ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕುಣಿಕುಣಿಯೋ ರಂಗ | ಗೋಪಾಲ ವಿಠಲ | Kunikuniyo Ranga | Gopala Vithala


 

ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ಕುಣಿಕುಣಿಯೋ ರಂಗ ಕುಣಿ ಕುಣಿಯೋ ಕೃಷ್ಣ 
ಫಣಿ ಫಣದಲಿ ಠಣ್ ಠಣ ಠಣಿರೆನ್ನುತ |ಪ|

ಕಾಲ್ಗೆಜ್ಜೆ ಪೈಜಣ ಘಲ್ಲು ಘಲ್ಲೆನ್ನುತ ಉಡಿದಾರ ಉಡಿಗೆಜ್ಜೆ 
ಝಣಿ ಝಣರೆನುತಾ ಕಿಣ್ ಝಣಿ ಝಣರೆನುತ| 
ಕಾಳಿಂಗ ಸರ್ಪನ ಬಾಲ ಕಾಮನಯ್ಯ ಪಿಡಿದು 
ಕಮಲನಾಭನು ತಾ ನಾಟ್ಯವನಾಡಿದ |೧|

ಅಂದುಗೆಯಲುಗಲು ಮಾಗಾಯಿ ಉಲಿಯಲು 
ಚಂದಾದಿ ಕಿರುಗೆಜ್ಜೆ ಝಣಕು ಝಣಕೆನಲು 
ಧಂದಣ ಧಣಕೆಂದುಬೊಮ್ಮ ಮದ್ದಲೆ ಹೊಯ್ಯೆ| 
ತಂದಾನ ತಾನಾ ಯೆಂದು ಹನುಮಂತ ಪಾಡಲು |೨|

ಅಂಬರದಿ ಗಾನ ಪಾಡೆ ತುಂಬುರು ನಾರದರು 
ರಂಭೆ ಊರ್ವಶಿಯರು ನಾಟ್ಯವನಾಡೆ| ತಾವು ನಾಟ್ಯವನಾಡೆ 
ಸಂಭ್ರಮದಿ ಸ್ತ್ರೀಯರೆಲ್ಲ ವರದ ಗೋಪಾಲ ವಿಠಲಗೆ 
ಮಂಗಳಾರುತಿಯ ಮಾಡೆ ಗಂಗ ಜನಕನಿಗೆ |೩|

kuNikuNiyO raMga kuNi kuNiyO kRuShNa 
PaNi PaNadali ThaN ThaNa ThaNirennuta |pa|
 
kAlgejje paijaNa Gallu Gallennuta uDidAra uDigejje 
JaNi JaNarenutA kiN JaNi JaNarenuta| 
kALiMga sarpana bAla kAmanayya piDidu 
kamalanABanu tA nATyavanADida |1|
 
aMdugeyalugalu mAgAyi uliyalu 
caMdAdi kirugejje JaNaku JaNakenalu 
dhaMdaNa dhaNakeMdubomma maddale hoyye| 
taMdaana tAnA yeMdu hanumaMta pADalu |2|
 
aMbaradi gAna pADe tuMburu nAradaru 
raMbhe UrvaSiyaru nATyavanADe| tAvu nATyavanADe 
saMBramadi strIyarella varada gOpAla viThalage 
maMgaLArutiya mADe gaMga janakanige |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru