ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕರವ ಮುಗಿದ ಮುಖ್ಯಪ್ರಾಣ | ಗುರು ಪುರಂದರವಿಠಲ | Karava mugida Mukhyaprana | Guru Purandara Vithala



ಸಾಹಿತ್ಯ : ಶ್ರೀ ಗುರು ಪುರಂದರ ದಾಸರು 
Kruti:  Sri Guru Purandara Dasaru 

 

ಕರವ ಮುಗಿದ ಮುಖ್ಯಪ್ರಾಣ ||ಪ||

ಕರವ ಮುಗಿದ ಶ್ರೀ ಹರಿಗೆ ಎದುರಾಗಿ| 
ದುರುಳರ ಸದೆದು ಸತ್‌ಶರಣರ ಪೊರೆಯೆಂದು ||ಅಪ||

ತಾರತಮ್ಯ ಪಂಚಭೇದ ಸತ್ಯವೆಂಬ || 
ಮಾರುತಿ ಮತ ಪೊಂದಿದವರ ನೀ ಕಾಯೆಂದು ||೧||

ಜೀವೇಶರೈಕ್ಯವು ಜಗತು ಮಿಥ್ಯವೆಂದು || 
ಈವಿಧ ಪೇಳುವ ಮಾಯ್ಗಳನಳಿಯೆಂದು ||೨||

ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎಂಬ 
ಕ್ಷುಲ್ಲಕರನು ಹಿಡಿದು ಹಲ್ಲು ಮುರಿಯೆಂದು ||೩||

ಪರಿ ಪರಿ ಭಕ್ತರ ಹೃದಯದೊಳಗೆ ನಿಂದು 
ನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು||೪||

ಹರಿ ಮಾಡುವ ವ್ಯಾಪಾರ ಬಲ್ಲ ಕಾರಣನಾಗಿ 
ಗುರು ಪುರಂದರವಿಠಲ ಚರಣಕ್ಕೆರಗಿ ನಿಂದು ||೫||

karava mugida muKyaprANa ||pa||

karava mugida SrI harige edurAgi| 
duruLara sadedu sat^^SaraNara poreyeMdu ||apa||
 
tAratamya paMcaBEda satyaveMba || 
mAruti mata poMdidavara nI kAyeMdu ||1||
 
jIvESaraikyavu jagatu mithyaveMdu || 
Ividha pELuva mAygaLanaLiyeMdu ||2||
 
illi mAtra BEda alli oMdE eMba 
kShullakaranu hiDidu hallu muriyeMdu ||3||
 
pari pari Baktara hRudayadoLage niMdu 
niruta mADuva karma harige arpitaveMdu||4||
 
hari mADuva vyApAra balla kAraNanAgi 
guru puraMdaraviThala caraNakkeragi niMdu ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru