ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಯ ಬಾರೋ ತಂದೆ | ಜಗನ್ನಾಥ ವಿಠಲ | Raya Baaro Tande | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ರಾಯ ಬಾರೋ ತಂದೆ ತಾಯಿ ಬಾರೋ
ನಮ್ಮನು ಕಾಯಿ ಬಾರೋ ||ಪ||

ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ||ಅಪ||

ವಂದಿಪ ಜನರಿಗೆ ಮಂದಾರ ತರುವಂತೆ 
ಕುಂದದಭೀಷ್ಟೆಯ ಕೊಡುತಿಪ್ಪ ರಾಯ ಬಾರೋ ||
ಕುಂದದಭೀಷ್ಟೆಯ ಕೊಡುತಿಪ್ಪ ಸುರಮುನಿ |
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||೧||

ಆರು ಮೂರು ಏಳು ನಾಲ್ಕು ಎಂಟು ಗ್ರಂಥ ಸಾರಾರ್ಥ |
ತೋರಿಸಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ ||
ತೋರಿಸಿದಿ ಸರ್ವರಿಗೆ ನ್ಯಾಯದಿಂದಾ ಸರ್ವಜ್ಞ |
ಸೂರಿಗಳರಸನೇ ರಾಘವೇಂದ್ರ ರಾಯಬಾರೋ ||೨||

ರಾಮ ಪದಾಂಬುಜ ಸದ್‌ಭೃಂಗ ಕೃಪಾಪಾಂಗ |
ಭ್ರಾಮಕ ಜನರ ಮಾನಭಂಗಾ ರಾಯ ಬಾರೋ ||
ಭ್ರಾಮಕ ಜನರ ಮಾನಭಂಗಾ ಮಾಡೀದಾ |
ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ ||೩||

ಭಾಸುರ ಚರಿತನೆ ಭೂಸುರವಂದ್ಯನೆ |
ಶ್ರೀ ಸುಧೀಂದ್ರರ ವರಪುತ್ರ ರಾಯಬಾರೋ |
ಶ್ರೀ ಸುಧೀಂದ್ರರ ವರಪುತ್ರ ವರಯೋಗಿ |
ದೇಶಿಕರೊಡೆಯನೆ ರಾಘವೇಂದ್ರ ರಾಯ ಬಾರೋ ||೪||

ಭೂತಳನಾಥನ ಭೀತಿಯಾ ಬಿಡಿಸಿದೆ |
ಪ್ರೇತತ್ವ ಕಳೆದೆ ಮಹಿಷಿಯ ರಾಯ ಬಾರೋ ||
ಪ್ರೇತತ್ವ ಕಳೆದೆ ಮಹಿಷಿಯ ಮಹಾಮಹಿಮ
ಜಗನ್ನಾಥ ವಿಠಲನ ಪ್ರೀತಿಪಾತ್ರ ||೫||

rAya bArO taMde tAyi bArO
nammanu kAyi bArO ||pa||
 
mAyigaLa mardisida rAGavEMdra rAya bArO ||apa||
 
vaMdipa janarige maMdAra taruvaMte 
kuMdadaBIShTeya koDutippa rAya bArO ||
kuMdadaBIShTeya koDutippa suramuni |
maMdana matige rAGavEMdra rAya bArO ||1||
 
Aru mUru ELu nAlku eMTu graMtha sArArtha |
tOrisidi sarvarige nyAyadiMda rAya bArO ||
tOrisidi sarvarige nyAyadiMdA sarvaj~ja |
sUrigaLarasanE rAGavEMdra rAyabArO ||2||
 
rAma padAMbuja sad^^BRuMga kRupaapAMga |
BrAmaka janara mAnaBaMgA rAya bArO ||
BrAmaka janara mAnaBaMgA mADIdA |
dhImaMtaroDeyane rAGavEMdrA rAya bArO ||3||
 
BAsura caritane BUsuravaMdyane |
SrI sudhIMdrara varaputra rAyabArO |
SrI sudhIMdrara varaputra varayOgi |
dESikaroDeyane rAGavEMdra rAya bArO ||4||
 
BUtaLanAthana BItiyA biDiside |
prEtatva kaLede mahiShiya rAya bArO ||
prEtatva kaLede mahiShiya mahAmahima
jagannAtha viThalana prItipAtra ||5||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru