ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದಿತಿಜರಿಗೆದುರಾಂತ ಕೃತಾಂತ | ಹಯವದನ | Ditijarigeduranta krutanta |Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ದಿತಿಜರಿಗೆದುರಾಂತ ಕೃತಾಂತ
ಗತಿ ನೀ ನಮಗೆ ಗುಣವಂತ ಹನುಮಂತ || ಪ ||

ಕೇಸರಿತನಯ ದಕ್ಷಿಣಗಾಗಿ ಬಂದೆ 
ವರುಷಗಳಿಂದಲಿ ಬಲುಗಿರಿಯನು ತಂದೆ
ಈಶ ರಘುಪತಿ ಸೇವೆ ಘನವಾಗಿ ನಿಂದೆ
ಅಸುರ ರಾವಣನ ಸರ್ವ ಸೈನ್ಯವ ಕೊಂದೆ || ೧ ||

ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆ
ಕುಬುದ್ಧಿ ರಾವಣನ ಪುರವ ಸೂರೆಗೊಂಡೆ
ವಿಬುಧರ ಸ್ನೇಹವ ಮಾಡಿದೆ ಬಲುಗಂಡೆ
ಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ || ೨ ||

ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ
ಅಪ್ರಿಯವಾದ ಭವತರುವಿನ ಬೇರ ಕಿತ್ತೆ
ಭಯವ ಖಂಡಿಸಿ ನಮಗಭಯವನಿತ್ತೆ
ಜಯಜಯ ಪ್ರಾಣನಾಥ ನಮೋ ನಮಸ್ತೆ || ೩ ||

ditijarigeduraaMta kRutaaMta
gati nI namage guNavaMta hanumaMta || pa ||

kEsaritanaya dakShiNagaagi baMde 
varuShagaLiMdali balugiriyanu taMde
Isha raghupati sEve ghanavaagi niMde
asura raavaNana sarva sainyava koMde || 1 ||

aMbudhiya daaMTi sIteya rUpa kaMDe
kubuddhi raavaNana purava sUregoMDe
vibudhara snEhava maaDide balugaMDe
prabuddharaMdadi puNyaPalarasa uMDe || 2 ||

hayavadanana kRupe priya hUDi potte
apriyavaada bhavataruvina bEra kitte
bhayava KaMDisi namagabhayavanitte
jayajaya praaNanaatha namO namaste || 3 ||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru