ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿನ್ನಾ ಒಲುಮೆಯಿಂದ | ಶ್ರೀ ವಿಜಯ ದಾಸರು | Ninna Olumeyinda | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ನಿನ್ನಾ ಒಲುಮೆಯಿಂದ ನಿಖಿಳ ಜನರು ಬಂದು 
ಮನ್ನಿಸುವರೊ ಮಹರಾಯ ||ಪ||

ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ 
ನಿನ್ನದೇ ಸಕಲ ಸಂಪತ್ತು ||ಅಪ||

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ 
ಊರ್ಣ ವಿಚಿತ್ರ ಸುವಸನ 
ವರ್ಣವರ್ಣದಿಂದ ಬಾಹೋದೇನು ಸಂ-
ಪೂರ್ಣ ಗುಣಾರ್ಣವ ದೇವ ||೧||

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕಿನ್ನೂ 
ತಬ್ಬಿಬ್ಬುಗೊಂಡೆನೋ ಹಿಂದೆ 
ನಿರ್ಭರದಿಂದಲಿ ಸರ್ವರ ಕೂಡುಂಬೋ 
ಹಬ್ಬದೂಟವನುಣಿಸುವೆಯೊ ||೨||

ಸಂಜೀ ತನಕ ಇದ್ದು ಸಣ್ಣ ಸೌಟಿನ ತುಂಬ 
ಗಂಜಿ ಕಾಣದೆ ಬಳಲಿದೆನೋ 
ವ್ಯಂಜನ ಮೊದಲಾದ ನಾನಾ ರಸಂಗಳ 
ಭುಂಜಿಸುವುದು ಮತ್ತೇನೋ ||೩||

ಮನೆ ಮನೆ ತಿರುಗಿದರೂ ಕಾಸು ಪುಟ್ಟದೆ ಸು-
ಮ್ಮನೆ ಚಾಲ್ಪರಿದು ಬಳಲಿದೆನೋ ಹಣ 
ಹೊನ್ನು ದ್ರವ್ಯಗಳಿದ್ದಲ್ಲಿಗೆ 
ತನಗೆ ಪ್ರಾಪ್ತಿ ನೋಡೋ ಜೀಯಾ ||೪||

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ 
ಮೆದ್ದೆನೆಂದರೆ ಈಯಗಾಣೆ 
ಈ ಧರೆಯೊಳಗೆ ಸತ್ಪಾತ್ರರ ಜೊತೆಗುಂಬೋ 
ಪದ್ಧತಿ ನೋಡೋ ಪುಣ್ಯಾತ್ಮ ||೫||

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ 
ಚಾಚಿದೆ ನೊಸಲ ಹಸ್ತಗಳಾ 
ಯೋಚಿಸಿ ನೋಡಲು ಸೋಜಿಗವಾಗಿದೆ 
ವಾಚಕ್ಕೆ ನಿಲುಕದೋ ಹರಿಯೇ ||೬||

ವೈದಿಕ ಪದವೀವಗೀಬಗೆ ಲೌಕಿಕ 
ಐದಿಸುವುದು ಬಲು ಖ್ಯಾತೆ 
ಮೈದುನಗೊಲಿದ ಶ್ರೀ ವಿಜಯವಿಠ್ಠಲ ನಿನ್ನ 
ಪಾದ ಸಾಕ್ಷಿಯ ಅನುಭವವೋ ||೭||

ninnaa olumeyiMda niKiLa janaru baMdu 
mannisuvaro maharaaya ||pa||

enna puNyagaLiMda I pari uMTEnO 
ninnadE sakala saMpattu ||apa||

jIrNa malina vastra kaaNada manujage 
UrNa vicitra suvasana 
varNavarNadiMda baahOdEnu saM-
pUrNa guNaarNava dEva ||1||

obba heMgasina hoTTege haakuvudakkinnU 
tabbibbugoMDenO hiMde 
nirbharadiMdali sarvara kUDuMbO 
habbadUTavanuNisuveyo ||2||

saMjI tanaka iddu saNNa souTina tuMba 
gaMji kaaNade baLalidenO 
vyaMjana modalaada naanaa rasaMgaLa 
bhuMjisuvudu mattEnO ||3||

mane mane tirugidarU kaasu puTTade su-
mmane caalparidu baLalidenO haNa 
honnu dravyagaLiddallige 
tanage praapti nODO jIyaa ||4||

madhyaahna kaalakke atithigaLige anna 
meddeneMdare IyagaaNe 
I dhareyoLage satpaatrara joteguMbO 
paddhati nODO puNyaatma ||5||

nIcOcCa tiLiyade sarvara caraNakke 
caacide nosala hastagaLA 
yOcisi nODalu sOjigavaagide 
vaacakke nilukadO hariyE ||6||

vaidika padavIvagIbage loukika 
aidisuvudu balu Kyaate 
maidunagolida shrI vijayaviThThala ninna 
paada saakShiya anubhavavO ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru