ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕರುಣಿಸಿ ಪೊರೆ ವರ ಮಹಲಕುಮಿಯೆ | ಪ್ರಸನ್ನ ವೆಂಕಟ | Karunisi Pore VaraMahalakumiye | Prasanna Venkata Dasaru


ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ಕರುಣಿಸಿ ಪೊರೆ ವರ ಮಹಲಕುಮಿಯೆ
ಹರಿ ಪದ ತೋರಿಸಿ ಸಿರಿ ಸುಖ ಹರಿಸಿ||ಪ||

ಮಂಗಳೆ ಮಹೋನ್ನತ ರಂಗನ ಸದನಳೆ
ಅಂಗಜ ಜನಕನರ್ಧಾಂಗಿ ದಯದಲೆ||೧||

ಧನ ಧಾನ್ಯದಾಯಿನಿ ಅನ್ನಪೂರ್ಣ ಮಯಿ
ಪನ್ನಗ ಶಯನನ ರಾಣಿ ಪಾವನಿ||೨||

ಸರ್ವಾಲಂಕಾರದಿಂ ಶೋಭಿಸುತಲಿ ಬಹು
ನಿರ್ವಲ್ಮಿಕ ಹರಿ ಎಡ ಬಲದಲ್ಲಿಹೆ ||೩||

ಕೃತ್ತಿ ವಾಸಾದ್ಯರಿಂ ಸ್ತುತ್ಯೆ ನಿತ್ಯ ಮುಕ್ತೆ
ಮಾತು ಲಾಲಿಸೆನ್ನ ಮಾತರೀಶ್ವ ಪ್ರಿಯೆ ||೪||

ವಾರುಧಿ ತನಯೆ ವರಾಗ್ರ ವದನಳೆ
ಸಿರಿ ಪ್ರಸನ್ವೆಂಕಟ ರಾಯನ ಪ್ರೀಯಳೆ||೫||


karuNisi pore vara mahalakumiye
hari pada tOrisi siri sukha harisi||pa||

maMgaLe mahOnnata raMgana sadanaLe
aMgaja janakanardhaaMgi dayadale||1||

dhana dhaanyadaayini annapUrNa mayi
pannaga shayanana raaNi paavani||2||

sarvaalaMkaaradiM shObhisutali bahu
nirvalmika hari eDa baladallihe ||3||

kRutti vaasaadyariM stutye nitya mukte
maatu laalisenna maatarIshwa priye ||4||

vaarudhi tanaye varaagra vadanaLe
siri prasanveMkaTa raayana prIyaLe||5||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru