದ ಕೇಳಯ್ಯ || ೨ || ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ ಕಟ್ಟೆಂದ ಖಳನೇನಾದ ಹಯವದನನ್ನ ನಂಬಿದ ನಮ್ಮ ಧರ್ಮ- ರಾಯನ ಭಾಗ್ಯ ನೋಡಯ್ಯ || ೩ || naMbu naMbu naaraayaNana I mikka daivagaLu kaayaballave || pa || aMbaradi dhruvanna nODu I bhaktimouLi- yeMbo prahlaadanna nODu kuMbhiNiyoLu vibhIShaNage shrIraama koTTa tuMbida bhaagyava nODayya || 1 || hiraNyaakShaneMbo daityana A siriyella karagihOdaddu nODayya duruLaraavaNa Enaada A duHKavannu paaraMparyadiMda kELayya || 2 || nyaayakkaagi manege baMda shrIkRuShNana kaTTeMda KaLanEnaada hayavadananna naMbida namma dharma- raayana bhaagya nODayya || 3 ||

ಯಾರು ಒಲಿದರೇನು | ಪುರಂದರ ವಿಠಲ | Yaaru Olidarenu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಯಾರು ಒಲಿದರೇನು ನಮಗಿನ್ನಾರು ಮುನಿದರೇನು ||ಪ|| ಕ್ಷೀರ ಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ ||ಅಪ|| ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು ಮಾರಿ ಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ ||೧|| ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು  ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು  ಒಡನಾಡುವ ಗೆಳೆಯರು ನಮ್ಮೊಳಗೆ ವೈರವ ಬೆಳೆಸಿದರೇನು ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ ||೨|| ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು  ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು  ದೀನನಾಥ ಶ್ರೀಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ ||೩|| yaaru olidarEnu namaginnaaru munidarEnu ||pa|| kShIra saagarashaayiyaadavana sEridaMtha haridaasarige ||apa|| UranaaLuva doregaLu nammanu dUra aTTidarREnu GOraaraNyadi tiruguva mRugagaLu aDDagaTTidarEnu maari hiMDu matte musukina daMDu maige muttidarEnu vaarijanaabhana vasudEvasuta...

ಶಿವನ ನೋಡಿರೊ | ವಿಜಯವಿಠ್ಠಲ | Shivana Nodiro | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಶಿವನ ನೋಡಿರೊ ಇಂದು ಸ್ತವನ ಮಾಡಿರೊ ತವಕದಿಂದ ತಿಳಿದು ವೇಗ  ಅವಗುಣಂಗಳ ತೊರೆದು ನಿತ್ಯ ||ಪ|| ಅಂತಕಾಂತಪುರ ವೈರಿ ದಿ- ನಾಂತ ವೃಷಭನೇರಿ ಕಾಂತಿ ಸಹಿತ ಜನರಂಗಣದಿ  ನಿಂತು ಮಾತು ಲಾಲಿಪ ಮಹಿಮ ||೧||  ಅಸುರಜನಕೆ ಪ್ರೀತ ಸರ್ವದ ಅಸುರ ವೈರಿಯ ನೇಮದಿಂದ  ವಸುಧಿಯೊಳಗೆ ಬಲಿದಾನೇಕಾ- ದಶರುದ್ರರೊಳು ಬಲು ಗುಣವಂತ ||೨|| ದಕ್ಷ ಪ್ರಜೇಶ್ವರನಧ್ವರ  ಶಿಕ್ಷಣೆ ಮಾಡಿದ ದಕ್ಷಿಣಮೂರುತಿ ಮೋಕ್ಷಕೆ ಮನಸು ಕೊಡುವ ನಿಟಿ- ಲಾಕ್ಷಣವಂತ ಶಾಂತ ||೩|| ಕರಿಚರ್ಮಾಂಬರಧಾರಿ ವಾರಿ- ಧರ ತ್ರಿಶೂಲ ಡಮರುಗ ಪಾಣಿ ಶರಗದ್ದುಗೆ ಸುಮೇರು ವೇದ  ತುರಗವಾಗಿರಲಂದು ಅಂದದಿ ||೪|| ನಮಿಸಿ ಒರಲಿ ಬೇಡಿ ಭವದ ಮಮತೆ ಓಡಿಸಿ ಭಕುತಿಯಿಂದಲಿ ರಮೆಯರಸ ಶ್ರೀವಿಜಯವಿಠ್ಠಲನ್ನ ಶಮೆ ದಮೆಯಿಂದ ಪೂಜಿಪ ಧೀರ ||೫|| shivana nODiro iMdu stavana maaDiro tavakadiMda tiLidu vEga  avaguNaMgaLa toredu nitya ||pa|| aMtakaaMtapura vairi di- naaMta vRuShabhanEri kaaMti sahita janaraMgaNadi  niMtu maatu laalipa mahima ||1||  asurajanake prIta sarvada asura vairiya nEmadiMda  vasudhiyoLage balidaanEkaa- daSarudraroLu balu guNavaMta ||2|| dakSha prajESvaranadhvara  shikShaNe mADid...

ಇಂದಿರೆಯರಸನೆ ಬಾರೊ | ಹಯವದನ | Indireyarasane Baaro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಇಂದಿರೆಯರಸನೆ ಬಾರೊ ಇಂದುವದನನೆ ಬಾರೊ ಕಂದರ್ಪನ ತಂದೆ ಬಾರೊ ಮಂದರಧರ ಬಾರಯ್ಯ ||ಪ|| ಮಚ್ಛನಾದವನೆ ಬಾರೊ ಕಚ್ಛಪರೂಪನೆ ಬಾರೊ ನೆಚ್ಚಿದ ಮೇದಿನಿ ತಂದ ಸಚ್ಚರಿತ್ರನೆ ಬಾರೊ ಅಚ್ಚನರಸಿಂಹ ಬಾರೊ ಹೆಚ್ಚಿದ ವಾಮನ ಬಾರೊ ಕೊಚ್ಚಿ ನೃಪರತರಿದ ಸಚ್ಚಿದಾನಂದ ಬಾರಯ್ಯ ||೧|| ರಾವಣವೈರಿ ಬಾರೊ ಮಾವನ್ನ ಕೊಂದವನೆ ಬಾರೊ ಆವಾಗ ಭಕ್ತರಭೀಷ್ಟ ಈವ ದೇವನೆ ಬಾರೊ  ಪಾವನ್ನ ಬೌದ್ಧನೆ ಬಾರೊ ಈ ವಸುಧೆಯೊಳು ಕಲ್ಕಿ ರಾವುತನಾಗೆಸೆದ ಶ್ರೀ ವಾಸುದೇವ ಬಾರಯ್ಯ ||೨|| ಇಂಗಿತವರಿತು ಬಾರೊ ಇಂಗಡಲರಸನೆ ಬಾರೊ ತುಂಗಗುಣಗಣ ಬಾರೊ ಸಂಗೀತಪ್ರಿಯ ಬಾರೊ ಉಂಗುರಗಳಿಂದೊಪ್ಪುವ ಅಂಗುಳಿಯ ಸನ್ನೆಯಿಂದ  ಪೊಂಗೊಳಲೂದುವ ಚೆಲ್ವ ಮಂಗಳಮೂರುತಿ ಬಾರಯ್ಯ ||೩|| ಪಂಕಜನಾಭನೆ ಬಾರೊ ಶಂಕರಪ್ರಿಯನೆ ಬಾರೊ ಕಂಕಣ ಕುಂಡಲ ಹಾರಾಲಂಕೃತಮೂರ್ತಿ ಬಾರೊ ಕುಂಕುಮಶೋಭಿತ ಲಕ್ಷ್ಮೀಅಂಕಿತವಕ್ಷನೆ ಬಾರೊ ಕೊಂಕಿದ ಕುರುಳ ಚೆಲ್ವ ಬಿಂಕವ ಬಿಟ್ಟು ಬಾರಯ್ಯ ||೪|| ಕುಂಜರವರದನೆ ಬಾರೊ ಮಂಜುಳಭಾಷನೆ ಬಾರೊ ಅಂಜುವ ದಾಸರಿಗೆ ವಜ್ರಪಂಜರ ಹರಿ ಬಾರೊ ಸಂಜೆಯ ತೋರಿಸಿ ಧನಂಜಯನ ಕಾಯ್ದವನೆ ಬಾರೊ  ನಿರಂಜನ ಹಯವದನ ರಂಜಿತತೇಜ ಬಾರಯ್ಯ ||೫|| iMdireyarasane baaro iMduvadanane baaro kaMdarpana taMde baaro maMdaradhara baarayya ||pa|| macCanaadavane baaro kacCaparUpane baaro neccida mEdin...

ಮಾರಮಣನ ತೋರೋ ಮಾರುತಿ | ವೇಣುಗೋಪಾಲ ವಿಠಲ| Maramanana Toro | Venugopala Vithala Dasaru

Image
ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು  Kruti:Sri Venugopala vittala Dasaru ಮಾರಮಣನ ತೋರೋ ಮಾರುತಿ ||ಪ||  ಮನದಲಿ ಹೊಳೆಯುತ ಮನದಲಿ ಪೊಳೆಯುತ ||ಅಪ|| ಹನುಮನಾಗಿ ಹರಿವೇಷವ ಧರಿಸಿದೆ ನೀ ಚಿನುಮಯನಾಗಿ ನೀ ಬಂದೆ|  ಘನಮಹಿಮನೆ ನೀ ಗಗನದಿ ಓಡುತ ರಾಣಿಯ ಕ್ಷೇಮವ ನೀ ತಂದೆ|  ಕನಕನಗಿರಿಯನು ಕಡಲೊಳು ತಡೆಯುತ ಬಲದಿ ಕಟ್ಟಿದ ಬಲವಂತನೆನಿಸಿದ್ಯೋ||೧|| ದ್ವಾಪರದಲಿ ತಾ ದ್ವಾರಕೆಗೆಪೋಗಿ| ಭೂಪಕೃಷ್ಣನ ಕರೆತಂದೆ||  ಕೋಪದಿ ಕೌರವಸೇನೆಯನೆಲ್ಲ ತಾಪಗೊಳಿಸುತ ನೀನಿಂದೆ|  ದ್ರೌಪದಿ ದುಃಖವ ದೂರ ಓಡಿಸಿ ಬಹುಬಾಪು ಬಲಭೀಮನೆಂದೆನಿಸಿದ್ಯೋ||೨|| ಕಾಣುತ ಮಾಯ್ಗಳ ಮತವನೆ ಖಂಡಿಸಿ ನೀ ಜಾಣ ಯತಿಯು ನೀನಾದೆ|  ತಾಣದಿ ಶಿಷ್ಯರ ಒಡಗೂಡುತಲಿ ಬದರಿಕಾಶ್ರಮಕೆ ನೀ ಬಂದೆ||  ವಾನರ ಮುನಿ ನೀ ವ್ಯಾಸಗೊಂದಿಸಿ ವೇಣುಗೋಪಾಲವಿಠಲನ ಸ್ಮರಿಸಿ||೩|| mAramaNana tOrO mAruti ||pa||  manadali hoLeyuta manadali poLeyuta ||apa|| hanumanAgi harivEShava dhariside nI cinumayanAgi nI baMde|  Ganamahimane nI gaganadi ODuta rANiya kShEmava nI taMde|  kanakanagiriyanu kaDaloLu taDeyuta baladi kaTTida balavaMtanenisidyO||1|| dvAparadali tA dvArakegepOgi| BUpakRuShNana kare taMde||  kOpadi kauravasEneyanella tApago...

ಸೀತೆಯ ಭೂಮಿಜಾತೆಯ | ವಿಜಯವಿಠ್ಠಲ | Seetheya Bhumi Jateya | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti:  Sri Vijaya Dasaru ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪ|| ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿ ದಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ ||೧|| ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ ||೨|| ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ವಿಜಯಲಕ್ಷ್ಮಿ ಗಜಗಮನೆಯ ನಿತ್ಯ | ಸುಜನವಂದಿತೆ ಅಹಿವೇಣಿಯ ||೩||  sIteya bhUmijaateya jaga-| nmaateya smarisi vikhyaateya ||pa|| kShIra vaaridhiya kumaariya tanna | sEridavara bhayahaariya || tOruvaLu mukti dAriya sarva | saara suMdara SrInaariya ||1|| IshakOTiyoL gaNaneya svapra-| kaaSavaada guNaSrENiya || Ishaadyara petta karuNiya ni-| rdOSha vaaridhikalyaaNiya ||2|| vijayaviThThalanna raaNiya paM-| kajamaale piDida paaNiya || vijayalakShmi gajagamaneya nitya | sujanavaMdite ahivENiya ||3|| 

ಕರೆದರೆ ಬರಬಾರದೇ | ಕಮಲೇಶ ವಿಠಲ | Karedare Barabarade | Kamalesha Vithala

Image
ಸಾಹಿತ್ಯ : ಶ್ರೀ ಕಮಲೇಶ ವಿಠಲ ದಾಸರು Kruti:Sri Kamalesha Vittala Dasaru ಕರೆದರೆ ಬರಬಾರದೇ | ಗುರುವೇ |  ಕರೆದರೆ ಬರಬಾರದೇ ||ಪ|| ವರಮಂತ್ರಾಲಯ ಪುರ ಮಂದಿರದೊಳು  ಚರಣಸೇವಕರು ಕರವ ಮುಗಿದು ನಿನ್ನ ||೧|| ಹರಿದಾಸರು ಸುಸ್ವರ ಸಮ್ಮೇಳದಿ |  ಪರವಶದಲಿ ಬಾಯ್ತೆರೆದು ಕೂಗಿ ನಿನ್ನ ||೨|| ಪೂಶರ ಪಿತ ಕಮಲೇಶ ವಿಠಲನ | ದಾಸಾಗ್ರೇಸರ ಈ ಸಮಯದಿ ನಿನ್ನ ||೩|| karedare barabAradE | guruvE |  karedare barabAradE ||pa||   varamaMtrAlaya pura maMdiradoLu  caraNasEvakaru karava mugidu ninna ||1||   haridAsaru susvara sammELadi |  paravaSadali bAyteredu kUgi ninna ||2||   pUSara pita kamalESa viThalana | dAsAgrEsara I samayadi ninna ||3||

ಕಂಡೆ ಪಂಢರಿರಾಯನ | ಜಗನ್ನಾಥವಿಠಲ | Kande Pandhari Rayana | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಕಂಡೆ ಪಂಢರಿರಾಯನ| ತನ್ನನು  ಕೊಂಡಾಡುವವರ ಪ್ರಿಯನ ವಿಠಲನ|| ಸಮಚರಣಭುಜನ ನಿಗಮಗಮತತಿ ಗೋಚರನ ಅಮಿತ ಪರಾಕ್ರಮನ  ರುಕ್ಮಿಣೀ ರಮಣ ರವಿಕ್ಷಣನ ವಿಠಲನ ||ಕಂಡೆ|| ಕಾಮಿತಾರ್ಥ ಪ್ರದನ ಶ್ರೀತುಲಸೀಧಾಮ ವಿಭೂಷಿತನ|  ಸಾಮಜಪತಿಪಾಲನ ತ್ರಿಭುವನಸ್ವಾಮಿ ಚಿತ್‍ಸುಖಾಮಯನವಿಠಲನ ||೧|| ಗೋಕುಲಪೋಷಕನ ಮುನಿ| ಪುಂಡರೀಕಗೊಲಿದು ಬಂದನ|  ಲೋಕವಿಲಕ್ಷಣ ಪ್ರಣತರ ಶೋಕವಿನಾಶಕನ ವಿಠಲನ ||೨|| ಚಂದ್ರಭಾಗವಾಸನ ವಿಧಿವಿಹಗೇಂದ್ರ ಮುಖಾರ್ಚಿತನ  ಇಂದ್ರೋತ್ಪಲ ನಿಭನ ಗುಣಗಣಸಾಂದ್ರ ಸರ್ವೋತ್ತಮನ ವಿಠಲನ ||೩|| ಶ್ವೇತವಾಹನಸಖನ ಸತಿಗೆ ಪಾರಿಜಾತನ ತಂದವನ  ವೀತಶೋಕಭಯನ ಶ್ರೀಜಗನ್ನಾಥವಿಠಲರೇಯನ ||೪|| kaMDe paMDhari rAyana| tannanu  koMDADuvavara priyana viThalana|| samacaraNaBujana nigamagamatati gOcarana amita parAkramana  rukmiNI ramaNa ravikShaNana viThalana ||kaMDe||   kAmitArtha pradana SrItulasIdhAma viBUShitana|  sAmajapatipAlana triBuvanasvAmi cit^suKAmayanaviThalana ||1|| gOkulapOShakana muni| puMDarIkagolidu baMdana|  lOkavilakShaNa praNatara SOkavinASakana viThalana ||2|| caMd...

ಏನು ಮಾಡಲೋ ರಂಗ | ಪುರಂದರ ವಿಠ್ಠಲ | Enu Madelo Ranga | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೊ ಕೃಷ್ಣಯ್ಯ ರಂಗಯ್ಯ ರಂಗ ||ಪ|| ಏನು ಮಾಡಲಿ ಇನ್ನು ಮಾನಿನಿಯರು ಎನ್ನ ಮಾನವ ಕಳೆಯುವರೊ ರಂಗಯ್ಯ ರಂಗ ||ಅಪ|| ಹಾಲು ಮೊಸರು ಬೆಣ್ಣೆ ಕದ್ದನೆಂತೆಂಬರೊ ಮೇಲಿನ ಕೆನೆಗಳ ಮೆದ್ದನೆಂಬುವರೊ ಬಾಲಕರೆಲ್ಲರ ಬಡಿದನೆಂಬುವರೊ ಎಂಥ ಖೂಳ ಹೆಂಗಸು ಇವನ ಹಡೆದಳೆಂಬರೊ ||೧|| ಕಟ್ಟಿದ್ದ ಕರುಗಳ ಬಿಟ್ಟನೆಂತೆಂಬರೊ ಮೆಟ್ಟಿ ಸರ್ಪನ ಮೇಲೆ ಕುಣಿದನೆಂಬುವರೊ ಪುಟ್ಟ ಬಾಲೆಯರ ಮೋಹಿಸಿದನೆಂಬುವರೊ ಎಂಥ ದುಷ್ಟ ಹೆಂಗಸು ಇವನ ಹಡೆದಳೆಂಬರೊ ||೨|| ಗಂಗಾಜನಕ ನಿನ್ನ ಜಾರನೆಂತೆಂಬರೊ ಶೃಂಗಾರಮುಖ ನಿನ್ನ ಬರಿದೆ ದೂರುವರೊ ಮಂಗಳಮಹಿಮ ಶ್ರೀಪುರಂದರವಿಠ್ಠಲ  ಹಿಂಗದೆ ಎಮ್ಮನು ಸಲಹೆಂತೆಂಬರೊ ||೩||  Enu maaDalO raMga Eke beLagaayitu Enu maaDalo kRuShNayya raMgayya raMga ||pa|| Enu maaDali innu maaniniyaru enna maanava kaLeyuvaro raMgayya raMga ||apa|| haalu mosaru beNNe kaddaneMteMbaro mElina kenegaLa meddaneMbuvaro baalakarellara baDidaneMbuvaro eMtha khULa heMgasu ivana haDedaLeMbaro ||1|| kaTTidda karugaLa biTTaneMteMbaro meTTi sarpana mEle kuNidaneMbuvaro puTTa baaleyara mOhisidaneMbuvaro eMtha du...

ಏಕೆ ಭಿಕ್ಷವೋ ನಿನಗೆ | ಗುರು ಗೋಪಾಲ ವಿಠ್ಠಲ | Eke Bhikshavo Ninage | Guru Gopala Vittala

Image
ಸಾಹಿತ್ಯ: ಶ್ರೀ ಗುರು ಗೋಪಾಲ ವಿಠ್ಠಲ  Kruti:  Sri Guru Gopala Vittala ಏಕೆ ಭಿಕ್ಷವೋ ನಿನಗೆ ಚರ್ಮಚೇಲ ||ಪ|| ಶ್ರೀಕಂಠ ನಿನ್ನಷ್ಟು ಅನುಕೂಲ ಯಾರಿಗೋ ||ಅಪ|| ಕನಕಾಚಲವೆ ನಿನ್ನ ಕರದೊಳಗೆ ಇಹ ಧನುವು ಮನೆಯು ರಜತಾಚಲವು ಅನ್ನಪೂರ್ಣೆ ನಿನಗೆ ಪಟ್ಟದ ರಾಣಿ ಲೋಕವಿಘ್ನವ ಕಳೆವ ಗಣನಾಥ ನಿನ್ನ ಮಗ ಶಿವರೂಪಿ ನೀನು ||೧|| ರಾಜಶೇಖರ ನೀನು ಸಕಲಕೋಶಾಧ್ಯಕ್ಷ ರಾಜರಾಜನು ನಿನಗೆ ಪರಮಸಖನು ಮೂರ್ಜಗದ ಪಾವನಳು ಸುರಗಂಗೆ ಜಡೆಯೊಳಗೆ ಸೋಜಿಗವಿದೇನಯ್ಯ ಜಗದೊಳಗೆ ಶಂಕರನೆ ||೨|| ತ್ರಿನಯನನು ನೀನು ಪಂಚಾಸ್ಯ ಬ್ರಹ್ಮನ ಮಗನು ನಿನಗೊಬ್ಬ ಮಗನಿಹನು ಆರುಮೊಗದವನು ಅನಿಮಿಷಪ್ರಿಯ ಗುರುಗೋಪಾಲವಿಠ್ಠಲನು ನಿನಗೆ ಅತ್ಯಂತ ಸುಪ್ರಿಯನಾಗಿರಲು ದೇವ ||೩|| Eke bhikShavO ninage carmacEla ||pa|| SrIkaMTha ninnaShTu anukUla yaarigO ||apa|| kanakaacalave ninna karadoLage iha dhanuvu maneyu rajataacalavu annapUrNe ninage paTTada raaNi lOkaviGnava kaLeva gaNanaatha ninna maga SivarUpi nInu ||1|| raajaSEkhara nInu sakalakOshaadhyakSha raajaraajanu ninage paramasakhanu mUrjagada paavanaLu suragaMge jaDeyoLage sOjigavidEnayya jagadoLage shaMkarane ||2|| trinayananu nInu paMchaasya brahmana maganu ninagobba maganihanu Arumogadavanu animiSh...

ಪ್ರಾಣದೇವ ನೀನಲ್ಲದೆ | ಜಗನ್ನಾಥ ವಿಠಲ | Pranadeva Neenallade | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ ||ಪ|| ಪ್ರಾಣೋಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ ||ಅಪ|| ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ | ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ||೧|| ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಪುಡುಕೆ | ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೆ ||೨|| ಹಾವಿನ ಪಾಶದಿ ರಾವಣಿ ನೀಲ ಸುಗ್ರೀವ ಪ್ರಮುಖರ ಬಿಗಿಯೇ || ಸಾವಿರದೈವತ್ತು ಗಾವುದದಲ್ಲಿಹ ಸಂಜೀವನವ ನೀ ಜವದಿ ತಂದಿತ್ತೆ ||೩|| ಪರಿಸರ ನೀನಿರೆ ಹರಿ ತಾನಿರುವ ಇರದಿರೆ ತಾನಿರನು ಕರಣ ನಿಯಾಮಕ ಸುರರ ಗುರುವೆ ನೀ ಕರುಣಿಸೆ ಕರುಣಿಸುವ ||೪|| ಭೂತೇಂದ್ರಿಯಕಧಿನಾಥ ನಿಯಾಮಕ ಆ ತೈಜಸ ಹರನ ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ದೂತನಾದ ||೫|| prANadEva nInallade kAyvara kANenO jagadoLage ||pa|| prANOpAna vyAnOdaana samAnanenipa muKya ||apa||   vAsava kuliSadi GAsise jIvara SvAsa nirOdhiside | A samayadi kamalAsana pELalu nI salahide jagava ||1||   aMgada pramuKa plavaMgaru rAmana aMganeyaLa puDuke | tiMgaLu mIralu kaMgeDe kapivara puMgava pAliside ||2||   hAvina pASadi rAvaNi nIla sugrIva pra...

ಅರಿಯರು ಮನುಜರರಿಯರು | ಪುರಂದರವಿಠ್ಠಲ | Ariyaru Manujarariyaru | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅರಿಯರು ಮನುಜರರಿಯರು |ಪ| ಅರಿಯರು ಮನುಜರು ಅರಿತೂ ಅರಿಯರು|  ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು |ಅಪ| ನಾರದ ಮುನಿ ಬಲ್ಲ ವಾರಿಜೋದ್ಭವ ಬಲ್ಲ|  ಪರಾಶರ ಬಲ್ಲ ಮನು ಬಲ್ಲನು| ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು  ಕಾರಣೀಕನು ಶ್ರೀ ಹರಿಯಲ್ಲದಿಲ್ಲವೆಂದು |೧| ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು|  ಅವನೀಪಾಲಕ ಜನಕನೃಪ ಬಲ್ಲನು| ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ|  ಭವ ರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು |೨| ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮಿಳ ಬಲ್ಲ|  ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು| ಕೊಟ್ಟ ಬಲಿ ಬಲ್ಲ ಮೊರೆಯಿಟ್ಟ ಗಜೇಂದ್ರ ಬಲ್ಲ|  ಸೃಷ್ಟೀಶ ಪುರಂದರ ವಿಠ್ಠಲನಲ್ಲದಿಲ್ಲವೆಂದು |೩| ariyaru manujarariyaru |pa| ariyaru manujaru aritU ariyaru|  dhare IrELakke hariyalladillaveMdu |apa| nArada muni balla vArijOdBava balla|  parASara balla manu ballanu| dhIra BIShmanu balla pArvati ballaLu  kAraNIkanu SrI hariyalladillaveMdu |1| Siva balla dhruva balla draupadi ballaLu|  avanIpAlaka janakanRupa ballanu| yuvatige SApavitta gautama muni balla|...

ಲಕ್ಷ್ಮೀ ನೀ ಬಾರಮ್ಮ ಮನೆಗೆ | ವೆಂಕಟ ವಿಠಲ | Lakshmi Ni Baaramma | Venkata Vithala

Image
ರಚನೆ : ಶ್ರೀ ವೆಂಕಟ ವಿಠಲ ದಾಸರು  Kriti:  Sri Venkata Vittala Dasaru ಲಕ್ಷ್ಮೀ ನೀ ಬಾರಮ್ಮ ಮನೆಗೆ | ಬಾರಮ್ಮ ಮನೆಗೆ ನೀ ಭಾಗ್ಯದ ಲಕ್ಷ್ಮೀಯೇ | ತೋರಮ್ಮ ನಿನ್ನ ದಯ ತೋರಿಸು ತಾಯೇ ||ಪ|| ಕಾಲಲಂದಿಗೆ ಗೆಜ್ಜೆ ಘಲು ಘಲು ಘಲುಕೆಂದು ನೀಲವರ್ಣನ ಕೂಡ ನಲಿದಾಡು ತಾಯೇ ||೧|| ಸಕ್ಕರ ತುಪ್ಪದ ಕಾಲುವೆ ಹರಿಸುತ | ಶುಕ್ರವಾರದ ಪೂಜೆ ಬಾರಮ್ಮ ಮನೆಗೆ ||೨|| ವೆಂಕಟ ವಿಠಲನ ಬಿಂಕದ ರಾಣಿಯೇ ಪಂಕಜೋದ್ಭವಳೆ ನೀ ಬಾರಮ್ಮ ಮನೆಗೆ ||೩|| lakShmI nI bAramma manege | bAramma manege nI BAgyada lakShmIyE | tOramma ninna daya tOrisu tAyE ||pa||   kAlalaMdige gejje Galu Galu GalukeMdu nIlavarNana kUDa nalidADu tAyE ||1||   sakkara tuppada kAluve harisuta | SukravArada pUje bAramma manege ||2||   veMkaTa viThalana biMkada rANiyE paMkajOdBavaLe nI bAramma manege ||3||  

ಕಂಡು ಧನ್ಯನಾದೆ ಗುರುಗಳ | ಮೋಹನ ದಾಸರು | Kandu Dhanyanade Gurugala | Sri Mohana Dasaru

Image
ಸಾಹಿತ್ಯ : ಶ್ರೀ ಮೋಹನ ದಾಸರು Kruti: Sri Mohana Dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ ಕಂಡು ಧನ್ಯನಾದೆ ನಾ ನಮ್ಮ ಗುರುಗಳ ||ಪ||  ತುಂಗಾತಟದಿ ಬಂದು ನಿಂತ  ಪಂಗು ಬಧಿರಾದ್ಯಂಗ ಹೀನರ ಅಂಗಗೈಸಿ ಸಲಹುವಾ ನರ- ಸಿಂಗನಂಘ್ರಿ ಭಜಕರಿವರ ||೧|| ಗುರುವರ ಸುಗುಣೇಂದ್ರರಿಂದ ಪರಿಪರಿಯಲಿ ಸೇವೆಗೊಳುತ ವರಮಂತ್ರಾಲಯ ಪುರದಿ ಮೆರೆವ ಪರಿಮಳಾಖ್ಯ ಗ್ರಂಥಕರ್ತರ ||೨|| ಸೋಹಂ ಎನ್ನದೆ ಹರಿಯ ದಾ- ಸೋಹಂ ಎನ್ನಲು ಒಲಿದು ವಿಜಯ ಮೋಹನ ದಾಸರು ವಿಠ್ಠಲನ್ನ ಪರಮ  ಸ್ನೇಹದಿಂದ ತೋರುವವರ ||೩||  kaMDu dhanyanaade gurugaLa kaNNaare naa kaMDu dhanyanaade naa namma gurugaLa ||pa||  tuMgaataTadi baMdu niMta  paMgu badhiraadyaMga hInara aMgagaisi salahuvaa nara- siMganaMghri bhajakarivara ||1|| guruvara suguNEMdrariMda paripariyali sEvegoLuta varamaMtraalaya puradi mereva parimaLaakhya graMthakartara ||2|| sOhaM ennade hariya daa- sOhaM ennalu olidu vijaya mOhana dAsaru viThThalanna parama  snEhadiMda tOruvavara ||3|| 

ಈ ತನುವಿನೊಳಗೆ | ಹಯವದನ | Ee Tanuvinolage | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ || ಪ || ಜಾಳಾಂಧರಯೆಂಬೊ ಮಾಳಿಗೆಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಗಾಳಿ ಪುಟ್ಟುತ್ತ ಎಲೆ ಹಾರಿ ಹೋಗುವಾಗ ಹೇಳಿಹೋಯಿತೇ ಈ ಬೇರಿಗೆ ಒಂದು ಮಾತ || ೧ || ಏರಿಯು ನೀರನು ತಡೆದುಕೊಂಡಿದ್ದೇನೆಲೊ ಭೋರೆಂಬೋ ಮಳೆ ಹೊಯ್ದು ಭೋರೆಂಬೋ ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿ ಹೋಯಿತೇ ಒಂದು ಮಾತ || ೨ || ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಟ್ಟಿತ್ತು ಜೇನು ತನ್ನ ಸುಖಕಾಗಿ ಇಟ್ಟ ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೇ ಒಂದು ಮಾತ || ೩ || ಶತಬಾರಿ ಶತಕೂಟ ಹಂಸಕರೊಡಗೂಡಿ ಹೆಸರು ಹೇಳುವೆ ನಾನು ಅನುದಿನವು ರಸಭೋಜನವುಂಡು ಜ್ಯೋತಿ ತಾ ಹೋಗುವಾಗ ಪ್ರಣತಿಗೆ ಹೇಳಿ ಹೋಯಿತೇ ಒಂದು ಮಾತ || ೪ || ಸರ್ಪಶಯನ ಹಯವದನನಾಡಿದ ಮಾತು ಪಣೆ ಲಕ್ಷವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿ ಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆ ಹೇಳಿ ಹೋಯಿತೇ ಒಂದು ಮಾತ || ೫ || I tanuvinoLage anudinaviddu enagoMdu maata hELade hOdi haMsa || pa || jaaLaaMdharayeMbo maaLigemaneyalli nOLpare oMbattu baagilu gaaLi puTTutta ele haari hOguvaaga hELihOyitE I bErige oMdu maata || 1 || Eriyu nIranu taDedukoMDiddEnelo bhOreMbO maLe hoydu bhOre...

ಎಲ್ಲಾನು ಬಲ್ಲೆನೆಂಬುವಿರಲ್ಲ | ಪುರಂದರ ವಿಠಲ | Ellanu Ballenembuviralla | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಎಲ್ಲಾನು ಬಲ್ಲೆನೆಂಬುವಿರಲ್ಲ | ಅವಗುಣ ಬಿಡಲಿಲ್ಲ ||ಪ|| ಸೊಲ್ಲಿಗೆ ಶರಣರ ಕಥೆಗಳ ಪೇಳುತ | ಅಲ್ಲದ ನುಡಿಯನು ನುಡಿಯುವಿರಲ್ಲ ||ಅಪ|| ಕಾವಿಯನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ | ನೇಮನಿಷ್ಠೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ || ತಾವೊಂದರಿಯದೆ ಪರರನು ತಿಳಿಯದೆ | ಸ್ವಾನನ ಕುಳಿಯಲಿ ಬೀಳುವಿರಲ್ಲ ||೧|| ಗುರುಗಳ ಸೇವೆ ಮಾಡುವಿರಲ್ಲ ಗುರುತಾಗಲಿಲ್ಲ | ಪರಿ ಪರಿ ದೇಶವ ತಿರುಗುವಿರಲ್ಲ ಪೊರೆಯುವರಿನ್ನಿಲ್ಲ | ಅರಿವೊಂದರಿಯದೆ ಆಗಮ ತಿಳಿಯದೆ | ನರಕ ಕೂಪದಲಿ ಬೀಳುವಿರಲ್ಲ ||೨|| ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ ಹಮ್ಮು ಬಿಡಲಿಲ್ಲ | ಸುಮ್ಮನೆ ಯಾಗವ ಮಾಡುವಿರಲ್ಲ ಸುಳ್ಳನು ಬಿಡಲಿಲ್ಲ | ಗಮ್ಮನೆ ಪುರಂದರ ವಿಠಲನ ಪಾದಕೆ | ಹೆಮ್ಮೆ ಬಿಟ್ಟು ನೀವೆರಗಲೇ ಇಲ್ಲ ||೩|| ellAnu balleneMbuviralla | avaguNa biDalilla ||pa||   sollige SaraNara kathegaLa pELuta | allada nuDiyanu nuDiyuviralla ||apa||   kAviyanuTTu tiruguviralla kAmava biDalilla | nEmaniShThegaLa mADuviralla tAmasa biDalilla || tAvoMdariyade pararanu tiLiyade | svAnana kuLiyali bILuviralla ||1||   gurugaLa sEve mADuviralla gurutAgalilla | pari pari dESava tir...

ಕೈಲಾಸದಾಸೆ ಎಲ್ಲಿಹುದೋ | ಹಯವದನ | Kailasadaase Ellihudo | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕೈಲಾಸದಾಸೆ ಎಲ್ಲಿಹುದೋ  ಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ ||ಪ|| ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆ  ವರಧರ್ಮ ಪಥವ ಮರೆದವಗೆ  ದುರುಳರನೆ ಪೊರೆದು ಪರಸತಿಯನೆರೆದವಗೆ ||೧|| ದೀನಜನರೊಡನಾಡಿ ಹೀನಕರ್ಮವಮಾಡಿ  ಆನೆಂಬ ಮಮತೆಯನೆ ಕೂಡಿ  ದಾನವನೆ ಬೇಡಿ ದುರ್ದಾನಕೆ ಮರುಳಹಗೆ ||೨|| ಅನಾಚಾರಂಗಳಬಿಡದೆ ಮನೆಗೆ ಬಂದರು ಕೊಡದೆ  ಧನದ ಗಂಟುಗಳನು ಕಡಿಯದೆ  ಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ ||೩|| ವಾದಿರಾಜನ ನುಡಿಯ ಹಿತವೆಂದು ಲಾಲಿಸದೆ  ಕ್ರೋಧಮಯನಾಗಿ ದೂಷಿಪಗೆ  ಪಾದಕೆರಗದೆ ಜನನಿಯನು ಆದರಿಸದವಗೆ ||೪|| ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದು  ದಯವುಳ್ಳವರ ದೈವವೆನದೆ ಈ  ಸ್ವಯಂಭು ಲಿಂಗದ ಕಲ್ಲೇ ದೈವವು ಎಂಬುವಗೆ||೫|| kailAsadAse ellihudO  shailEMdra suteyarasa Sivana olavilladavage ||pa|| guruhiriyarariyadage paragatiya toredavage  varadharma pathava maredavage  duruLarane poredu parasatiyaneredavage ||1|| dInajanaroDanADi hInakarmavamADi  AneMba mamateyane kUDi  dAnavane bEDi durdAnake maruLahage ||2|| anAcAraMgaLabiDade manege baMdaru koDade  d...

ಜಯ ನಾರಸಿಂಹ ಕಾಯೋ | ಗೋಪಾಲ ವಿಠಲ | Jaya Narasimha Kayo | Gopala Vithala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಜಯ ನಾರಸಿಂಹ ಕಾಯೋ ಶ್ರೀ ನಾರಸಿಂಹ ||ಪ|| ಜಯ ನಾರಸಿಂಹ ಕಾಯೋ ತ್ರಯಂಬಕಾದ್ಯಮರೇಶ  ಭಯಾಂಧತಿಮಿರ ಮಾರ್ತಾಂಡ ಶ್ರೀ ನಾರಸಿಂಹ ||ಅಪ|| ಘೋರ ಅಕಾಲ ಮೃತ್ಯು ಮೀರಿ ಬರಲು ಕಂಡು | ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ||೧|| ಭೀಷಣನೆ ಸುಭದ್ರ ಮೇಷ ಮೃತ್ಯುಗೆ ಮೃತ್ಯು | ಸುಷುಮ್ನ ನಾಡಿ ಸ್ಥಿತ ವಿಭುವೆ ಶ್ರೀ ನಾರಸಿಂಹ ||೨|| ಜ್ಞಾನ ರಹಿತನಾಗಿ ನಾ ನಿನ್ನ ಮರೆತರೆ  ನೀನು ಮರೆತದ್ದೇಕೆ ಪೇಳೋ ಶ್ರೀ ನಾರಸಿಂಹ ||೩|| ಪ್ರಭಲೋತ್ತಮ ನೆನಿಸಿ ಅಬಲರ ಕಾಯದಿರೆ | ಸಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ||೪|| ಪಾಲ ಮುನ್ನಿರಾಗರ ಪದುಮೆ ಮನೋಹರ  ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ||೫|| jaya nArasiMha kAyO SrI nArasiMha ||pa||   jaya nArasiMha kAyO trayaMbakAdyamarESa  BayAMdhatimira mArtAMDa SrI nArasiMha ||apa||   GOra akAla mRutyu mIri baralu kaMDu | dhIra nI biDisadinyArO SrI nArasiMha ||1||   BIShaNane suBadra mESha mRutyuge mRutyu | suShumna nADi sthita viBuve SrI nArasiMha ||2||   j~jAna rahitanAgi nA ninna maretare  nInu maretaddEke pELO SrI nArasiMha ||3||   praBalOtt...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru