ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತೂಗೀರೆ ರಂಗನ ತೂಗೀರೆ ಕೃಷ್ಣನ | ಪುರಂದರ ವಿಠಲ | Toogire Rangana Toogire Krishnana | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ತೂಗೀರೆ ರಂಗನ ತೂಗೀರೆ ಕೃಷ್ಣನ 
ತೂಗೀರೆ ಅಚ್ಯುತಾನಂತನ | 
ತೂಗೀರೆ ವರಗಿರಿಯಪ್ಪ ತಿಮ್ಮಪ್ಪನ 
ತೂಗೀರೆ ಕಾವೇರಿ ರಂಗಯ್ಯನ ||ಪ||

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ |
ನಾಗಕನ್ನಿಕೆಯರು ತೂಗೀರೆ |
ನಾಗವೇಣಿಯರು ನೇಣು ಹಿಡಿದುಕೊಂಡು |
ಬೇಗನೆ ತೊಟ್ಟಿಲ ತೂಗೀರೆ ||೧||

ಇಂದ್ರ ಲೋಕದಲ್ಲಿ ಉಪೇಂದ್ರ ಮಲಗ್ಯಾನೆ |
ಇಂದುಮುಖಿಯರೆಲ್ಲ ತೂಗೀರೆ |
ಇಂದ್ರಕನ್ನಿಕೆಯರು ಚೆಂದದಿಂದಲಿ ಬಂದು
ಮುಕುಂದನ ತೊಟ್ಟಿಲ ತೂಗೀರೆ ||೨||

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ |
ನೀಲಕುಂತಳೆಯರು ತೂಗೀರೆ |
ವ್ಯಾಳಶಯನ ಹರಿ ಮಲಗು ಮಲಗು ಎಂದು
ಬಾಲಕೃಷ್ಣಯ್ಯನ ತೂಗೀರೆ ||೩||

ಸಾಸಿರ ನಾಮನೆ ಸರ್ವೋತ್ತಮನೆಂದು |
ಸೂಸುತ್ತ ತೊಟ್ಟಿಲ ತೂಗೀರೆ ||
ಲೇಸಾಗಿ ಮಡುವಿನೊಳ್ ಶೇಷನ್ನ 
ತುಳಿದಿಟ್ಟ ದೋಷ ವಿದೂರನ್ನ ತೂಗೀರೆ ||೪||

ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ |
ತರಳನ ತೊಟ್ಟಿಲ ತೂಗೀರೆ ||
ಸಿರಿದೇವಿ ರಮಣನೆ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗೀರೆ ||೫||

tUgIre raMgana tUgIre kRuShNana 
tUgIre acyutaanaMtana | 
tUgIre varagiriyappa timmappana 
tUgIre kAvEri raMgayyana ||pa||
 
nAgalOkadalli nArAyaNa malagyAne |
nAgakannikeyaru tUgIre |
nAgavENiyaru nENu hiDidukoMDu |
bEgane toTTila tUgIre ||1||
 
iMdra lOkadalli upEMdra malagyAne |
iMdumuKiyarella tUgIre |
iMdrakannikeyaru ceMdadiMdali baMdu
mukuMdana toTTila tUgIre ||2||
 
Aladeleya mEle SrIlOla malagyAne |
nIlakuMtaLeyaru tUgIre |
vyALaSayana hari malagu malagu eMdu
bAlakRuShNayyana tUgIre ||3||
 
sAsira nAmane sarvOttamaneMdu |
sUsutta toTTila tUgIre ||
lEsAgi maDuvinoL SEShanna 
tuLidiTTa dOSha vidUranna tUgIre ||4||
 
araLele mAgAyi koraLa muttina hAra |
taraLana toTTila tUgIre ||
siridEvi ramaNane puraMdara viThalane
karuNadi malageMdu tUgIre ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru