ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಮನ್ನಾರು ಕೃಷ್ಣ ಸುಳಾದಿ | ವಿಜಯ ವಿಠಲ | Sri Mannaru Krishna Suladi | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಧ್ರುವತಾಳ
ಬಾಲಾ ಗೋಪಾಲ ಗುಣಶೀಲಾ ವಿಶಾಲ ಮಹಿಮಾ
ಕಾಲಾ ದೇಶತಃ ಪೂರ್ಣ ನೀಲವರ್ಣ ಕಾಳಿಂಗಮದಭಂಗ
ಕಾಳಿಂದಿಯಾ ರಮಣ ಮೂಲಾವತಾರಾಭೇದ
ಲೀಲಾ ವಿನೋದ ಏಳೇಳು ಲೋಕವ ಆಳುವ ಬಲುದೈವ
ಪಾಲು ಮೊಸರು ಕದ್ದ ಲಾಲಾಸುರಿವ ಶುದ್ಧ
ಆಳಿನ ಮನೋರಥ ಫಾಲಲೋಚನ ವಿನುತ
ಬಾಲೆರ ಮಾನಭಂಗ ಮೌಳಿ ಮುಕುಟ ತುಂಗ
ಲೋಲ ಮನ್ನಾರಿಗುಡಿ ಪಾಲಾ ವಿಜಯವಿಠಲ
ಸೋಳಾಸಾಸಿರ ವಾಮಲೋಚನೇರ ಪ್ರೀಯಾ

ಮಟ್ಟ ತಾಳ
ಅರಿಧರ ಶಿರಿಧರ ಧರಾಧರ ಗಿರಿಧರ
ಸುರಹರ ಸುರವರ ಮುರಹರ ನರವರ
ಕರಿವರತ್ಪರಾತ್ಪರ ವಿಜಯವಿಠಲ ಪೀತಾಂ-
ಬರಧರ ಧಾರ ನಿರುತರ ಪರಿಪೂರ್ಣ
ಶಿರಿಮನ್ನಾರಾದಾ ವರನಿಲಯಾ ಕೃಷ್ಣಾ

ತ್ರಿವಿಡಿ ತಾಳ
ಋಷಿ ಹರಿತಾನೆಂಬಾಂಗೀರಸ ಕುಲದುದುಭವಾ
ವಸುಧಿಯನು ಶೋಧಿಸಿಕೊಳುತ
ಹಸನಾದ ನೆಲವೆ ಕಾಣಿಸದೆ ಇರಲು ತಾ
ಪಸಿಗಾನು ಬಂದಿಲ್ಲಿ ನಸುನಗುತ
ವಸುದೇವ ಸುತನ ಮೆಚ್ಚಿಸುವೆನೆಂದು ಮನಸು
ವಶಮಾಡಿಕೊಂಡು ರಚಿಸಿದನು ತಪವನು
ವಸುಮತೀಶ್ವರ ನಮ್ಮ ವಿಜಯವಿಠಲನ ಸ್ಮ-
ರಿಸುತಲೀ ಪರಿಯಾ ದಿವಸ ಕಳೆಯುತಿರೆ

ಅಟ್ಟತಾಳ

ಮನ್ಯು ಅಧಿಕವಾದ ಮನ್ನಾಸುರ ದೈತ್ಯ
ತನ್ನೆದುರಲಿ ಒಬ್ಬರನ್ನು ಕಾಣೆನೆಂದೂ
ಉನ್ಮತ್ತದಿಂದ ಸನ್ನು ಮುನಿಯ ತಪ-
ವನ್ನೆ ಕೆಡಿಸಲಾಗಿ ಖಿನ್ನ ಮನಸಿನಲ್ಲಿ
ತನ್ನೊಳು ತಾನೆ ಕಾವನ್ನನಯ್ಯನ ಪಾದ-
ವನ್ನು ನೆನೆಸಲು ಸನ್ನಿಧಿಯಾದನು
ಅನಾಥರೊಡೆಯಾ ವಿಜಯವಿಠಲನು ಬಂದು
ಮನ್ನಿಸಿದನು ಋಷಿ ಅನ್ನವಾದವನು

ಆದಿತಾಳ
ಮರುಳ ಮನ್ನಾಸುರನ ಒರೆಸಿ ಮುನಿಯ ಕಾಯ್ದ
ಹರಿಪೆಸರಾದ ಮನ್ನಾರ ಕೃಷ್ಣನೆಂದು ಇಲ್ಲಿ
ಕರೆಸಿಕೊಂಡು ಮೆರೆದನು ತರುಣೇರಸಹಿತದಲ್ಲಿ
ಹರಿದ್ರಾ ನದಿಯೊಳು ಪರಿಪರಿ ಲೀಲೆ ಅ-
ಪರಿಮಿತವಾಗಿ ಆಡಿ ಸುರರು ಭೂಸುರರಿಂದ
ಹಿರಿದು ಸೇವೆಕೊಳ್ಳುತ್ತ ಧರೆಗೆ ದಕ್ಷಿಣದ್ವಾರಾವೆಂದೆನಿಸಿದೆ
ಸರಿಯಾರು ನಿನಗೆ ಸುರತರುವೆ ಕಿಂಕರರಿಗೆ
ಕರುಣಿ ಮನ್ನಾರಿ ಗುಡಿ ವರರಾಜಗೋಪಾಲ
ಅಮರವಿಭವ ವಿಜಯವಿಠಲ ಅರಿದವರೊಡನಿಪ್ಪ

ಜತೆ
ಮಾವಾರಿ ಮನ್ನಾರಿ ನಿಲಯಾ ರಾಜಗೋಪಾಲ
ಗೋವಾಋಷಿಗೆ ಒಲಿದ ವಿಜಯವಿಠಲರೇಯ

dhruvataaLa
baalaa gOpaala guNashIlaa vishaala mahimaa
kaalaa dEshataH pUrNa nIlavarNa kaaLiMgamadabhaMga
kaaLiMdiyaa ramaNa mUlaavataaraabhEda
lIlaa vinOda ELELu lOkava ALuva baludaiva
paalu mosaru kadda laalaasuriva shuddha
ALina manOratha PaalalOcana vinuta
baalera maanabhaMga mouLi mukuTa tuMga
lOla mannaariguDi paalaa vijayaviThala
sOLaasaasira vaamalOcanEra prIyaa

maTTa taaLa
aridhara shiridhara dharaadhara giridhara
surahara suravara murahara naravara
karivaratparaatpara vijayaviThala pItaaM-
baradhara dhaara nirutara paripUrNa
shirimannaaraadaa varanilayaa kRuShNaa

triviDi taaLa
RuShi haritaaneMbaaMgIrasa kuladudubhavaa
vasudhiyanu shOdhisikoLuta
hasanaada nelave kaaNisade iralu taa
pasigaanu baMdilli nasunaguta
vasudEva sutana meccisuveneMdu manasu
vashamaaDikoMDu racisidanu tapavanu
vasumatIshvara namma vijayaviThalana sma-
risutalI pariyaa divasa kaLeyutire

aTTataaLa

manyu adhikavaada mannaasura daitya
tannedurali obbarannu kANeneMdU
unmattadiMda sannu muniya tapa-
vanne keDisalaagi Kinna manasinalli
tannoLu taane kaavannanayyana paada-
vannu nenesalu sannidhiyaadanu
anaatharoDeyaa vijayaviThalanu baMdu
mannisidanu RuShi annavaadavanu

AditaaLa
maruLa mannaasurana oresi muniya kaayda
haripesaraada mannaara kRRuShNaneMdu illi
karesikoMDu meredanu taruNErasahitadalli
haridraa nadiyoLu paripari lIle a-
parimitavaagi ADi suraru bhUsurariMda
hiridu sEvekoLLutta dharege dakShiNadvaaraaveMdeniside
sariyaaru ninage surataruve kiMkararige
karuNi mannaari guDi vararaajagOpaala
amaravibhava vijayaviThala aridavaroDanippa

jate
maavaari mannaari nilayaa raajagOpaala
gOvaaRuShige olida vijayaviThalarEya

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru