Posts

Showing posts from April, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರಿಚಿತ್ತ ಸತ್ಯ | ಪುರಂದರ ವಿಠ್ಠಲ | Hari chitta Sathya | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ  ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ||ಪ|| ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ ಮದುವ್ಯಾಗದಿರುವುದು ಹರಿ ಚಿತ್ತವಯ್ಯ   ಕುದುರೆ ಅಂದಣ ಆನೆ ಬಯಸೋದು ನರ ಚಿತ್ತ  ಪದಚಾರಿಯಾಗೋದು ಹರಿಚಿತ್ತವಯ್ಯ ||೧|| ವಿಧ ವಿಧ ಯಾತ್ರೆಯ ಬಯಸೋದು ನರ ಚಿತ್ತ ಒದಗಿ ಬರುವ ರೋಗ ಹರಿ ಚಿತ್ತವಯ್ಯ ಸದಾ ಅನ್ನದಾನವ ಬಯಸೋದು ನರ ಚಿತ್ತ ಉದರಕೆ ಅಳುವುದು ಹರಿಚಿತ್ತವಯ್ಯ ||೨|| ಧರಣಿಯನಾಳಬೇಕೆಂಬುದು ನರ ಚಿತ್ತ ಪರರ ಸೇವಿಸುವುದು ಹರಿಚಿತ್ತವಯ್ಯ ಪುರಂದರ ವಿಠ್ಠಲನ ಬಯಸೋದು ನರ ಚಿತ್ತ ದುರಿತವ ಕಳೆವುದು ಹರಿಚಿತ್ತವಯ್ಯ ||೩|| harichitta satya namma harichitta satya  nara chittakke baMdaddu lavalESa naDeyadu ||pa||   sudati makkaLa BAgya bayasOdu nara chitta maduvyAgadiruvudu hari chittavayya   kudure aMdaNa Ane bayasOdu nara chitta  padacAriyAgOdu harichittavayya ||1||   vidha vidha yaatreya bayasOdu nara chitta odagi baruva rOga hari chittavayya sadA annadAnava bayasOdu nara chitta udarake aLuvudu harichittavayya ||2||   dhar...

ನಮೋ ನಮೋ ವೆಂಕಟೇಶ | ಗುರು ಮಹಿಪತಿ | Namo Namo Venkatesha | Guru Mahipati Dasaru

Image
ಸಾಹಿತ್ಯ :    ಶ್ರೀ ಗುರು ಮಹಿಪತಿ ದಾಸರು Kruti: Sri Guru Mahipati Dasaru ನಮೋ ನಮೋ ವೆಂಕಟೇಶ ನಮೋ ನಮೋ ವೆಂಕಟೇಶ   ನಮೋ ನಮೋ ವೆಂಕಟೇಶ ನಮೋ ನಮೋ ವೆಂಕಟೇಶ | |ಪ||     ವೈಕುಂಠ ಮಂದಿರಾ ಶೇಷಾಚಲದಲಿ ಬೇಕೆಂದು ಮಾಡಿದೆ ನೆಲೆವಾಸ ||೧||    ಶ್ರೀದೇವಿ ಸಂಗಡ ಸ್ವಾಮಿ ಪುಷ್ಕರಣಿ ತೀರದಿ ಮೋದದಿ ಕ್ರೀಡಿಪ ವಿಲಾಸ ||೨||    ಗುರು ಮಹಿಪತಿ ಪ್ರಭು ಚರಣ ನಂಬಿದವರ ಧರೆಯೊಳು ಪೂರೈಸು ಮನದಾಶ ||೩||  namO namO veMkaTESa namO namO veMkaTESa   namO namO veMkaTESa namO namO veMkaTESa ||pa||     vaikuMTha maMdirA SEShAcaladali bEkeMdu mADide nelevAsa ||1||    SrIdEvi saMgaDa svAmi puShkaraNi tIradi mOdadi krIDipa vilAsa ||2||    guru mahipati praBu caraNa naMbidavara dhareyoLu pUraisu manadASa ||3|| 

ಮುದ್ದು ರಾಮರ ಬಂಟ | ಹಯವದನ | Muddu Ramara Banta | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮುದ್ದು ರಾಮರ ಬಂಟ ಬುದ್ದಿಯುಳ್ಳ ಹನುಮಂತ ಮುದ್ದು ರಾಮರ ಬಂಟ ಬುದ್ದಿಯುಳ್ಳ ಹನುಮಂತ  ಹದ್ದಾಗಿ ಹಾರಿದನೆ ಆಕಾಶಕೆ  ನಿದ್ರೆಗೈವ ಸಮಯದಲ್ಲಿ ಎದ್ದು ಬಾರೆಂದರೆ  ಅಲ್ಲಿದ್ದ ರಕ್ಕಸರ ಗೆಲಿದಾತನೆ ||೧|| ದಾರಿ ದೂರವೆಂದು ದಾರಿಯನೆ ನಿರ್ಮಿಸಿದ  ಧೀರ ರಾಮರ ಬಂಟ ಹನುಮಂತನೆ ನೋಡಿ ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿ  ಮರನೇರಿಕೊಂಡಾತನೆ ||೨|| ಆತನ ಮಾತಿಗೆ ಸೇತುವೆಯ ಕಟ್ಟಿಸಿದ  ಸೀತಾರಾಮರ ಬಂಟ ಹನುಮಂತನೆ ಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದ  ಮುಖ್ಯಪ್ರಾಣ ಹಯವದನನ ದೂತನೆ ||೩|| muddu raamara baMTa buddiyuLLa hanumaMta muddu raamara baMTa buddiyuLLa hanumaMta  haddaagi haaridane Akaashake  nidregaiva samayadalli eddu baareMdare a llidda rakkasara gelidaatane ||1|| daari dUraveMdu daariyane nirmisida  dhIra raamara baMTa hanumaMtane nODi baareMdare pOgi laMkeya suTTu bEgadali  maranErikoMDaatane ||2|| Atana maatige sEtuveya kaTTisida  sItaaraamara baMTa hanumaMtane sItaadEvammanige prItiya baMTanaada  mukhyapraaNa hayavadanana dUtane ||3||

ಎದ್ದು ನಿಂತ ಖಳರ ಕೃತಾಂತ | ಹಯವದನ | Eddu Ninta Khalara Krutanta |Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎದ್ದು ನಿಂತ ಖಳರ ಕೃತಾಂತ ಎದ್ದು ನಿಂತ ||ಪ|| ಪೊಂದಿದವರ ಪೊರೆವ ಧವಳಗಂಗೆ ಹನುಮಂತ ||ಅಪ|| ಕಂಜಾಕ್ಷಿಯನು ಕಂಡು, ಕಪಟ ದಶಮುಖನ ಮದ  ಭಂಜನವ ಮಾಳ್ಪೆನೆಂದೆದ್ದು ನಿಂತ || ಸಂಜೀವನವ ತಂದು ಕಪಿಗಳ ಕಾಯ್ದ,  ಅಂಜನೆಯ ತನಯ ತಾನೆದ್ದು ನಿಂತ ||೧|| ಗುದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕ  ಮರ್ದನ ಮಹಾ ಮಹಿಮನೆದ್ದು ನಿಂತ ಯುದ್ಧದಲಿ ರಘುಪತಿಯ, ಹೊತ್ತು ಭಕುತಿಯ ತೋರ್ದ,  ಶುದ್ಧ ಸ್ವಭಾವ ತಾನೆದ್ದು ನಿಂತ ||೨|| ರಾಗಗಳ ಮೇಳೈಸಿ ಹಯವದನನ ಒಲಿಸಿ,  ಯೋಗಿಗಳ ಉದ್ಧರಿಸಲೆಂದೆದ್ದು ನಿಂತ || ಈಗ ಧರೆಯೊಳು ಸಜ್ಜನರ ಮನೋಭೀಷ್ಟಗಳ  ವೇಗದಲಿ ಕೊಡುವೆನೆಂದೆದ್ದು ನಿಂತ ||೩|| eddu niMta KaLara kRutAMta eddu niMta ||pa|| poMdidavara poreva dhavaLagaMge hanumaMta ||apa||   kaMjAkShiyanu kaMDu, kapaTa daSamuKana mada  BaMjanava mALpeneMdeddu niMta || saMjIvanava taMdu kapigaLa kAyda,  aMjaneya tanaya tAneddu niMta ||1||   guddi raavaNana dhareyoLu keDahi arikaTaka  mardana mahaa mahimaneddu niMta yuddhadali raGupatiya, hottu Bakutiya tOrda,  Suddha svaBAva tAneddu niMta ||2||   rAgagaL...

ಪವಮಾನ ಜಗದ ಪ್ರಾಣ | ವಿಜಯ ವಿಠಲ | Pavamana Jagada Prana | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಪವಮಾನ ಜಗದ ಪ್ರಾಣ ಸಂಕರುಷಣ | ಭವಭಯಾರಣ್ಯಾ ದಹನಾ ||ಪ|| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅಪ|| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗರಹಿತ | ವ್ಯೋಮಾದಿ ಸರ್ವ ವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ || ಯಾಮಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ | ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು ||೧|| ವಜ್ರ ಶರೀರ ಗಂಭೀರ ಮುಕುಟಧರ | ದುರ್ಜನವನ ಕುಠಾರ  ನಿರ್ಜರಮಣಿ ದಯಾಪಾರ ವಾರ ಉದಾರ ಸಜ್ಜನ ರಘ ಪರಿಹಾರ || ಅರ್ಜುನಗೊಲಿದಂದು ಧ್ವಜವಾಗಿಸಿನಿಂದು ಮೂರ್ಜಗವರಿವಂತೆ  ಘರ್ಜನೆ ಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಜ್ಜನದಲಿ ಭವ ವರ್ಜಿತನೆನಿಸೋ ||೨|| ಪ್ರಾಣ ಅಪಾನ ಉದಾನ ವ್ಯಾನ ಸಮಾನ ಆನಂದ ಭಾರತೀರಮಣ |  ನೀನೇ ಶರ್ವಾದಿ ಗೀರ್ವಾಣಧ್ಯರಿಗೆ ಜ್ಞಾನಧನ ಪಾಲಿಪವರೇಣ್ಯ | ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನು ಪ್ರಾಣನಾಥ ಸಿರಿ ವಿಜಯ ವಿಠಲನ ಕಾಣಿಸಿಕೊಡುವುದು ಭಾನು ಪ್ರಕಾಶ ||೩|| pavamAna jagada prANa saMkaruShaNa | BavaBayAraNyA dahanA ||pa||   SravaNave modalAda navavidha Bakutiya tavakadiMdali koDu kavigaLa priya ||apa|| hEma kaccuTa upavIta dharipa mAruta kAmA...

ದಿತಿಜರಿಗೆದುರಾಂತ ಕೃತಾಂತ | ಹಯವದನ | Ditijarigeduranta krutanta |Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ದಿತಿಜರಿಗೆದುರಾಂತ ಕೃತಾಂತ ಗತಿ ನೀ ನಮಗೆ ಗುಣವಂತ ಹನುಮಂತ || ಪ || ಕೇಸರಿತನಯ ದಕ್ಷಿಣಗಾಗಿ ಬಂದೆ  ವರುಷಗಳಿಂದಲಿ ಬಲುಗಿರಿಯನು ತಂದೆ ಈಶ ರಘುಪತಿ ಸೇವೆ ಘನವಾಗಿ ನಿಂದೆ ಅಸುರ ರಾವಣನ ಸರ್ವ ಸೈನ್ಯವ ಕೊಂದೆ || ೧ || ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆ ಕುಬುದ್ಧಿ ರಾವಣನ ಪುರವ ಸೂರೆಗೊಂಡೆ ವಿಬುಧರ ಸ್ನೇಹವ ಮಾಡಿದೆ ಬಲುಗಂಡೆ ಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ || ೨ || ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಅಪ್ರಿಯವಾದ ಭವತರುವಿನ ಬೇರ ಕಿತ್ತೆ ಭಯವ ಖಂಡಿಸಿ ನಮಗಭಯವನಿತ್ತೆ ಜಯಜಯ ಪ್ರಾಣನಾಥ ನಮೋ ನಮಸ್ತೆ || ೩ || ditijarigeduraaMta kRutaaMta gati nI namage guNavaMta hanumaMta || pa || kEsaritanaya dakShiNagaagi baMde  varuShagaLiMdali balugiriyanu taMde Isha raghupati sEve ghanavaagi niMde asura raavaNana sarva sainyava koMde || 1 || aMbudhiya daaMTi sIteya rUpa kaMDe kubuddhi raavaNana purava sUregoMDe vibudhara snEhava maaDide balugaMDe prabuddharaMdadi puNyaPalarasa uMDe || 2 || hayavadanana kRupe priya hUDi potte apriyavaada bhavataruvina bEra kitte bhayava KaMDisi namagabhayavanitte jayajaya praaNanaatha ...

ಅಹುದೊ ಹನುಮಂತ | ಹಯವದನ | Ahudo Hanumantha | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಅಹುದೊ ಹನುಮಂತ ನೀನಹುದೊ ಬಲವಂತ  ನೀನಹುದೊ ಮುಖ್ಯಪ್ರಾಣ ಮೂಲಗುರು ಅಹುದೊ || ಪ || ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ ಅಹುದೊ ಮಧ್ವಮತಕೆ ಬಿರುದು ನೀ ಅಹುದೊ || ಅಪ || ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ ಮಂಜುಭಾಷಣ ನೀನು ಶರಧಿಯನು ದಾಟಿದೆಯೊ ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ || ೧ || ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು ಪಂಥವನಾಡಿ ದಾಯಾದ್ಯರೊಡನೆ ಕಂತುಪಿತನ ಕೂಡಿ ಕೌರವರ ಗೆಲಿದ್ಯೊ ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ || ೨ || ಮಧ್ವಾವತಾರದಲಿ ಮುನಿವೇಷವನು ತಾಳಿ ಅದ್ವೈತವೆಂಬೊ ಅರಣ್ಯವನು ತರಿದೆ ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ ಮುದ್ದು ಹಯವದನನ ದಾಸ ನೀನಹುದೊ || ೩ || ahudo hanumaMta nInahudo balavaMta  nInahudo muKyapraaNa mUlaguru ahudo || pa || ahudo dharaNiya myaale divaakarana prabheyaMte ahudo madhvamatake birudu nI ahudo || apa || aMjaneya garbhadali udbhavisidyo nInu saMjIvanava taMdyo sakala kapigaLige maMjubhaaShaNa nInu sharadhiyanu daaTideyo kaMjaakShi sItege uMguravanitte || 1 || kuMtiya garbhadali udbhavisidyo nInu paMthavanaaDi daayaadyaroDane kaMtupita...

ಪದುಮನಾಭನೆ ನಿನ್ನ | ಹೆಳವನಕಟ್ಟೆ ರಂಗ | Padumanabhane Ninna | Sri Helavanakatte Giriyamma

Image
ಸಾಹಿತ್ಯ :   ಶ್ರೀ ಹೆಳವನಕಟ್ಟೆ ಗಿರಿಯಮ್ಮ (ಹೆಳವನಕಟ್ಟೆ ರಂಗ) Kruti: Sri Helavanakatte Giriyamma (Helavanakatte Ranga) ಪದುಮನಾಭನೆ ನಿನ್ನ ಪಾದಕಿಂಕರನನ್ನು  ಕೈಬಿಡುವುದು ಉಚಿತವೇ ರಂಗಾ ||ಪ|| ಮುದದಿಂದ ನಿನ್ನ ಪಾದಕ್ಕೆರಗುವೆ ನಾನು  ತ್ವರಿತದಿ ನೀಕಾಯೋ ಎನ್ನೊಡೆಯ ರಂಗಾ ||೧|| ಅಜಗರಶಯನನೆ ಬುಧಜನ ನಮಿತನೆ  ತ್ರಿಜಗವಂದಿತ ಪಾದ ಪದುಮಜನಕನೆ||೨|| ಶಿಶು ಅವತಾರದಿ ಪಶುಗಳ ಸಲಹಿದೆ  ಶಶಿಭೂಷಣ ಸಖ ಶಿಶುವ ಕಾಪಾಡೊ||೩|| ಸಾಂದೀಪನಿಗೊಲಿದೆ ಸಂದೇಹವಿಲ್ಲದೆ  ತಂದೆ ಹೆಳವನಕಟ್ಟೆ ರಂಗಾ ಕೃಪಾಂಗ||೪|| padumanABane ninna pAdakiMkaranannu  kaibiDuvudu ucitavE raMgA ||pa|| mudadiMda ninna pAdakkeraguve nAnu  tvaritadi nIkAyO ennoDeya raMgA ||1|| ajagaraSayanane budhajana namitane  trijagavaMdita pAda padumajanakane||2|| SiSu avatAradi paSugaLa salahide  SaSiBUShaNa saKa SiSuva kApADo||3|| sAMdIpanigolide saMdEhavillade  taMde heLavanakaTTe raMgA kRupAMga||4||

ಒಲ್ಲನೋ ಹರಿ ಕೊಳ್ಳನೋ | ಪುರಂದರ ವಿಠಲ | Ollano Hari Kollano | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅಪ|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ ವಸ್ತ್ರವಿದ್ದು | ಚಂದುಳ್ಳ ಆಭರಣ ಧೂಪದೀಪಗಳಿದ್ದು | ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧|| ದಧಿ ಕ್ಷೀರ ಮೊದಲಾದ ಅಭಿಷೇಕಗಳಿದ್ದು | ಮಧುಪರ್ಕ ಪಂಚೋಪಚಾರವಿದ್ದು | ಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆ | ಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ ||೨|| ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು | ತಂತು ತಪ್ಪದೆ ತಂತ್ರ ಸಾರವಿದ್ದು || ಸಂತತ ಸುಖ ಸಂಪೂರ್ಣನ ಪೂಜೆಗೆ | ಅತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ ||೩|| ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ | ವಿಮಲ ಘಂಟೆ ಪಂಚ ವಾದ್ಯವಿದ್ದು || ಅಮಲ ಪಂಚ ಭಕ್ಷ್ಯ ಪರಮಾನ್ನಗಳಿದ್ದು | ಕಮಲನಾಭನು ಒಲ್ಲ ತುಳಸಿ ಇಲ್ಲದ ಪೂಜೆ ||೪|| ಪೂಜೆಯ ಮಾಡದೆ ತುಳಸಿ ಮಂಜರಿಯಿಂದ | ಮೂಜಗದೊಡೆಯ ಮುರಾರಿಯನು || ರಾಜಾಧಿರಾಜನೆಂಬ ಮಂತ್ರ ಪುಷ್ಪಗಳಿಂದ  ಪೂಜಿಸಿದರು ಒಲ್ಲ ಪುರಂದರ ವಿಠಲನು ||೫|| ollanO hari koLLanO ||pa|| ella sAdhanaviddu tuLasi illada pUje ||apa||   siMdhu SatakOTi gaMgOdakaviddu | gaMdha suparimaLa vastraviddu | caMduLLa ABaraNa dhUpadIpagaLiddu | bRuMdAvana SrI tuLasi illada...

ರಾಮ ನಾಮವ ನುಡಿ | ಪುರಂದರವಿಠಲ | Rama Namava Nudi | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara Dasaru ರಾಮನಾಮವ ನುಡಿ ನುಡಿ | ಕಾಮಕ್ರೋಧಗಳ ಬಿಡಿ ಬಿಡಿ ||ಪ|| ಗುರುಗಳ ಚರಣವ ಹಿಡಿ ಹಿಡಿ | ಹರಿ ನಿರ್ಮಾಲ್ಯವ ಮುಡಿ ಮುಡಿ ಕರೆ ಕರೆ ಭವ, ಪಾಶವ ಕಡಿ ಕಡಿ ದುರಿತವನೆಲ್ಲಾ ಹೊಡಿ ಹೊಡಿ ||೧|| ಸಜ್ಜನ ಸಂಗವ ಮಾಡೋ ಮಾಡೋ ದುರ್ಜನ ಸಂಗವ ಬಿಡೋ ಬಿಡೋ ಅರ್ಜುನ ಸಾರಥಿ ರೂಪ ನೋಡೋ ನೋಡೋ ಭಜನೆಯಲಿ ಮನ ಇಡೋ ಇಡೋ ||೨|| ಕರಿರಾಜ ವರದನ ಸಾರೋ ಸಾರೋ | ಶ್ರಮ ಪರಿಹರಿಸೆಂದು ಹೋರೋ ಹೋರೋ || ವರದ ಭೀಮೇಶನ ದೂರದಿರೋ ನಮ್ಮ | ಪುರಂದರ ವಿಠಲನ ಸೇರೋ ಸೇರೋ ||೩|| rAmanAmava nuDi nuDi | kAmakrOdhagaLa biDi biDi ||pa||   gurugaLa caraNava hiDi hiDi | hari nirmAlyava muDi muDi kare kare Bava, pASava kaDi kaDi duritavanellA hoDi hoDi ||1||   sajjana saMgava mADO mADO durjana saMgava biDO biDO arjuna sArathi rUpa nODO nODO Bajaneyali mana iDO iDO ||2||   karirAja varadana sArO sArO | Srama parihariseMdu hOrO hOrO || varada BImESana dUradirO namma | puraMdara viThalana sErO sErO ||3||

ಅಲ್ಲಿ ನೋಡಲು ರಾಮ | ಪುರಂದರವಿಠಲ | Alli Nodalu Rama | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti: Sri Purandara Dasaru ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀ ರಾಮ ||ಪ|| ರಾವಣನ ಮೂಲ ಬಲ ಕಂಡು ಕಪಿಸೇನೆ  ಆವಾಗಲೇ ಬೆದರಿ ಓಡಿದವು | ಈ ವೇಳೆ ನರನಾಗಿ ಇರಬಾರದೆಂದೆಣಿಸಿ |  ದೇವ ರಾಮಚಂದ್ರ ಜಗವೆಲ್ಲ ತಾನಾದ ||೧|| ಅವನಿಗೆ ಇವ ರಾಮ ಇವನಿಗೆ ಅವ ರಾಮ |  ಅವನಿಯೊಳೀಪರಿ ರೂಪವುಂಟೆ || ಲವ ಮಾತ್ರದಿ ಅಸುರ ದುರುಳರೆಲ್ಲರೂ  ಅವರವರ‍್ಹೊಡೆದಾಡಿ ನಾಶವಾಗಿ ಹೋದರು ||೨|| ಹನುಮದಾದಿ ಸಾಧು ಸಜ್ಜನರು ಕೂಡಿಕೊಂಡು  ಕುಣಿಕುಣಿದಾಡಿದರು ಹರುಷದಿಂದ || ಕ್ಷಣದಲಿ ಪುರಂದರ ವಿಠಲರಾಯನ  ಕೊನೆಗೊಡೆಯನು ತಾನು ಒಬ್ಬನಾಗಿ ನಿಂತ ||೩| alli nODalu rAma illi nODalu rAma ellelli nODidarU alli SrI rAma ||pa||   rAvaNana mUla bala kaMDu kapisEne  AvAgalE bedari ODidavu | I vELe naranAgi irabAradeMdeNisi |  dEva rAmacaMdra jagavella tAnAda ||1||   avanige iva rAma ivanige ava rAma |  avaniyoLIpari rUpavuMTe || lava mAtradi asura duruLarellarU  avaravar^hoDedaaDi nASavAgi hOdaru ||2||   hanumadAdi sAdhu sajjanaru kUDikoMDu  kuNikuNidADidaru haruShadiMda || kShaNadali puraMda...

ಪಾದವ ತೋರೋ ಶ್ರೀರಾಮ | ಶ್ರೀ ರಂಗವಿಠಲ | Paadava Toro Sri Rama | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಪಾದವ ತೋರೋ ಶ್ರೀರಾಮ ನಿನ್ನ  ಪಾದವ ತೋರೋ ||ಪ|| ಮೋಹನ ಗುಣಧಾಮ ನಿನ್ನ  ಮೋಹನ ಪಾದವ ತೋರೋ ||ಅಪ|| ವರಗುಣಜಾಲ ಸುರಗುಣಲೋಲ  ಕರುಣಾಲವಾಲ ತರುಣೀ ಪರಿಪಾಲ ||೧|| ಅಜಭವಪೂಜಿತ ಗಜವರಭಾವಿತ  ಸುಜನರ ಸೇವಿತ ತ್ರಿಜಗವಂದಿತ ||೨|| ಅಂಗಜಜನಕ ವಿಹಂಗತುರಂಗ  ತುಂಗವಿಕ್ರಮ ಶ್ರೀ ರಂಗವಿಠಲ ||೩|| paadava tOrO shrIraama ninna  paadava tOrO ||pa|| mOhana guNadhaama ninna  mOhana paadava tOrO ||apa|| varaguNajaala suraguNalOla  karuNaalavaala taruNI paripaala ||1|| ajabhavapUjita gajavarabhaavita  sujanara sEvita trijagavaMdita ||2|| aMgajajanaka vihaMgaturaMga  tuMgavikrama shrI raMgaviThala ||3||  

ಗೋದೆ ಅತಿ ಪುಣ್ಯ ಸಾಧೇ | ವಿಜಯವಿಠಲ | Gode Ati Punya Saadhe | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಗೋದೆ ಅತಿ ಪುಣ್ಯ ಸಾಧೇ ಮಾಧವನ ಚರಣಾರವಿಂದೇ ಪಾದೆ ||ಪ|| ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ  ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಭಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮತ್ಯ ಪರಿಹಾರವು ||೧|| ಬಂದು ಹರುಷದಲಿ ಕಣ್ಣಲಿ ಕಂಡು ಶಿರಬಾಗಿ  ವಂದನೆಯ ಮಾಡಿ ಸಾಷ್ಟಾಂಗೆರಗಲೂ ಹಿಂದಣ ಶತಕೋಟಿ ದುರಿತ ರಾಶಿಗಳೆಲ್ಲ ಒಂದೂ ಉಳಿಯದಂತೆ ಬೆಂದು ಹೋಹವು ||೨|| ಅತಿ ವೇಗದಿಂದ ಬಂದು ಸ್ನಾನ ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ರತಿಪತಿ ಜನಕ ಸಿರಿ ವಿಜಯವಿಠಲನ್ನ ಸ್ತುತಿಸಿ ಗತಿ ಪಡೆವಂತೆ ಧನ್ಯರ ಮಾಡುವ ತಾಯಿ ||೩|| gOde ati puNya saadhE maadhavana charaNaaraviMdE paade ||pa|| iddalli ninna smaraNeyanu maaDalu paapa  eddODi tirugi nODade hOhavu sadbhaktiyiMda ninnanu nODabEkenuta udyuktavaage brahmatya parihaaravu ||1|| baMdu haruShadali kaNNali kaMDu shirabaagi  vaMdaneya maaDi saaShTaaMgeragalU hiMdaNa shatakOTi durita raashigaLella oMdU uLiyadaMte beMdu hOhavu ||2|| ati vEgadiMda baMdu snaana maaDalu mativaMtarana maaDi durmaarga biDisi ratipati janaka siri vijayaviThalanna stutisi gati paDevaMte dh...

ಯಾರೇ ರಂಗನ ಯಾರೇ ಕೃಷ್ಣನ | ಪುರಂದರ ವಿಠಲ | Yaare Rangana | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಯಾರೇ ರಂಗನ ಯಾರೇ ಕೃಷ್ಣನ   ಯಾರೇ ರಂಗನ ಕರೆಯಬಂದವರು ||ಪ||    ವೇಣುವಿನೋದನ ಗಾನ ಪ್ರಿಯನ |  ಜಾಣೆಯರರಸನ ಕರೆಯಬಂದವರು ||೧|| ಗೋಪಾಲಕೃಷ್ಣನ ಪಾಪವಿನಾಶನ |  ಈ ಪರಿಯಿಂದಲಿ ಕರೆಯಬಂದವರು ||೨||    ಕರಿರಾಜವರದನ ಪರಮ ಪುರುಷನ ||  ಪುರಂದರ ವಿಠಲನ ಕರೆಯ ಬಂದವರು ||೩||  yArE raMgana yArE kRuShNana   yArE raMgana kareyabaMdavaru ||pa||    vENuvinOdana gAna priyana |  jANeyararasana kareyabaMdavaru ||1|| gOpAlakRuShNana pApavinASana |  I pariyiMdali kareyabaMdavaru ||2||    karirAjavaradana parama puruShana ||  puraMdara viThalana kareya baMdavaru ||3|| 

ಮೆರೆದೆ ಮಹಿಮೆ ಉದಾರ | ಹಯವದನ | Merede Maime Udaara | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮೆರೆದೆ ಮಹಿಮೆ ಉದಾರ ನಮ್ಮ ಗುರು ಭೀಮಸೇನ ಸುಧೀರ ||ಪ|| ಮಂಗಳಮಹಿಮ ವಿಹಾರ ಮಾಯವಾದಿಗಳಿಗತಿಕ್ರೂರ ||ಅಪ|| ಹರಿಯ ನಿರೂಪವ ಧರಿಸಿ ಮರುತ ಕುಂತಿಯೊಳವತರಿಸಿ ಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ ||೧|| ಬಕ ಹಿಡಿಂಬಕ ಜರಾಸುತರ ಮಣಿಮಂತ ಕೀಚಕ ದುರ್ಜನರ ಸಕಲ ಕೌರವ ಅತಿರಥರ ಕೊಂದು ಸುಖ ಪಡಿಸಿದೆ ಸಹೋದರರ ||೨|| ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದು ಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ ||೩|| merede mahime udaara namma guru bhImasEna sudhIra ||pa|| maMgaLamahima vihaara maayavaadigaLigatikrUra ||apa|| hariya nirUpava dharisi maruta kuMtiyoLavatarisi haranoLu vaadisi jaisi harisarvOttamaneMdenisi ||1|| baka hiDiMbaka jaraasutara maNimaMta kIchaka durjanara sakala kourava atirathara koMdu sukha paDiside sahOdarara ||2|| jnaanabhakutisaMpanna ajnaanaaraNyaChEdana muddu jnaanEMdra hayavadananna dhyaanadoLirisu prasanna ||3||

ಹ್ಯಾಂಗೆ ಕೊಟ್ಟನು ಹೆಣ್ಣ | ಹಯವದನ | Hyange Kottanu Henna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana)  ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ ||ಪ|| ಶೃಂಗಾರ ಪುರುಷರು ಬಹುಮಂದಿಯಿರಲು ||ಅಪ|| ಗುಷ್ಟುನಾರುವ ಮೈಯ್ಯಿ ಬಿಟ್ಟಿದ್ದ ಬಿರುಗಣ್ಣು ಮುಟ್ಟಿನೋಡಿದರೆ ಮೈಯ್ಯತಿ ಕಠಿಣವು ಸೊಟ್ಟಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು ಇಷ್ಟು ಘೋರಮುಖದಳಿಯನೆಲ್ಲಿ ದೊರಕಿದನೊ || ೧ || ಬಡವನು ಭಿಕ್ಷುಕನು ಬಡಬನಂದದಿ ಕೋಪವು ನೋಡಿದರೆ ತಲೆಯು ಜಟೆ ಕಟ್ಟಿಹುದು ಬೆಡಗು ನುಡಿಗಾರ ಜಾರ ಚೋರನಿಗೆ ನೋಡಿ ನೋಡಿ ಹೆಣ್ಣನ್ನು ಹ್ಯಾಂಗೆ ಕೊಟ್ಟನು || ೨ || ಭಂಡನಾಗಿರುವನು ಕಂಡವರೊಡನೆ ಕಾಳಗವ ಕೊಂಡು ಬಹು ಬಲು ಉದ್ದಂಡನಿವನು ಅಂಡಜವಾಹನಗೆ ಯೋಗ್ಯವಾದ ಹೆಣ್ಣ ಕಂಡು ಕಂಡೀ ಹಯವದನಗೆ ಕೊಟ್ಟನ್ಹ್ಯಾಂಗೆ || ೩ || hyaaMge koTTanu heNNa saagaranu I varage ||pa|| shRuMgaara puruSharu bahumaMdiyiralu ||apa|| guShTunaaruva maiyyi biTTidda birugaNNu muTTinODidare maiyyati kaThiNavu soTTamOreyu ivage eShTudda hallugaLu iShTu ghOramuKadaLiyanelli dorakidano || 1 || baDavanu bhikShukanu baDabanaMdadi kOpavu nODidare taleyu jaTe kaTTihudu beDagu nuDigaara jaara cOranige nODi nODi heNNannu hyaaMge koTTanu || 2 || bhaMDanaagiruvanu kaMDavaroDane kaaLagava koMDu bahu balu ud...

ಆನೆ ಬರುತ್ತಿದಿಕೋ-ವ್ಯಾಸರಾಜ | ಹಯವದನ | Aane Baruttidiko Vyasaraja | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆನೆ ಬರುತ್ತಿದಿಕೋ-ವ್ಯಾಸರಾಜರೆಂ- ಬಾನೆ ಬರುತ್ತಿದೆಕೋ ||ಪ|| ಮದವೇರಿ ಹದಮೀರಿ ಮದನಾರಿ ತಾನೆಂಬ ಅಧಮರ ಎದೆಮೆಟ್ಟಿ ಸೀಳಲು ||ಅಪ|| ಮರುತಮತ ನಿರಂತರ ಚರಣದ ಧೂಳಿ ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ್ತ ||೧|| ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ ಅದ್ವೈತಿಗಳ ಬುದ್ಧಿಮಡುವನ್ನೆ ಕಲಕುತ್ತ ||೨|| ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ- ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ ||೩|| ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ ||೪|| ಮುರಿಯಲು ದುರುಳನ ಗರುವವನೆ ಮುನ್ನ ಸಿರಿಹಯವದನನ ಅರಮನೆ ಪಟ್ಟದ ||೫|| aane baruttidikO-vyaasaraajareM baane baruttidekO ||pa|| madavEri hadamIri madanaari taaneMba adhamara edemeTTi sILalu ||apa|| marutamata niraMtara charaNada dhULi karadali piDidu shirada mEle chellutta ||1|| iddu jagavilleMba shuddhamUrkhateyuLLa adwaitigaLa buddhimaDuvanne kalakutta ||2|| jagake karta naaneMdu bogaLikoMbuva naa- yigaLa karadali piDidu mogada mEluguLutta ||3|| madhwamunIMdrara shuddhatIrthadi miMdu tiddida naama shrImudre shRuMgaaradi ||4|| muriyalu duruLana gar...

ಗಂಗಾದಿ ಸಕಲ | ಪುರಂದರ ವಿಠಲ | Gangadi Sakala | Purandara Vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಗಂಗಾದಿ ಸಕಲ ತೀರ್ಥಂಗಳಿಗಧಿಕವು ಶ್ರೀ ಹರಿಯ ನಾಮ  ಹಿಂಗದೆ ನೆನೆವಂಗೆ ಮಂಗಳ ಫಲವೀವ ಶ್ರೀ ಹರಿಯ ನಾಮ ||ಪ||    ಸ್ನಾನ ಜಪಂಗಳ ಸಾಧಿಸದವನಿಗೆ ಶ್ರೀ ಹರಿಯ ನಾಮ ||  ಜ್ಞಾನವನರಿಯದ ಮೂಢಾತ್ಮನಿಗಿದು ಶ್ರೀ ಹರಿಯ ನಾಮ ||೧||    ವೇದ ಶಾಸ್ತ್ರಗಳ ಓದದ ಮನುಜಗೆ ಶ್ರೀ ಹರಿಯ ನಾಮ |  ಸಾಧನಗಳ ನಾಲ್ಕು ಸಾಧಿಸದವನಿಗೆ ಶ್ರೀ ಹರಿಯ ನಾಮ ||೨||    ಕಾಲನ ದೂತರ ತರಿದು ಬಿಸುಟುವುದು ಶ್ರೀ ಹರಿಯ ನಾಮ ||  ಲೋಲ ಶ್ರೀ ಪುರಂದರ ವಿಠಲನ ಒಲುಮೆಗೆ ಶ್ರೀ ಹರಿಯ ನಾಮ ||೩||  gaMgAdi sakala tIrthaMgaLigadhikavu SrI hariya nAma  hiMgade nenevaMge maMgaLa PalavIva SrI hariya nAma ||pa||    snAna japaMgaLa sAdhisadavanige SrI hariya nAma ||  j~jAnavanariyada mUDhAtmanigidu SrI hariya nAma ||1||    vEda SAstragaLa Odada manujage SrI hariya nAma |  sAdhanagaLa nAlku sAdhisadavanige SrI hariya nAma ||2||    kAlana dUtara taridu bisuTuvudu SrI hariya nAma ||  lOla SrI puraMdara viThalana olumege SrI hariya nAma...

ಬೇಗ ಬಾರೋ ಬೇಗ ಬಾರೋ | ಹಯವದನ | Bega Baaro Bega Baaro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬೇಗ ಬಾರೋ ಬೇಗ ಬಾರೋ ನೀಲ ಮೇಘ ವರ್ಣ |ಪ| ಬೇಗ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ |ಅಪ|  ಇಂದಿರ ರಮಣ ಗೋವಿಂದ ಬೇಗ ಬಾರೋ| ನಂದನಕಂದ ಮುಕುಂದ ಬೇಗ ಬಾರೋ |೧| ಧೀರ ಉದಾರ ಗಂಭೀರ ಬೇಗ ಬಾರೋ| ಹಾರಾಲಂಕಾರ ರಘುವೀರ ಬೇಗ ಬಾರೋ |೨| ಋದ್ಧ ಅನಿರುದ್ಧ ನಿರವದ್ಯಾ ಬೇಗ ಬಾರೋ| ಹದ್ದನೇರಿದ್ದ ಸುಪ್ರಸಿದ್ಧ ಬೇಗ ಬಾರೋ|೩| ರಂಗ ಉತ್ತುಂಗ ನರಸಿಂಗ ಬೇಗ ಬಾರೋ| ಮಂಗಳ ಮಹಿಮ ಶುಭಾಂಗ ಬೇಗ ಬಾರೋ |೪| ಅಯ್ಯ ವಿಜಯ ಸಹಾಯ ಬೇಗ ಬಾರೋ| ಅಹ್ಯಾದ್ರಿವಾಸ ಹಯವದನ ಬೇಗ ಬಾರೋ |೫| bEga bArO bEga bArO nIla mEGa varNa |pa| bEga bArO bEga bArO vElApurada cenna |apa|    iMdira ramaNa gOviMda bEga bArO| naMdanakaMda mukuMda bEga bArO |1|   dhIra udAra gaMBIra bEga bArO| hArAlaMkAra raGuvIra bEga bArO |2|   Ruddha aniruddha niravadyA bEga bArO| haddanEridda suprasiddha bEga bArO|3|   raMga uttuMga narasiMga bEga bArO| maMgaLa mahima SuBAMga bEga bArO |4|   ayya vijaya sahAya bEga bArO| ahyaadrivAsa hayavadana bEga bArO |5|

ಶಿವ ಶಿವ ಶಿವ ಎನ್ನಿರೋ | ಆದಿಕೇಶವ | Shiva Shiva Shiva Enniro | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಶಿವ ಶಿವ ಶಿವ ಎನ್ನಿರೋ  ಮೂರ್ಜಗದವರೆಲ್ಲ ಶಿವ ಶಿವ ಶಿವ ಎನ್ನಿರೋ ||ಪ||    ಆಗಮ ಸಿದ್ಧಾಂತ ಮೂಲದ ಜಪವಿದು |  ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು ||೧||    ಮನುಜ ಜನ್ಮದಿ ಹುಟ್ಟಿ ಮೈ ಮರೆದಿರ ಬೇಡಿ  ನಿಮ್ಮ | ತನು ಮನ ಪ್ರಾಣವ ವ್ಯರ್ಥವ ಮಾಡದೆ ||೨||    ಅಪರಾಧದ ಕೋಟಿ ತ್ಯಜಿಸಬೇಕಾದರೆ  ಮುಂದೆ ಉಪಮಿತರೊರ್ವಿತರರಿಯದ ಜಪವಿದು ||೩||    ಜವನ ಬಾಧೆಯ ನೀನು ಜಯಿಸಬೇಕಾದರೆ |  ನಿಜ ಸುವಿಮಲ ಮುಕ್ತಿಯ ಪಡೆಯಬೇಕಾದರೆ ||೪||    ಭುವನಕೆ ಬಲ್ಲಿದನಾಗ ಬೇಕಾದರೆ ನೀವು |  ಭುವನ ಪದವಿಯನು ಪಡೆಯಬೇಕಾದರೆ ||೫||    ಗುರುಲಿಂಗ ಜಂಗಮನ ಅರಿಯ ಬೇಕಾದರೆ |  ಮುಂದೆ ಪರಮಾತ್ಮನ ನೀವು ತಿಳಿಯಬೇಕಾದರೆ ||೬||    ಪೃಥ್ವಿಗೆ ಸದ್ಗುರುನಾಗ ಬೇಕಾದರೆ ನೀವು |  ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ||೭|| Siva Siva Siva ennirO  mUrjagadavarella Siva Siva Siva ennirO ||pa||    Agama siddhAMta mUlada japavidu |  nimma rOgada mUlava keDipa auShadhavidu ||1||    manuja janmadi huTTi mai maredira bEDi Siva nimma |  tanu mana prANava vyarthava mADade ||2|...

ಎನಗೂ ಆಣೆ ರಂಗ | ಪುರಂದರ ವಿಠಲ | Enagu Aane Ranga | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara Dasaru  ಎನಗೂ ಆಣೆ ರಂಗ ನಿನಗೂ ಆಣೆ ||ಪ|| ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ||ಅಪ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆ ಎನಗೇ ಆಣೆ ರಂಗ || ಎನ್ನ ನೀ ಕೈ ಬಿಟ್ಟು ಹೋದರೆ ನಿನಗೇ ಆಣೆ ||೧|| ತನುಮನ ಧನದಲಿ ವಂಚಕನಾದರೆ ಎನಗೇ ಆಣೆ ರಂಗ || ಮನಸು ನಿನ್ನಲಿ ನಿಲಿಸದಿದ್ದರೆ ನಿನಗೇ ಆಣೆ ||೨|| ಕಾಕು ಮನುಜರ ಸಂಗವ ಮಾಡಿದರೆ ಎನಗೆ ಆಣೆ ರಂಗ || ಲೌಕಿಕವ ಬಿಡಿಸದಿದ್ದರೆ ನಿನಗೇ ಆಣೆ ||೩|| ಶಿಷ್ಟರ ಸಂಗವ ಮಾಡದಿದ್ದರೆ ಎನಗೇ ಆಣೆ ರಂಗ || ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೇ ಆಣೆ ||೪|| ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೇ ಆಣೆ ರಂಗ || ಪುರಂದರ ವಿಠಲ ನೀನೊಲಿಯದಿದ್ದರೆ ನಿನಗೇ ಆಣೆ ||೫|| enagU ANe raMga ninagU ANe ||pa|| enagU ninagU ibbarigU ninna BaktarANe ||apa||   ninna biTTu anyara Bajisidare enagE ANe raMga || enna nI kai biTTu hOdare ninagE ANe ||1||   tanumana dhanadali vaMcakanAdare enagE ANe raMga || manasu ninnali nilisadiddare ninagE ANe ||2||   kAku manujara saMgava mADidare enage ANe raMga || laukikava biDisadiddare ninagE ANe ||3||   SiShTara saMgava mADadiddare enagE ANe raMga || duShTara saMgava biDisadidd...

ರಾಜರ ಭಾಗ್ಯವಿದೂ ಸೋದೆ | ಶ್ರೀದವಿಠಲ | Rajara Bhagyavidu Sode | Srida Vithala

Image
ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು Kruti: Sri Srida Vittala Dasaru ರಾಜರ ಭಾಗ್ಯವಿದೂ, ಸೋದೆ ರಾಜರ ಭಾಗ್ಯವಿದು||  ಸೋಜಿಗವೆನಿಸಿ ವಿರಾಜಿಸುತಿದಕೋ||ಅಪ|| ಬುಧಜನಕೊಪ್ಪುವ ಪದಸುಳಾದಿಗಳ ಎದುರದೆ ಬಿಚ್ಚಿಸುವ ಚತುರತೆಯೂ||  ಸದಮಲ ನಾನಾ ವಿಧ ಗ್ರಂಥದಿ ಹಯವದನನ ಪೂಜಿಸುವುದೆಲ್ಲಾ ||೧|| ತಮ್ಮಯನೇಮವು ಒಮ್ಮೆಗೆ ಬಿಡದಲೆ ಸಮ್ಮಯ ಬಿಡದಲೆ ಸಮ್ಮೊಗದಾ||  ಹಮ್ಮಹತಾಸಖಿ ಬೊಮ್ಮಭೂತವನು ಗಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ ||೨|| ಮೇದಿನಿಯೊಳಗೆ ಶುಭೋದಯಕಾರಕ ಸ್ವಾದೀಸ್ಥಳವು ಸರ್ವಾಧಿಕವೈ||  ಪಾದದ್ವಯದ ಅಗಾಧ ಮಹಿಮೆಯನ್ನು ಶ್ರೀದವಿಠಲನಾರಾಧನೆಯಲ್ಲದೆ ||೩|| rAjara BAgyavidU, sOde rAjara BAgyavidu||  sOjigavenisi virAjisutidakO||apa|| budhajanakoppuva padasuLAdigaLa edurade biccisuva caturateyU||  sadamala nAnA vidha graMthadi hayavadanana pUjisuvudellA ||1|| tammayanEmavu ommege biDadale sammaya biDadale sammogadA||  hammahatAsaKi bommaBUtavanu gammane nirmisi rammipudella||2|| mEdiniyoLage SuBOdayakAraka svAdIsthaLavu sarvAdhikavai||  pAdadvayada agAdha mahimeyannu SrIdaviThalanArAdhaneyallade||3||

ಇಂದಿರೆ ಮಂದಿರದೊಳು ನಿಂದಿರೆ | ಹಯವದನ | Indire Mandiradolu Nindire | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಇಂದಿರೆ ಮಂದಿರದೊಳು ನಿಂದಿರೆ ಇಂದಿರೇ ನೀ ನಿಂದಿರೆ ||ಪ|| ಇಂದಿರೆ ಹೊಂದಿದೆ ನಿನ್ನ ಮುದದಿಂದ ಪಾಲಿಸು ನಿತ್ಯ ಎನ್ನ ಆಹಾ ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ || ಅಪ || ಘಲು ಘಲು ಗೆಜ್ಜೆಯ ನಾದದಿಂದ ಫಳಫಳಿಸುವ ದಿವ್ಯ ಪಾದದೊಳು ಪಿಲ್ಲೆ ಕಾಲುಂಗುರನಾದ ಅಂಘ್ರಿ ಚಲಿಸುವ ದಿವ್ಯ ಸುಸ್ವಾದ   ಆಹಾ, ಕಾಲಂದಿಗೆ ಗೆಜ್ಜೆ ಝಳಪಿಸುತ ನಮ್ಮಾಲಯದೊಳು ನಿಲ್ಲೆ ಪಾಲವಾರಿಧಿ ಕನ್ನೆ ||೧|| ಹರಡಿ ಕಂಕಣ ವಂಕಿ ಡೋರ್ಯಾ ಕೊರಳೊಳಗೆ ನಾನಾ ವಿಧದ ಹಾರ ಬಾಯಲಿ ಕರ್ಪೂರ ವೀಳ್ಯ ಸಾರೆ ಸುರಭಿ ನಾಸಿಕ ಚಂಪಕ ಪುಷ್ಪದ ಹಾರ   ಆಹಾ, ಎರಳೆ ಗಂಗಳೆಸಿರಿ ಅರಳೆಲೆ ಕುಂಕುಮ ಹೆರಳಗೊಂಡೆಗಳಿಂದ ಹರಿಯ ಮೋದಿಸುವೆ ||೨|| ಜಯ ಜಯ ವಿಜಯ ಸಂಪೂರ್ಣೆ ಭಕ್ತಭಯ ನಿವಾರಣೆ ಎಣೆಗಾಣೆ  ಎನ್ನ ಕಾಯುವರನ್ಯರ ಕಾಣೆ ಶೇಷ ಶಯನನ ತೋರೆ ಸುಶ್ರೇಣೆ    ಆಹಾ, ಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿ ಹಯವದನನ, ದಯವ ಪಾಲಿಸೆ ಲಕ್ಷ್ಮೀ ||೩|| iMdire maMdiradoLu niMdire iMdirE nI niMdire ||pa|| iMdire hoMdide ninna mudadiMda pAlisu nitya enna AhA gaMdha tuLasi araviMda mallige puShpadiMda pUjisuvenu kuMdugaLeNisade || apa ||   Galu Galu gejjeya nAdadiMda phaLaphaLisuva d...

ಪಾನವ ಮಾಡುವೆನು | ಹಯವದನ | Paanava Maduvenu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಪಾನವ ಮಾಡುವೆನು ನಾ ಮನದಣಿಯ  ನಾಮಾಮೃತವ ಪಾನವ ಮಾಡುವೆನು ||ಪ|| ಶ್ರೀನಿವಾಸನ ನಾಮಸುಧಾರಸ ಏನು ರುಚಿಯೋ ಕಾಣೆ ಜೇನುತುಪ್ಪದಂತೆ ||೧||  ಸಕ್ಕರೆ ಬೆರೆಸಿದ ಚೊಕ್ಕಪಾನಕವನ್ನು ಮಿಕ್ಕು ಮೀರುತಲಿದೆ ರಕ್ಕಸಾರಿಯ ಧ್ಯಾನ ||೨||  ಕದಳಿ ಖರ್ಜೂರ ದ್ರಾಕ್ಷಿ ಅಡಕೆಯಿಮ್ಮಿಗಿಲಾಗಿ ಮುದಕೊಡುವುದು ಜಿಹ್ವೆಗೊದಗಿದ ತತ್ ಕ್ಷಣ ||೩||  ಕಾಸಿದ ಕೆನೆಹಾಲ ದೂಷಿಸುವಂತಿದೆ  ಏಸು ರುಚಿಯೋ ಹರಿದಾಸರೆ ಬಲ್ಲರು ||೪||  ಹಯವದನನ ನಿರ್ಭಯದಿಂ ಭಜಿಸಲು  ದಯಮಾಡುವ ಸಾಯುಜ್ಯಪದವನಿತ್ತು ||೫||  paanava maaDuvenu naa manadaNiya  naamaamRutava paanava maaDuvenu ||pa|| shrInivaasana naamasudhaarasa Enu ruciyO kaaNe jEnutuppadaMte ||1||  sakkare beresida cokkapaanakavannu mikku mIrutalide rakkasaariya dhyaana ||2||  kadaLi kharjUra draakShi aDakeyimmigilaagi mudakoDuvudu jihvegodagida tat kShaNa ||3||  kaasida kenehaala dUShisuvaMtide  Esu ruciyO haridaasare ballaru ||4||  hayavadanana nirBayadiM bhajisalu  dayamaaDuva saayujyapadavanittu ||5|| 

ಭಕುತಜನ ಮುಂದೆ | ವಿಜಯ ವಿಠ್ಠಲ | Bhakuta Jana Munde | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಭಕುತಜನ ಮುಂದೆ, ನೀನವರ ಹಿಂದೆ ||ಪ|| ಯುಕುತಿ ಕೈಗೊಳ್ಳದೊ ಗಯ ಗದಾಧರನೆ ||ಅಪ|| ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತ್ತಿರೆ,  ಕಟ್ಟಳೆಯಲ್ಲಿ ಹರಿಗೋಲು ಹಾಕಿ || ನೆಟ್ಟನಾಚೆ ಈಚೆಗೆ ಪೋಗಿ ಬರುವಾಗ  ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ? ||೧|| ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮ್ಮಟೆ ನಿ ಸ್ಸಾಳಗಾನ ವಾದ್ಯ ಘೋಷಣಂಗಳು || ಸಾಲಾಗಿ ಬಳಿಪಿಡಿದು ಸಂಭ್ರಮದಿ ಬರುವಾಗ  ಆಳು ಮುಂದಲ್ಲದೆ ಅರಸು ತಾ ಮುಂದೆ? ||೨|| ಉತ್ಸವದಿ ವಾಹನವು ಬೀದಿಯಲ್ಲಿ ಮೆರೆಯುತಿದೆ  ಸತ್‌ಸಂಗಕ್ಕೆ ಹರಿಯದಾಸರೆಲ್ಲ || ವತ್ಸಲ ಸಿರಿ ವಿಜಯ ವಿಠ್ಠಲಾ ವೆಂಕಟಾದ್ರೀಶ  ವತ್ಸ ಮುಂದಲ್ಲದೆ ಧೇನು ತಾ ಮುಂದೆ? ||೩|| bhakutajana muMde, nInavara hiMde ||pa|| yukuti kaigoLLado gaya gadAdharane ||apa||   kaTTeraDu bigidu nadi sUsi hariyuttire,  kaTTaLeyalli harigOlu hAki || neTTanAce Icege pOgi baruvAga  huTTu muMdallade harigOlu muMde? ||1||   kALe heggALe duMduBi BEri tammaTe ni ssALagAna vAdya GOShaNaMgaLu || sAlAgi baLipiDidu saMBramadi baruvAga  ALu muMdallade arasu tA muMde? ||2||   utsavadi vAhanavu bIdiyalli mereyutide  sa...

ಕಂಡೆ ನಾ ಕನಸಿನಲಿ | ಪುರಂದರ ವಿಠಲ | Kande na Kanasinali | Purandara Vithala

Image
ಸಾಹಿತ್ಯ :  ಶ್ರೀ ಪುರಂದರ ದಾಸರು  Kruti:    Sri Purandara dasaru ಕಂಡೆ ನಾ ಕನಸಿನಲಿ ಗೋವಿಂದನ ||ಪ|| ಕಂಡೆನಾ ಕನಸಿನಲಿ ಕನಕ ರತ್ನದ  ಖಣಿಯ ನಂದನ ಕಂದ ಮುಕುಂದನ ಚರಣವ ||ಅಪ|| ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ | ಬಂದು ಕಾಳಿಂಗನ ಹೆಡೆಯನೇರಿ || ಧಿಂ ಧಿಮಿ ಧಿಮಿಕೆಂದು ತಾಳಗತಿಗಳಿಂದಾ | ಆನಂದದಿ ಕುಣಿವ ಮುಕುಂದನ ಚರಣವ ||೧|| ಉಟ್ಟ ಪೀತಾಂಬರ ಉಡಿಯ ಕಾಂಚಿಯ ಧಾಮ | ತೊಟ್ಟ ಮುತ್ತಿನ ಹಾರ ಕೌಸ್ತುಭವೋ || ಕಟ್ಟಿದ ವೈಜಯಂತಿ ತುಳಸಿ ವನಮಾಲೆ | ಇಟ್ಟ ದ್ವಾದಶ ನಾಮ ನಿಗಮಗೋಚರನ ||೨|| ಕಿರುಬೆರಳಿನ ಮುದ್ರೆ ಉಂಗುರ ಮುಂಗೈಯ | ಕರದಲ್ಲಿ ಕಂಕಣ ನಳಿ ತೋಳುಗಳ || ವರ ಚತುರ್ಭುಜ ಶಂಖಚಕ್ರದಿ ಮೆರೆವ | ನಿರುತದಿ ಒಪ್ಪುವ ಕಾರುಣ್ಯ ಮೂರ್ತಿಯ ||೩|| ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು | ಸಣ್ಣ ನಗೆಯ ನುಡಿ ಸವಿಮಾತಿನ || ಪುಣ್ಯ ಚರಿತ್ರನ ಪೊಳೆವ ಕಿರೀಟವ | ಕಣ್ಣು ಮನದಣಿಯದು ಕಂಸಾರಿ ಕೃಷ್ಣನ ||೪|| ಮಂಗಳವರ ತುಂಗ ಭದ್ರದಿ ಮೆರೆವನ | ಅಂಗಜಪಿತ ಶ್ರೀ ಲಕ್ಷ್ಮೀಪತಿಯ || ಶೃಂಗಾರ ಮೂರುತಿ ಪುರಂದರ ವಿಠಲನ | ಕಂಗಳಿಂದಲಿ ಕಂಡೆ ಹಿಂಗಿತು ಭವ ಭಯ ||೫|| kaMDe nA kanasinali gOviMdana ||pa|| kaMDenA kanasinali kanaka ratnada  KaNiya naMdana kaMda mukuMdana caraNava ||apa|| aMduge kirugejje GalireMba vAdyadi | baMdu kALiMgana heDeyanEri || dhiM dhimi...

ಹೆತ್ತ ತಾಯಿ ತಂದೆಗಳ | ಪುರಂದರವಿಠಲ | Hetta Tayi Tande | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು ||ಪ|| ಸತ್ಯ ಸದಾಚಾರ ಇಲ್ಲದವನು ಜಪವ ಹತ್ತು ಸಾವಿರ ಮಾಡಿ ಫಲವೇನು ||ಅಪ|| ತನ್ನ ಸತಿ ಸುತರು ಬಂಧುಗಳ ನೋಯಿಸಿ | ಚಿನ್ನದಾನವ ಮಾಡಿ ಫಲವೇನು || ಬಿನ್ನಾಣದಿಂದಲಿ ದೇಶದೇಶವ ತಿರುಗಿ  ಅನ್ನ ದಾನವ ಮಾಡಿ ಫಲವೇನು ||೧|| ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ  ರೂಪ ಯೌವನವಿತ್ತು ಫಲವೇನು || ತಾಪತ್ರಯದ ಸಂಸಾರ ಕೆಡಿಸುವಂಥ | ಪಾಪಿ ಮಗನು ಇದ್ದು ಫಲವೇನು ||೨|| ತಾಂಡವ ಧನದಿಂದ ತಂದೆ ಮಾತು ಕೇಳದ | ತುಂಟ ಮಗನು ಇದ್ದು ಫಲವೇನು || ಬಂಡು ಮಾಡಿ ಅತ್ತೆ ಮಾವನ ಬಯ್ಯುವ | ತುಂಡು ಸೊಸೆಯು ಇದ್ದು ಫಲವೇನು ||೩|| ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು  ಕಾನನದೊಳಗಿದ್ದು ಫಲವೇನು || ಆನಂದ ಮೂರುತಿ ಪುರಂದರ ವಿಠಲನ ನೆನೆಯದ ತನು ಇದ್ದು ಫಲವೇನು ||೪|| hetta tAyi taMdegaLa cittava nOyisi nitya dAnava mADi PalavEnu ||pa||   satya sadAcAra illadavanu japava hattu sAvira mADi PalavEnu ||apa||   tanna sati sutaru baMdhugaLa nOyisi | cinnadAnava mADi PalavEnu || binnANadiMdali dESadESava tirugi  anna dAnava mADi PalavEnu ||1||   gOpya guNa guTTu illada...

ನಾರಾಯಣ ನಾರಾಯಣ | ಹಯವದನ | Narayana Narayana | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣ ನಾರಾಯಣ  ನಾರಾಯಣ ನಳಿನೋದರ ||ಪ|| ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ ||ಅಪ|| ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ ಪರಾತ್ಪರ ಪಾಂಡವಪ್ರಿಯ ಪರಿಪೂರ್ಣ ಪರಮಜಯ ||೧|| ಅಘಕುಲವನ ದಾವಾನಲ ಅಗಣಿತಗುಣಗಣ ನಿರ್ಮಲ ತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ ||೨|| ಅತಿ ಮೋಹನಚರಿತ ನಮೋ ಅತಿ ಸದ್ಗುಣಭರಿತ ನಮೋ ಹತ ಕಲ್ಮಶ ಹಯವದನ ಹರಿ ಹಯರಿಪುಹರಣ ಜಯ ||೩||  naaraayaNa naaraayaNa  naaraayaNa naLinOdara ||pa|| naaradapriya naama jaya naaraayaNa narakaaMtaka ||apa|| surasaMchaya sukhakaaraNa ditijaaMtaka dInasharaNa paraatpara paaMDavapriya paripUrNa paramajaya ||1|| aghakulavana daavaanala agaNitaguNagaNa nirmala triguNaatIta tribhuvana tridashEshwaravaMdya jaya ||2|| ati mOhanacharita namO ati sadguNabharita namO hata kalmasha hayavadana hari hayaripuharaNa jaya ||3|| 

ತೋರೇ ಬೇಗನೆ ತೋಯಜ ನಯನೆ | ಶ್ರೀಕೃಷ್ಣ | Tore Begane Toyaja Nayane | Sri Vyasarajaru

Image
ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ತೋರೇ ಬೇಗನೆ ತೋಯಜ ನಯನೆ ಮದವಾರಣ ಗಮನೆ ||ಪ|| ಮಾರನ ತಾಪವ ಸೈರಿಸಲಾರೆನೆ ನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ||ಅಪ|| ನೀರೊಳು ಮುಳು ಮುಳುಗಾಡುತ ಬಂದು ಮಥಿಸಿದ ಪಯಸ್ಸಿಂಧು ಮದಿಸಿದ ಪಯಸಿಂಧು  ಧಾರುಣಿ ಚಿಮ್ಮಿ ಮೇಲಕೆ ತಂದು ದನುಜನ ಕೊಂದು ಧನುಜನ  ಮೂರು ಪಾದವ ಬೇಡುತ ನಿಂದು ಮುನಿಕುಲದಲಿ ಬಂದು ನಾರಿಯ ಬಿಟ್ಟು ಪರನಾರಿಯರಾಳಿದ ತೋರಿ ಬತ್ತಲೆ ಹಯವೇರಿ ಮೆರೆದನ ||೧|| ಕತ್ತಲೆಯೊಡನೆ ಕಾದಿದ ಧೀರ ನೆಗಹಿದ ಮಂದರ  ಕಿತ್ತು ಮಣ್ಣಗೆದು ಮೆದ್ದನು ಬೇರ ದಾನವ ಸಂಹಾರ  ಒತ್ತಿದ ಬಲಿಯನು ಕಾಯ್ದನು ಶೂರ ಕುಜನ ಕುಠಾರ  ಹತ್ತು ಶಿರನ ಕತ್ತರಿಸಿ ಗೋಕುಲದೊಳು ಬತ್ತಲೆ ರಾವುತನಾಗಿ ಮೆರೆದನಾ ||೨|| ನಿಗಮ ಕದ್ದವನ ನೀಗಿದ ದಿಟ್ಟ ನೆಗಹಿದ ಘನಬೆಟ್ಟ  ಮಿಗಿಲೊಯಿದು ಸ್ವಾಹ, ಸ್ಥಳದೊಳಿಟ್ಟ ಘುಡುಘುಡಿಸುವ ದಿಟ್ಟ  ಜಗಕ್ಕೆಲ್ಲ ನೋಡೆ ಎರಡಡಿ ಇಟ್ಟ ಕೊಡಲಿಯ ಪೆಟ್ಟ  ಮೃಗವ ಕೆಡಹಿ ಕುಂತಿ ಮಗಗೆ ಸಾರಥಿಯಾಗಿ ಜಗವ ಮೋಹಿಸಿ ಹಯವನು ಏರಿದ ಸಿರಿ ಕೃಷ್ಣನ ||೩|| tOrE bEgane tOyaja nayane madavAraNa gamane ||pa|| mArana tApava sairisalArene nIre ninage muttinhArava koDuvene ||apa|| nIroLu muLu muLugADuta baMdu mathisida payassiMdhu dhAruNi cim...

ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು | ಸಿರಿ ಕೃಷ್ಣ | Krishna Krishna Krishna Endu | Sri Vyasarajaru

Image
ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು ಮೂರು ಬಾರಿ ನೆನೆಯಿರೋ ||ಪ|| ಸಂತುಷ್ಟನಾಗಿ ಮುಕುತಿಕೊಟ್ಟು ಮಿಕ್ಕ ಭಾರ ಹೊರುವನೋ ||ಅಪ|| ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನು | ಮಕರ ಕುಂಡಲಧರನ ನಾಮಕ್ಕೆ ಸರಿಯಿಲ್ಲವೋ ||೧|| ಕಮಲನಾಭನ ಚಿಹ್ನೆಯನ್ನು ಧರಿಸಿಕೊಂಡು ಮೆರೆಯಿರೋ || ಯಮನ ಭಟರು ನೋಡಿ ಅಂಜಿ ಅಡವಿಗೆ ಹೋಗುವರೋ ||೨|| ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೋ | ಸುಮ್ಮಾನದಿ ಸಿರಿ ಕೃಷ್ಣ ತನ್ನ ಲೋಕ ಕೊಡುವನೋ ||೩|| kRuShNA kRuShNA kRuShNA eMdu mUru bAri neneyirO ||pa|| saMtuShTanAgi mukutikoTTu mikka BAra horuvanO ||apa||   sakala vEda SAstra paThisi sAravannu tiLidarEnu | makara kuMDaladharana nAmakke sariyillavO ||1||   kamalanABana cihneyannu dharisikoMDu mereyirO || yamana BaTaru nODi aMji aDavige hOguvarO ||2||   janmavetti madhvamatava anusarisi naDeyirO | summaanadi siri kRuShNa tanna lOka koDuvanO ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru