ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮುಂಜಾನೆ ಎದ್ದು ಸಂಜೀವನೆನ್ನಿ | ವಿಜಯ ವಿಠಲ | Munjane Eddu | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಮುಂಜಾನೆ ಎದ್ದು ಸಂಜೀವನೆನ್ನಿ ||ಪ||
ಅಂಜಿಪ ದುರಿತ ದೂರವೆನ್ನಿ ||ಅಪ||

ವಾಯು ನಂದನನೆನ್ನಿ ವಜ್ರಕಾಯನೆನ್ನಿ 
ರಾಯ ರಾಘವನ ಕಿಂಕರನೆನ್ನಿ ||
ಛಾಯಾಗ್ರಿವನ ಕೊಂದು ವನವ ಕಿತ್ತಿದನೆನ್ನಿ, 
ಮಾಯದ ಲಂಕೆಯ ದಹನನೆನ್ನಿ ||೧||

ಪಾಂಡು ನಂದನನೆನ್ನಿ, ಪಾಪ ಸಂಹರನೆನ್ನಿ, 
ಉಂಡು ವಿಷವ ತೇಗಿದನೆನ್ನಿ ||
ಚಂಡ ಕುರುವಂಶ ಹತನೆನ್ನಿ, 
ಲಂಡ ಹಿಡಂಬಕನ ಕೊಂದನೆನ್ನಿ ||೨||

ಆನಂದ ತೀರ್ಥರೆನ್ನಿ, ಅಮಿತ ಜೀವಾತ್ಮನೆನ್ನಿ, 
ಜ್ಞಾನಕ್ಕೆ ಮೊದಲ ದೇವತೆಯೆನ್ನಿ ||
ಆನಂದ ಮಯನಾದ ವಿಜಯ ವಿಠಲನ 
ಧ್ಯಾನಿಪ ಜನರಿಗೆ ಮಾರ್ಗನೆನ್ನಿ ||೩||

muMjAne eddu saMjIvanenni ||pa||
aMjipa durita dUravenni ||apa||
 
vAyu naMdananenni vajrakAyanenni 
rAya rAGavana kiMkaranenni ||
CAyAgrivana koMdu vanava kittidanenni, 
mAyada laMkeya dahananenni ||1||
 
pAMDu naMdananenni, pApa saMharanenni, 
uMDu viShava tEgidanenni ||
caMDa kuruvaMSa hatanenni, 
laMDa hiDaMbakana koMdanenni ||2||
 
AnaMda tIrtharenni, amita jIvAtmanenni, 
j~jAnakke modala dEvateyenni ||
AnaMda mayanAda vijaya viThalana 
dhyAnipa janarige mArganenni ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru