ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜೋಗಿ ಬಂದಾನೋ ಗೋವಿಂದ | ಶ್ರೀ ಗುರು ಮಹಿಪತಿ ದಾಸರು | Jogi Bandano | Sri Guru Mahipati Dasaru


ಸಾಹಿತ್ಯ : ಶ್ರೀ ಗುರು ಮಹಿಪತಿ ದಾಸರು 
Kruti:Sri Guru Mahipati Dasaru


ಜೋಗಿ ಬಂದಾನೋ ಗೋವಿಂದ ನಮ್ಮ ಬಾಗಿಲಿಗೆ ನಡೆತಂದ ||ಪ||

ಬೇಗನೆ ಪವಡಿಸು ಕಂದಾ ನಾನು ಜೋಗುಳ ಹಾಡುವೆ ಚೆಂದಾ
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ 
ಯೋಗಿಗಳರಸನು ಝಗಝಗಿಸುವ ||ಅಪ||

ಜಡೆಯಲ್ಲಿ ಗಂಗೆಯ ಧರಿಸಿ ಮುಂಗುಡಿಯಲಿ ಚಂದ್ರನ ನಿಲ್ಲಿಸಿ ||
ಕಿಡಿಗಣ್ಣ ಮೂರನೆವೆರಸಿ, ಫಣಿ ಮಿಡಿಗಳ ಕುಂಡಲವಿರಿಸಿ ||
ಬಿಡದೆ ವಿಷವನುಂಡು ಕಡುಗಪ್ಪು ಕೊರಳೊಳು 
ಒಡನೆ ರುಂಡಮಾಲೆಯ ಗಡಬಡಿಸುವ ||೧||

ಇಟ್ಟ ವಿಭೂತಿಯ ತನುವಾ ಶಿವತೊಟ್ಟಾ ರುದ್ರಾಕ್ಷೀಲಿ ಮೆರೆವಾ, 
ಸೃಷ್ಟಿಗೆ ಕೌತುಕ ಎನಿಸುವಾ ಬಿಗಿದುಟ್ಟಿಹ ಹುಲಿ ಚರ್ಮಾಂಬರವಾ ||
ನೆಟ್ಟನೆ ಢಮರುವ ಮುಟ್ಟಿ ನುಡಿಸುತಲಿ 
ಚಟಚಟ ಧ್ವನಿಯಾರ್ಭಟದ ವೈರಾಗಿ ||೨||

ಶ್ರೀರಾಮ ನಾಮವ ನುಡಿದು ತಾನು ಕರದಿ ಕಪಾಲವ ಪಿಡಿದು 
ಧರೆಯೊಳು ಭಿಕ್ಷಾ ನೆವದಿಂದ ಹರ ತಿರುಗುವ ವಿಜ್ಞಾನ ಸಿಂಧು ||
ಗುರು ಮಹಿಪತಿಪ್ರಭು ನರ ನಾಟಕದಲಿ ಅವ-
ತರಿಸಿಹ ಗೋಕುಲದ ಸಿರಿ ನೋಡಲಾಗಿ ||೩||

jOgi baMdAnO gOviMda namma bAgilige naDetaMda ||pa||

bEgane pavaDisu kaMdA nAnu jOguLa hADuve ceMdA
gOgamananAgi SrI girijeya kUDi 
yOgigaLarasanu JagaJagisuva ||apa||
 
jaDeyalli gaMgeya dharisi muMguDiyali caMdrana nillisi ||
kiDigaNNa mUraneverasi, PaNi miDigaLa kuMDalavirisi ||
biDade viShavanuMDu kaDugappu koraLoLu 
oDane ruMDamAleya gaDabaDisuva ||1||
 
iTTa viBUtiya tanuvA SivatoTTA rudrAkShIli merevA, 
sRuShTige kautuka enisuvA bigiduTTiha huli carmAMbaravA ||
neTTane Dhamaruva muTTi nuDisutali 
caTacaTa dhvaniyArBaTada vairAgi ||2||
 
SrIrAma nAmava nuDidu tAnu karadi kapAlava piDidu 
dhareyoLu BikShA nevadiMda hara tiruguva vij~jAna siMdhu ||
guru mahipatipraBu nara nATakadali ava-
tarisiha gOkulada siri nODalAgi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru