ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬೃಂದಾವನ ನೋಡಿರೋ | ಶ್ರೀ ವೆಂಕಟ ವಿಠಲ | Brundavana Nodiro | Sri Venkata Vittala


ಸಾಹಿತ್ಯ : ಶ್ರೀ ವೆಂಕಟ ವಿಠಲ ದಾಸರು 
Kruti: Sri Venkata Vittala Dasaru 


ಬೃಂದಾವನ ನೋಡಿರೋ, ಗುರುಗಳ, ಯತಿಗಳ, ಮುನಿಗಳ, ರಾಘವೇಂದ್ರರ||ಪ||
ಬೃಂದಾವನ ನೋಡಿ ಆನಂದ ಮದವೇರಿ ಚಂದದಿ
ದ್ವಾದಶ ಪುಂಡ್ರಾಂಕಿತಗೊಂಬ ಬೃಂದಾವನ ನೋಡಿರೋ ||ಅಪ||

ತುಂಗಭದ್ರಾ ನದಿಯ ತೀರದಿ ಇದ್ದ 
ತುಂಗ ಮಂಟಪ ಮಧ್ಯದಿ
ಶೃಂಗಾರ ತುಳಸಿ ಪದುಮಾಂಶ ಸರಗಳಿಂದ
ಮಂಗಳಕರ ಮಹಾಮಹಿಮೆಯಿಂದೊಪ್ಪುವ ||೧||

ದೇಶ ದೇಶದಿ ತಿರುಗುತ ಇಲ್ಲಿಗೆ ಬಂದು 
ವಾಸವಾಗಿ ಸೇವಿಪ
ಭಾಷೆ ಕೊಟ್ಟಂದದಿ ಬಹುವಿಧ ವರಗಳ
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ ||೨||

ನಿತ್ಯಸನ್ನಿಧಿ ಸೇವಿಪ ಭಕ್ತರಿಗೆಲ್ಲ 
ಮತ್ತಭೀಷ್ಟಗರೆವಾ
ಸತ್ಯಾದಿ ಗುಣಸಿಂಧು ವೆಂಕಟವಿಠಲನ
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ || ೩ ||

bRuMdaavana nODirO, gurugaLa, yatigaLa, munigaLa, raaghavEMdrara||pa||
bRuMdaavana nODi aanaMda madavEri chaMdadi
dwaadasha puMDraaMkitagoMba bRuMdaavana nODirO ||apa||
tuMgabhadraa nadiya tIradi idda 
tuMga maMTapa madhyadi
shRuMgaara tuLasi padumaaMsha saragaLiMda
maMgaLakara mahaamahimeyiMdoppuva ||1||

dEsha dEshadi tiruguta illige baMdu 
vaasavaagi sEvipa
bhaaShe koTTaMdadi bahuvidha varagaLa
sUsuva kara mahaamahimeyiMdoppuva ||2||

nityasannidhi sEvipa bhaktarigella 
mattabhIShTagarevaa
satyaadi guNasiMdhu veMkaTaviThalana
nitya sannidhiyiMda niruta pUjeyagoMba || 3 ||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru