ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎದ್ದು ನಿಂತ ಖಳರ ಕೃತಾಂತ | ಹಯವದನ | Eddu Ninta Khalara Krutanta |Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಎದ್ದು ನಿಂತ ಖಳರ ಕೃತಾಂತ ಎದ್ದು ನಿಂತ ||ಪ||
ಪೊಂದಿದವರ ಪೊರೆವ ಧವಳಗಂಗೆ ಹನುಮಂತ ||ಅಪ||

ಕಂಜಾಕ್ಷಿಯನು ಕಂಡು, ಕಪಟ ದಶಮುಖನ ಮದ 
ಭಂಜನವ ಮಾಳ್ಪೆನೆಂದೆದ್ದು ನಿಂತ ||
ಸಂಜೀವನವ ತಂದು ಕಪಿಗಳ ಕಾಯ್ದ, 
ಅಂಜನೆಯ ತನಯ ತಾನೆದ್ದು ನಿಂತ ||೧||

ಗುದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕ 
ಮರ್ದನ ಮಹಾ ಮಹಿಮನೆದ್ದು ನಿಂತ
ಯುದ್ಧದಲಿ ರಘುಪತಿಯ, ಹೊತ್ತು ಭಕುತಿಯ ತೋರ್ದ, 
ಶುದ್ಧ ಸ್ವಭಾವ ತಾನೆದ್ದು ನಿಂತ ||೨||

ರಾಗಗಳ ಮೇಳೈಸಿ ಹಯವದನನ ಒಲಿಸಿ, 
ಯೋಗಿಗಳ ಉದ್ಧರಿಸಲೆಂದೆದ್ದು ನಿಂತ ||
ಈಗ ಧರೆಯೊಳು ಸಜ್ಜನರ ಮನೋಭೀಷ್ಟಗಳ 
ವೇಗದಲಿ ಕೊಡುವೆನೆಂದೆದ್ದು ನಿಂತ ||೩||

eddu niMta KaLara kRutAMta eddu niMta ||pa||
poMdidavara poreva dhavaLagaMge hanumaMta ||apa||
 
kaMjAkShiyanu kaMDu, kapaTa daSamuKana mada 
BaMjanava mALpeneMdeddu niMta ||
saMjIvanava taMdu kapigaLa kAyda, 
aMjaneya tanaya tAneddu niMta ||1||
 
guddi raavaNana dhareyoLu keDahi arikaTaka 
mardana mahaa mahimaneddu niMta
yuddhadali raGupatiya, hottu Bakutiya tOrda, 
Suddha svaBAva tAneddu niMta ||2||
 
rAgagaLa mELaisi hayavadanana olisi, 
yOgigaLa uddharisaleMdeddu niMta ||
Iga dhareyoLu sajjanara manOBIShTagaLa 
vEgadali koDuveneMdeddu niMta ||3||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru