ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಒಲಿದೆ ಯಾಕಮ್ಮಾ ಲಕುಮಿ | ರಂಗ ವಿಠಲ | Olide Yakamma Lakumi | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ಒಲಿದೆ ಯಾಕಮ್ಮಾ ಲಕುಮಿ ವಾಸುದೇವಗೆ ||ಪ||
ಶುದ್ಧ ನೀಲವರ್ಣದ ಮೈಯ್ಯಾ ಕಪ್ಪಿನವನಿಗೆ ಹ್ಯಾಂಗೆ ಆದಳು ||ಅಪ||

ಹುಟ್ಟಿದ ಮನೆಗಳ ಬಿಟ್ಟು ಕಳ್ಳ |
ದಿಟ್ಟತನದಿ ಗೋಕುಲದಲಿ ಬೆಳೆದ ||
ಚಟ್ಟೆ ಸಹಿತ ಹಾಲು ಕುಡಿದು ಅಲ್ಲಿ 
ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ ||೧||

ಗೊಲ್ಲರ ಮನೆಗಳ ಪೊಕ್ಕು ಅಲ್ಲಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ ||
ಮೆಲ್ಲನೆ ಸವಿ ಮಾತನಾಡಿ ಅಲ್ಲಿ
ಎಲ್ಲ ಸಖಿಯರ ಅಭಿಮಾನ ಗೇಡಿಗ ||೨||

ಮಾವನ ಮರ್ಧಿಸಿದವಗೆ ಅಲ್ಲಿ 
ಸೋಳಸಾಗೋಪೇರಿ ಮದುವೆ ಆದವಗೆ ||
ಹಾವಿನ ಮೇಲೇ ಒರಗಿದವಗೆ
ಕಾವೇರಿ ತೀರದ ರಂಗ ವಿಠಲಗೆ ||೩||

olide yAkammA lakumi vAsudEvage ||pa||
Suddha nIlavarNada maiyyA kappinavanige hyAMge AdaLu ||apa||
 
huTTida manegaLa biTTu kaLLa |
diTTatanadi gOkuladali beLeda ||
caTTe sahita hAlu kuDidu alli 
diTTa kALiMgana heDeya tuLidavanige ||1||
 
gollara manegaLa pokku alli
gullu mADade mosarella savida ||
mellane savi mAtanADi alli
ella saKiyara aBimAna gEDiga ||2||
 
mAvana mardhisidavage alli 
sOLasAgOpEri maduve Adavage ||
hAvina mElE oragidavage
kAvEri tIrada raMga viThalage ||3||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru