ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂಡೆ ನಾ ಕನಸಿನಲಿ | ಪುರಂದರ ವಿಠಲ | Kande na Kanasinali | Purandara Vithala


ಸಾಹಿತ್ಯ :  ಶ್ರೀ ಪುರಂದರ ದಾಸರು 
Kruti:    Sri Purandara dasaru


ಕಂಡೆ ನಾ ಕನಸಿನಲಿ ಗೋವಿಂದನ ||ಪ||
ಕಂಡೆನಾ ಕನಸಿನಲಿ ಕನಕ ರತ್ನದ 
ಖಣಿಯ ನಂದನ ಕಂದ ಮುಕುಂದನ ಚರಣವ ||ಅಪ||

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ |
ಬಂದು ಕಾಳಿಂಗನ ಹೆಡೆಯನೇರಿ ||
ಧಿಂ ಧಿಮಿ ಧಿಮಿಕೆಂದು ತಾಳಗತಿಗಳಿಂದಾ |
ಆನಂದದಿ ಕುಣಿವ ಮುಕುಂದನ ಚರಣವ ||೧||

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಧಾಮ |
ತೊಟ್ಟ ಮುತ್ತಿನ ಹಾರ ಕೌಸ್ತುಭವೋ ||
ಕಟ್ಟಿದ ವೈಜಯಂತಿ ತುಳಸಿ ವನಮಾಲೆ |
ಇಟ್ಟ ದ್ವಾದಶ ನಾಮ ನಿಗಮಗೋಚರನ ||೨||

ಕಿರುಬೆರಳಿನ ಮುದ್ರೆ ಉಂಗುರ ಮುಂಗೈಯ |
ಕರದಲ್ಲಿ ಕಂಕಣ ನಳಿ ತೋಳುಗಳ ||
ವರ ಚತುರ್ಭುಜ ಶಂಖಚಕ್ರದಿ ಮೆರೆವ |
ನಿರುತದಿ ಒಪ್ಪುವ ಕಾರುಣ್ಯ ಮೂರ್ತಿಯ ||೩||

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು |
ಸಣ್ಣ ನಗೆಯ ನುಡಿ ಸವಿಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟವ |
ಕಣ್ಣು ಮನದಣಿಯದು ಕಂಸಾರಿ ಕೃಷ್ಣನ ||೪||

ಮಂಗಳವರ ತುಂಗ ಭದ್ರದಿ ಮೆರೆವನ |
ಅಂಗಜಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರ ವಿಠಲನ |
ಕಂಗಳಿಂದಲಿ ಕಂಡೆ ಹಿಂಗಿತು ಭವ ಭಯ ||೫||

kaMDe nA kanasinali gOviMdana ||pa||
kaMDenA kanasinali kanaka ratnada 
KaNiya naMdana kaMda mukuMdana caraNava ||apa||

aMduge kirugejje GalireMba vAdyadi |
baMdu kALiMgana heDeyanEri ||
dhiM dhimi dhimikeMdu tALagatigaLiMdA |
AnaMdadi kuNiva mukuMdana caraNava ||1||

uTTa pItAMbara uDiya kAMciya dhAma |
toTTa muttina hAra kaustuBavO ||
kaTTida vaijayaMti tuLasi vanamAle |
iTTa dvAdaSa nAma nigamagOcarana ||2||

kiruberaLina mudre uMgura muMgaiya |
karadalli kaMkaNa naLi tOLugaLa ||
vara caturBuja SaMKacakradi mereva |
nirutadi oppuva kAruNya mUrtiya ||3||

baNNada tuTi BAva racaneya suLipallu |
saNNa nageya nuDi savimAtina ||
puNya caritrana poLeva kirITava |
kaNNu manadaNiyadu kaMsAri kRuShNana ||4||

maMgaLavara tuMga Badradi merevana |
aMgajapita SrI lakShmIpatiya ||
SRuMgAra mUruti puraMdara viThalana |
kaMgaLiMdali kaMDe hiMgitu Bava Baya ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru