ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇಂದಿರೆ ಮಂದಿರದೊಳು ನಿಂದಿರೆ | ಹಯವದನ | Indire Mandiradolu Nindire | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಇಂದಿರೆ ಮಂದಿರದೊಳು ನಿಂದಿರೆ ಇಂದಿರೇ ನೀ ನಿಂದಿರೆ ||ಪ||

ಇಂದಿರೆ ಹೊಂದಿದೆ ನಿನ್ನ ಮುದದಿಂದ ಪಾಲಿಸು ನಿತ್ಯ ಎನ್ನ ಆಹಾ
ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ || ಅಪ ||

ಘಲು ಘಲು ಗೆಜ್ಜೆಯ ನಾದದಿಂದ ಫಳಫಳಿಸುವ ದಿವ್ಯ ಪಾದದೊಳು
ಪಿಲ್ಲೆ ಕಾಲುಂಗುರನಾದ ಅಂಘ್ರಿ ಚಲಿಸುವ ದಿವ್ಯ ಸುಸ್ವಾದ  
ಆಹಾ, ಕಾಲಂದಿಗೆ ಗೆಜ್ಜೆ ಝಳಪಿಸುತ ನಮ್ಮಾಲಯದೊಳು ನಿಲ್ಲೆ ಪಾಲವಾರಿಧಿ ಕನ್ನೆ ||೧||

ಹರಡಿ ಕಂಕಣ ವಂಕಿ ಡೋರ್ಯಾ ಕೊರಳೊಳಗೆ ನಾನಾ ವಿಧದ ಹಾರ
ಬಾಯಲಿ ಕರ್ಪೂರ ವೀಳ್ಯ ಸಾರೆ ಸುರಭಿ ನಾಸಿಕ ಚಂಪಕ ಪುಷ್ಪದ ಹಾರ  
ಆಹಾ, ಎರಳೆ ಗಂಗಳೆಸಿರಿ ಅರಳೆಲೆ ಕುಂಕುಮ ಹೆರಳಗೊಂಡೆಗಳಿಂದ ಹರಿಯ ಮೋದಿಸುವೆ ||೨||

ಜಯ ಜಯ ವಿಜಯ ಸಂಪೂರ್ಣೆ ಭಕ್ತಭಯ ನಿವಾರಣೆ ಎಣೆಗಾಣೆ 
ಎನ್ನ ಕಾಯುವರನ್ಯರ ಕಾಣೆ ಶೇಷ ಶಯನನ ತೋರೆ ಸುಶ್ರೇಣೆ   
ಆಹಾ, ಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿ ಹಯವದನನ, ದಯವ ಪಾಲಿಸೆ ಲಕ್ಷ್ಮೀ ||೩||

iMdire maMdiradoLu niMdire iMdirE nI niMdire ||pa||

iMdire hoMdide ninna mudadiMda pAlisu nitya enna AhA
gaMdha tuLasi araviMda mallige puShpadiMda pUjisuvenu kuMdugaLeNisade || apa ||
 
Galu Galu gejjeya nAdadiMda phaLaphaLisuva divya pAdadoLu
pille kAluMguranAda aMGri calisuva divya susvAda  
AhA, kAlaMdige gejje JaLapisuta nammAlayadoLu nille pAlavAridhi kanne ||1||
 
haraDi kaMkaNa vaMki DOryA koraLoLage nAnA vidhada hAra
bAyali karpUra vILya sAre suraBi nAsika caMpaka puShpada hAra  
AhA, eraLe gaMgaLesiri araLele kuMkuma heraLagoMDegaLiMda hariya mOdisuve ||2||
 
jaya jaya vijaya saMpUrNe Baktabhaya nivAraNe eNegANe 
enna kAyuvaranyara kANe SESha Sayanana tOre suSrENe  
AhA, kaiya piDidu BavaBayava pariharise siri hayavadanana, dayava pAlise lakShmI ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru