ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವೃಂದಾವನಿ ಜನನಿ ವಂದಿಸುವೆ | ಜಗನ್ನಾಥ ದಾಸರು | Vrundavani Janani | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ವೃಂದಾವನಿ ಜನನಿ ವಂದಿಸುವೆ ಸತತ ಜ-
ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ತುಳಸಿನಿಜ-
ಮಂದಿರೆ ಎನಗೆ ದಯವಾಗೆ ||೧||

ಜಲಜಾಕ್ಷನಮಲಕಜ್ಜಲಬಿಂದು ಪೀಯೂಷ-
ಕಲಶದಲಿ ಬೀಳೆ ಜನಿಸಿದಿ | ಜನಿಸಿ ಹರಿಯಿಂದ ಶ್ರೀ-
ತುಲಸಿ ನೀನೆಂದು ಕರೆಸಿದಿ ||೨||

ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ
ನಾ ತುತಿಸಿ ಕೈ ಮುಗಿವೆನು | ಮುಗಿವೆ ಎನ್ನಯ ಮಹಾ-
ಪಾತಕವ ಕಳೆದು ಪೊರೆಯಮ್ಮ ||೩||

ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ
ಕಲುಷಕರ್ಮಗಳೆಣಿಸದೆ | ಎಣಿಸದೆ ಸಂಸಾರ-
ಜಲಧಿಯಿಂದೆಮ್ಮ ಕಡೆಹಾಯ್ಸು ||೪||

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ-
ಡಾಡಿದವ ನಿತ್ಯ ಹರಿಪಾದ | ಹರಿಪಾದಕಮಲಗಳ
ಕೂಡಿದವ ಸತ್ಯ ಎಂದೆಂದು ||೫||

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ-
ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ
ವಂದ್ಯರಾಗುವರು ಜಗದೊಳು ||೬||

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ-
ನಿಲಯನಂಘ್ರಿಗಳ ಪೂಜಿಪ | ಪೂಜಿಪರಿಗೆ ಪರಮಮಂ-
ಗಳದ ಪದವಿತ್ತು ಸಲಹುವಿ ||೭||

ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗ-
ನ್ನಾಥವಿಟ್ಠಲನ ಚರಣಾಬ್ಜ | ಚರಣಾಬ್ಜ ಎನ್ನ
ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ ||೮||

vRuMdaavani janani vaMdisuve satata ja-
laMdharana raaNi kalyaaNi | kalyaaNi tuLasinija-
maMdire enage dayavaage ||1||

jalajaakShanamalakajjalabiMdu pIyUSha-
kalashadali bILe janisidi | janisi hariyiMda shrI-
tulasi nIneMdu karesidi ||2||

shrItaruNivallabhana prItiviShayaLe ninna
naa tutisi kai mugivenu | mugive ennaya mahaa-
paatakava kaLedu poreyamma ||3||

tulasi ninnaDige naa talebaagi binnaipe
kaluShakarmagaLeNisade | eNisade saMsaara-
jaladhiyiMdemma kaDehaaysu ||4||

nODidava durita IDyaaDidava ninna koM-
DaaDidava nitya haripaada | haripaadakamalagaLa
kUDidava satya eMdeMdu ||5||

niMdisidavarella niMdyaraaguvaru abhi-
vaMdisida janaru surariMda | surariMda narariMda
vaMdyaraaguvaru jagadoLu ||6||

kaluShavarjite ninna daLagaLiMdali lakShmI-
nilayanaMghrigaLa pUjipa | pUjiparige paramamaM-
gaLada padavittu salahuvi ||7||

shrItuLasidEvi manmaata laalisu jaga-
nnaathaviTThalana caraNaabja | caraNaabja enna
hRutpadmadali nI tOre kRupeyiMda ||8||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru