ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬೇಗ ಬಾರೋ ಬೇಗ ಬಾರೋ | ಹಯವದನ | Bega Baaro Bega Baaro | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಬೇಗ ಬಾರೋ ಬೇಗ ಬಾರೋ ನೀಲ ಮೇಘ ವರ್ಣ |ಪ|
ಬೇಗ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ |ಅಪ| 

ಇಂದಿರ ರಮಣ ಗೋವಿಂದ ಬೇಗ ಬಾರೋ|
ನಂದನಕಂದ ಮುಕುಂದ ಬೇಗ ಬಾರೋ |೧|

ಧೀರ ಉದಾರ ಗಂಭೀರ ಬೇಗ ಬಾರೋ|
ಹಾರಾಲಂಕಾರ ರಘುವೀರ ಬೇಗ ಬಾರೋ |೨|

ಋದ್ಧ ಅನಿರುದ್ಧ ನಿರವದ್ಯಾ ಬೇಗ ಬಾರೋ|
ಹದ್ದನೇರಿದ್ದ ಸುಪ್ರಸಿದ್ಧ ಬೇಗ ಬಾರೋ|೩|

ರಂಗ ಉತ್ತುಂಗ ನರಸಿಂಗ ಬೇಗ ಬಾರೋ|
ಮಂಗಳ ಮಹಿಮ ಶುಭಾಂಗ ಬೇಗ ಬಾರೋ |೪|

ಅಯ್ಯ ವಿಜಯ ಸಹಾಯ ಬೇಗ ಬಾರೋ|
ಅಹ್ಯಾದ್ರಿವಾಸ ಹಯವದನ ಬೇಗ ಬಾರೋ |೫|

bEga bArO bEga bArO nIla mEGa varNa |pa|
bEga bArO bEga bArO vElApurada cenna |apa| 
 
iMdira ramaNa gOviMda bEga bArO|
naMdanakaMda mukuMda bEga bArO |1|
 
dhIra udAra gaMBIra bEga bArO|
hArAlaMkAra raGuvIra bEga bArO |2|
 
Ruddha aniruddha niravadyA bEga bArO|
haddanEridda suprasiddha bEga bArO|3|
 
raMga uttuMga narasiMga bEga bArO|
maMgaLa mahima SuBAMga bEga bArO |4|
 
ayya vijaya sahAya bEga bArO|
ahyaadrivAsa hayavadana bEga bArO |5|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru