ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಜತಾದ್ರಿ ನಿಲಯನ | ಶ್ರೀ ಶ್ಯಾಮಸುಂದರ | Rajatadri nilayana | Sri Shyamasundara Dasaru


ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು
Kruti:Sri Shyamasundara Dasaru


ರಜತಾದ್ರಿ ನಿಲಯನ 
ರಜನೀಶಧರನ ತೋರೇ ಪಾರ್ವತಿಯೆ ||ಪ||

ಪಂಚಾನನ ಶಂಕರನ ಶ್ರೀಹರಿ 
ಮಂಚಪದವಿ ಪಡೆದವನ
ಪಂಚಬಾಣ ಮದಹರನ ಗುರು ವಿ-
ರಿಂಚಿ ಕುಮಾರ ದೂರ್ವಾಸ ಶುಕನ ತೋರೆ ಪಾರ್ವತಿಯೇ ||೧||

ನಂದಿಸುಶ್ಯಂದನ ಶಿವನ ಗರ 
ಕಂದರ ತ್ರಿಪುರಾಂತಕನ ||
ಮಂದಾಕಿನಿ ಧರ ಭವನ ಸುರ | 
ವೃಂದ ವಿನುತ ನಗ ಚಾಪಧರನ ತೋರೆ ಪಾರ್ವತಿಯೇ ||೨||

ಸಾಮಜ ಚರ್ಮಾಂಬರನ ಶುಭ 
ಕಾಮಿತ ಫಲದಾಯಕನ |
ವಾಮದೇವ ಮುನಿಸುತನ ಶ್ರೀ ವರ-
ಶ್ಯಾಮಸುಂದರನಾ ಪ್ರೇಮದ ಸಖನ ತೋರೇ ಪಾರ್ವತಿಯೇ ||೩||

rajataadri nilayana rajanIshadharana tOrE paarvatiye ||pa||

paMcaanana shaMkarana shrIhari 
maMcapadavi paDedavana
paMcabaaNa madaharana guru vi-
riMci kumaara dUrvaasa shukana tOre paarvatiyE ||1||

naMdisushyaMdana shivana gara 
kaMdara tripuraaMtakana ||
maMdaakini dhara bhavana sura | 
vRuMda vinuta naga caapadharana tOre paarvatiyE ||2||

saamaja carmaaMbarana shubha 
kaamita Paladaayakana |
vaamadEva munisutana shrI vara-
shyaamasuMdaranaa prEmada saKana tOrE paarvatiyE ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru