ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿನಗಿಂತ ಕುಂದೇನು | ಶ್ರೀ ಕನಕದಾಸರು | Ninaginta Kundenu | Kanakadasaru


ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru



ನಿನಗಿಂತ ಕುಂದೇನು ನಮ್ಮ ಜಯಲಕ್ಷ್ಮೀ | ನಿನಗಿಂತ ಕುಂದೇನು ||ಪ|| ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿ ಮನಸಿಜನೊಡೆಯನೆ ಕನಕಗರ್ಭನ ಜನಕ ಮಚ್ಚ್ಯಾವತಾರ ನೀನಾದರೆ ಆಕೆ ಮಚ್ಚ್ಯಗಂಗಳೆ ತಾನಾದಳು | ಹೆಚ್ಚಿನ ಶಂಖವ ಪಿಡಿದರೆ ಆಕೆ ನಿಚ್ಚ ಶಂಖಕಂಠಳಾದಳಯ್ಯ ||೧|| ನೀಲವರ್ಣನು ನೀನಾದರೆ ಆಕೆ | ನೀಲಕುಂತಳೆ ತಾನಾದಳು || ಲೋಲ ಕಮಲನಾಭನಾದರೆ | ಆಕೆ ಬಾಲಕಮಲಮುಖಿಯಾದಳಯ್ಯ ||೨|| ಬೆಟ್ಟವ ನೀನೊಂದು ಪೊತ್ತರೆ ಬೆಟ್ಟದಂಥ ಕುಚವೆರಡು ಪೊತ್ತಳೋ ಮೆಟ್ಟಿ ಶೇಷನ ನೀ ತುಳಿದರೆ - ಆಕೆ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ || ೩ || ಗಜರಾಜವರದ ನೀನಾದರೆ - ಆಕೆ ಗಜಗಮನೆಯು ತಾನಾದಳು ನಿಜ ನರಸಿಂಹ ನೀನಾದರೆ - ಆಕೆ ಭಜಿಸಿ ಸಿಂಹಮಧ್ಯೆಯಾದಳಯ್ಯ || ೪ || ಈ ಪರಿಯಲಿ ಬಹು ಜನಿಸಿದೆ ಭಲೆ | ಭಾಪುರೆ ಬಾಡದೊಳು ನೆಲೆಸಿದೆ || ಗೋಪಿಯರ ಮೋಹ ಸಲ್ಲಿಸಿದೆ ಚೆಲುವ ಶ್ರೀಪತಿ ಆದಿ ಕೇಶವರಾಯ ಮೆರೆದೆ || ೫ || ninagiMta kuMdEnu namma jayalakShmI | ninagiMta kuMdEnu ||pa|| ninagiMta kuMdEnO sanakaadigaLa svaami manasijanoDeyane kanakagarbhana janaka maccyAvatAra nInAdare Ake maccyagaMgaLe tAnAdaLu | heccina SaMKava piDidare Ake nicca SaMKakaMThaLAdaLayya ||1|| nIlavarNanu nInAdare Ake | nIlakuMtaLe tAnAdaLu || lOla kamalanABanAdare | Ake bAlakamalamuKiyAdaLayya ||2|| beTTava nInoMdu pottare beTTadaMtha kucaveraDu pottaLO meTTi shEShana nI tuLidare - Ake kaTTi baasege shEShana nilisihaLayya || 3 || gajaraajavarada nInaadare - Ake gajagamaneyu taanaadaLu nija narasiMha nInaadare - Ake bhajisi siMhamadhyeyaadaLayya || 4 || I pariyali bahu janiside bhale | Baapure bADadoLu neleside || gOpiyara mOha salliside celuva SrIpati Adi kESavarAya merede ||5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru