ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನೆ ಬರುತ್ತಿದಿಕೋ-ವ್ಯಾಸರಾಜ | ಹಯವದನ | Aane Baruttidiko Vyasaraja | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಆನೆ ಬರುತ್ತಿದಿಕೋ-ವ್ಯಾಸರಾಜರೆಂ-
ಬಾನೆ ಬರುತ್ತಿದೆಕೋ ||ಪ||

ಮದವೇರಿ ಹದಮೀರಿ ಮದನಾರಿ ತಾನೆಂಬ
ಅಧಮರ ಎದೆಮೆಟ್ಟಿ ಸೀಳಲು ||ಅಪ||

ಮರುತಮತ ನಿರಂತರ ಚರಣದ ಧೂಳಿ
ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ್ತ ||೧||

ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ
ಅದ್ವೈತಿಗಳ ಬುದ್ಧಿಮಡುವನ್ನೆ ಕಲಕುತ್ತ ||೨||

ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-
ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ ||೩||

ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು
ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ ||೪||

ಮುರಿಯಲು ದುರುಳನ ಗರುವವನೆ ಮುನ್ನ
ಸಿರಿಹಯವದನನ ಅರಮನೆ ಪಟ್ಟದ ||೫||

aane baruttidikO-vyaasaraajareM
baane baruttidekO ||pa||

madavEri hadamIri madanaari taaneMba
adhamara edemeTTi sILalu ||apa||

marutamata niraMtara charaNada dhULi
karadali piDidu shirada mEle chellutta ||1||

iddu jagavilleMba shuddhamUrkhateyuLLa
adwaitigaLa buddhimaDuvanne kalakutta ||2||

jagake karta naaneMdu bogaLikoMbuva naa-
yigaLa karadali piDidu mogada mEluguLutta ||3||

madhwamunIMdrara shuddhatIrthadi miMdu
tiddida naama shrImudre shRuMgaaradi ||4||

muriyalu duruLana garuvavane munna
sirihayavadanana aramane paTTada ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru