ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹೆತ್ತ ತಾಯಿ ತಂದೆಗಳ | ಪುರಂದರವಿಠಲ | Hetta Tayi Tande | Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು ||ಪ||

ಸತ್ಯ ಸದಾಚಾರ ಇಲ್ಲದವನು ಜಪವ ಹತ್ತು ಸಾವಿರ ಮಾಡಿ ಫಲವೇನು ||ಅಪ||

ತನ್ನ ಸತಿ ಸುತರು ಬಂಧುಗಳ ನೋಯಿಸಿ |
ಚಿನ್ನದಾನವ ಮಾಡಿ ಫಲವೇನು ||
ಬಿನ್ನಾಣದಿಂದಲಿ ದೇಶದೇಶವ ತಿರುಗಿ 
ಅನ್ನ ದಾನವ ಮಾಡಿ ಫಲವೇನು ||೧||

ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ 
ರೂಪ ಯೌವನವಿತ್ತು ಫಲವೇನು ||
ತಾಪತ್ರಯದ ಸಂಸಾರ ಕೆಡಿಸುವಂಥ |
ಪಾಪಿ ಮಗನು ಇದ್ದು ಫಲವೇನು ||೨||

ತಾಂಡವ ಧನದಿಂದ ತಂದೆ ಮಾತು ಕೇಳದ |
ತುಂಟ ಮಗನು ಇದ್ದು ಫಲವೇನು ||
ಬಂಡು ಮಾಡಿ ಅತ್ತೆ ಮಾವನ ಬಯ್ಯುವ |
ತುಂಡು ಸೊಸೆಯು ಇದ್ದು ಫಲವೇನು ||೩||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು 
ಕಾನನದೊಳಗಿದ್ದು ಫಲವೇನು ||
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ತನು ಇದ್ದು ಫಲವೇನು ||೪||

hetta tAyi taMdegaLa cittava nOyisi
nitya dAnava mADi PalavEnu ||pa||
 
satya sadAcAra illadavanu japava hattu sAvira mADi PalavEnu ||apa||
 
tanna sati sutaru baMdhugaLa nOyisi |
cinnadAnava mADi PalavEnu ||
binnANadiMdali dESadESava tirugi 
anna dAnava mADi PalavEnu ||1||
 
gOpya guNa guTTu illada heNNige 
rUpa yauvanavittu PalavEnu ||
tApatrayada saMsAra keDisuvaMtha |
pApi maganu iddu PalavEnu ||2||
 
tAMDava dhanadiMda taMde mAtu kELada |
tuMTa maganu iddu PalavEnu ||
baMDu mADi atte mAvana bayyuva |
tuMDu soseyu iddu PalavEnu ||3||
 
snAnakke pAnakke Aguva tiLi nIru 
kAnanadoLagiddu PalavEnu ||
AnaMda mUruti puraMdara viThalana
neneyada tanu iddu PalavEnu ||4||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru