ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಂದಾ ಗೋವಿಂದಾ ಮುಕುಂದಾ | ಶ್ರೀ ಪ್ರಾಣೇಶ ವಿಠಲ | Banda Govinda | Pranesha Vithala Dasaru


ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು 
Kruti:Sri Pranesha Vittala Dasaru


ಬಂದಾ ಗೋವಿಂದಾ ಮುಕುಂದಾ
ನಿತ್ಯಾನಂದ ಬಂದ ಶ್ರೀ ಹರಿ ತಾ ಬಂದಾ ||ಪ||

ಬಂದ ದುರಿತಗಳ ಪರಿಹರಿಸಲು ನಮ್ಮ ಇಂದಿರೇಶ ಸ್ವಾಮಿ
ಶ್ರೀ ವೇಂಕಟೇಶನು ಬಂದನು ಭರದಿಂದ ಗರುಡವಾಹನನಾಗಿ ಬಂದ
ಬಂದ ಭಕ್ತ ವೃಂದವ ನೋಡುತ ||ಅಪ||

ದುರುಳನಾದ ದುಶ್ಯಾಸನ ಸಭೆಯೊಳು ತರುಣಿ ದ್ರೌಪದಿಯ
ಸೀರೆಯ ಸೆಳೆಯಲು ಪರಮ ಕರುಣದಿಂದ ತರುಣಿಗೆ
ಅಕ್ಷಯವಿತ್ತಾ ದ್ವಾರಕಾಧಿಪತಿ ಶ್ರೀಪತಿ ಒಲಿಯುತ ||೧||

ಅರಗಿನ ಮನೆಯೊಳು ಪಾಂಡು ಕುಮಾರರು
ಇರುತಿರೆ ಅವರಿಗೆ ಬಂದ ವಿಪತ್ತನು
ಪರಿಹಾರವ ಮಾಡಿ ದ್ರುಪದನ ಪುರಿಯೊಳು
ಪರಮ ಹರುಷದಿಂದ ಮದುವೆಯ ಮಾಡಿದವ ||೨||

ಗುಣನಿಧಿ ಪ್ರಾಣೇಶ ವಿಠಲನು ಬಂದಾ 
ಘನತರ ವಾದ್ಯ ವಿಶೇಷಗಳಿಂದ 
ಝಣ ಝಣಕೆನ್ನುವ ಗೆಜ್ಜೆನಾದಗಳಿಂದ 
ತದ್ಧಿಮಿ ಧಿಮಿಕೆಂದು ಕುಣಿಯುತಾ ಬಂದಾ ||೩||

baMdA gOviMdA mukuMdA
nityAnaMda baMda SrI hari tA baMdA ||pa||
 
baMda duritagaLa pariharisalu namma iMdirESa svAmi
SrI vEMkaTESanu baMdanu BaradiMda garuDavAhananAgi baMda
baMda Bakta vRuMdava nODutA ||apa||
 
duruLanAda duSyAsana saBeyoLu taruNi draupadiya
sIreya seLeyalu parama karuNadiMda taruNige
akShayavittA dvArakAdhipati SrIpati oliyuta ||1||
 
aragina maneyoLu pAMDu kumAraru
irutire avarige baMda vipattanu
parihArava mADi drupadana puriyoLu
parama harushadiMdA maduveya mADidava ||2||
 
guNanidhi prANESa viThalanu baMdA
Ganatara vAdya viSEShagaLiMda 
JaNa JaNakennuva gejjenAdagaLiMda 
taddhimi dhimikeMdu kuNiyutA baMdA ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru