ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಹುದೊ ಹನುಮಂತ | ಹಯವದನ | Ahudo Hanumantha | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಅಹುದೊ ಹನುಮಂತ ನೀನಹುದೊ ಬಲವಂತ 
ನೀನಹುದೊ ಮುಖ್ಯಪ್ರಾಣ ಮೂಲಗುರು ಅಹುದೊ || ಪ ||

ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ
ಅಹುದೊ ಮಧ್ವಮತಕೆ ಬಿರುದು ನೀ ಅಹುದೊ || ಅಪ ||

ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ
ಮಂಜುಭಾಷಣ ನೀನು ಶರಧಿಯನು ದಾಟಿದೆಯೊ
ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ || ೧ ||

ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಪಂಥವನಾಡಿ ದಾಯಾದ್ಯರೊಡನೆ
ಕಂತುಪಿತನ ಕೂಡಿ ಕೌರವರ ಗೆಲಿದ್ಯೊ
ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ || ೨ ||

ಮಧ್ವಾವತಾರದಲಿ ಮುನಿವೇಷವನು ತಾಳಿ
ಅದ್ವೈತವೆಂಬೊ ಅರಣ್ಯವನು ತರಿದೆ
ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ
ಮುದ್ದು ಹಯವದನನ ದಾಸ ನೀನಹುದೊ || ೩ ||

ahudo hanumaMta nInahudo balavaMta 
nInahudo muKyapraaNa mUlaguru ahudo || pa ||

ahudo dharaNiya myaale divaakarana prabheyaMte
ahudo madhvamatake birudu nI ahudo || apa ||

aMjaneya garbhadali udbhavisidyo nInu
saMjIvanava taMdyo sakala kapigaLige
maMjubhaaShaNa nInu sharadhiyanu daaTideyo
kaMjaakShi sItege uMguravanitte || 1 ||

kuMtiya garbhadali udbhavisidyo nInu
paMthavanaaDi daayaadyaroDane
kaMtupitana kUDi kouravara gelidyo
saMtOShadiMda saamraajya kaigoMDe || 2 ||

madhvaavataaradali munivEShavanu taaLi
advaitaveMbo araNyavanu taride
madhvashaastraveMbo matava nirNaiside
muddu hayavadanana daasa nInahudo || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru