ಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿ
ಜಯ ಜಯ ಜಾನ್ಹವಿಜನಕ ಜಗದಾಧಾರ
ಭಯನಿವಾರಣ ಭಕ್ತ ಫಲದಾಯಕ
ದಯಪಯೋನಿಧಿ ಧರ್ಮಪಾಲ ದಾನವ ಕಾಲ-
ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ-
ಶ್ರಯ ಸಂತರ ಕಾಮಧೇನು ಧೇನುಕ ಭಂಜ
ವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿ
ಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣ
ಜಯದೇವಿರಮಣ ಜಯ ಜಯ ಜಯಾಕಾರ
ಸುಯತಿಗಳ ಮನೋಹಾರ ಮಂದಹಾಸ ಚಂದ್ರೋ-
ದಯ ಭಾಸ ಪೂರ್ಣಶಕ್ತಿ ಸರ್ವರೂಪ
ತ್ರಯಕಾಯ ತತ್ವ ತತ್ವ ತದಾಕಾರ ಮೂರುತಿ
ಕ್ರಿಯ ಗುಣಾನಂತ ರೂಪಾನಂತ ಏಕಾನೇಕ ಸಮಸ್ತ
ಸಯವಾಗಿಪ್ಪ ಸಮ ಅಸಮ ದೈವಾ
ಹಯಮೊಗ ವಾದಿರಾಜಗೊಲಿದ ವಿಜಯವಿಠ್ಠಲ
ಪಯೋನಿಧಿ ಶಯನ ಸತ್ವನಿಯಾಮಕ ||೧||
ಶಶಿ ಮಂಡಲ ಮಂದಿರ ಮಧ್ಯದಲಿ ನಿತ್ಯ
ಮಿಸುಣಿಪ ಶುಭಕಾಯಾ ಯೋಗಾಸನನಾಗಿ
ಎಸುಳುಗಂಗಳ ಚೆಲುವ ಹುಂಕರಿಸುವನಾದ
ಬಿಸಜಾಕ್ಷ ಪುಸ್ತಕ ಜ್ಞಾನಮುದ್ರಾ
ಎಸೆವ ಚತುರಬಾಹು ಕೊರಳ ಕೌಸ್ತಭ ಮಾಲೆ
ಶಶಿಮುಖಿಯರು ಒಲಿದು ಸೇವೆಮಾಡುತಲಿರೆ
ಅಸುರರ ಕಾಳಗವ ಕೆಣಕುವ ಕಾಲ್ಗೆದರಿ
ದಶದಿಶ ಕಂಪಿಸಲು ಖುರಪುಟದ ರಭಸ
ಪುಸಿಯಲ್ಲ ನಮಗೆ ಪರದೇವತಿ ಇದೇ
ಕುಶಮೊನೆ ಮನದಲ್ಲಿ ಧ್ಯಾನಮಾಡಲಿಬೇಕು
ಹಸನಾಗಿ ಕೇಳಿ ಮುದದಿ ವಾದಿರಾಜಾ
ಮಸಕರಿಗೆ ವಲಿದ ವಿಜಯವಿಠ್ಠಲರೇಯಾ
ಕುಶಲವ ಕೊಡುವನು ಈ ಪರಿ ಕೊಂಡಾಡೆ||೨||
ನಾಶಿಕ ಪುಟದಿಂದ ಸರ್ವ ವೇದಾರ್ಥಂಗಳು
ಶ್ವಾಸೋಚ್ಛ್ವಾಸದಿಂದ ಪೊರಡುತಿವಕೊ
ಏಸು ಬಗೆ ನೋಡು ಇದೇ ಸೋಜಿಗವೆಲ್ಲಾ
ಶ್ರೀಶನ್ನ ಸಮಸ್ತ ದೇಹದಿಂದ
ಭಾಸುರವಾಗಿದ್ದ ಸಾಕಲ್ಯ ಶ್ರುತಿ ತತಿ
ಲೇಶ ಬಿಡದೆ ಪೊರಟು ಬರುತಿಪ್ಪವು
ಈ ಸಾಮರ್ಥಿಕೆ ನೋಡು ಅನ್ಯದೇವಕೆ ಉಂಟೆ
ಈಶನಯ್ಯಗೆ ಉಪದೇಶ ಮಾಳ್ವಾ
ದೇಶ ಕಾಲವೆ ಮೀರಿ ತನಗೆ ತಾನೆ ಇಪ್ಪಾ
ಏಸು ಕಲ್ಪಕೆ ಸರ್ವ ಸ್ವಾತಂತ್ರನೋ
ಮೋಸ ಪೋಗುವನಲ್ಲ ಆರಾರ ಮಾತಿಗೆ
ಕೇಶವ ಕ್ಲೇಶನಾಶನ ಕಾಣಿರೋ
ದ್ವೇಷವ ತಾಳಿ ಆಗಮ ಒಯ್ದವನ
ರೋಷದಿಂದಲಿ ಕೊಂದ ನಿಷ್ಕಪಟಿಯೋ
ಸೂಸುವ ಬಾಯಿಂದ ಸುರಿಯುವ ಜೊಲ್ಲು ಪೀ-
ಯೂಷಕ್ಕಧಿಕ ಕಾಣೊ, ಸವಿದುಣ್ಣಿರೋ
ವಾಸುದೇವನೆ ಈತನೆ ಆವಲ್ಲಿಪ್ಪನೆಂದು
ಬೇಸರವಗೊಂಡು ಬಳಲದಿರೀ
ಈ ಶರೀರದಲ್ಲಿ ಜೀವಾಂತರ್ಗತನಾಗಿ
ವಾಸವಾಗಿಹನು ಅಣುಮಹ ಕಾಣೋ
ಹ್ರಾಸ ವೃದ್ಧಿಗಳಿಲ್ಲ ವಿಶೇಷ ಅವಿಶೇಷ
ಈಸು ಬಗೆಯುಳ್ಳರೆ ಸ್ವರೂಪ ಭೂತ
ದೋಷರೂಪಗಳಲ್ಲಿ ಜ್ಞಾನಾನಂದ ಕಾರ್ಯ
ದಾಸರಿಗಾಗಿ ಈ ಪರಿ ಮಾಡುವ
ಆಶಾಬದ್ಧನು ಅಲ್ಲ ಆಪ್ತಕಾಮನು ಕಮ-
ಲಾಸನ್ನ ಜನಕ ಸರ್ವಭೂಷಿತಾ
ಲೇಸು ವಾದಿರಾಜ ವಂದ್ಯ ವಿಜಯವಿಠ್ಠಲ
ಸಾಸಿರನಾಮದ ಒಡೆಯ ಹಯವದನಾ||೩||
ಸುರರಿಗೆ ಹಯವಾಗಿ ಗೆಲಿಸುವನು ಗಂಧ-
ರ್ವರಿಗೆ ವಾಜಿಯಾಗಿ ಪೋಗುವ ಮುಂಚಾಗಿ
ದುರುಳ ದಾನವರಿಗೆ ಅರ್ವನಾಗಿ ತಾನು
ಇರದೆ ಪರಾಭವನಾಗುವ ಸಿಗದಲೆ
ನರರಿಗೆ ಅಶ್ವನೆಂದೆನಿಸಿ ಮಹಾಭಾರ
ಹೊರುವನು ದಣವಿಕೆ ಇಲ್ಲದೆ ಅವರ
ಪರಮಪುರುಷನ್ನ ಅದ್ಭುತ ಚರಿತೆ ಕೇಳಿ
ಅರಿವದು ಮನದಲ್ಲಿ ಸರ್ವಜೀವಿಗಳೊಳು
ಇರಳು ಹಗಲು ಈ ಪರಿಯಾಗಿ ಮಾಡುವ
ಮರಿಯಾದೆ ಇಪ್ಪದು ಮರಿಯ್ಯದೆ ಸ್ಮರಿಸಿ ಪಾ-
ಮರ ಬುದ್ಧಿ ಪೋಗಾಡಿ ತುರಿಯಾಶ್ರಮಣಿ ವಾ-
ದಿರಾಜ ಯತಿಕರದಿಂದರ್ಚನೆಗೊಂಡ
ವಿಜಯವಿಠ್ಠಲರೇಯಾ ತುರಗಾಸ್ಯನು ಕಾಣೋ
ತೃಪ್ತಿಯ ಕೊಡುವನು||೪||
ಶಿತವರ್ಣದಲಿ ಸತ್ವಗುಣದಲ್ಲಿ
ಜಾತವೇದಸಂಗೆ ಆಹುತಿ ಕೊಡುವಲ್ಲಿ
ಭೂತಳದಲ್ಲಿ ಮತ್ತೆ ಜಠರಾಗ್ನಿಯಲ್ಲಿ
ಆತುಮದಲ್ಲಿ ವಿತ್ತ ಪತಿಯಲ್ಲಿ ಹೇಳನ
ಪಾತಕ ಪೋಗುವಲ್ಲಿ ವಂಜರ ನದಿಯಲ್ಲಿ
ಸೋತ್ತಮರಲ್ಲಿ ವೇದ ಓದುವ ಠಾವಿನಲ್ಲಿ
ಮಾತು ಪೂರ್ವರಂಗದಲ್ಲಿ ಭದ್ರಾಶ್ವ ಖಂಡದಲ್ಲಿ
ಜ್ಯೊತಿ ಪ್ರಕಾಶದಲಿಇ ಮನಿಯ ದ್ವಾರದಲ್ಲಿ
ನೇತುರ ರೇಖೆಯಲ್ಲಿ ನಾಶಿಕ ಪುಟದಲ್ಲಿ
ದಾತನಲ್ಲಿ ಸರ್ವಜೀವರಲ್ಲಿ ನಿವಾಸಾ
ನೀತವಾಗಿ ಎಣಿಸು ನಿರ್ಣೈಸುವುದಕ್ಕೆ
ಶ್ರೀತರುಣಿಗಾದರೂ ಗೋಚರಿಸದು ಕಾಣೋ
ಈತನ ನೆನೆದರೆ ಬೇಡಿದ ಪುರುಷಾರ್ಥ
ಮಾತುಮಾತಿಗೆ ತಂದುಕೊಡುವ ಸರ್ವದಾ
ಆತುಮದೊಳಗಿದ್ದು ಆನಂದ ಕೊಟ್ಟು ಪಾಲಿಪ
ಶೀತಾಂಶು ಮಂಡಲವದನ ವಿಜಯವಿಠ್ಠಲರೇಯಾ
ಪ್ರೀತಿಯಾಗಿ ಇಪ್ಪಾ ವಾದಿರಾಜಗೆ ಹಯವದನಾ||೫||
ಜತೆ
ಗುರು ವಾದಿರಾಜಗೆ ವೊಲಿದ ಹಯವದನಾ
ಕರುಣಾಕರ ಮೂರ್ತಿ ವಿಜಯವಿಠ್ಠಲರೇಯಾ||
shrI hayagreeva dEvara stOtra suLaadi
jaya jaya jaanhavijanaka jagadaadhaara
bhayanivaaraNa bhakta phaladaayaka
dayapayOnidhi dharmapaala daanava kaala-
traya hatteMTu mIrida trailOkanaatha A-
shraya saMtara kaamadhEnu dhEnuka bhaMja
vyayadoora vyaadhiharaNa vyaapta vyaakulahaari
priya prEraka prathama praapti praaNa
jayadEviramaNa jaya jaya jayaakaara
suyatigaLa manOhaara maMdahaasa chaMdrO-
daya bhaasa pUrNashakti sarvarUpa
trayakaaya tatva tatva tadaakaara mUruti
kriya guNaanaMta rUpaanaMta EkaanEka samasta
sayavaagippa sama asama daivaa
hayamoga vaadiraajagolida vijayaviThThala
payOnidhi shayana satvaniyaamaka ||1||
shashi maMDala maMdira madhyadali nitya
misuNipa shubhakaayaa yOgaasananaagi
esuLugaMgaLa cheluva huMkarisuvanaada
bisajaakSha pustaka j~jaanamudraa
eseva chaturabaahu koraLa koustabha maale
shashimukhiyaru olidu sEvemaaDutalire
asurara kaaLagava keNakuva kaalgedari
dashadisha kaMpisalu khurapuTada rabhasa
pusiyalla namage paradEvati idE
kushamone manadalli dhyaanamaaDalibEku
hasanaagi kELi mudadi vaadiraajaa
masakarige valida vijayaviThThalarEyaa
kushalava koDuvanu I pari koMDaaDe||2||
naashika puTadiMda sarva vEdaarthaMgaLu
shwaasOchCwaasadiMda poraDutivako
Esu bage nODu idE sOjigavellaa
shrIshanna samasta dEhadiMda
bhaasuravaagidda saakalya shruti tati
lEsha biDade poraTu barutippavu
I saamarthike nODu anyadEvake uMTe
Ishanayyage upadEsha maaLvaa
dEsha kaalave mIri tanage taane ippaa
Esu kalpake sarva swaataMtranO
mOsa pOguvanalla aaraara maatige
kEshava klEshanaashana kaaNirO
dwEShava taaLi aagama oydavana
rOShadiMdali koMda niShkapaTiyO
sUsuva baayiMda suriyuva jollu pI-
yUShakkadhika kaaNo, saviduNNirO
vaasudEvane Itane aavallippaneMdu
bEsaravagoMDu baLaladirI
I sharIradalli jIvaaMtargatanaagi
vaasavaagihanu aNumaha kaaNO
hraasa vRuddhigaLilla vishESha avishESha
Isu bageyuLLare swarUpa bhUta
dOSharUpagaLalli j~jaanaanaMda kaarya
daasarigaagi I pari maaDuva
aashaabaddhanu alla aaptakaamanu kama-
laasanna janaka sarvabhUShitaa
lEsu vaadiraaja vaMdya vijayaviThThala
saasiranaamada oDeya hayavadanaa||3||
surarige hayavaagi gelisuvanu gaMdha-
rvarige vaajiyaagi pOguva muMchaagi
duruLa daanavarige arvanaagi taanu
irade paraabhavanaaguva sigadale
nararige ashwaneMdenisi mahaabhaara
horuvanu daNavike illade avara
paramapuruShanna adbhuta charite kELi
arivadu manadalli sarvajIvigaLoLu
iraLu hagalu I pariyaagi maaDuva
mariyaade ippadu mariyyade smarisi paa-
mara buddhi pOgaaDi turiyaashramaNi vaa-
diraaja yatikaradiMdarchanegoMDa
vijayaviThThalarEyaa turagaasyanu kaaNO
tRuptiya koDuvanu||4||
shitavarNadali satvaguNadalli
jaatavEdasaMge aahuti koDuvalli
bhUtaLadalli matte jaTharaagniyalli
aatumadalli vitta patiyalli hELana
paataka pOguvalli vaMjara nadiyalli
sOttamaralli vEda Oduva Thaavinalli
maatu pUrvaraMgadalli bhadraashwa khaMDadalli
jyoti prakaashadalii maniya dwaaradalli
nEtura rEkheyalli naashika puTadalli
daatanalli sarvajIvaralli nivaasaa
nItavaagi eNisu nirNaisuvudakke
shrItaruNigaadarU gOcharisadu kaaNO
Itana nenedare bEDida puruShaartha
maatumaatige taMdukoDuva sarvadaa
aatumadoLagiddu aanaMda koTTu paalipa
shItaaMshu maMDalavadana vijayaviThThalarEyaa
prItiyaagi ippA vaadiraajage hayavadanaa||5||
jate
guru vaadiraajage volida hayavadanaa
karuNaakara mUrti vijayaviThThalarEyaa||