Posts

Showing posts from November, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪರಮಪುರುಷ ನೀನೆಲ್ಲಿಕಾಯಿ | ಶ್ರೀ ಕನಕ ದಾಸರು | Parama Purusha Ni Nellikayi | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಪರಮಪುರುಷ ನೀನೆಲ್ಲಿಕಾಯಿ ||ಪ|| ಸರಸಿಯೊಳಗೆ ಕರಿ ಕೂಗಲುಕಾಯಿ ||ಅ|| ಹಿರಿದು ಮಾಡಿದ ಪಾಪ ನುಗ್ಗೆ ಕಾಯಿ ಹರಿ ನಿನ್ನ ಧ್ಯಾನ ಬಾಳೆಕಾಯಿ ಸರುವ ಜೀವರಿಗುಣಿಸಿಯುಂ ಬದನೆಕಾಯಿ ಅರಿಷಡ್ವರ್ಗಗಳೊದಗಿಲಿ ಕಾಯಿ ||೧|| ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ ಘೋರ ದುಷ್ಕೃತಗಳು ಸೋರೆಕಾಯಿ ಭಾರತ ಕಥೆ ಕರ್ಣ ತುಪ್ಪಿರೆ ಕಾಯಿ ವಾರಿಜಾಕ್ಷನೆ ಗತಿಯೆಂದಿಪ್ಪೆ ಕಾಯಿ ||೨|| ಮುರಹರ ನಿನ್ನವರು ಅವರೆಕಾಯಿ ಗುರು ಕರುಣಾಮೃತ ಉಣಸಿಕಾಯಿ ವರ ಭಕ್ತ ವತ್ಸಲನೆಂಬ ಹೆಸರಕಾಯಿ ಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೆಕಾಯಿ ||೩|| paramapuruSha nInellikAyi ||pa|| sarasiyoLage kari kUgalukAyi ||a|| hiridu mADida pApa nugge kAyi hari ninna dhyAna bALekAyi saruva jIvariguNisiyuM badanekAyi ariShaDvargagaLodagili kAyi ||1|| krUra vyAdhigaLella hIrekAyi GOra duShkRutagaLu sOrekAyi BArata kathe karNa tuppire kAyi vArijAkShane gatiyeMdippe kAyi ||2|| murahara ninnavaru avarekAyi guru karuNAmRuta uNasikAyi vara Bakta vatsalaneMba hesarakAyi siriyAdi kESava ninna nAma meNisekAyi ||3||

ಮೂರು ಜಗವ ಕುಣಿಸುವಂಥ | ಹೆಳವನ ಕಟ್ಟೆ ರಂಗ | Mooru Jagava | Sri Helavanakatte Giriyamma

Image
ಸಾಹಿತ್ಯ :ಶ್ರೀ ಹೆಳವನಕಟ್ಟೆ ಗಿರಿಯಮ್ಮ   Kruti:  Sri Helavanakatte Giriyamma ಮೂರು ಜಗವ ಕುಣಿಸುವಂಥ ಗಾರುಡಿಗ ಇವ ಯಾರಕ್ಕ| ನಾರಾಯಣನಲ್ಲವೇನ ನಾರಿ ಕೇಳ ತಂಗಿ ||ಪ|| ಧರೆಯ ಸುರಳಿ ಸುತ್ತಿದಂಥ ಅರಸು ಇಂವ ಯಾರಕ್ಕ| ಅರಿಯದ ಭಕ್ತರ ಮೊರೆಯನ ಕೇಳ್ದ ವರಾಹ ಕೇಳ್ತಂಗಿ ||೧|| ಕುದುರೆಯನೇರಿ ಎದುರಿಗೆ ಬರುವ ಚದುರ ಇಂವ ಯಾರಕ್ಕ| ಮಧುರಾ ಪುರದ ಕದನವ ಹಿಕ್ಕಿದ ಕಲ್ಕ್ಯನು ಕೇಳ್ತಂಗಿ ||೨|| ಇಂದು ವದನ ಮೂರ್ತಿ ಗೋವಿಂದ ಇಂವ ಯಾರಕ್ಕ| ನಂದನ ಕಂದ ಹೆಳವನ ಕಟ್ಟೆ ರಂಗ ಕೇಳ್ತಂಗಿ ||೩|| mUru jagava kuNisuvaMtha gAruDiga iva yArakka| nArAyaNanallavEna nAri kELa taMgi ||pa|| dhareya suraLi suttidaMtha arasu iMva yArakka| ariyada Baktara moreyana kELda varAha kELtaMgi ||1||   kudureyanEri edurige baruva cadura iMva yArakka| madhurA purada kadanava hikkida kalkyanu kELtaMgi ||2||   iMdu vadana mUrti gOviMda iMva yArakka| naMdana kaMda heLavana kaTTe raMga kELtaMgi ||3||

ಜೋಗಿ ಬಂದಾನೋ ಗೋವಿಂದ | ಶ್ರೀ ಗುರು ಮಹಿಪತಿ ದಾಸರು | Jogi Bandano | Sri Guru Mahipati Dasaru

Image
ಸಾಹಿತ್ಯ : ಶ್ರೀ ಗುರು ಮಹಿಪತಿ ದಾಸರು  Kruti:Sri Guru Mahipati Dasaru ಜೋಗಿ ಬಂದಾನೋ ಗೋವಿಂದ ನಮ್ಮ ಬಾಗಿಲಿಗೆ ನಡೆತಂದ ||ಪ|| ಬೇಗನೆ ಪವಡಿಸು ಕಂದಾ ನಾನು ಜೋಗುಳ ಹಾಡುವೆ ಚೆಂದಾ ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ  ಯೋಗಿಗಳರಸನು ಝಗಝಗಿಸುವ ||ಅಪ|| ಜಡೆಯಲ್ಲಿ ಗಂಗೆಯ ಧರಿಸಿ ಮುಂಗುಡಿಯಲಿ ಚಂದ್ರನ ನಿಲ್ಲಿಸಿ || ಕಿಡಿಗಣ್ಣ ಮೂರನೆವೆರಸಿ, ಫಣಿ ಮಿಡಿಗಳ ಕುಂಡಲವಿರಿಸಿ || ಬಿಡದೆ ವಿಷವನುಂಡು ಕಡುಗಪ್ಪು ಕೊರಳೊಳು  ಒಡನೆ ರುಂಡಮಾಲೆಯ ಗಡಬಡಿಸುವ ||೧|| ಇಟ್ಟ ವಿಭೂತಿಯ ತನುವಾ ಶಿವತೊಟ್ಟಾ ರುದ್ರಾಕ್ಷೀಲಿ ಮೆರೆವಾ,  ಸೃಷ್ಟಿಗೆ ಕೌತುಕ ಎನಿಸುವಾ ಬಿಗಿದುಟ್ಟಿಹ ಹುಲಿ ಚರ್ಮಾಂಬರವಾ || ನೆಟ್ಟನೆ ಢಮರುವ ಮುಟ್ಟಿ ನುಡಿಸುತಲಿ  ಚಟಚಟ ಧ್ವನಿಯಾರ್ಭಟದ ವೈರಾಗಿ ||೨|| ಶ್ರೀರಾಮ ನಾಮವ ನುಡಿದು ತಾನು ಕರದಿ ಕಪಾಲವ ಪಿಡಿದು  ಧರೆಯೊಳು ಭಿಕ್ಷಾ ನೆವದಿಂದ ಹರ ತಿರುಗುವ ವಿಜ್ಞಾನ ಸಿಂಧು || ಗುರು ಮಹಿಪತಿಪ್ರಭು ನರ ನಾಟಕದಲಿ ಅವ- ತರಿಸಿಹ ಗೋಕುಲದ ಸಿರಿ ನೋಡಲಾಗಿ ||೩|| jOgi baMdAnO gOviMda namma bAgilige naDetaMda ||pa|| bEgane pavaDisu kaMdA nAnu jOguLa hADuve ceMdA gOgamananAgi SrI girijeya kUDi  yOgigaLarasanu JagaJagisuva ||apa||   jaDeyalli gaMgeya dharisi muMguDiyali caMdrana nillisi || kiDigaNNa mUraneverasi, PaNi miDig...

ಮಂಗಳಾರತಿಯ ಪಾಡಿರೆ | ಶ್ರೀ ಕನಕ ದಾಸರು | Mangalaratiya Padire | Sri Kanaka Dasaru

Image
ಸಾಹಿತ್ಯ: ಶ್ರೀ ಕನಕದಾಸರು Kruti:   Sri Kanakadasaru ಮಂಗಳಾರತಿಯ ಪಾಡಿರೆ ಮಾನಿನಿಯರು ||ಪ|| ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ ಚಂದದಿ ಪಡೆದವನ ನಂದನೆಯಳ ನಲ- ವಿಂದ ಧರಿಸಿದ ಮುಕುಂದನಿಗೆ ||೧|| ರಥವನಡರಿ ಸುರಪಥದಲಿ ತಿರುಗುವನ ಸುತನಿಗೆ ಶಾಪವನಿತ್ತವನ ಖತಿಯನು ತಡೆದನ ಸತಿಯ ಜನನಿಸುತನ ಸತಿಯರನಾಳಿದ ಚತುರನಿಗೆ ||೨|| ಹರಿಯ ಮಗನ ಶಿರ ತರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ ಭರದಿ ಭುಜಿಸಿದವನ ಶಿರದಲಿ ನಟಿಸಿದ ವರ ಕಾಗಿನೆಲೆಯಾದಿಕೇಶವಗೆ ||೩|| maMgaLaaratiya paaDire maaniniyaru ||pa|| aMdhakananujana kaMdana taMdeya koMdana shiradali niMdavana chaMdadi paDedavana naMdaneyaLa nala- viMda dharisida mukuMdanige ||1|| rathavanaDari surapathadali tiruguvana sutanige shaapavanittavana khatiyanu taDedana satiya jananisutana satiyaranaaLida chaturanige ||2|| hariya magana shira taridana taMdeya hiriya magana tammana pitana bharadi bhujisidavana shiradali naTisida vara kaagineleyaadikEshavage ||3||

ಒಂಭತ್ತು ಹೂವಿಗೆ ಒಂದೇ | ಶ್ರೀ ಕನಕದಾಸರು | Ombhattu Hoovige | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಒಂಭತ್ತು ಹೂವಿಗೆ ಒಂದೇ ನಾಳವು ಚಂದಮಾಮ || ಪ || ತುಂಬಿನಾಳ ತುದಿ ತುಂಬಿ ಭಾನುಪ್ರಭೆ ಚಂದಮಾಮ || ಅಪ|| ಕದರು ಗಾತರ ಕಂಬ ತೆಕ್ಕೆಗಾತರ ಹೂವು ಚಂದಮಾಮ  ಆನೆ ಗಾತರ ಕಾಯಿ ಒಂಟೆ ಗಾತರ ಹಣ್ಣು ಚಂದಮಾಮ || ೧ || ಕಾಲಿಲ್ಲದಾತನು ಹತ್ತಿದನಾ ಮರವನು ಚಂದಮಾಮ ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ || ೨ || ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ ತಳವಿಲ್ಲದಾ ಗೂಡೆಯಲ್ಲಿ ಇಳಿಸಿದನಾ ಹಣ್ಣ ಚಂದಮಾಮ || ೩ || ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ ಸದ್ದಿಲ್ಲದ ಸಂತೇಲಿ ಇಳಿಸಿದರಾ ಹಣ್ಣ ಚಂದಮಾಮ || ೪ || ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ || ೫ || ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ || ೬ || ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ || ೭ || ಗುರುವಿನ ಮಹಿಮೆ ಗುರುವೇ ತಾ ಬಲ್ಲನು ಚಂದಮಾಮ ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ || ೮ || ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ ತಿಳಿದವರು ಹೇಳಿರಿ ಹಳೆಗನ್ನಡವ ಚಂದಮಾಮ || ೯ || oMbhattu hUvige oMdE naaLavu caMdamaama || pa || tuMbinaaLa tudi tuMbi bhaanuprabhe caMdamaama || apa|| kadaru gaatara kaMba tekkegaatara hUvu caMda...

ಅಂಗಳದೊಳು ರಾಮ ಆಡಿದ | ಆದಿಕೇಶವ | Angaladolu Rama Adida | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಅಂಗಳದೊಳು ರಾಮ ಆಡಿದ ||ಪ|| ಚಂದ್ರ ಬೇಕೆಂದು ತಾ ಹಟ ಮಾಡಿದ ||ಅಪ|| ತಾಯ ಕರೆದು ಕೈ ತೋರಿದ |  ಮುಗಿಲ ಕಡೆಗೊಮ್ಮೆ ದೃಷ್ಟಿಸಿ ನೋಡಿದ || ಚಿನ್ನಿ ಕೋಲು ಚಂಡು ಬುಗುರಿಯೆಲ್ಲವ  ಬೇಡ ಬೇಡಾ ಎಂದು ಬಿಸಾಡಿದ ||೧|| ಕಂದ ಬಾ ಎಂದು ತಾಯಿ ಕರೆದಳು |  ತಾಯಿ ಕೌಸಲ್ಯ ಕಳವಳಗೊಂಡಳು || ಕಂದ ಅಂಜಿದನೆಂದುಕೊಂಡಳು |  ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು ||೨|| ಅಳುವ ಧ್ವನಿಯ ಕೇಳಿ ರಾಜನು  ಮಂತ್ರಿ ಸಹಿತಲೆ ಧಾವಿಸಿ ಬಂದನು || ನಿಲುವುಗನ್ನಡಿ ತಂದಿರಿಸಿದ ||  ಅಲ್ಲಿ ರಾಮಗೆ ಚಂದ್ರನ ತೋರಿದ ||೩|| ಈ ಚಂದ್ರ ಮಧುಕೇಶ ನೋಡಿದ |  ಚಂದ್ರ ಸಿಕ್ಕಾನೆಂದು ಕುಣಿದಾಡಿದ || ಈ ಸಂಭ್ರಮ ಆದಿಕೇಶವ ನೋಡಿದ |  ರಘುವಂಶವನ್ನೇ ಕೊಂಡಾಡಿದ ||೪|| aMgaLadoLu rAma ADida ||pa|| caMdra bEkeMdu tA haTa mADida ||apa||   tAya karedu kai tOrida |  mugila kaDegomme dRuShTisi nODida || cinni kOlu caMDu buguriyellava  bEDa bEDA eMdu bisADida ||1||   kaMda bA eMdu tAyi karedaLu |  tAyi kausalya kaLavaLagoMDaLu || kaMda aMjidaneMdukoMDaLu |  mammu uNNeMdu baNNisuttiddaLu ||2||   aLuva dhvaniya kELi rAjanu  maMtri sahit...

ಹಲವು ಜೀವನವ ಒಂದೆಲೆ | ಕಾಗಿನೆಲೆ ಆದಿಕೇಶವ | Halavu Jeevanava | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಹಲವು ಜೀವನವ ಒಂದೆಲೆ ನುಂಗಿತು | ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ ||ಪ|| ಹರಿಯ ನುಂಗಿತು ಪರಬ್ರಹ್ಮನ ನುಂಗಿತು | ಸುರರಿಗುಂಟಾದ ದೇವರ ನುಂಗಿತು || ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ | ಹರಿಯ ಬಳಗವ ಒಂದೆಲೆ ನುಂಗಿತು ||೧|| ಎಂಟು ಗಜವನು ನುಂಗಿ ಕಂಟಕರೈವರ ನುಂಗಿ |  ಉಂಟಾದ ಗಿರಿಯ ತಲೆಯ ನುಂಗಿತು || ಕಂಠವ ಪಿಡಿದ ಬ್ರಹ್ಮನ ನುಂಗಿತೆಲೋ ದೇವ | ಎಂಟಾರು ಲೋಕ ಒಂದೆಲೆ ನುಂಗಿತು ||೨|| ಗಿಡವ ನುಂಗಿತು ಗಿಡದೊಡ ತೊಟ್ಟ ನುಂಗಿತು | ಗಿಡದ ತಾಯಿ ತಂದೆಯ ನುಂಗಿತು || ಬೆಡಗ ಬಲ್ಲರೆ ಪೇಳಿ ಕನಕದಾಸ ಎ| ನ್ನೊಡೆಯಾದಿಕೇಶವ ಬಲ್ಲನೀಬೆಡಗ ||೩|| halavu jIvanava oMdele nuMgitu | kAgi neleyAdikESava ballanI beDaga ||pa||   hariya nuMgitu parabrahmana nuMgitu | surariguMTAda dEvara nuMgitu || urigaNNa Sivana oMdele nuMgitelo dEva | hariya baLagava oMdele nuMgitu ||1|| eMTu gajavanu nuMgi kaMTakaraivara nuMgi | uMTaada giriya taleya nuMgitu || kaMThava piDida brahmana nuMgitelO dEva | eMTAru lOka oMdele nuMgitu ||2|| giDava nuMgitu giDadoDa toTTa nuMgitu | giDada tAyi taMdeya nuMgitu || beDaga ballare pELi kanakadAsa e| nnoDeyAdikESava bal...

ಮರೆಯದಿರು ಮರೆಯದಿರು | ಶ್ರೀ ಕನಕದಾಸರು | Mareyadiru Mareyadiru | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಮರೆಯದಿರು ಮರೆಯದಿರು ಮರುಳು ಮನುಜಾ ನಾರಾಯಣನ ಸ್ಮರಣೆಯನು ಮಾಡು ಮನುಜ ||ಪ||  ರಂಗನಾಥನು ಇರಲಿಕ್ಕೆ ಜಂಗುಳಿದೈವಗಳೇಕೆ ತುಂಗಭದ್ರೆ ಇರಲಿಕ್ಕೆ ಬಾವಿಕೆರೆಯೇಕೆ ಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆ ಮಂಗಳಾತ್ಮನಿರಲಿಕ್ಕೆ ಪರದೈವವೇಕೆ ||೧|| ಹಾಲುಹಳ್ಳವಿರಲಿಕ್ಕೆ ವಾಳಿಯವ ತರಲೇಕೆ ಮೇಲುನಾಮವಿರಲಿಕ್ಕೆ ಕಟಕು ಇನ್ನೇಕೆ ಬಾಲಹನುಮನಿರಲಿಕ್ಕೆ ಹುಲುಕಪಿಗಳೇಕೆ ಮೇಲಾದ ತುಳಸಿ ಇರೆ ಕಗ್ಗೊರಲೆಯೇಕೆ ||೨|| ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆ ರನ್ನಮಾಣಿಕವಿರೆ ಕಾಜಿನ ಹರಳೇಕೆ ಅನ್ನತುಪ್ಪವಿರಲಿಕ್ಕೆ ಮದ್ಯಪಾನಗಳೇಕೆ ಚೆನ್ನಾದಿಕೇಶವನಿರೆ ಬಿನುಗುದೈವಗಳೇಕೆ ||೩|| mareyadiru mareyadiru maruLu manujaa naaraayaNana smaraNeyanu maaDu manuja ||pa||  raMganaathanu iralikke jaMguLidaivagaLEke tuMgabhadre iralikke baavikereyEke aMgane sati iralikke baNagu heNNugaLEke maMgaLaatmaniralikke paradaivavEke ||1|| haaluhaLLaviralikke vaaLiyava taralEke mElunaamaviralikke kaTaku innEke baalahanumaniralikke hulukapigaLEke mElAda tuLasi ire kaggoraleyEke ||2|| chinnada giriyiralikke kabbiNada moraDiyEke rannamaaNikavire kaajina haraLEke annatuppavirali...

ಕುಲ ಕುಲ ಕುಲವೆನ್ನುತಿಹರು | ಶ್ರೀ ಕನಕದಾಸರು | Kula Kula Kulavennutiharu | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಕುಲ ಕುಲ ಕುಲವೆನ್ನುತಿಹರು ||ಪ|| ಕುಲ ಯಾವುದು ಸತ್ಯಸುಖವುಳ್ಳ ಜನರಿಗೆ ||ಅಪ||  ಕೆಸರೊಳು ತಾವರೆ ಪುಟ್ಟಲು ಅದ ತಂದು  ಕುಸುಮನಾಭನಿಗರ್ಪಿಸಲಿಲ್ಲವೇ ||  ಹಸುವಿನ ಮಾಂಸದೊಳ್ ಉತ್ಪತ್ತಿ ಕ್ಷೀರವು,  ವಸುಧೆಯೊಳಗೆ ಭೂಸುರರುಣಲಿಲ್ಲವೇ ||೧||   ಮೃಗಗಳ ಮೈಯಲ್ಲಿ ಹುಟ್ಟಿದ ಕಸ್ತೂರಿ  ತೆಗೆದು ಪೂಸುವರು ಭೂಸುರರು ||  ಒಗೆಯಿಂದ ನಾರಾಯಣ ಯಾತರ ಕುಲದವ,  ಅಗಜೆ ವಲ್ಲಭನು ಯಾತರ ಕುಲದವನು ||೨||    ಆತ್ಮ ಯಾವ ಕುಲ, ಜೀವ ಯಾವ ಕುಲ,  ತತ್ವೇಂದ್ರಿಯಗಳ ಕುಲ ಪೇಳಿರಯ್ಯ ||   ಆತ್ಮಾಂತರಾತ್ಮ ನೆಲೆಯಾದಿ ಕೇಶವ,  ಆತನೊಲಿದ ಮೇಲೆ ಯಾತರ ಕುಲವಯ್ಯ ||೩|| kula kula kulavennutiharu ||pa|| kula yAvudu satyasuKavuLLa janarige ||apa||  kesaroLu tAvare puTTalu ada taMdu  kusumanABanigarpisalillavE ||  hasuvina mAMsadoL utpatti kShIravu,  vasudheyoLage BUsuraruNalillavE ||1||   mRugagaLa maiyalli huTTida kastUri  tegedu pUsuvaru BUsuraru ||  ogeyiMda nArAyaNa yAtara kuladava,  agaje vallaBanu yAtara kuladavanu ||2||    Atma yAva kula, jIv...

ಕನಕದಾಸನ ಮೇಲೆ ದಯ | ಪುರಂದರ ವಿಠಲ | Kanakadasana Mele | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕನಕದಾಸನ ಮೇಲೆ ದಯ ಮಾಡಲು ವ್ಯಾಸ- ಮುನಿ ಮಠಿಕರೆಲ್ಲರು ದೂರುತಿಹರೊ||ಪ|| ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ ಸಾರ್ಥಕವಾಯ್ತು ಇವರ ಸನ್ಯಾಸಿತನವೆಲ್ಲ ಪೂರ್ತ್ಯಾಗಲೆಂದು ಯತಿ ನಗುತಲಿಹನು ||೧|| ಮರುದಿನ ಅವರವರ ಪರೀಕ್ಷೀಸಬೇಕೆನುತ ಕರೆದು ಸನ್ಯಾಸಿಗಳ ಕನಕಸಹಿತ ತ್ವರಿತದಲಿ ಕರದಲ್ಲಿ ಕದಳಿ ಫಲವನೆ ಕೊಟ್ಟು ಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರಿ ಎನಲು||೨|| ಊರ ಹೊರಗೆ ಹೋಗಿ ಬ್ಯಾರೆ ಬ್ಯಾರೆ ಕುಳಿತು ತ್ವರಿತದಿಂ ಮೆದ್ದು ವಿದ್ವಾಂಸರೆಲ್ಲ ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ ಸಾರಿ ಕದಳಿ ಫಲವ ತಂದು ಮುಂದಿಟ್ಟ||೩|| ಡಿಂಬದೊಳು ಶಬ್ದ ವಾಗಾದಿ ಶ್ರೋತೃಗಳಲ್ಲಿ ಇಂಬಾಗಿ ತತ್ವೇಶರೆಲ್ಲ ತುಂಬಿಹರು ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ ಕಂಬದಂತಾದರವರೆಲ್ಲ ಕುಳಿತವರು||೪|| ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ ಕೋಣನಿದಿರಿಗೆ ಕಿನ್ನರಿಯ ಮೀಟಿದಂತೆ ವೇಣುಧ್ವನಿ ಬಧಿರನ ಬಳಿ ಹೊರಡಿಸಿದಂತೆ ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ||೫|| ನೋಡಿದಿರ ಈ ಕನಕನಾಡುವ ಮಾತುಗಳ  ಮೂಢ ಜನರರಿಯಬಲ್ಲರೆ ಮಹಿಮೆಯನಾ- ಡಾಡಿಯಂತೆಯೆ ಮಾಡಿಬಿಟ್ಟರು ಇವಗೆ ನಾಡೆಲ್ಲ ಹುಡುಕಿದರು ಈಡಾರ ಕಾಣೆ||೬|| ಕರದಲಿ ಮೂರ್ತಿಯ ಪಿಡಿದು ಕೇಳುತ್ತಿರಲು ಅರಿಯದ ಜ್ಞಾನದಲಿ ಪೇಳುತ್ತಿರಲು ತ್ವರದಿ ಕನಕನು ಬಂದು ವಾಸುದೇವನ...

ಆರು ಬದುಕಿದರಯ್ಯ | ಕಾಗಿನೆಲೆಯಾದಿ ಕೇಶವ | Aaru Badukidarayya | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಆರು ಬದುಕಿದರಯ್ಯ ಹರಿ ನಿನ್ನ ನಂಬಿ||ಪ|| ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ||ಅಪ|| ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ ||೧|| ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನ ಸರಸದಿಂ ಮಗಳ ಗಂಡನ ಕೊಲಿಸಿದೆ ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ನರಕಾಸುರನ ಹೆಂಡಿರನು ತಂದೆ ||೨|| ತಿರಿದುಂಬೊ ದಾಸರ ಕೈಯ ಕಪ್ಪ ಕೊಂಬ ಮರ್ಮ ತಿರುಮಲಾಚಾರ್ಯ ಶ್ರೀಗುರುವೆ ಬಲ್ಲ ವರ ಕಾಗಿನೆಲೆಯಾದಿಕೇಶವನ ಭಜಿಸಿದರೆ ತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ ||೩|| Aru badukidarayya hari ninna naMbi||pa|| tOru I dhareyoLage obbaranu kaaNe kRuShNa ||apa|| kalaha baarada munna karNanobbana koMde sulabhadali kouravara maneya muride nelava bEDalu hOgi baliya bhUmige tuLide moleyanuNNalu pOgi pUtaniya koMde ||1|| karuLoLage kattariyaniTTe haMsadhwajana sarasadiM magaLa gaMDana koliside maruLiniMdali pOgi bhRugumuniya kaNNoDede aritu narakaasurana heMDiranu taMde ||2|| tiriduMbo daasara kaiya kappa koMba marma tirumalaachaarya shrIguruve b...

ಕರವ ಮುಗಿದ ಮುಖ್ಯಪ್ರಾಣ | ಗುರು ಪುರಂದರವಿಠಲ | Karava mugida Mukhyaprana | Guru Purandara Vithala

Image
ಸಾಹಿತ್ಯ : ಶ್ರೀ ಗುರು ಪುರಂದರ ದಾಸರು  Kruti:  Sri Guru Purandara Dasaru    ಕರವ ಮುಗಿದ ಮುಖ್ಯಪ್ರಾಣ ||ಪ|| ಕರವ ಮುಗಿದ ಶ್ರೀ ಹರಿಗೆ ಎದುರಾಗಿ|  ದುರುಳರ ಸದೆದು ಸತ್‌ಶರಣರ ಪೊರೆಯೆಂದು ||ಅಪ|| ತಾರತಮ್ಯ ಪಂಚಭೇದ ಸತ್ಯವೆಂಬ ||  ಮಾರುತಿ ಮತ ಪೊಂದಿದವರ ನೀ ಕಾಯೆಂದು ||೧|| ಜೀವೇಶರೈಕ್ಯವು ಜಗತು ಮಿಥ್ಯವೆಂದು ||  ಈವಿಧ ಪೇಳುವ ಮಾಯ್ಗಳನಳಿಯೆಂದು ||೨|| ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎಂಬ  ಕ್ಷುಲ್ಲಕರನು ಹಿಡಿದು ಹಲ್ಲು ಮುರಿಯೆಂದು ||೩|| ಪರಿ ಪರಿ ಭಕ್ತರ ಹೃದಯದೊಳಗೆ ನಿಂದು  ನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು||೪|| ಹರಿ ಮಾಡುವ ವ್ಯಾಪಾರ ಬಲ್ಲ ಕಾರಣನಾಗಿ  ಗುರು ಪುರಂದರವಿಠಲ ಚರಣಕ್ಕೆರಗಿ ನಿಂದು ||೫|| karava mugida muKyaprANa ||pa|| karava mugida SrI harige edurAgi|  duruLara sadedu sat^^SaraNara poreyeMdu ||apa||   tAratamya paMcaBEda satyaveMba ||  mAruti mata poMdidavara nI kAyeMdu ||1||   jIvESaraikyavu jagatu mithyaveMdu ||  Ividha pELuva mAygaLanaLiyeMdu ||2||   illi mAtra BEda alli oMdE eMba  kShullakaranu hiDidu hallu muriyeMdu ||3||   pari pari Baktara hRudayadoLage niMdu  nirut...

ಒಲಿದೆ ಯಾಕಮ್ಮಾ ಲಕುಮಿ | ರಂಗ ವಿಠಲ | Olide Yakamma Lakumi | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಒಲಿದೆ ಯಾಕಮ್ಮಾ ಲಕುಮಿ ವಾಸುದೇವಗೆ ||ಪ|| ಶುದ್ಧ ನೀಲವರ್ಣದ ಮೈಯ್ಯಾ ಕಪ್ಪಿನವನಿಗೆ ಹ್ಯಾಂಗೆ ಆದಳು ||ಅಪ|| ಹುಟ್ಟಿದ ಮನೆಗಳ ಬಿಟ್ಟು ಕಳ್ಳ | ದಿಟ್ಟತನದಿ ಗೋಕುಲದಲಿ ಬೆಳೆದ || ಚಟ್ಟೆ ಸಹಿತ ಹಾಲು ಕುಡಿದು ಅಲ್ಲಿ  ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ ||೧|| ಗೊಲ್ಲರ ಮನೆಗಳ ಪೊಕ್ಕು ಅಲ್ಲಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ || ಮೆಲ್ಲನೆ ಸವಿ ಮಾತನಾಡಿ ಅಲ್ಲಿ ಎಲ್ಲ ಸಖಿಯರ ಅಭಿಮಾನ ಗೇಡಿಗ ||೨|| ಮಾವನ ಮರ್ಧಿಸಿದವಗೆ ಅಲ್ಲಿ  ಸೋಳಸಾಗೋಪೇರಿ ಮದುವೆ ಆದವಗೆ || ಹಾವಿನ ಮೇಲೇ ಒರಗಿದವಗೆ ಕಾವೇರಿ ತೀರದ ರಂಗ ವಿಠಲಗೆ ||೩|| olide yAkammA lakumi vAsudEvage ||pa|| Suddha nIlavarNada maiyyA kappinavanige hyAMge AdaLu ||apa||   huTTida manegaLa biTTu kaLLa | diTTatanadi gOkuladali beLeda || caTTe sahita hAlu kuDidu alli  diTTa kALiMgana heDeya tuLidavanige ||1||   gollara manegaLa pokku alli gullu mADade mosarella savida || mellane savi mAtanADi alli ella saKiyara aBimAna gEDiga ||2||   mAvana mardhisidavage alli  sOLasAgOpEri maduve Adavage || hAvina mElE oragidavage kAvEri tIrad...

ಬಾರೋ ಕೃಷ್ಣಯ್ಯ | ಶ್ರೀ ನೆಲೆಯಾದಿಕೇಶವ | Baaro Krishnayya | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti:   Sri Kanakadasaru ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. || ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗದಲಿ ಶ್ರೀಹರಿ  || ಅ.ಪ. || ಅಂದುಗೆ ಪಾಡಗ ಕಾಲಂದುಗೆ ಕಿರುಗೆಜ್ಜೆ  ಧಿಂ ಧಿಮಿ ಧಿಮಿ ಧಿಮಿ ಧಿಮಿಕೆನ್ನುತ |  ಪೊಂಗೊಳಲನೂದುತ ಬಾರಯ್ಯ || ೧ || ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ  ಕಿಂಕಿಣಿ ಕಿಣಿ ಕಿಣಿ ಕಿಣಿರೆನ್ನುತ | ಪೊಂಗೊಳಲೂದುತ ಬಾರಯ್ಯ ಬಾರೋ ಕೃಷ್ಣಯ್ಯ || ೨ || ವಾಸಾ ಉಡುಪಿ ಶ್ರೀ ನೆಲೆಯಾದಿ ಕೇಶವನ  ದಾಸಾ ನಿನ್ನ ಪದ ದಾಸಾ | ನಿನ್ನ ಪದ ದಾಸ ಸಲಹಲು ಬಾರಯ್ಯ || ೩ || bArO kRuShNayya ninna bhaktara manegIga kRuShNayya || pa. || bArO ninna mukha tOrO ninna sari yArO jagadali shrIhari || a.pa. || aMduge pADaga kAlaMduge kirugejje  dhim dhimi dhimi dhimi dhimikennuta | poMgoLalanUduta baarayya || 1 || kaMkaNa karadalli honnuMgura hoLeyuta  kiMkiNi kiNi kiNi kiNirennuta | poMgoLalUduta bArayya bArO kriShNayya || 2 || vAsA uDupi shri neleyAdi kEshavana  dAsA ninna pada dAsA | ninna pada dAsA salahalu bArayya || 3 ||

ವೃಂದಾವನಿ ಜನನಿ ವಂದಿಸುವೆ | ಜಗನ್ನಾಥ ದಾಸರು | Vrundavani Janani | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ವೃಂದಾವನಿ ಜನನಿ ವಂದಿಸುವೆ ಸತತ ಜ- ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ತುಳಸಿನಿಜ- ಮಂದಿರೆ ಎನಗೆ ದಯವಾಗೆ ||೧|| ಜಲಜಾಕ್ಷನಮಲಕಜ್ಜಲಬಿಂದು ಪೀಯೂಷ- ಕಲಶದಲಿ ಬೀಳೆ ಜನಿಸಿದಿ | ಜನಿಸಿ ಹರಿಯಿಂದ ಶ್ರೀ- ತುಲಸಿ ನೀನೆಂದು ಕರೆಸಿದಿ ||೨|| ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ ನಾ ತುತಿಸಿ ಕೈ ಮುಗಿವೆನು | ಮುಗಿವೆ ಎನ್ನಯ ಮಹಾ- ಪಾತಕವ ಕಳೆದು ಪೊರೆಯಮ್ಮ ||೩|| ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ಕಲುಷಕರ್ಮಗಳೆಣಿಸದೆ | ಎಣಿಸದೆ ಸಂಸಾರ- ಜಲಧಿಯಿಂದೆಮ್ಮ ಕಡೆಹಾಯ್ಸು ||೪|| ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ- ಡಾಡಿದವ ನಿತ್ಯ ಹರಿಪಾದ | ಹರಿಪಾದಕಮಲಗಳ ಕೂಡಿದವ ಸತ್ಯ ಎಂದೆಂದು ||೫|| ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ- ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು ||೬|| ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ- ನಿಲಯನಂಘ್ರಿಗಳ ಪೂಜಿಪ | ಪೂಜಿಪರಿಗೆ ಪರಮಮಂ- ಗಳದ ಪದವಿತ್ತು ಸಲಹುವಿ ||೭|| ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗ- ನ್ನಾಥವಿಟ್ಠಲನ ಚರಣಾಬ್ಜ | ಚರಣಾಬ್ಜ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ ||೮|| vRuMdaavani janani vaMdisuve satata ja- laMdharana raaNi kalyaaNi | kalyaaNi tuLasinija- maMdire enage dayavaage ||1|...

ವೃಂದಾವನದ ಸೇವೆಯ | ಶ್ರೀ ವಾದಿರಾಜರು | Vrundavanada Seveya | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ವೃಂದಾವನದ ಸೇವೆಯ ಮಾಡಿ ||ಪ|| ವೃಂದಾವನದ ಸೇವೆಮಾಡಿದವರಿಗೆ ಭೂ - ಬಂಧನ ಬಿಡುಗಡೆಯಾಗುವುದು ||ಅಪ|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗೀ- ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆ ಏಳು ಪ್ರದಕ್ಷಿಣೆಯನು ಮಾಡಿದವರಿಗೆ ಏಳು ಜನ್ಮದ ಪಾಪ ಹಿಂಗುವುದು ||೧|| ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ- ನ್ನೀರನೆರೆದು ಪ್ರತಿದಿವಸದಲ್ಲಿ ಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನ ಸೇರಿಸುವಳು ತನ್ನ ಪದವಿಯನು ||೨|| ಒಡೆಯನ ಮನೆಗೆ ನೀರುತರುತಲೊಬ್ಬಳು ಎಡಹಿ ಬಿದ್ದಳು ತನ್ನ ಕೊಡನೊಡೆಯೆ ಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನ ಕೊಡಳೆ ಅವಳಿಗೆ ಮೋಕ್ಷಪದವಿಯನು ||೩|| ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ- ದೇಶಿಸಿದನು ತನ್ನ ಭಾಗವತದಲ್ಲಿ ಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ- ರಾಶೆಯಿಂದಲಿ ಮುಕ್ತಿ ದೊರಕುವುದು ||೪|| ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮ ಎಡಭಾಗದಲಿ ಲಕ್ಷ್ಮೀದೇವಿಯ ಸಹಿತ ಸಡಗರದಿಂದಲ್ಲಿ ಹಯವದನನ ಪಾದ ಬಿಡದೆ ಪೂಜಿಸಿ ಭಕ್ತಿ ಪಡೆವಿರಯ್ಯ ||೫|| vRuMdaavanada sEveya maaDi ||pa|| vRuMdaavanada sEvemaaDidavarige bhU - baMdhana biDugaDeyaaguvudu ||apa|| ELutaalidire kaMDu karava mugidu bEgI- rELu lOkada maatege namOyeMbOdallade ELu pradakShiNeyanu maaDidavarige ELu janmada paapa hiMguvu...

ಕೈಲಾಸ ವಾಸ ಗೌರೀಶ ಈಶ | ವಿಜಯ ವಿಠ್ಠಲ | Kailasavasa Gowrisha Isha | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕೈಲಾಸ ವಾಸ ಗೌರೀಶ ಈಶ ||ಪ|| ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ ||ಅಪ|| ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ | ಮಹಿಯೊಳಗೆ ಚರಿಸಿದೆನೋ ಮಹದೇವನೆ || ಅಹಿಭೂಷಣನೆ ಎನ್ನ ಅವಗುಣಗಳೆಣಿಸದಲೆ | ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡು ಶಂಭೋ ||೧|| ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ | ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ || ದನುಜ ಮದಗಜ ಅರಿಯೆ ದಂಡ ಪ್ರಣಮವ ಮಾಳ್ಪೆ | ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲಿ ||೨|| ಭಾಗೀರಥೀಧರನೆ ಭಯವ ಪರಿಹರಿಸಯ್ಯ | ಲೇ -  ಸಾಗಿ ಒಲಿದೆನಗೆ ಶರ್ವದೇವನೇ || ಭಾಗವತ ಜನಪ್ರೀಯ ವಿಜಯ ವಿಠ್ಠಲನಂಘ್ರಿ  ಜಾಗು ಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ ||೩|| kailAsa vAsa gaurISa ISa ||pa|| tailadhAreyaMte manasu koDu hariyalli SaMBO ||apa||   ahO rAtriyali nAnu anucarAgraNiyAgi | mahiyoLage carisidenO mahadEvane || ahiBUShaNane enna avaguNagaLeNisadale | vihita dharmadi viShNu Bakutiyanu koDu SaMBO ||1||   manasu kAraNavalla pApapuNyakkella | analAkSha ninna prEraNeyillade || danuja madagaja ariye daMDa praNamava mALpe | maNisu I manasu sajjanara siri caraNadali ||2||   BAgIrathIdharane Ba...

ನಿನ್ನಾ ಒಲುಮೆಯಿಂದ | ಶ್ರೀ ವಿಜಯ ದಾಸರು | Ninna Olumeyinda | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ನಿನ್ನಾ ಒಲುಮೆಯಿಂದ ನಿಖಿಳ ಜನರು ಬಂದು  ಮನ್ನಿಸುವರೊ ಮಹರಾಯ ||ಪ|| ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ  ನಿನ್ನದೇ ಸಕಲ ಸಂಪತ್ತು ||ಅಪ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ  ಊರ್ಣ ವಿಚಿತ್ರ ಸುವಸನ  ವರ್ಣವರ್ಣದಿಂದ ಬಾಹೋದೇನು ಸಂ- ಪೂರ್ಣ ಗುಣಾರ್ಣವ ದೇವ ||೧|| ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕಿನ್ನೂ  ತಬ್ಬಿಬ್ಬುಗೊಂಡೆನೋ ಹಿಂದೆ  ನಿರ್ಭರದಿಂದಲಿ ಸರ್ವರ ಕೂಡುಂಬೋ  ಹಬ್ಬದೂಟವನುಣಿಸುವೆಯೊ ||೨|| ಸಂಜೀ ತನಕ ಇದ್ದು ಸಣ್ಣ ಸೌಟಿನ ತುಂಬ  ಗಂಜಿ ಕಾಣದೆ ಬಳಲಿದೆನೋ  ವ್ಯಂಜನ ಮೊದಲಾದ ನಾನಾ ರಸಂಗಳ  ಭುಂಜಿಸುವುದು ಮತ್ತೇನೋ ||೩|| ಮನೆ ಮನೆ ತಿರುಗಿದರೂ ಕಾಸು ಪುಟ್ಟದೆ ಸು- ಮ್ಮನೆ ಚಾಲ್ಪರಿದು ಬಳಲಿದೆನೋ ಹಣ  ಹೊನ್ನು ದ್ರವ್ಯಗಳಿದ್ದಲ್ಲಿಗೆ  ತನಗೆ ಪ್ರಾಪ್ತಿ ನೋಡೋ ಜೀಯಾ ||೪|| ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ  ಮೆದ್ದೆನೆಂದರೆ ಈಯಗಾಣೆ  ಈ ಧರೆಯೊಳಗೆ ಸತ್ಪಾತ್ರರ ಜೊತೆಗುಂಬೋ  ಪದ್ಧತಿ ನೋಡೋ ಪುಣ್ಯಾತ್ಮ ||೫|| ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ  ಚಾಚಿದೆ ನೊಸಲ ಹಸ್ತಗಳಾ  ಯೋಚಿಸಿ ನೋಡಲು ಸೋಜಿಗವಾಗಿದೆ  ವಾಚಕ್ಕೆ ನಿಲುಕದೋ ಹರಿಯೇ ||೬|| ವೈದಿಕ ಪದವೀವಗೀಬಗೆ ಲೌಕಿಕ  ಐದಿಸುವುದು ಬಲು ಖ್ಯಾತೆ  ಮೈದುನಗೊಲಿದ ಶ್ರೀ ವಿಜಯವಿಠ್ಠ...

ರತುನ ದೊರಕಿತಲ್ಲ | ರಚನೆ - ಜಗನ್ನಾಥ ದಾಸರು | Ratuna Dorakitalla | Jagannatha Dasara Kruti

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ರತುನ ದೊರಕಿತಲ್ಲ ಎನಗೆ ದಿವ್ಯ- ರತುನ ದೊರಕಿತಲ್ಲ||ಪ|| ರತುನ ದೊರಕಿತು ಎನ್ನ ಜನ್ಮ ಪ- ವಿತ್ರವಾಯಿತು ಈ ದಿನವು ನಾ ಯತನಗೈಯುತ ಬರುತಿರಲು ಪ್ರ- ಯತನವಿಲ್ಲದೆ ವಿಜಯರಾಯರೆಂಬ ||ಅಪ|| ಪಥದೀ ನಾ ಬರುತಿರಲು ಥಳಥಳವೆಂದು ಅತಿಕಾಂತಿ ಝಳಪಿಸಲು ಬೆರಗಾಗುತ ಅತಿಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ ಸ- ನ್ಮತಿಯ ಪಾಲಿಸಿ ಮೋಕ್ಷಸುಪಥವ ಅತಿಶಯದಿ ತೋರುತಲಿ ಪೊರೆಯುವ ||೧|| ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ ಆಣಿಮುತ್ತಿನ ಭಕ್ತಿಲಿ ಸುಕೃತಮಾಲಾ ನಾನಾ ವಿಧ ಹವಳದಲಿ ಸೇರಿಸುತಿರೆ ಪ್ರಾಣಪದಕವೆಂಬೊ ಮಾಲಾನು- ಮಾನವಿಲ್ಲದೆ ಕೊರಳಿಗ್ಹಾಕುತ ಗಾನದಿಂ ಕುಣಿಯುತಲಿ ಪಾಡುತ ದೀನಜನರುದ್ಧಾರ ಗೈಯುವ ||೨|| ಶೋಧಿಸಿ ಗ್ರಂಥಗಳ ಸುಳಾದಿಯ ಮೋದದಿಂದಲಿ ಬಹಳ ಕವಿತೆ ಮಾಡಿ ಸಾಧುಜನಕೆ ಸುಕಾಲ ಆನಂದವಿತ್ತು ವಾದಿ ಜನರನು ಗೆದ್ದು ವಾದಿಸಿ ಮಾಧವ ಜಗನ್ನಾಥವಿಠಲನ ಪಾದಕಮಲಕೆ ಮಧುಪನಂದದಿ ಸಾದರದಿ ತೋರಿಸುತ ಮೆರೆಯುವ ||೩|| ratuna dorakitalla enage divya- ratuna dorakitalla||pa|| ratuna dorakitu enna janma pa- vitravaayitu I dinavu naa yatanagaiyuta barutiralu pra- yatanavillade vijayaraayareMba ||apa|| pathadI naa barutiralu thaLathaLaveMdu atikaaMti jhaL...

ಎಲ್ಲಮ್ಮ ಎನಬೇಡವೇ | ವಿಜಯ ವಿಠ್ಠಲ | Ellamma Enabedave | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಎಲ್ಲಮ್ಮ ಎನಬೇಡವೇ ಸಿರಿದೇವಿ ಎಲ್ಲರಮ್ಮನಲ್ಲವೆ ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಶ್ರೀ ಲಕುಮಿಯೆ ಅಮ್ಮನಲ್ಲದೆ ಮತ್ತಿಲ್ಲ ||ಪ|| ಆಲದೆಲೆಯ ಮೇಲೆ ತನ್ನ ಪುರುಷನಂದು ಕಾಲವರಿತು ಪವಡಿಸಿರಲು ವಾಲಗವನು ಮಾಡಿ ಕೊಂಡಾಡಿ ಜೀವರ ಮೂಲ ಕರ್ಮಂಗಳು ತೀರುವಂತೆ ಮಾಡಿದ ||೧|| ಅಮೋಘ ವೀರ್ಯ ಗರ್ಭದಿ ಧರಿಸಿ ತಾ ಬೊಮ್ಮಾಂಡವನೆ ಪೆತ್ತ ಲೋಕಾಮಾತಾ ಸುಮನಸರಿಗೆ ಕಡೆಗಣ್ಣ ನೋಟದಿ ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||೨|| ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು ಪರಮ ಪುರುಷ ನಮ್ಮ ವಿಜಯವಿಠ್ಠಲನ್ನ ಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ||೩|| ellamma enabEDavE siridEvi ellarammanallave ballidaraagippa bommaadigaLige shrI lakumiye ammanallade mattilla ||pa|| Aladeleya mEle tanna puruShanaMdu kaalavaritu pavaDisiralu vaalagavanu maaDi koMDaaDi jIvara mUla karmaMgaLu tIruvaMte maaDida ||1|| amOGa vIrya garbhadi dharisi taa bommaaMDavane petta lOkaamaataa sumanasarige kaDegaNNa nOTadi A mahaa padaviya koDuva bhaagyavaMte ||2|| eraDoMdu guNadalli praviShThaLaagi jI vara yOgyateyaMte paalisutippaLu parama puruSha namma vijayaviThThalann...

ಬಾರೋ ರಾಘವೇಂದ್ರ ಬಾರೋ | ಜಗನ್ನಾಥ ವಿಠಲ | Baaro Raghavendra Baaro | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿ ಬಾರೋ ||ಪ|| ಆರಾಧಿಪ ಭಕ್ತರಭೀಷ್ಟ ಪೂರೈಸುವ ಪ್ರಭುವೇ ಬಾರೋ ||ಅಪ|| ರಾಜವಂಶೋದ್ಭವನ ಪಾದ ರಾಜೀವ ಭೃಂಗನೆ ಬಾರೋ ರಾಜಾಧಿ ರಾಜರೊಳು ವಿರಾಜಿಸುವ ಚೆಲುವ(ನೆ) ಬಾರೋ ||೧|| ವ್ಯಾಸರಾಯನೆನಿಸಿ ನೃಪನ ಕ್ಲೇಶ ಕಳೆದವನೆ ಬಾರೋ ಶ್ರೀ ಸುಧೀಂದ್ರ ಕರಸಂಜಾತ ವಾಸುದೇವಾರ್ಚಕನೆ ಬಾರೋ ||೨|| ಸನ್ಯಾಸ ಕುಲದೀಪ ಬಾರೋ ಸನ್ನುತ ಮಹಿಮನೆ ಬಾರೋ ಮಾನ್ಯ ಜಗನ್ನಾಥವಿಠಲ ಪ್ರಸನ್ನಜನರ ಪ್ರಿಯನೆ ಬಾರೋ ||೩|| baarO raaGavEMdra baarO kaaruNyavaaridhi baarO ||pa|| Araadhipa bhaktarabhIShTa pUraisuva prabhuvE baarO ||apa|| raajavaMshOdbhavana paada raajIva bhRuMgane baarO raajaadhi raajaroLu viraajisuva cheluva(ne) baarO ||1|| vyaasaraayanenisi nRupana klEsha kaLedavane baarO shrI sudhIMdra karasaMjaata vaasudEvaarcakane baarO ||2|| sanyaasa kuladIpa baarO sannuta mahimane baarO maanya jagannaathaviThala prasannajanara priyane baarO ||3||

ರಾಮನಾಮ ಪಾಯಸಕ್ಕೆ | ಪುರಂದರ ವಿಠಲ | Rama nama payasakke | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ||ಪ|| ವಿಠಲ ನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ ||ಅಪ|| ಒಮ್ಮನ ಗೋಧಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ || ಸುಮ್ಮನೆ ಸಜ್ಜಿಗೆ ತೆಗೆದು ಸಣ್ಣ ಸೇವಿಗೆಯ ಹೊಸೆದು ||೧|| ಹೃದಯವೆಂಬೋ ಪಾತ್ರೆಯೊಳಗೆ | ಭಾವವೆಂಬೋ ಎಸರು ಇಟ್ಟು || ಬುದ್ಧಿಯಿಂದ ಪಾಕವ ಮಾಡಿ ಹರಿವಾಣದೊಳಗೆ ನೀಡಿ ||೨|| ಆನಂದ ಆನಂದವೆಂಬೋ ತೇಗು ಬಂದ ಪರಿಯಲಿ || ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೋ ||೩|| rAmanAma pAyasakke kRuShNanAma sakkare ||pa|| viThala nAma tuppava beresi bAyi capparisirO ||apa||   ommana gOdhiya taMdu | vairAgya kallali bIsi || summane sajjige tegedu saNNa sEvigeya hosedu ||1||   hRudayaveMbO pAtreyoLage | BAvaveMbO esaru iTTu || buddhiyiMda pAkava mADi harivANadoLage nIDi ||2||   AnaMda AnaMdaveMbO tEgu baMda pariyali || AnaMda mUruti namma puraMdara viThalana neneyirO ||3||  

ಬಂದನೋ ಗೋವಿಂದ | ವಾಸುದೇವ ವಿಠಲ | Bandano Govinda | Sri Vasudeva Vithala Dasaru

Image
ಸಾಹಿತ್ಯ :  ಶ್ರೀ ವಾಸುದೇವ ವಿಠಲ ದಾಸರು  Kruti:Sri Vasudeva Vithala Dasaru ಬಂದನೋ ಗೋವಿಂದ ಚಂದದಿ ಆನಂದ | ಸುಂದರಿಯರ ಮಂದಿರಕ್ಕೆ ನಂದನ ಕಂದ ||ಪ|| ಸುಂದರಾಕಾರ ನಂದ ಕಂದ ಗಂಭೀರಾ | ಇಂದು ವದನೆಯರ ಮುಖಗಳಂದ ನೋಡಿದ || ತಂದ ಕುಸುಮ ಕರದಿಂದ ಮುಡಿಸಿದ | ಬಂದನೋ ಗೋವಿಂದನೋ ಅರವಿಂದ ನಯನ ||೧|| ಕಾನನದಲ್ಲಿ ಬಲು ದೀನನಾಗಲ್ಲಿ | ವೇಣುನಾದವೋ ತಾ ಕೂಡಿ ಮೋದವೋ || ಜಾಣನಿವನು ಸುಮ ಬಾಣಪಿತನು | ಮಾನಿನಿ ವೇಣುಗಳೊಲಿವೊ ಗಾನ ಮಾಡುತ್ತಾ ||೨|| ಓಡಿ ಬಂದರೋ ಬಲು ಬೇಡಿಕೊಂಡರೋ | ಗಾರುಡಿಕಾರನು ಅವರ ನೋಡಿ ಮೆರೆದನೋ || ಮಾಡಿದ ಜಾಲ ವಾಸುದೇವ ವಿಠಲ | ಮಾಡಿದ ಮನ ಮಾಡಿದ ತಾ ಕೂಡಿದನಾಗ ||೩|| baMdanO gOviMda caMdadi AnaMda | suMdariyara maMdirakke naMdana kaMda ||pa||   suMdarAkAra naMda kaMda gaMBIrA | iMdu vadaneyara muKagaLaMda nODida || taMda kusuma karadiMda muDisida | baMdanO gOviMdanO araviMda nayana ||1|| kAnanadalli balu dInanAgalli | vENunAdavO tA kUDi mOdavO || jANanivanu suma bANapitanu | mAnini vENugaLolivo gAna mADuttA ||2|| ODi baMdarO balu bEDikoMDarO | gAruDikAranu avara nODi meredanO || mADida jAla vAsudEva viThala | mADida mana mADida tA kUDidanAga ||3||

ಈತ ಲಿಂಗದೇವ ಶಿವನು | ಹೆಳವನಕಟ್ಟೆ ಗಿರಿಯಮ್ಮ | Ita Linga Deva | Sri Helavanakatte Giriyamma

Image
ಸಾಹಿತ್ಯ : ಶ್ರೀ ಹೆಳವನಕಟ್ಟೆ ಗಿರಿಯಮ್ಮ  Kruti    : Sri Helavanakatte Giriyamma ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು ಮಾತನಾಡೋ ಮಂಕು ಮನುಜಾ ಮನದಹಂಕಾರ ಬಿಟ್ಟು ||ಪ|| ವೇದಕೆ ಸಿಲುಕದಾತನೀತಾ ವೇದ ನಾಲ್ಕು ತಂದನಾತಾ ಬೂದಿ ಮೈಯೊಳು ಧರಿಸಿದನೀತಾ ಇದ್ದ ಗಿರಿಯ ಪೊದ್ದನಾತಾ ||೧|| ವ್ಯಾಧನಾಗಿ ಒಲಿದನೀತಾ ಮಾಧವಾ ಮಧುಸೂದನಾತಾ ಮದನನ್ನ ಉರುಹಿದನೀತಾ ಮದನ ಪುತ್ರನ ಪಡೆದಾತನಾತ ||೨|| ಗಂಗೆಯ ಪೊತ್ತಾತನೀತಾ ಹಾಂಗೆ ಗರುಡಗಮನನಾತಾ ತುಂಗ ಹೆಳವನಕಟ್ಟಿ ಲಿಂಗನೀತಾ ರಂಗನಾಥಾ ||೩||  Ita liMgadEva Sivanu Ata raMgadhaama viShNu maatanaaDO maMku manujaa manadahaMkaara biTTu ||pa|| vEdake silukadaatanItaa vEda naalku taMdanaataa bUdi maiyoLu dharisidanItaa idda giriya poddanaataa ||1|| vyaadhanaagi olidanItaa maadhavaa madhusUdanaataa madananna uruhidanItaa madana putrana paDedaatanaata ||2|| gaMgeya pottaatanItaa haaMge garuDagamananaataa tuMga heLavanakaTTi liMganItaa raMganaathaa ||3|| 

ಬಂದದ್ದೊಂದು ಚಂದ ಸಾಲದೆ | ಪುರಂದರ ವಿಠಲ | Bandaddondu Chanda | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಂದದ್ದೊಂದು ಚಂದ ಸಾಲದೆ ಗೋವಿಂದನು ||ಪ|| ವಿಕಟಾಂಗಿ ಪೂತನಿಯ ಕೊಂದು ಶಕಟಾಸುರನ ಕಾಲಲಿ ತುಳಿದು ಧಿಕ್ಕುಟ ಧಿಕ್ಕುಟ ಧಿಕ್ಕುಟ ಎನ್ನುತ ಅಕ್ಕರೆಯಿಂದಲಿ ಕುಣಿಯುತ ಮನೆಗೆ ||೧|| ಗೋವರ್ಧನ ಪರ್ವತನೆತ್ತಿ ಗೋವುಗಳನ್ನೆ ಕಾಯ್ದು ತನ್ನ ಮಾವ ಕಂಸನನ್ನು ಕೊಂದು ಆವಕೂಡಿ ಆಡುತ ಮನೆಗೆ ||೨|| ಸರ್ವತ್ರದಿ ವ್ಯಾಪ್ತನಾದ ಸರ್ವದೋಷ ರಹಿತನಾದ ಸರ್ವವಂದ್ಯ ಪುರಂದರವಿಠಲನು ಸರ್ವಕಾಲದಿ ರಕ್ಷಿಸುವನು ||೩|| baMdaddoMdu CaMda saalade gOviMdanu ||pa|| vikaTaaMgi pUtaniya koMdu SakaTaasurana kaalali tuLidu dhikkuTa dhikkuTa dhikkuTa ennuta akkareyiMdali kuNiyuta manege ||1|| gOvardhana parvatanetti gOvugaLanne kaaydu tanna maava kaMsanannu koMdu aavakUDi aaDuta manege ||2|| sarvatradi vyaaptanaada sarvadOSha rahitanaada sarvavaMdya puraMdaraviThalanu sarvakaaladi rakShisuvanu ||3||

ಬಂದಾ ಗೋವಿಂದಾ ಮುಕುಂದಾ | ಶ್ರೀ ಪ್ರಾಣೇಶ ವಿಠಲ | Banda Govinda | Pranesha Vithala Dasaru

Image
ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು  Kruti:Sri Pranesha Vittala Dasaru ಬಂದಾ ಗೋವಿಂದಾ ಮುಕುಂದಾ ನಿತ್ಯಾನಂದ ಬಂದ ಶ್ರೀ ಹರಿ ತಾ ಬಂದಾ ||ಪ|| ಬಂದ ದುರಿತಗಳ ಪರಿಹರಿಸಲು ನಮ್ಮ ಇಂದಿರೇಶ ಸ್ವಾಮಿ ಶ್ರೀ ವೇಂಕಟೇಶನು ಬಂದನು ಭರದಿಂದ ಗರುಡವಾಹನನಾಗಿ ಬಂದ ಬಂದ ಭಕ್ತ ವೃಂದವ ನೋಡುತ ||ಅಪ|| ದುರುಳನಾದ ದುಶ್ಯಾಸನ ಸಭೆಯೊಳು ತರುಣಿ ದ್ರೌಪದಿಯ ಸೀರೆಯ ಸೆಳೆಯಲು ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತಾ ದ್ವಾರಕಾಧಿಪತಿ ಶ್ರೀಪತಿ ಒಲಿಯುತ ||೧|| ಅರಗಿನ ಮನೆಯೊಳು ಪಾಂಡು ಕುಮಾರರು ಇರುತಿರೆ ಅವರಿಗೆ ಬಂದ ವಿಪತ್ತನು ಪರಿಹಾರವ ಮಾಡಿ ದ್ರುಪದನ ಪುರಿಯೊಳು ಪರಮ ಹರುಷದಿಂದ ಮದುವೆಯ ಮಾಡಿದವ ||೨|| ಗುಣನಿಧಿ ಪ್ರಾಣೇಶ ವಿಠಲನು ಬಂದಾ  ಘನತರ ವಾದ್ಯ ವಿಶೇಷಗಳಿಂದ  ಝಣ ಝಣಕೆನ್ನುವ ಗೆಜ್ಜೆನಾದಗಳಿಂದ  ತದ್ಧಿಮಿ ಧಿಮಿಕೆಂದು ಕುಣಿಯುತಾ ಬಂದಾ ||೩|| baMdA gOviMdA mukuMdA nityAnaMda baMda SrI hari tA baMdA ||pa||   baMda duritagaLa pariharisalu namma iMdirESa svAmi SrI vEMkaTESanu baMdanu BaradiMda garuDavAhananAgi baMda baMda Bakta vRuMdava nODutA ||apa||   duruLanAda duSyAsana saBeyoLu taruNi draupadiya sIreya seLeyalu parama karuNadiMda taruNige akShayavittA dvArakAdhipati SrIpati oliyuta ||1||   aragina ...

ನಿನಗಿಂತ ಕುಂದೇನು | ಶ್ರೀ ಕನಕದಾಸರು | Ninaginta Kundenu | Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ನಿನಗಿಂತ ಕುಂದೇನು ನಮ್ಮ ಜಯಲಕ್ಷ್ಮೀ | ನಿನಗಿಂತ ಕುಂದೇನು ||ಪ|| ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿ ಮನಸಿಜನೊಡೆಯನೆ ಕನಕಗರ್ಭನ ಜನಕ ಮಚ್ಚ್ಯಾವತಾರ ನೀನಾದರೆ ಆಕೆ ಮಚ್ಚ್ಯಗಂಗಳೆ ತಾನಾದಳು | ಹೆಚ್ಚಿನ ಶಂಖವ ಪಿಡಿದರೆ ಆಕೆ ನಿಚ್ಚ ಶಂಖಕಂಠಳಾದಳಯ್ಯ ||೧|| ನೀಲವರ್ಣನು ನೀನಾದರೆ ಆಕೆ | ನೀಲಕುಂತಳೆ ತಾನಾದಳು || ಲೋಲ ಕಮಲನಾಭನಾದರೆ | ಆಕೆ ಬಾಲಕಮಲಮುಖಿಯಾದಳಯ್ಯ ||೨|| ಬೆಟ್ಟವ ನೀನೊಂದು ಪೊತ್ತರೆ ಬೆಟ್ಟದಂಥ ಕುಚವೆರಡು ಪೊತ್ತಳೋ ಮೆಟ್ಟಿ ಶೇಷನ ನೀ ತುಳಿದರೆ - ಆಕೆ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ || ೩ || ಗಜರಾಜವರದ ನೀನಾದರೆ - ಆಕೆ ಗಜಗಮನೆಯು ತಾನಾದಳು ನಿಜ ನರಸಿಂಹ ನೀನಾದರೆ - ಆಕೆ ಭಜಿಸಿ ಸಿಂಹಮಧ್ಯೆಯಾದಳಯ್ಯ || ೪ || ಈ ಪರಿಯಲಿ ಬಹು ಜನಿಸಿದೆ ಭಲೆ | ಭಾಪುರೆ ಬಾಡದೊಳು ನೆಲೆಸಿದೆ || ಗೋಪಿಯರ ಮೋಹ ಸಲ್ಲಿಸಿದೆ ಚೆಲುವ ಶ್ರೀಪತಿ ಆದಿ ಕೇಶವರಾಯ ಮೆರೆದೆ || ೫ || ninagiMta kuMdEnu namma jayalakShmI | ninagiMta kuMdEnu ||pa|| ninagiMta kuMdEnO sanakaadigaLa svaami manasijanoDeyane kanakagarbhana janaka maccyAvatAra nInAdare Ake maccyagaMgaLe tAnAdaLu | heccina SaMKava piDidare Ake nicca SaMKakaMThaLAdaLayya ||1|| nIlavarNanu nInAdare Ake | nIlakuMtaLe tAnAdaLu || lOl...

ಭಾಗ್ಯದ ಲಕ್ಷ್ಮೀ ಬಾರಮ್ಮ | ಪುರಂದರ ವಿಠಲ | Bhagyada Lakshmi Baramma | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಭಾಗ್ಯದ ಲಕ್ಷ್ಮೀ ಬಾರಮ್ಮ ||ಪ|| ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ||ಅಪ||  ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ  ಗೆಜ್ಜೆಯ ಕಾಲ್ಗಳ ನಾದವ ತೋರುತ || ಸಜ್ಜನ ಸಾಧು ಪೂಜೆಯ ವೇಳೆಗೆ  ಮಜ್ಜಿಗೆಯೊಳಗಿನ ಬೆಣ್ಣೆಯಂತೆ ||೧||    ಕನಕವೃಷ್ಟಿಯ ಕರೆಯುತ ಬಾರೇ |  ಮನ ಕಾಮನೆಯ ಸಿದ್ಧಿಯ ತೋರೆ ||  ದಿನಕರ ಕೋಟಿ ತೇಜದಿ ಹೊಳೆಯುವ  ಜನಕರಾಯನ ಕುಮಾರಿ ಬೇಗ ||೨||  ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು | ಕಂಕಣ ಕೈಯ್ಯ ತಿರುವುತ ಬಾರೇ ||  ಕುಂಕುಮಾಂಕಿತೆ ಪಂಕಜಲೋಚನ  ವೆಂಕಟರಮಣನ ಬಿಂಕದ ರಾಣಿ ||೩||  ಅತ್ತಿತ್ತಗಲದೆ ಭಕ್ತರ ಮನೆಯಲಿ  ನಿತ್ಯ ಮಹೋತ್ಸವ ನಿತ್ಯ ಸುಮಂಗಲ ||  ಸತ್ಯದಿ ತೋರುವ ಸಾಧು ಸಜ್ಜನರ  ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ ||೪||    ಸಕ್ಕರೆ ತುಪ್ಪದ ಕಾಲುವೆ ಹರಿಸಿ  ಶುಕ್ರವಾರದ ಪೂಜೆಯ ವೇಳೆಗೆ |  ಅಕ್ಕರೆಯುಳ್ಳ ಅಳಗಿರಿ ರಂಗನ  ಚೊಕ್ಕ ಪುರಂದರ ವಿಠಲನ ರಾಣಿ ||೫||  BAgyada lakShmI bAramma ||pa|| nammamma nI sauBAgyada lakShmI bAramma ||apa||     hejjeya mEloMdu hejjeyanikkuta  gejjeya kAlgaLa nAdava tOruta || sa...

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ | ಪುರಂದರ ವಿಠಲ | Lolalotte Ella Lolalotte | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||  ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು ಸೇನೆ ಭಂಡಾರವು ಲೊಳಲೊಟ್ಟೆ || ಮಾನಿನಿಯರ ಸಂಗ ಲೊಳಲೊಟ್ಟೇ ದೊಡ್ಡ ಕ್ಷೋಣೀಶನೇಂಬುದು ಲೊಳಲೊಟ್ಟೆ ||೧||    ಮುತ್ತು ಮಾಣಿಕ್ಯ ಲೊಳಲೊಟ್ಟೆ ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ || ಸುತ್ತಗಲ ಕೋಟೆ ಲೊಳಲೊಟ್ಟೆ ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ ||೨||  ಕಂಟಕರೆಂಬೋರು ಲೊಳಲೊಟ್ಟೆ ನಿನ್ನ ನೆಂಟರು ಇಷ್ಟರು ಲೊಳಲೊಟ್ಟೆ || ಉಂಟಾದ ಗುಣ ನಿಧಿ ಪುರಂದರ ವಿಠಲನ ಭಂಟನಾಗದವ ಲೊಳಲೊಟ್ಟೆ ||೩|| loLaloTTe ellA loLaloTTe ||pa||     Ane kudure oMTe loLaloTTe bahu sEne BaMDAravu loLaloTTe || mAniniyara saMga loLaloTTE doDDa kShONISanEMbudu loLaloTTe ||1||    muttu mANikya loLaloTTe chinna Catra cAmara dhvaja loLaloTTe || suttagala kOTe loLaloTTe matte uttama praButva loLaloTTe ||2||     kaMTakareMbOru loLaloTTe ninna neMTaru iShTaru loLaloTTe || uMTAda guNa nidhi puraMdara viThalana BaMTanAgadava loLaloTTe ||3||

ಏಕೆನ್ನ ಈ ರಾಜ್ಯಕ್ಕೆಳೆ ತಂದೆ | ಪುರಂದರ ವಿಠಲ | Ekenna Ee Rajya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏಕೆನ್ನ ಈ ರಾಜ್ಯಕ್ಕೆಳೆ ತಂದೆ ಹರಿಯೇ |  ಸಾಕಲಾರದೆ ಎನ್ನ ಏಕೆ ಹುಟ್ಟಿಸಿದೆ ||ಪ||  ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ |  ಮನ್ನಿಸುವ ದೊರೆಯಿಲ್ಲ ಮನಕೆ ಜಯವಿಲ್ಲ ||   ಹೊನ್ನು ಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ |  ಇನ್ನಿಲ್ಲಿ ತರವಲ್ಲ ಇಂದಿರೇಶನು ಬಲ್ಲ ||೧|| ದೇಶ ಪರಿಚಯವಿಲ್ಲ ದೇಹದಲ್ಲಿ ಬಲವಿಲ್ಲ |  ವಾಸಿ ಪಂಥಗಳೆಂಬೊ ಒಲುಮೆ ಎನಗಿಲ್ಲ ||  ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ |  ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||೨||    ಕರೆದು ಕೊಡುವವರಿಲ್ಲ ಕರುಣೆ ತೋರುವರಿಲ್ಲ |  ಕಮಲಾಕ್ಷನಲ್ಲದೆ ಎನಗೊಬ್ಬರಿಲ್ಲ ||  ಕನಸಿನಲಿ ಕಳುವಿನ ಮನಸಿನಲಿ ದೃಢವಿಲ್ಲ |  ವನಜಾಕ್ಷ ಪುರಂದರ ವಿಠಲ ತಾ ಬಲ್ಲ ||೩|| Ekenna I rAjyakkeLe taMde hariyE |  sAkalArade enna Eke huTTiside ||pa||     enna kuladavarilla enagobba hitarilla |  mannisuva doreyilla manake jayavilla ||   honnu cinnagaLilla olisikoMbuvarilla |  innilli taravalla iMdirESanu balla ||1||     dESa paricayavilla dEhadalli balavilla |  v...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru