ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕನಕದಾಸನ ಮೇಲೆ ದಯ | ಪುರಂದರ ವಿಠಲ | Kanakadasana Mele | Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕನಕದಾಸನ ಮೇಲೆ ದಯ ಮಾಡಲು ವ್ಯಾಸ-
ಮುನಿ ಮಠಿಕರೆಲ್ಲರು ದೂರುತಿಹರೊ||ಪ||

ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕವಾಯ್ತು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂದು ಯತಿ ನಗುತಲಿಹನು ||೧||

ಮರುದಿನ ಅವರವರ ಪರೀಕ್ಷೀಸಬೇಕೆನುತ
ಕರೆದು ಸನ್ಯಾಸಿಗಳ ಕನಕಸಹಿತ
ತ್ವರಿತದಲಿ ಕರದಲ್ಲಿ ಕದಳಿ ಫಲವನೆ ಕೊಟ್ಟು
ಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರಿ ಎನಲು||೨||

ಊರ ಹೊರಗೆ ಹೋಗಿ ಬ್ಯಾರೆ ಬ್ಯಾರೆ ಕುಳಿತು
ತ್ವರಿತದಿಂ ಮೆದ್ದು ವಿದ್ವಾಂಸರೆಲ್ಲ
ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ
ಸಾರಿ ಕದಳಿ ಫಲವ ತಂದು ಮುಂದಿಟ್ಟ||೩||

ಡಿಂಬದೊಳು ಶಬ್ದ ವಾಗಾದಿ ಶ್ರೋತೃಗಳಲ್ಲಿ
ಇಂಬಾಗಿ ತತ್ವೇಶರೆಲ್ಲ ತುಂಬಿಹರು
ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ
ಕಂಬದಂತಾದರವರೆಲ್ಲ ಕುಳಿತವರು||೪||

ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನಿದಿರಿಗೆ ಕಿನ್ನರಿಯ ಮೀಟಿದಂತೆ
ವೇಣುಧ್ವನಿ ಬಧಿರನ ಬಳಿ ಹೊರಡಿಸಿದಂತೆ
ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ||೫||

ನೋಡಿದಿರ ಈ ಕನಕನಾಡುವ ಮಾತುಗಳ 
ಮೂಢ ಜನರರಿಯಬಲ್ಲರೆ ಮಹಿಮೆಯನಾ-
ಡಾಡಿಯಂತೆಯೆ ಮಾಡಿಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ||೬||

ಕರದಲಿ ಮೂರ್ತಿಯ ಪಿಡಿದು ಕೇಳುತ್ತಿರಲು
ಅರಿಯದ ಜ್ಞಾನದಲಿ ಪೇಳುತ್ತಿರಲು
ತ್ವರದಿ ಕನಕನು ಬಂದು ವಾಸುದೇವನ ರೂಪ
ಪರಬೊಮ್ಮ ಪುರಂದರ ವಿಠಲನೆಂದ||೭||

kanakadaasana mEle daya maaDalu vyaasa-
muni maThikarellaru dUrutiharo||pa||

tIrthavanu koDuvaaga kanakanna kareyenalu
dhUrtaraagidda vidwaaMsarella
saarthakavaaytu ivara sanyaasitanavella
pUrtyaagaleMdu yati nagutalihanu ||1||

marudina avaravara parIkShIsabEkenuta
karedu sanyaasigaLa kanakasahita
twaritadali karadalli kadaLi phalavane koTTu
yaarirada sthaLadalli meddu banniri enalu||2||

Ura horage hOgi byaare byaare kuLitu
twaritadiM meddu vidwaaMsarella
tOralillavu enage EkaaMta sthaLavenuta
saari kadaLi phalava taMdu muMdiTTa||3||

DiMbadoLu shabda vaagaadi shrOtRugaLalli
iMbaagi tatwEsharella tuMbiharu
tiMbuvudu hEgenuta vyaasaraayara kELe
kaMbadaMtaadaravarella kuLitavaru||4||

maaNikavu kODagana kaiyalli iddaMte
kONanidirige kinnariya mITidaMte
vENudhwani badhirana baLi horaDisidaMte
kaNNu kaaNadavanige kannaDiya tOridaMte||5||

nODidira I kanakanaaDuva maatugaLa 
mUDha janarariyaballare mahimeyanaa-
DaaDiyaMteye maaDibiTTaru ivage
naaDella huDukidaru IDaara kaaNe||6||

karadali mUrtiya piDidu kELuttiralu
ariyada j~jaanadali pELuttiralu
twaradi kanakanu baMdu vaasudEvana rUpa
parabomma puraMdara viThalaneMda||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru