ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಜರ ಭಾಗ್ಯವಿದೂ ಸೋದೆ | ಶ್ರೀದವಿಠಲ | Rajara Bhagyavidu Sode | Srida Vithala


ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು
Kruti: Sri Srida Vittala Dasaru


ರಾಜರ ಭಾಗ್ಯವಿದೂ, ಸೋದೆ ರಾಜರ ಭಾಗ್ಯವಿದು|| 
ಸೋಜಿಗವೆನಿಸಿ ವಿರಾಜಿಸುತಿದಕೋ||ಅಪ||

ಬುಧಜನಕೊಪ್ಪುವ ಪದಸುಳಾದಿಗಳ ಎದುರದೆ ಬಿಚ್ಚಿಸುವ ಚತುರತೆಯೂ|| 
ಸದಮಲ ನಾನಾ ವಿಧ ಗ್ರಂಥದಿ ಹಯವದನನ ಪೂಜಿಸುವುದೆಲ್ಲಾ ||೧||

ತಮ್ಮಯನೇಮವು ಒಮ್ಮೆಗೆ ಬಿಡದಲೆ ಸಮ್ಮಯ ಬಿಡದಲೆ ಸಮ್ಮೊಗದಾ|| 
ಹಮ್ಮಹತಾಸಖಿ ಬೊಮ್ಮಭೂತವನು ಗಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ ||೨||

ಮೇದಿನಿಯೊಳಗೆ ಶುಭೋದಯಕಾರಕ ಸ್ವಾದೀಸ್ಥಳವು ಸರ್ವಾಧಿಕವೈ|| 
ಪಾದದ್ವಯದ ಅಗಾಧ ಮಹಿಮೆಯನ್ನು ಶ್ರೀದವಿಠಲನಾರಾಧನೆಯಲ್ಲದೆ ||೩||

rAjara BAgyavidU, sOde rAjara BAgyavidu|| 
sOjigavenisi virAjisutidakO||apa||

budhajanakoppuva padasuLAdigaLa edurade biccisuva caturateyU|| 
sadamala nAnA vidha graMthadi hayavadanana pUjisuvudellA ||1||

tammayanEmavu ommege biDadale sammaya biDadale sammogadA|| 
hammahatAsaKi bommaBUtavanu gammane nirmisi rammipudella||2||

mEdiniyoLage SuBOdayakAraka svAdIsthaLavu sarvAdhikavai|| 
pAdadvayada agAdha mahimeyannu SrIdaviThalanArAdhaneyallade||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru