ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸಿಂಹರೂಪನಾದ ಶ್ರೀಹರಿ | ಪುರಂದರ ವಿಠಲ | Simharoopanada Srihari | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಸಿಂಹರೂಪನಾದ ಶ್ರೀಹರಿ 
ಶ್ರೀ ನಾಮ ಗಿರೀಶನು ||ಪ||

ಒಮ್ಮನದಿಂದಲಿ ನಿಮ್ಮನು ಭಜಿಸಲು 
ಸಮ್ಮತದಿಂದಲಿ ಕಾಯ್ವೆನೆಂಬ ಹರಿ ||ಅಪ||

ತರಳನು ಕರೆಯೆ ಸ್ತಂಭವ ಬಿರಿಯೇ |
ತುಂಬ ಉಗ್ರವನು ತೋರಿದನು ||
ಬಗೆದನು ಕರುಳನು ಕೊರಳೊಳಗಿಟ್ಟನು |
ತರಳನ ಸಲಹಿದ ಶ್ರೀ ನರಸಿಂಹ ||೧||

ಭಕ್ತರೆಲ್ಲ ಕೂಡಿ ಬಹುದೂರ ಓಡಿ 
ಪರಮ ಶಾಂತವನು ಬೇಡಿದರು
ಕರೆದರು ಸಿರಿಯನು ತೊಡೆಯೊಳಗಿರಿಸಿದ |
ಪರಮ ಹರುಷವನು ಪೊಂದಿದ ಶ್ರೀ ಹರಿ ||೨||

ಜಯ ಜಯ ಜಯ ಎಂದು ಹೂವನು ತಂದು
ಹರಿ ಹರಿ ಹರಿ ಎಂದು ಸುರರೆಲ್ಲ ಸುರಿಯೆ
ಭಯ ನಿವಾರಣ ಭಾಗ್ಯ ಸ್ವರೂಪನೆ 
ಪರಮ ಪುರುಷ ಶ್ರೀ ಪುರಂದರ ವಿಠಲ ||೩||

siMharUpanAda SrIhari 
SrI nAma girISanu ||pa||
 
ommanadiMdali nimmanu Bajisalu 
sammatadiMdali kAyveneMba hari ||apa||
 
taraLanu kareye staMBava biriyE |
tuMba ugravanu tOridanu ||
bagedanu karuLanu koraLoLagiTTanu |
taraLana salahida SrI narasiMha ||1||
 
Baktarella kUDi bahudUra ODi 
parama SAMtavanu bEDidaru
karedaru siriyanu toDeyoLagirisida |
parama haruShavanu poMdida SrI hari ||2||
 
jaya jaya jaya eMdu hUvanu taMdu
hari hari hari eMdu surarella suriye
Baya nivAraNa BAgya svarUpane 
parama puruSha SrI puraMdara viThala ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru