ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತೋರೇ ಬೇಗನೆ ತೋಯಜ ನಯನೆ | ಶ್ರೀಕೃಷ್ಣ | Tore Begane Toyaja Nayane | Sri Vyasarajaru


ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ತೋರೇ ಬೇಗನೆ ತೋಯಜ ನಯನೆ ಮದವಾರಣ ಗಮನೆ ||ಪ||

ಮಾರನ ತಾಪವ ಸೈರಿಸಲಾರೆನೆ ನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ||ಅಪ||

ನೀರೊಳು ಮುಳು ಮುಳುಗಾಡುತ ಬಂದು ಮಥಿಸಿದ ಪಯಸ್ಸಿಂಧು ಮದಿಸಿದ ಪಯಸಿಂಧು 
ಧಾರುಣಿ ಚಿಮ್ಮಿ ಮೇಲಕೆ ತಂದು ದನುಜನ ಕೊಂದು ಧನುಜನ 
ಮೂರು ಪಾದವ ಬೇಡುತ ನಿಂದು ಮುನಿಕುಲದಲಿ ಬಂದು
ನಾರಿಯ ಬಿಟ್ಟು ಪರನಾರಿಯರಾಳಿದ ತೋರಿ ಬತ್ತಲೆ ಹಯವೇರಿ ಮೆರೆದನ ||೧||

ಕತ್ತಲೆಯೊಡನೆ ಕಾದಿದ ಧೀರ ನೆಗಹಿದ ಮಂದರ 
ಕಿತ್ತು ಮಣ್ಣಗೆದು ಮೆದ್ದನು ಬೇರ ದಾನವ ಸಂಹಾರ 
ಒತ್ತಿದ ಬಲಿಯನು ಕಾಯ್ದನು ಶೂರ ಕುಜನ ಕುಠಾರ 
ಹತ್ತು ಶಿರನ ಕತ್ತರಿಸಿ ಗೋಕುಲದೊಳು ಬತ್ತಲೆ ರಾವುತನಾಗಿ ಮೆರೆದನಾ ||೨||

ನಿಗಮ ಕದ್ದವನ ನೀಗಿದ ದಿಟ್ಟ ನೆಗಹಿದ ಘನಬೆಟ್ಟ 
ಮಿಗಿಲೊಯಿದು ಸ್ವಾಹ, ಸ್ಥಳದೊಳಿಟ್ಟ ಘುಡುಘುಡಿಸುವ ದಿಟ್ಟ 
ಜಗಕ್ಕೆಲ್ಲ ನೋಡೆ ಎರಡಡಿ ಇಟ್ಟ ಕೊಡಲಿಯ ಪೆಟ್ಟ 
ಮೃಗವ ಕೆಡಹಿ ಕುಂತಿ ಮಗಗೆ ಸಾರಥಿಯಾಗಿ ಜಗವ ಮೋಹಿಸಿ ಹಯವನು ಏರಿದ ಸಿರಿ ಕೃಷ್ಣನ ||೩||

tOrE bEgane tOyaja nayane madavAraNa gamane ||pa||

mArana tApava sairisalArene nIre ninage muttinhArava koDuvene ||apa||

nIroLu muLu muLugADuta baMdu mathisida payassiMdhu
dhAruNi cimmi mElake taMdu danujana koMdu
mUru pAdava bEDuta niMdu munikuladali baMdu 
nAriya biTTu paranAriyarALida tOri battale hayavEri meredana ||1||

kattaleyoDane kAdida dhIra negahida maMdara 
kittu maNNagedu meddanu bEra dAnava saMhAra 
ottida baliyanu kAydanu SUra kujana kuThAra 
hattu Sirana kattarisi gOkuladoLu battale rAvutanAgi meredanA ||2||

nigama kaddavana nIgida diTTa negahida GanabeTTa 
migiloyidu svAha, sthaLadoLiTTa GuDuGuDisuva diTTa 
jagakkella nODe eraDaDi iTTa koDaliya peTTa 
mRugava keDahi kuMti magage sArathiyAgi 
jagava mOhisi hayavanu Erida siri kRuShNana ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru