ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪದುಮನಾಭನೆ ನಿನ್ನ | ಹೆಳವನಕಟ್ಟೆ ರಂಗ | Padumanabhane Ninna | Sri Helavanakatte Giriyamma


ಸಾಹಿತ್ಯ :   ಶ್ರೀ ಹೆಳವನಕಟ್ಟೆ ಗಿರಿಯಮ್ಮ (ಹೆಳವನಕಟ್ಟೆ ರಂಗ)
Kruti: Sri Helavanakatte Giriyamma (Helavanakatte Ranga)


ಪದುಮನಾಭನೆ ನಿನ್ನ ಪಾದಕಿಂಕರನನ್ನು 
ಕೈಬಿಡುವುದು ಉಚಿತವೇ ರಂಗಾ ||ಪ||

ಮುದದಿಂದ ನಿನ್ನ ಪಾದಕ್ಕೆರಗುವೆ ನಾನು 
ತ್ವರಿತದಿ ನೀಕಾಯೋ ಎನ್ನೊಡೆಯ ರಂಗಾ ||೧||

ಅಜಗರಶಯನನೆ ಬುಧಜನ ನಮಿತನೆ 
ತ್ರಿಜಗವಂದಿತ ಪಾದ ಪದುಮಜನಕನೆ||೨||

ಶಿಶು ಅವತಾರದಿ ಪಶುಗಳ ಸಲಹಿದೆ 
ಶಶಿಭೂಷಣ ಸಖ ಶಿಶುವ ಕಾಪಾಡೊ||೩||

ಸಾಂದೀಪನಿಗೊಲಿದೆ ಸಂದೇಹವಿಲ್ಲದೆ 
ತಂದೆ ಹೆಳವನಕಟ್ಟೆ ರಂಗಾ ಕೃಪಾಂಗ||೪||

padumanABane ninna pAdakiMkaranannu 
kaibiDuvudu ucitavE raMgA ||pa||

mudadiMda ninna pAdakkeraguve nAnu 
tvaritadi nIkAyO ennoDeya raMgA ||1||

ajagaraSayanane budhajana namitane 
trijagavaMdita pAda padumajanakane||2||

SiSu avatAradi paSugaLa salahide 
SaSiBUShaNa saKa SiSuva kApADo||3||

sAMdIpanigolide saMdEhavillade 
taMde heLavanakaTTe raMgA kRupAMga||4||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru